Friday, November 22, 2024

DBT system information : ಸರ್ಕಾರದಿಂದ ಇಲ್ಲಿವರೆಗೂ ನಿಮಗೆ ಬಂದಿರುವ ಹಣ ಎಷ್ಟು ? ನೀವೇ ಪರೀಕ್ಷಿಸಿಕೊಳ್ಳಿ!!

ಪ್ರೀಯ ಓದುಗರೇ,ಹಿಂದಿನ 2014 -2015 ಸಾಲಿನ ಪೂರ್ವದಲ್ಲಿ ಸರ್ಕಾರಗಳು ಫಲಾನುಭವಿಗಳಿಗೆ ಹಣ ಸಂದಾಯ ಮಾಡುವ ಪದ್ದತಿಯೂ ಕ್ಯಾಶ್ ಮತ್ತು ಚೆಕ್ ರೀತಿಯ ಪ್ರಕ್ರಿಯೆಯಲ್ಲಿ ಇತ್ತು. ಆದರೆ ಈ ಪದ್ದತಿಯಲ್ಲಿ ಸರ್ಕಾರದ ಹಣ ಸರಿಯಾಗಿ ಫಲಾನುಭವಿಗಳಿಗೆ ದೊರೆಯುವುದರಲ್ಲಿ ಭ್ರಷ್ಟತೆಯನ್ನು ತಿಳಿದ ಸರ್ಕಾರಗಳು ಕ್ರಮೇಣವವಾಗಿ

ಈ ಪದ್ದತಿಯನ್ನು ಬದಲಾವಣೆ ಮಾಡುವ ದೃಷ್ಠಿಯಿಂದ ನೇರ ನಗದು ವರ್ಗಾವಣೆ ಪದ್ದತಿ (DBT) Direct Benefit Transfer ಯನ್ನು ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಜಾರಿಗೆ ತಂದಿರುತ್ತದೆ. ಈ ಒಂದು ನೇರ ನಗದು ವರ್ಗಾವಣೆ ಪದ್ದತಿ (DBT) Direct Benefit Transfer ರಾಜ್ಯ ಸರ್ಕಾರ ಪ್ರತಿ ವರ್ಷ ಹೊಸ ಹೊಸ ಯೋಜನೆಗಳ ಮೂಲಕ ಜನ ಸಾಮಾನ್ಯರಿಗೆ ಕೆಲವು ನಿರ್ದೀಷ್ಟ ಯೋಜನೆಗಳ ಸಹಾಯಧನವನ್ನು ಬಿಡುಗಡೆ ಮಾಡುತ್ತಿರುತ್ತದೆ.

ಇದನ್ನೂ ಓದಿ: Subsidy of agri and other Departments: ಸರ್ಕಾರದ ಕೃಷಿ ಮತ್ತು ತೋಟಗಾರಿಕೆ, ರೇಷ್ಮೇ, ಪಶು ಇಲಾಖೆಯ ಸಹಾಯಧನಕ್ಕಾಗಿ ಇಂದೇ ನೋಂದಾಯಿಸಿ!!

ಹೌದು,ಆಗಿದ್ದರೆ ಈ ನೇರ ನಗದು ವರ್ಗಾವಣೆ ಮೂಲಕ ಸರ್ಕಾರ ಯಾವ ಯಾವ ಯೋಜನೆಗಳ ಆರ್ಥಿಕ ಸಹಾಯ ನಿಮ್ಮ ಖಾತೆಗೆ ಜಮಾ ಆಗಿರುತ್ತದೆ. ಅಂತ ನಿಮ್ಮ ಮೋಬೈಲ್ ಮೂಲಕವೇ ನೋಡಬಹುದಾಗಿರುತ್ತದೆ.
ಮೊದಲು ಈ ತಿಳಿಸಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ.


ನಾವು ಈ ಲೇಖನದಲ್ಲಿ ಆ ಒಂದು ನೇರ ನಗದು ವರ್ಗಾವಣೆ ಚೆಕ್ ಮಾಡುವ ಅಪ್ಲಿಕೇಶನ್ ಬಗ್ಗೆ ಮತ್ತು ಅದನ್ನು ಉಪಯೋಗ ಮಾಡುವ ಬಗ್ಗೆ ಸಂಪೂರ್ಣವಾಗಿ ತಿಳಿಸಿದ್ದೆವೆ.

ಹಂತ: 1: ಮೊದಲು ಈ ಆಪ್ಲಿಕೇಶನ್ ನನ್ನು Install ಮಾಡಿಕೊಳ್ಳಿ, ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ ಮುಂದೆ, OTP Varify OTP ಮೇಲೆ ಕ್ಲಿಕ್ ಮಾಡಿ

ಹಂತ: 2: ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ,Confirm mPIN ರಚಿಸಿಕೊಳ್ಳಿ ಉದಾ: 1234, ಈ ರೀತಿಯಾಗಿ ಮಾಡಿಕೊಂಡ ನಂತರ Submit ಮೇಲೆ ಓತ್ತಿ.

ಹಂತ: 3: ನಂತರ payment status ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಇಲ್ಲಿಯವರೆಗೂ ಸರ್ಕಾರದಿಂದ ಬಂದಿರುವ ಸಹಾಯಧನ ಗೋಚರಿಸುತ್ತದೆ.

ಇದನ್ನೂ ಓದಿ: ಕೃಷಿ ಇಲಾಖೆಯಿಂದ ರೂ.2496/-ಗೆ ತುಂತುರು ನೀರಾವರಿ ಫಟಕಕ್ಕೆ ಅರ್ಜಿ ಆಹ್ವಾನ!!

DBT Karnataka-ಸರ್ಕಾರದಿಂದ ನಿಮಗೆ ಇಲ್ಲಿಯವರೆಗೂ ಯಾವ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://play.google.com/store/apps/details?id=com.dbtkarnataka&hl=en&gl=US

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application install ಮಾಡಿಕೊಂಡು ಇನ್ನು ಮುಂದೆ ಸರ್ಕಾರದ ಯಾವುದೇ ಸಹಾಯಧನ ಬಂದಿರುವ ಬಗ್ಗೆ ಮಾಹಿತಿ ನಿಮ್ಮ ನಿಮ್ಮ ಮೊಬೈಲ್ ನಲ್ಲಿ ಪರೀಕ್ಷೀಸಿಕೊಳ್ಳಿ.

ಇದನ್ನೂ ಓದಿ: Interest Free Loan Scheme 2023-24: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರದಿಂದ ಬಡ್ಡಿ ರಹಿತ ಸಾಲ

ಇತ್ತೀಚಿನ ಸುದ್ದಿಗಳು

Related Articles