Thursday, September 19, 2024

Subsidy of agri and other Departments: ಕೃಷಿ ಮತ್ತುತೋಟಗಾರಿಕೆ, ರೇಷ್ಮೇ, ಪಶು ಇಲಾಖೆಯ ಸಹಾಯಧನಕ್ಕಾಗಿ ಇಂದೇ ನೋಂದಾಯಿಸಿ!!

ಬೆಳೆಸಾಲ ಮತ್ತು ಬೆಳೆವಿಮೆ PM kisan ಯೋಜನೆ ಹಣ ಪಡೆಯಲು ಎಲ್ಲಾ ರೈತರಿಗೆ ಇದು ಕಡ್ಡಾಯ!!!

ಆತ್ಮೀಯ ರೈತ ಬಾಂದವರೇ ಇನ್ನೂ ಮುಂದೆ ಸರ್ಕಾರದ ಕೃಷಿ ಮತ್ತು ಕೃಷಿಯೇತರ ಇಲಾಖೆಗಳ ಸಹಾಯಧನ ಮತ್ತು ಯೋಜನೆಗಳ ಫಲಾನುಭವಿಗಳು ಆಗಲು ರೈತರ ನೋಂದಣಿ ಸಂಖ್ಯೆ ಕಡ್ಡಾಯವಾಗಿರುತ್ತದೆ. ಅಷ್ಟೇ ಅಲ್ಲದೇ ರೈತರು ಬೆಳೆಸಾಲ,ಬೆಳೆವಿಮೆ, ಮತ್ತು ಬೆಳೆ ಪರಿಹಾರ, ಹೀಗೆ ಹತ್ತು ಹಲವಾರು ಯೋಜನೆಗಳ ಲಾಭ ಪಡೆಯಲು ಈ ನೋಂದಣಿ ಸಂಖ್ಯೆಯನ್ನು ಪರಿಗಣಿಸಲಾಗುತ್ತದೆ.


(FID)ಎಂದರೆ Farmer Registration and Unified beneficiary Information system ಅಂತ ಈ
ಕೃಷಿಕ ತಮ್ಮ ಕೃಷಿ ಜಮೀನಿನ ಮಾಹಿತಿಯನ್ನು ಈ ಪೋರ್ಟಲ್ ನಲ್ಲಿ ನೋಂದಾಯಿಸಿದಾಗ ಆತನಿಗೆ FID ( ಫಾರ್ಮರ್ ಐಡೆಂಟಿಟಿ) ಸಂಖ್ಯೆ ದೊರೆಯುತ್ತದೆ.

ಈ ನೋಂದಣಿ ಸಂಖ್ಯೆಯಲ್ಲಿ ರೈತರ ಬ್ಯಾಂಕ್ ವಿವರ, ಮತ್ತು ಆಧಾರ್‍ ವಿಳಾಸ, ವಾಸ ಸ್ಥಳ, ಜಮೀನು ಇರುವ ಗ್ರಾಮ,ಕೃಷಿ,ತೋಟಗಾರಿಕೆ ಬೆಳೆಯ ಮಾಹಿತಿ, ಮುಖ್ಯವಾಗಿ ನಿಮ್ಮ ಆಧಾರ್‍ ಜೋಡಣೆಯನ್ನು ನಿಮ್ಮ ಜಮೀನುಗಳ ರೇಕಾರ್ಡ ಗೆ ಜೋಡಣೆ ವ್ಯವಸ್ಥೆ ಇದರಲ್ಲಿ ಇರುತ್ತದೆ.
ಅಷ್ಟೇ ಅಲ್ಲದೇ ರೇಷನ್ ಕಾರ್ಡ,ಚುನಾವಣಾ ಕಾರ್ಡ,ಹಾಗೂ ನಿಮ್ಮ ಆದಾಯ ಮತ್ತು ಜಾತಿ ಪ್ರಮಾಣ ಪತ್ರದ ಮಾಹಿತಿಯನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: Interest Free Loan Scheme 2023-24: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರದಿಂದ ಬಡ್ಡಿ ರಹಿತ ಸಾಲ


ಆತ್ಮೀಯ ರೈತ ಬಾಂದವರೇ ಈ ನೋಂದಣಿ ಮಾಡಿಸಿದ ಎಲ್ಲಾ ದಾಖಲೆಗಳನ್ನು ಸರಿ ಇದ್ದರೆ ನಿಮ್ಮಗೆ ಸರ್ಕಾರದ ಕೃಷಿ ಮತ್ತು ಕೃಷಿಯೇತರ ಇಲಾಖೆಗಳಾದ, ಮೀನುಗಾರಿಕೆ, ರೇಷ್ಮೇ, ಮತ್ತು ತೋಟಗಾರಿಕೆ,ಪಶುಸಂಗೋಪನೆ, ಕಂದಾಯ ಇಲಾಖೆಗಳ ಯಾವುದೇ ಯೋಜನೆಯ ಸಹಾಯಧನದ ಫಲಾನುಭವಿಗಳಾಗಬಹುದು.

ಸರ್ಕಾರದ ಆದೇಶದಂತೆ Fruits ಪೋರ್ಟಲ್ ನಲ್ಲಿ ಕೃಷಿಕ ತಮ್ಮ ಎಲ್ಲಾ ದಾಖಲೆಗಳನ್ನು ನೋಂದಾಯಿಸಿಕೊಳ್ಳದೆ ಇದ್ದರೆ ಆತನಿಗೆ ಪಿ ಎಂ ಕಿಸಾನ್ (PM Kisan) ಮತ್ತು ಬರ ಪರಿಹಾರ, (Drought relief) ಬೆಳೆ ಸಾಲ,( Crop loan)ಬೆಳೆ ವಿಮೆ, ( Crop insurance) ಕೃಷಿಕನ ಮಕ್ಕಳಿಗೆ ಸಿಗುವ ವಿದ್ಯಾನಿಧಿ, ಕೃಷಿಗೆ ಪೂರಕವಾದ ಇತರೆ ಸೌಲಭ್ಯಗಳು ದೊರೆಯುವುದಿಲ್ಲ.

ಅಷ್ಟೇ ಅಲ್ಲದೇ ಮುಂದೆ ಸರ್ಕಾರ ರೈತರಿಗೆ ಘೋಷಣೆ ಮಾಡುವ ಯಾವುದೇ ಯೋಜನೆಯ ಲಾಭ ದೊರೆಯದೇ ಇರಬಹುದು. ಅದಕ್ಕಾಗಿ ಕೂಡಲೇ ಫೂಟ್ಸ್ ಪೋರ್ಟಲ್ ನಲ್ಲಿ ನಿಮ್ಮ ಹೆಸರು ನೊಂದಾಯಿಸಿಕೊಂಡು, ನಿಮ್ಮ FID ಪಡೆದುಕೊಳ್ಳಿ ಹಾಗೂ ಅದನ್ನು ಸರ್ಕಾರದ ಸೌಲತ್ತು ಪಡೆಯಲು ಅರ್ಹರಾಗಿ.

ಇದನ್ನೂ ಓದಿ: ವಿದ್ಯಾರ್ಥಿವೇತನ, ವಿದ್ಯಾಸಿರಿಗೆ ಅರ್ಜಿ ಸಲ್ಲಿಸಲು ಇನ್ನು ಒಂದು ದಿನ ಮಾತ್ರ ಅವಕಾಶ!!

ಮೊದಲು ಇಲ್ಲಿ ನೀಡಿರುವ ಹಂತಗಳನ್ನು ಅನುಸರಿಸುತ್ತಾ ಹೋದರೆ ನಿಮ್ಮ FID ನೊಂದಣೆ ಸಂಖ್ಯೆ ದೊರೆಯುವುದು.

Step:1: ಮೊದಲು ಇಲ್ಲಿ ಕಾಣಿಸಿರುವ ಲಿಂಕ್ ಮೇಲೆ ಓತ್ತಿ,ನಂತರ ಈ ನಿಮಗೆ https://fruits.karnataka.gov.in/OnlineUserLogin.aspx

“Citizen Registration”page ತೆರೆಯುತ್ತದೆ. ಆ ಆಯ್ಕೆ ಮೇಲೆ ಓತ್ತಿ. ನಂತರ ಮುಂದಿನ ಪೇಜ್ ನಲ್ಲಿ ನಿಮ್ಮ ಆಧಾರ್‍ ಕಾರ್ಡನಲ್ಲಿರುವ ಹಾಗೆ ಹೆಸರು ಮತ್ತು ಆಧಾರ್‍ ನಂಬರ್‍ ನಮೂದಿಸಿ, ನಂತರ I Agree ಆಯ್ಕೆ ಮೇಲೆ ಓತ್ತಿ Submit ಆಯ್ಕೆ ಮೇಲೆ ಓತ್ತಿ.

Step:2: ನಂತರ ನಿಮ್ಮ ಮೊಬೈಲ್ ನಂಬರ್‍ ಮತ್ತು Mail.ID ಹಾಕಿ Proceed Option ಮೇಲೆ ಓತ್ತಿ.

Step:3: ನಂತರ ನಿಮ್ಮ ಮೊಬೈಲ್ ಗೆ ಬರುವ 5 ಸಂಖ್ಯೆಯ OTP Number ನಮೂದಿಸಿ Submit ಆಯ್ಕೆ ಮೇಲೆ ಓತ್ತಿ. ನಂತರ ನಿಮಗೆ ಬೇಕಾದ ಪಾಸವರ್ಡ ತಯಾರಿಸಿಕೊಳ್ಳಿ.
ಮೊಬೈಲ್ ನಂಬರ್‍ ಮತ್ತು Password ಹಾಗೂ captcha code ಹಾಕಿ ಲಾಗಿನ ಮಾಡಿಕೊಂಡು ಮುಂದುವರೆಯಿರಿ.

Step:4: ನಂತರ Password Create ಮಾಡಿ ಲಾಗಿನ್ ಆಗಿ ಅಲ್ಲಿ ಕೇಳುವ ಪ್ರಮುಖ ಮಾಹಿತಿಯನ್ನು ಭರ್ತಿ ಮಾಡಿದರೆ,ರೈತರ ನೋಂದಣಿ ಸಂಖ್ಯೆ ದೊರೆಯುವುದು.
ನೀವು ಭರ್ತಿ ಮಾಡಿರುವ ಮಾಹಿತಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಲಾಗಿನ್ ಗೋಚರಿಸುತ್ತದೆ, ನಂತರ ಅವರು Approve ನೀಡಿದಾಗ ಸರ್ಕಾರದ ಸವಲತ್ತುಗಳನ್ನು ಪಡೆಯಬಹುದಾಗಿರುತ್ತದೆ.

ಇದನ್ನೂ ಓದಿ: Bara Parihara list-2024: ಪಟ್ಟಿಯಲ್ಲಿರುವವರಿಗೆ ಮಾತ್ರ ಬರ ಪರಿಹಾರ! ಆಧಾರ್‍ ನಂಬರ್‍ ಹಾಕಿ ಚೆಕ್ ಮಾಡಿ:

ಇತ್ತೀಚಿನ ಸುದ್ದಿಗಳು

Related Articles