Yuva Nidhi Scheme Karnataka : ಆತ್ಮೀಯ ಸ್ನೇಹಿತರೇ ರಾಜ್ಯ ಸರ್ಕಾರ ಕಳೆದ ವಿಧಾನಸಭೆ ಚುನಾವಣೆ (Assembly Election) ಪ್ರಾರಂಭದಲ್ಲಿ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಜನರಿಗೆ ವಿವಿಧ ಉಚಿತ ಮತ್ತು ಗ್ಯಾರಂಟಿ ಯೋಜನೆಗಳನ್ನು ವಿಧಾನ ಸಭೆ ಚುನಾವಣೆ ಬಳಿಕ ಜಾರಿಗೆ ಮಾಡುವುದಾಗಿ ಘೋಷಣೆ ಮಾಡಿತ್ತು.
ಆ ನಿಟ್ಟಿನಲ್ಲಿ ಹಂತ ಹಂತವಾಗಿ ಗೃಹಲಕ್ಷ್ಮೀ (GruhaLakshmi), ಗೃಹಜ್ಯೋತಿ (Gruha Jyothi) ಮತ್ತು ಶಕ್ತಿ ಉಚಿತ ಬಸ್ ಯೋಜನೆ ಯಂತಹ ಯೋಜನೆಗಳ ಮೂಲಕ ಜನಮನ್ನಣೆ ಗಳಿಸಿರೋ ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ಘೋಷಿಸಿದ ಯುವನಿಧಿ ಯೋಜನೆ (Yuva Nidhi Scheme) ಜಾರಿಗೆ ಸಿದ್ಧತೆ ನಡೆಸಿದೆ. ಹೌದು ಈ ಯುವನಿಧಿ ಯೋಜನೆ ಪಡೆಯೋಕೆ ಅರ್ಹ ಅಭ್ಯರ್ಥಿಗಳು ಏನು ಮಾಡಬೇಕು? ಈ ಯೋಜನೆಯ ಮಾನದಂಡವೇನು ?ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ.
ಮುಂದಿನ ವರ್ಷದ ಹೊಸದರಲ್ಲಿ ರಾಜ್ಯದ ಯುವಕರಿಗೆ ರಾಜ್ಯದಲ್ಲಿ ಪದವೀಧರರ ನಿರುದ್ಯೋಗಿಗಳ ಸಹಾಯಕ್ಕಾಗಿ ಸರ್ಕಾರ ಯುವನಿಧಿ ಮೂಲಕ ಸಹಾಯಧನ ನೀಡುವ ಮೂಲಕ ನೀರುದ್ಯೋಗಿ ಯುವಕರಿಗೆ ಸಹಾಯಹಸ್ತ ಮಾಡಲಿದೆ ಇದಕ್ಕಾಗಿ ಡಿಸೆಂಬರ್ 26 ರಿಂದ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಿದೆ.
ಆದರೆ ಯುವನಿಧಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು ? ಯಾರು ಅರ್ಹರು ? ಹೇಗೆ ಅರ್ಜಿ ಸಲ್ಲಿಸಬೇಕೆಂಬ ಬಗ್ಗೆ ನೂರಾರು ಅನುಮಾನಗಳು ಯುವಕರನ್ನು ಕಾಡುತ್ತಿದೆ. ಎಲ್ಲ ಅನುಮಾನಗಳಿಗೂ ಇಲ್ಲಿ ಸ್ಪಷ್ಟ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೆವೆ.ಈ ಮಾಹಿತಿಯನ್ನು ಬೇರೆ ಬೇರೇ ವಿದ್ಯಾರ್ಥಿಗಳಿಗೆ ಉಪಯೋಗಕ್ಕಾಗಿ ಹಂಚಿಕೊಳ್ಳಿ. ಯಾರೆಲ್ಲ ಯುವನಿಧಿಗೆ ಅರ್ಹರು ಅರ್ಜಿ ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.
ಇದನ್ನೂ ಓದಿ: Drought relief Proposal: ಕೇಂದ್ರದಿಂದ 18,177 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ: ರಾಜ್ಯ ಸರ್ಕಾರ
Yuva Nidhi Scheme guidelines: ಯುವನಿಧಿ ಯೋಜನೆಯ ಮಾರ್ಗಸೂಚಿಗಳು:
ಆತ್ಮೀಯ ಸ್ನೇಹಿತರೇ ಕಳೆದ ಆರು ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿರುವ ಪದವೀಧರರು. ಆದರೆ ಆ ಪದವಿಧರರು ಕರ್ನಾಟಕದಲ್ಲೇ ಪದವಿ ಅಥವಾ ಡಿಪ್ಲೋಮಾ ಹಾಗೂ ತತ್ಸಮಾನ ಅಧ್ಯಯನ ಮಾಡಿರಬೇಕು.
ಆ ವಿದ್ಯಾರ್ಥಿಗಳು ಕರ್ನಾಟಕದ ನಿವಾಸಿ ಎಂದು ಸಾಬೀತುಪಡಿಸಲು ಈ ಕೆಳಗಿನ ದಾಖಲೆಸಲ್ಲಿಸಬೇಕು.
ಕರ್ನಾಟಕ ವಾಸಿ ಎಂದು ನಿರೂಪಿಸಲು ಎಸ್ ಎಸ್ ಎಲ್ ಸಿ (SSLC) ಅಥವಾ ಪಿಯುಸಿ (PUC) ಪ್ರಮಾಣ ಪತ್ರ, ಸಿಇಟಿ CET Register Number ನೋಂದಣಿ ಸಂಖ್ಯೆ ಅಥವಾ ಪಡಿತರ ಚೀಟಿ Ration card ಸಲ್ಲಿಸಬೇಕು.
ಡಿಪ್ಲೋಮಾ Diplmo ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ SSLC ಬಳಿಕ ಡಿಪ್ಲೋಮಾ ಮಾಡಿದ್ದರೇ ಎಂಟು ಒಂಬತ್ತನೇ ತರಗತಿ ಅಂಕಪಟ್ಟಿ ಅಥವಾ ರೇಷನ್ ಕಾರ್ಡ್ ನಂಬರ್ ಸಲ್ಲಿಸಬೇಕು.
ಯುವನಿಧಿಗೆ ಅರ್ಜಿ ಸಲ್ಲಿಸಲು ಪದವೀಧರರಿಗೆ Sslc ಮಾರ್ಕ್ಸ್ ಕಾರ್ಡ್, ಪಿಯುಸಿ ಮಾರ್ಕ್ಸ್ ಕಾರ್ಡ್, ಡಿಗ್ರಿ ಮಾರ್ಕ್ಸ್ ಕಾರ್ಡ್ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ ಸಲ್ಲಿಸಬೇಕು.
ಡಿಪ್ಲೋಮಾ ಪದವೀಧರರು ಎಸ್ ಎಸ್ ಎಲ್ ಸಿ ಅಂಕಪಟ್ಟಿ,ಪಿಯುಸಿ ಅಂಕಪಟ್ಟಿ ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ ಸಲ್ಲಿಸಬೇಕು.
Information about Application Website: ಅರ್ಜಿ ಸಲ್ಲಿಸುವ ಜಾಲತಾಣದ ಬಗ್ಗೆ ಮಾಹಿತಿ:
ಆತ್ಮೀಯ ವಿದ್ಯಾರ್ಥಿ ಮಿತ್ರರೂ ಈ sevasindhugs.Karnataka.gov.in ಅರ್ಜಿ ಸಲ್ಲಿಸಬೇಕು.
https://sevasindhuservices.karnataka.gov.in/directApply.do?serviceId=2079
ಈಗಾಗಲೇ ಪದವಿ/ಡಿಪ್ಲೋಮಾ ತೇರ್ಗಡೆಯಾದ ಅಭ್ಯರ್ಥಿಗಳ ಶೈಕ್ಷಣಿಕ ಪ್ರಮಾಣ ಪತ್ರವನ್ನು ಎನ್ ಎಡಿ ಪೋರ್ಟಲ್ ಸಂಬಂಧಪಟ್ಟ ವಿವಿಗಳು, ಶೈಕ್ಷಣಿಕ ಸಂಸ್ಥೆಗಳು ಮಂಡಳಿಗಳು ಧೃಡಿಕರಿಸಲು ಜಾಲತಾಣದಲ್ಲಿ ಲಾಗಿನ್ ಮಾಡಬೇಕು. ಅರ್ಜಿ ಸಲ್ಲಿಸುವ ಮುನ್ನ ನಿಬಂಧನೆಗಳನ್ನು ಓದಿಕೊಳ್ಳಬೇಕು.
nad.karnataka.gov.in/#/Yuvanidhi
ಈ ಲಾಗಿನ್ ಮಾಡಿದ ಬಳಿಕ ಅಭ್ಯರ್ಥಿಗಳು ಮೊದಲು ಜಿಲ್ಲೆ, ತಾಲೂಕು ಆಯ್ಕೆ ಮಾಡಿ ಕೊಳ್ಳಬೇಕು.
ನಂತರ ಆಧಾರ ಸಂಖ್ಯೆ ನಮೂದಿಸಿ ಒಟಿಪಿ ಪಡೆದು ಕೈವೈಸಿ ಚೆಕ್ ಮಾಡಿಕೊಳ್ಳಬೇಕು.
ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರದ ನೋಂದಣಿ ಸಂಖ್ಯೆ ನಮೂದಿಸಿದ ಬಳಿಕ ಎನ್ ಎ ಡಿ nad.karnataka.gov.in/#/Yuvanidhi ಪೋರ್ಟಲ್ ಸಕ್ರಿಯಗೊಳ್ಳಲಿದ್ದು, ಬಳಿಕ ಜಾತಿ ಪ್ರವರ್ಗ ಆಯ್ಕೆಮಾಡಿಕೊಳ್ಳಬೇಕು.
ಮೊಬೈಲ್ ಸಂಖ್ಯೆ ಅಷ್ಟೇಟ್ ಮಾಡಿ ಇಮೇಲ್ ವಿಳಾಸ ನೀಡಿ ಒಟಿಪಿ OTP ಪಡೆದು ಮತ್ತೊಮ್ಮೆ ದಾಖಲಿಸಬೇಕು.
ಅಂತಿಮವಾಗಿ ಮತ್ತೊಮ್ಮೆ ಸ್ವಯಂ ಘೋಷಣೆ self declaration ಮಾಡಿದ ನಂತರ ಅರ್ಜಿ ಸಲ್ಲಿಕೆ ಪೂರ್ಣಗೊಳ್ಳಲಿದೆ.
ಬಳಿಕ ಅಭ್ಯರ್ಥಿಯ ರಜಿಸ್ಟರ್ಡ್ ಮೊಬೈಲ್ ನಂಬರ್ register mobile number ಗೆ ಅರ್ಜಿ ಸ್ವಿಕೃತಿಯ ಮಾಹಿತಿ ರವಾನೆ ಯಾಗುತ್ತದೆ. ಈ ರಿಸೀಟ್ ನ್ನು ಅಭ್ಯರ್ಥಿಯು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಕೊನೆಯದಾಗಿ ಸರ್ಕಾರದ ಯುವನಿಧಿ ಯೋಜನೆ ಲಾಭ ಪಡೆಯುವ ನಿರುದ್ಯೋಗಿ ತನ್ನ ನಿರುದ್ಯೋಗವನ್ನು ಖಚಿತಪಡಿಸಲು ತಿಂಗಳ 25 ತಾರೀಕಿನ ಮೊದಲು ಆಧಾರ ಒಟಿಪಿ ಮೂಲಕ ಉದ್ಯೋಗ ಲಭ್ಯವಾಗಿಲ್ಲ ಎಂಬುದನ್ನು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು.
ಈ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು:
ಯುವನಿಧಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ್ ಒನ್ ಕೇಂದ್ರದಲ್ಲೂ ಅರ್ಜಿ ಸಲ್ಲಿಸಬಹುದು. ಸೇವಾಸಿಂಧು ಪೋರ್ಟಲ್ ನಲ್ಲಿ ಲಾಗಿನ್ ಮಾಡಿಕೊಂಡು ಯುವನಿಧಿ ಯೋಜನೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ, ಪದವೀಧರರಾಗಿದ್ದಲಿ ಮಾಸಿಕ 3000ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ ಮಾಸಿಕ 1500 ರೂ. ನೀಡಲು ಸರ್ಕಾರ ತೀರ್ಮಾನಿಸಿದೆ.
ಇದನ್ನೂ ಓದಿ: Krishi Bhagya Scheme 2023-24: 100 ಕೋಟಿ ವೆಚ್ಚ ದಲ್ಲಿ “ಕೃಷಿ ಭಾಗ್ಯ” ಯೋಜನೆ ಮರುಜಾರಿ:
ವಿಶೇಷ ಸೂಚನೆ : ನಿಯಮ ಉಲ್ಲಂಘಿಸಿ ಅತಿಕ್ರಮವಾಗಿ ಯುವನಿಧಿ ಪಡೆದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ದಂಡವಿಧಿಸಲು ಸರ್ಕಾರ ಚಿಂತನೆ ನಡೆಸಿದೆ.