Sunday, October 6, 2024

Beekeeping Training : ವೈಜ್ಞಾನಿಕ ಪದ್ದತಿಯಲ್ಲಿ ಜೇನು ಸಾಕಾಣಿಕೆ ತರಬೇತಿ:

ಆತ್ಮೀಯ ರೈತ ಬಾಂದವರೇ ಜೀನು ಸಾಕಾಣಿಕೆ ಮಾಡಲು ಆಸಕ್ತಿಯಿರುವ ಯುವಕ ಮತ್ತು ಯುವತಿಯರಿಗೆ ವೈಜ್ಞಾನಿಕ ಪದ್ದತಿಯಲ್ಲಿ ಜೇನು ಸಾಕಾಣಿಕೆ ತರಬೇತಿ (Beekeeping Training) ಯನ್ನು ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಧಾರವಾಡ ಹಾಗೂ ರಾಷ್ಟ್ರೀಯ ಜೇನು ಮಂಡಳಿ ವತಿಯಿಂದ ತರಬೇತಿಯನ್ನು ಹಮ್ಮಿಕೊಂಡಿರುತ್ತದೆ. ಈ ತರಬೇತಿ ಕಾರ್ಯಕ್ರಮ ಭಾಗವಹಿಸಲು ಇಚ್ಚಿಸುವವರು ಯಾವ ದಿನಾಂಕದಂದು ಭಾಗವಹಿಸಬೇಕು, ದಾಖಲೆಗಳೇನು? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ತರಬೇತಿ ಯಾವ ದಿನಾಂಕ ನಡೆಯುವುದು:
ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಧಾರವಾಡ ಹಾಗೂ ರಾಷ್ಟ್ರೀಯ ಜೇನು ಮಂಡಳಿ ವತಿಯಿಂದ ತರಬೇತಿಯನ್ನು ವಿಶೇಷ ತರಬೇತಿ ಅಡಿಯಲ್ಲಿ ಜಿಲ್ಲೆಯ ರೈತರಿಗೆ ಮತ್ತು ಆಸಕ್ತರಿಗೆ ಏಳು ದಿನಗಳ “ವೈಜ್ಞಾನಿಕ ಜೇನು ಸಾಕಾಣಿಕೆ” ಕುರಿತು ತರಬೇತಿ ಕಾರ್ಯಕ್ರಮವನ್ನು ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಧಾರವಾಡದಲ್ಲಿ 07.12.2023 ರಿಂದ 13.12.2023 ರವರೆಗೆ ಆಯೋಜಿಸಲಾಗಿದೆ.

ಇದನ್ನೂ ಓದಿ: Irrigation Facility Subsidy: ಕೃಷಿ ಕ್ಷೇತ್ರದ ನೀರಾವರಿ ಸೌಲಭ್ಯಕ್ಕೆ 75,000/- ರೂ. ಸಹಾಯಧನಕ್ಕೆ ಅರ್ಜಿ ಆಹ್ವಾನ:


Purpose Of Training: ತರಬೇತಿ ಉದ್ದೇಶ :
ರೈತರಿಗೆ ಜೇನು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿಗಳ ಮಾಹಿತಿ ಹಾಗೂ ಪ್ರಾಯೋಗಿಕ ಅನುಭವಗಳನ್ನು ನೀಡಿ ಅವರ ಆದಾಯ ವೃದ್ಧಿಸುವುದು ತರಬೇತಿಯ ಉದ್ದೇಶವಾಗಿದ್ದು,ಮುಖ್ಯವಾಗಿ ಯುವಕರು ಈ ತರಬೇತಿ ಭಾಗವಹಿಸಿ ಈ ತರಬೇತಿಯನ್ನು ಸದುಪಯೋಗ ಪಡೆಯಬಹುದಾಗಿದೆ.

Opportunity to Participate in Training:ತರಬೇತಿ ಭಾಗವಹಿಸಲು ಅವಕಾಶ:
ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಧಾರವಾಡ ಹಾಗೂ ರಾಷ್ಟ್ರೀಯ ಜೇನು ಮಂಡಳಿ ವತಿಯಿಂದ ತರಬೇತಿಯನ್ನು ವಿಶೇಷ ತರಬೇತಿ ಅಡಿಯಲ್ಲಿ ಜಿಲ್ಲೆಯ ರೈತರಿಗೆ ಪ್ರತಿ ತರಬೇತಿಗೆ 25 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ. ಆದ್ಯತೆ ಮೇರೆಗೆ ಮೊದಲು ಬಂದ 25 ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.

ತರಬೇತಿಯು 7 ದಿನಗಳನ್ನು ಒಳಗೊಂಡಿದೆ. ತರಬೇತಿಯಲ್ಲಿ ಭಾಗವಹಿಸುವ ಆಸಕ್ತ ರೈತರು ಖುದ್ದಾಗಿ ಧಾರವಾಡದ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರದ ಕಛೇರಿಗೆ ಬಂದು ದಿನಾಂಕ 04.12.2023 ರೊಳಗೆ ತಮ್ಮ ನೋಂದಾಯಿಸಬೇಕಾಗಿರುತ್ತದೆ.

ಇದನ್ನೂ ಓದಿ: Agricultural innovation Scheme: ಕೃಷಿ ನವೋದ್ಯಮ ಯೋಜನೆಯಡಿ 5 ಲಕ್ಷದಿಂದ 50 ಲಕ್ಷದವರೆಗೆ ಸಹಾಯಧನ.
Required Documents:ಬೇಕಾದ ದಾಖಲೆಗಳು:
ಆಧಾರ ಕಾರ್ಡ,
2 ಪಾಸ್‌ಪೋರ್ಟ ಅಳತೆ ಫೋಟೊಗಳು,
RTC ಹೊಲದ ಉತಾರದೊಂದಿಗೆ ಹೆಸರನ್ನು ನೋಂದಾಯಿಸಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಧಾರವಾಡ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ. ಡಿ. ಎನ್. ಕಂಬ್ರೇಕರ ದೂರವಾಣಿ ಸಂಖ್ಯೆ 0836-2970246 ಸಂಪರ್ಕಿಸಬಹುದಾಗಿರುತ್ತದೆ.

ದಿನನಿತ್ಯ ಕೃಷಿ ಮತ್ತು ಕೃಷಿಯೇತರ ಮಾಹಿತಿಗಾಗಿ ಈ ಚಾನೆಲ್ ಸೇರಿಕೊಳ್ಳಿ..https://whatsapp.com/channel/0029Va6W35C8KMqi6fToWX2s

ಇತ್ತೀಚಿನ ಸುದ್ದಿಗಳು

Related Articles