International Millets and Oraganic Fair 2024″: ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ ಈ ಮೇಳದ ವಿಶೇಷತೆಗಳೇನು? ಯಾವ ದಿನಾಂಕದಂದು ಮೇಳ ಪ್ರಾರಂಭ ಸಂಪೂರ್ಣ ಮಾಹಿತಿ..
ಆತ್ಮೀಯ ರೈತ ಬಾಂದವರೇ ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಮುಖ್ಯ ಉದ್ದೇಶಗಳೊಂದಿಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ -2024″ ವನ್ನು ಆಯೋಜಿಸಲಾಗುತ್ತಿದೆ. ಈ ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದಲ್ಲಿ ಭಾಗವಹಿಸಿ ಮೇಳದ ವಿಶೇಷತೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಹಿದೆ.
ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಸಮ್ಮೇಳನದ ವಿಶೇಷತೆಗಳು:
ಸದರಿ ಮೇಳವು ಗುಣಮಟ್ಟದ ವಸ್ತು ಪ್ರದರ್ಶನಗಳು, ಅಂತರರಾಷ್ಟ್ರೀಯ ಸಮ್ಮೇಳನ, ಉತ್ಪಾದಕರ-ಮಾರುಕಟ್ಟೆದಾರರ ಬಿ2ಬಿ ಸಭೆಗಳು, ರೈತರ ಕಾರ್ಯಾಗಾರ, ಸಾವಯವ ಆಹಾರ ಮಳಿಗೆಗಳು, ಬಳಕೆದಾರರೊಂದಿಗೆ ಸಂಪರ್ಕ ಈ ಮುಂತಾದ ಕಾರ್ಯಕ್ರಮಗಳನ್ನು ಒಳಗೊಂಡಿದ್ದು ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಕೃಷಿಯ ಒಟ್ಟಾರೆ ಅಭಿವೃದ್ಧಿಗೆ ಪೂರಕವಾಗಿರುತ್ತದೆ.
Farmers Workshop: ರೈತರ ಕಾರ್ಯಾಗಾರ:
ರೈತರ ಕಾರ್ಯಾಗಾರವನ್ನು ಕನ್ನಡ ಭಾಷೆಯಲ್ಲಿ ಆಯೋಜಿಸಿದ್ದು, ಕಾರ್ಯಾಗಾರವು ಸಿರಿಧಾನ್ಯ ಮತ್ತು ಸಾವಯವ ಉತ್ಪಾದನೆ, ದೃಢೀಕರಣ, ಮೌಲ್ಯವರ್ಧನೆ, ಸಂಸ್ಕರಣೆ ಹಾಗೂ ಮಾರುಕಟ್ಟೆ, ನೈಸರ್ಗಿಕ ಕೃಷಿ ಕುರಿತಾದ ವಿಷಯಗಳ ಮಂಡನೆಯನ್ನು ಒಳಗೊಂಡಿರುತ್ತದೆ. ಸದರಿ ರೈತರ ಕಾರ್ಯಾಗಾರದಲ್ಲಿ ರೈತ ಪ್ರತಿನಿಧಿಗಳು ಭಾಗವಹಿಸಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಪ್ರತಿ ಜಿಲ್ಲೆಯಿಂದ ತಲಾ 10 ಸಾವಯವ/ನೈಸರ್ಗಿಕ/ಸಿರಿಧಾನ್ಯ ಕೃಷಿಕರನ್ನು ಕಾರ್ಯಾಗಾರದಲ್ಲಿ ಭಾಗವಹಿಸಲು ಪ್ರೇರೇಪಿಸಿ ನೋಂದಾಯಿಸಲು ಕ್ರಮ ಕೈಗೊಳ್ಳುವುದು. ರೈತರಿಗೆ ಕಾರ್ಯಾಗಾರ ಶುಲ್ಕ ರೂ. 100/- ಇದ್ದು, ಇದು ಪ್ರವೇಶ, ಕಿಟ್, ಸಿರಿಧಾನ್ಯ ಮತ್ತು ಸಾವಯವ ಊಟ, ಕಾಫಿ/ಟೀ ಒಳಗೊಂಡಿರುತ್ತದೆ.
International Conference: ಅಂತರಾಷ್ಟ್ರೀಯ ಸಮ್ಮೇಳನ:
ಅಂತರಾಷ್ಟ್ರೀಯ ಸಮ್ಮೇಳನವನ್ನು ಆಂಗ್ಲಭಾಷೆಯಲ್ಲಿ ಆಯೋಜಿಸಲಾಗುತ್ತಿದೆ. ಪ್ರತಿ ಜಿಲ್ಲೆಗೆ ಕನಿಷ್ಠ 5 ಅಂಗ, ಭಾಷೆಯ ಜ್ಞಾನವಿರುವ ಸಾವಯವ ಕೃಷಿ, ನೈಸರ್ಗಿಕ, ಸಿರಿಧಾನ್ಯ ಕೃಷಿಕರು, ವುಗತಿಪರ ರೈತರು/ಕೃಷಿ ಪಂಡಿತ್/ಕೃಷಿ ಪ್ರಶಸ್ತಿ ವಿಜೇತರು, ಪ್ರಾಂತೀಯ ಒಕ್ಕೂಟಗಳ/FPO ಗಳ ಪ್ರಗತಿಪರ ರೈತರು ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ನೋಂದಾಯಿಸಲು ಕ್ರಮ ಕೈಗೊಳ್ಳುವುದು.
ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಮುಖಾಂತರ ರಾಷ್ಟ್ರ ಮಟ್ಟದ ಮತ್ತು ಅಂತರರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸ ಕೇಳಲು ಮತ್ತು ಅವರೊಂದಿಗೆ ಸಂವಾದ ಕೈಗೊಳ್ಳಲು ಅವಕಾಶವಿರುತ್ತದೆ. ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ರೈತರಿಗೆ ನೋಂದಣಿ ಶುಲ್ಕ ರೂ.250/- ಆಗಿರುತ್ತದೆ. ನೋಂದಣಿ ನಮೂನೆಯಲ್ಲಿ ಮಾಹಿತಿಯನ್ನು (www.organics- millets.in) ಭರ್ತಿಮಾಡಿ ಶುಲ್ಕವನ್ನು KAPPEC ಸಂಸ್ಥೆಗೆ ಪಾವತಿಸಲು ಕ್ರಮಕೈಗೊಳ್ಳುಲಾಗಿರುತ್ತದೆ.
ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ -2024″ ದಿನಾಂಕ:
ದಿನಾಂಕ: 05.01.2024 ರಿಂದ 07.01.2024 ರವರೆಗೆ ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ -2024″ ವನ್ನು ಆಯೋಜಿಸಲಾಗುತ್ತಿದೆ.
Visit of farmers to international conference: ಮೇಳಕ್ಕೆ ರೈತರ ಭೇಟಿ:
ಪ್ರತಿ ಜಿಲ್ಲೆಯಿಂದ ಇಲ್ಲಿ ತಿಳಿಸಿರುವಂತೆ, ಪ್ರತಿ ದಿನ ಒಟ್ಟು 1500 ರೈತರಂತೆ ಮೂರು ದಿನಕ್ಕೆ ಒಟ್ಟು 4500 ಸಾವಯವ, ನೈಸರ್ಗಿಕ ಮತ್ತು ಸಿರಿಧಾನ ಕೃಷಿಕರು ಮೇಳಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಕೆಳಗೆ ತಿಳಿಸಿರುವ ದಿನಾಂಕಗಳಂದು ಆಯಾ ಜಿಲ್ಲೆಯ ರೈತರು ಮೇಳಕ್ಕೆ ಭೇಟಿ ನೀಡುಬಹುದಾಗಿರುತ್ತದೆ.
ಇದನ್ನೂ ಓದಿ: Agricultural innovation Scheme: ಕೃಷಿ ನವೋದ್ಯಮ ಯೋಜನೆಯಡಿ 5 ಲಕ್ಷದಿಂದ 50 ಲಕ್ಷದವರೆಗೆ ಸಹಾಯಧನ.
ಈ ಕೆಳಗೆ ಕಾಣಿಸಿದಂತೆ ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ -2024 ಕ್ಕೆ ಈ ಜಿಲ್ಲೆಗಳ ರೈತರು ಭಾಗವಹಿಸಬಹುದು:
Details of participating districts: ಜಿಲ್ಲೆಗಳ ವಿವರ:
ದಿನಾಂಕ: 05/01/2024 ಒಟ್ಟು ಹನ್ನೆರಡು ಜಿಲ್ಲೆಗಳು:
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಹಾಸನ, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ. ಈ ಜಿಲ್ಲೆಯ ರೈತರು ಭಾಗವಹಿಸಬಹುದಾಗಿರುತ್ತದೆ.
ದಿನಾಂಕ: 06.01.2024 ಏಳು ಜಿಲ್ಲೆಗಳು:
ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ರಾಮನಗರ.ಈ ಜಿಲ್ಲೆಯ ರೈತರು ಭಾಗವಹಿಸಬಹುದಾಗಿರುತ್ತದೆ.ಈ ಜಿಲ್ಲೆಯ ರೈತರು ಭಾಗವಹಿಸಬಹುದಾಗಿರುತ್ತದೆ.
ದಿನಾಂಕ: 07/01/2024 ಹನ್ನೆರಡು ಜಿಲ್ಲೆಗಳು:
ಬಾಗಲಕೋಟೆ, ಬಿಜಾಪುರ, ಬೀದರ್, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯನಗರ.ಈ ಜಿಲ್ಲೆಯ ರೈತರು ಭಾಗವಹಿಸಬಹುದಾಗಿರುತ್ತದೆ.
ಗಮನಿಸಿ: ಪ್ರತಿ ಜಿಲ್ಲೆಗಳಿಂದ ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ -2024″ ಕ್ಕೆ ಭಾಗವಹಿಸಲು ವ್ಯೆವಸ್ಥೆ ಮಾಡಲಾಗುತ್ತೆ
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲಾ ಮತ್ತು ತಾಲೂಕು ಕೃಷಿ ಇಲಾಖೆಯನ್ನು ಸಂಪರ್ಕಿಸಿ.