ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ-ಇತರೆ ಉಪಚಾರಗಳು (PMKSY-OI) ಚಟುವಟಿಕೆಗಳು:
ಆತ್ಮೀಯ ರೈತ ಬಾಂದವರೇ ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ -ಇತರೆ ಉಪಚಾರಗಳು ಈ ಯೋಜನೆಯನ್ನು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಶೇ.60:40 ರ ಕೇಂದ್ರ ಮತ್ತು ರಾಜ್ಯದ ಪಾಲಿನ ಮೂಲಕ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿದ್ದು.ಆಸಕ್ತ ರೈತರು ಈ ಯೋಜನೆಯ ಲಾಭ ಪಡೆಯಲು ಇಂದೇ ಅರ್ಜಿ ಸಲ್ಲಿಸಿ.
ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಮತ್ತು ರೇಷ್ಮೆ ಇಲಾಖೆ ಮೂಲಕ ರೈತರು ಸೂಕ್ಷ್ಮ ನೀರಾವರಿ ಘಟಕಗಳನ್ನು (ಹನಿ ಮತ್ತು ತುಂತುರು ನೀರಾವರಿ) ಆಳವಡಿಸಿಕೊಂಡಿದ್ದರೆ ಅಥವಾ ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದರೆ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಿರಿ.
ಈ ಕೆಳಗೆ ನೀಡಿರುವ 5 ಚಟುವಟಿಕೆಗಳನ್ನು ಗರಿಷ್ಠ ರೂ.75,000/- ಮಿತಿಗೆ ಒಳಪಟ್ಟು ರೈತರು ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ.
ಇದನ್ನೂ ಓದಿ: Agricultural innovation Scheme: ಕೃಷಿ ನವೋದ್ಯಮ ಯೋಜನೆಯಡಿ 5 ಲಕ್ಷದಿಂದ 50 ಲಕ್ಷದವರೆಗೆ ಸಹಾಯಧನ.
ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ-ಇತರೆ ಉಪಚಾರಗಳು (PMKSY-OI) ಚಟುವಟಿಕೆಗಳು:
ವೈಯಕ್ತಿಕ ನೀರು ಸಂಗ್ರಹಣಾ ವಿನ್ಯಾಸಗಳು: ವೆಚ್ಚದ ಮಾನದಂಡಗಳು:
ಒಟ್ಟು ವೆಚ್ಚದ ಶೇ.50% ರಷ್ಟು, ಅಥವಾ ರೂ.75,000/-ಕ್ಕೆ ಸೀಮಿತಗೊಳಿಸಿದೆ. ಸಣ್ಣ ಗಾತ್ರದ ಬಾವಿ/ಹೊಂಡಗಳಿಗೆ ಅನುಪಾತದ ಆಧಾರದ ಮೇಲೆ ವೆಚ್ಚವನ್ನು ಭರಿಸುವುದು. (On prorata basis). ಲೈನಿಂಗ್ ಇಲ್ಲದ ಬಾವಿ/ಹೊಂಡಗಳಿಗೆ ವೆಚ್ಚ ಶೇ.30% ರಷ್ಟು ಕಡಿಮೆ ಇರುತ್ತದೆ.
ಕೇಂದ್ರಿಯ ಅಂತರ್ಜಲ ಮಂಡಳಿಯಿಂದ ಅಧಿಸೂಚನೆಯಾಗಿರುವ (Over Exploited) ನಿರ್ಣಾಯಕ (Critical) ಮತ್ತು ಅರೆ-ನಿರ್ಣಾಯಕ( semi-critical)ಪ್ರದೇಶಗಳನ್ನು ಹೊರತುಪಡಿಸಿ, ಇತರೆ ಅಂತರ್ಜಲ ಸುರಕ್ಷಿತ (Safe) ಪ್ರದೇಶಗಳಲ್ಲಿ ಕೊಳದೆ ಬಾವಿಗಳು/Tube well ನಿರ್ಮಾಣ (ಅಲ್ಪ / ಮಧ್ಯಮ ಆಳದ). ಪ್ರತಿ ಘಟಕಕ್ಕೆ ಒಟ್ಟು ವೆಚ್ಚದ 50% ರಷ್ಟು, ..25,000/-ಕ್ಕೆ ಸೀಮಿತಗೊಳಿಸಿದೆ.
ಸಣ್ಣ ಬಾವಿಗಳ ಮರುಸ್ಥಾಪನೆ / ನವೀಕರಣ: ಪ್ರತಿ ಘಟಕಕ್ಕೆ ನವೀಕರಣದ ವೆಚ್ಚದ ಶೇ.50% ರಷ್ಟು, ರೂ.15,000/- ಕ್ಕೆ ಸೀಮಿತಗೊಳಿಸಿದೆ.
ಸ್ಥಗಿತಗೊಂಡಿರುವ ಕೊಳವೆ ಬಾವಿಗಳ ಮರು ಪೂರಣ: ಪ್ರತಿ ಘಟಕಕ್ಕೆ ಮರು ಪೂರಣ ಮಾಡುವ ವೆಚ್ಚದ ಶೇ.50% ರಷ್ಟು ರೂ.5000/- ಕ್ಕೆ ಸೀಮಿತಗೊಳಿಸಿದೆ.
ಪೈಪ್/ಪ್ರಿ-ಕಾಸ್ಟ್ ವಿತರಣಾ ವ್ಯವಸ್ಥೆ: ಪ್ರತಿ ಹೆಕ್ಟೇರ್ ವಿತರಣಾ ವ್ಯವಸ್ಥೆಯ ವೆಚ್ಚದ ಶೇ.50% ರೂ.10,000/-ಕ್ಕೆ ಸೀಮಿತಗೊಳಿಸಿದೆ.
ನೀರೆತ್ತುವ ಸಾಧನಗಳು (ವಿದ್ಯುತ್, ಡೀಸೆಲ್, ಪವನ/ಸೌರ): ಸ್ಥಾಪನೆಯ ವೆಚ್ಚದ ಶೇ50% ರಷ್ಟು, ಪ್ರತಿ ವಿದ್ಯುತ್ / ಡೀಸೆಲ್ ರೂ.15,000/-ಕ್ಕೆ ಸೀಮಿತಗೊಳಿಸಿದ್ದು. ಪ್ರತಿ ಪವನ/ಸೌರ ಘಟಕಕ್ಕೆ ರೂ.50.000/-ಕ್ಕೆ ಸೀಮೀತಗೊಳಿಸಿದೆ.
ದಿನನಿತ್ಯ ಕೃಷಿ ಮತ್ತು ಕೃಷಿಯೇತರ ಮಾಹಿತಿಗಾಗಿ ಈ ಚಾನೆಲ್ ಸೇರಿಕೊಳ್ಳಿ..https://whatsapp.com/channel/0029Va6W35C8KMqi6fToWX2s
ಈ ಮೇಲಿನ ಸೌಲಭ್ಯಗಳನ್ನು ಪಡೆಯಲು ರೈತರು ಸಮೀಪದ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ.