Thursday, September 19, 2024

Agricultural innovation Scheme: ಕೃಷಿ ನವೋದ್ಯಮ ಯೋಜನೆಯಡಿ 5 ಲಕ್ಷದಿಂದ 50 ಲಕ್ಷದವರೆಗೆ ಸಹಾಯಧನ.

Agricultural innovation Scheme: ಕೃಷಿ ನವೋದ್ಯಮ ಯೋಜನೆಯಡಿ 5 ಲಕ್ಷದಿಂದ 50 ಲಕ್ಷದವರೆಗೆ ಸಹಾಯಧನ.
ಯೋಜನೆಯ ಘಟಕಗಳೇನು? ಸಹಾಯಧನ ವಿತರಣೆ ಹೇಗೇ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ..

ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಹಾಗೂ ನವೀನ ಪರೀಕಲ್ಪನೆಗಳ ವಾಣೀಜ್ಯಿಕರಣವನ್ನು ಉತ್ತೇಜಿಸಲು ಕೃಷಿ ನವೋದ್ಯಯ ಕಾರ್ಯಕ್ರಮವನ್ನು ಅನುಷ್ಟಾನ ಮಾಡಲಾಗುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ವಿದ್ಯಾವಂತ ಯುವಕರು, ಆಸಕ್ತ ಪ್ರಗತಿಪರ ರೈತರು ಕೃಷಿಯಲ್ಲಿನ ನವೀನ ತಾಂತ್ರಿಕತೆಗಳು ಹಾಗೂ ನೂತನ ಪರಿಕ್ಪನೆಗಳಿಂದ ಕೃಷಿಯಲ್ಲಿ ನವೋದ್ಯಮಗಳನ್ನು ಪ್ರಾರಂಭಿಸುವುದರಿಂದ ಗ್ರಾಮೀಣ ಪ್ರದೇಶದ ಆದಾಯ ಹೆಚ್ಚಿಸುವುದರ ಜೊತೆಗೆ ಜನರು ಗ್ರಾಮೀಣ ಪ್ರದೇಶಗಳಲ್ಲಿಯೇ ನೆಲೆಸುವಲ್ಲಿ ಈ ಯೋಜನೆಯ ಸಹಕಾರಿಯಾಗಲಿದೆ.

ಯೋಜನೆಯ ಕಾರ್ಯವ್ಯಾಪ್ತಿ :
2023-24 ನೇ ಸಾಲಿನಲ್ಲಿ ರೈತರ ನೂತನ ಪರಿಕಲ್ಪನೆಗಳಿಗೆ ಉತ್ತೇಜನ ನೀಡಿ ಕೃಷಿಯೊಂದಿಗೆ ಉದ್ಯಮಿಗಳಾಗಿ ಪರಿವರ್ತನೆ ಹೊಂದುವಂತೆ ಹಾಗೂ ರೈತರ ಆದಾಯ ವೃದ್ದಿಸುವಲ್ಲಿ ಸಹಕಾರಿಯಾಗುವಂತೆ ರಾಜ್ಯಾದ್ಯಂತ ಕೃಷಿ ವಲಯದಲ್ಲಿ ನೂತನ ಆವಿಷ್ಕಾರಗಳು ನವೀನ ಉತ್ಪನ್ನಗಳು ಹಾಗೂ ಸೇವೇಗಳನ್ನು ಒಳಗೊಂಡಿರುವ ಕೃಷಿ ನವೋದ್ಯಮಗಳಿಗೆ ಉತ್ತೇಜನ ನೀಡಲಾಗುವುದು.

ಇದನ್ನೂ ಓದಿ: PM Kisan Scheme: ನಿಮ್ಮ ಪಿಎಂ ಕಿಸಾನ್ ಯೋಜನೆ ಜಾಲ್ತಿಯಲ್ಲಿ ಇದೆಯೇ Or ರದ್ದಾಗಿದೆಯೇ ಪರೀಕ್ಷಿಸಿಕೊಳ್ಳಿ.

ಆಯವ್ಯಯ :
2023-24 ನೇ ಸಾಲಿನ ಆಯವ್ಯಯದಲ್ಲಿ ಕೃಷಿ ನವೋದ್ಯಯ ಯೋಜನೆಗೆ ರೂ.10.00 ಕೋಟಿ ಅನುದಾನವನ್ನು ಜಲಾಯನ ಅಭಿವೃದ್ದಿ ಇಲಾಖೆಗೆ ನೀಡಲಾಗಿರುತ್ತದೆ.

ಯೋಜನೆಯ ಘಟಕಗಳು:
ಯೋಜನೆಯ ಘಟಕಗಳನ್ನು ಮೂರು ಘಟಕಗಳನ್ನು ಒಳಗೊಂಡಿರುತ್ತದೆ.


ಹೊಸ ಕೃಷಿ ನವೋದ್ಯಮಗಳಿಗೆ ( Startups at incubation Stage)ಆರ್ಥಿಕ ನೆರವು:

ಕೃಷಿ ಕ್ಷೇತ್ರದಲ್ಲಿ ನೂತನ ಪರಿಕಲ್ಪನೆಯೊಂದಿಗೆ ಆರಂಭಿಸುವ ಹೊಸ ಕೃಷಿ ನವೋದ್ಯಮಿಗಳಿಗೆ ಅನುಮೋದಿತ ಯೋಜನಾ ವರದಿಯ ಶೇಕಡ 50 ರಷ್ಟು ಸಹಾಯಧನವನ್ನು ( ಕನಿಷ್ಟ ರೂ 5 ಲಕ್ಷದಿಂದ ಗರಿಷ್ಟ ರೂ. 20 ಲಕ್ಷಗಳವರೆಗೆ) ಬ್ಯಾಂಕ್ ಸಾಲದ ಮುಖಾಂತರ(Backended Subsidy)ನೀಡಲಾಗುವುದು.

ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆ ಅಥವಾ ಮೇಲ್ದರ್ಜೆಗೇರಿಸಲು (Scale up of business/Expansion of established Startups) ಆರ್ಥಿಕ ನೆರವು:
ಕೃಷಿವಲಯದಲ್ಲಿ ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆಗಾಗಿ ಹಾಗೂ ಉನ್ನತೀಕರಣಕ್ಕಾಗಿ ಯೋಜನಾ ವರದಿಯ ಶೇಕಡಾ 50 ರಷ್ಟು ಸಹಾಯಧನವನ್ನು ( ಕನಿಷ್ಟ ರೂ 20 ಲಕ್ಷದಿಂದ ಗರಿಷ್ಟ ರೂ. 50 ಲಕ್ಷಗಳವರೆಗೆ) ಬ್ಯಾಂಕ್ ಸಾಲದ ಮುಖಾಂತರ(Backended Subsidy)ನೀಡಲಾಗುವುದು.

ಕೃಷಿ ನವೋದ್ಯಮಗಳ ಸಾಮರ್ಥ್ಯಭಿವೃದ್ದಿ ಕಾರ್ಯಕ್ರಮ ( Mentoring and Acceleration Programme -MAP):
ಆಯ್ಕೆಯಾದ ನವೋದ್ಯಮಿಗಳ ಸಾಮರ್ಥ್ಯಭಿವೃದ್ದಿಗೆ ಕೃಷಿ ವಿಶ್ವವಿದ್ಯಾಲಯ ICAR,CFTRI,CSIRC, CAMP, ಹಾಗೂ ಇತರ ಸಂಶೋದನಾ ಸಂಸ್ಥೇಗಳಾದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಇಲಾಖೆಯಡಿ ಸ್ಥಾಪಿತವಾಗಿರುವ ಕೃಷಿ ನಾವೀನ್ಯತೆಗಾಗಿ ಶ್ರೇಷ್ಟೆತೆಯ ಕೇಂದ್ರಗಳ ಮೂಲಕ ತರಬೇತಿಗಳನ್ನು ನೀಡಲಾಗುವುದು.ಸದರಿ ಕಾರ್ಯಕ್ರಮಕ್ಕಾಗಿ ಪ್ರತ್ಯೇಕವಾಗಿ ರೂ. 20 ಲಕ್ಷಗಳ ಅನುದಾನವನ್ನು ನಿಗಧಿಪಡಿಸಲಾಗಿದ್ದು ಕೃಷಿ ನವೋದ್ಯಮಿಗಳಿಗೆ ತರಬೇತಿ ನೀಡುವ ಸಂಸ್ಥೆಗಳಿಗೆ ತರಬೇತಿ ಶುಲ್ಕವನ್ನು ಪಾವತಿಸಲಾಗುವುದು.

ಇದನ್ನೂ ಓದಿ: PMKSY-OI Scheme: PVC Pipe ಶೇ. 50 ರ ಸಹಾಯಧನದಲ್ಲಿ ವಿತರಣೆ:

ಸಹಾಯಧನ ವಿತರಣೆ:

ಆಯ್ಕೆಯಾದ ನವೋದ್ಯಮಿಗಳಿಗೆ ಪ್ರಗತಿ ಸಾಧಿಸಲು ಪೂರ್ವ ನಿರ್ಧಾರಿತ ಮೈಲುಗಲ್ಲುಗಳನ್ನು ಗುರುತಿಸುವುದು.

ಹೊಸ ಕೃಷಿ ನವೋದ್ಯಮಗಳಿಗೆ:
(Start-ups at incubation stage): ಮೈಲಿಗಲ್ಲುಗಳಲ್ಲಿ ಅವುಗಳ ಕಾರ್ಯಕ್ಷೇತ್ರಕ್ಕನುಗುಣವಾಗಿ ಪೂರಕವಾದ ಮೈಲಿಗಲ್ಲುಗಳನ್ನು ಆಯ್ಕೆ ಮಾಡುವುದು.

Proof of Concept:
ಕೃಷಿ ನವೋದ್ಯಮಗಳು ತಮ್ಮ ಉತ್ಪನ್ನ/ ಸೇವೆಯನ್ನು ಅಭಿವೃದ್ಧಿಪಡಿಸಿ ಅದರ ಯಶಸ್ವಿ ಕಾರ್ಯವೈಖರಿ ಕುರಿತು ಖಾತರಿ ಪಡಿಸುವುದು

Prototype development:
ಕೃಷಿ ನವೋದ್ಯಮಗಳ ಉತ್ಪನ್ನಗಳ ಅಂತಿಮ ಮಾದರಿಯನ್ನು (Final Working Model)ಅಭಿವೃದ್ಧಿಪಡಿಸಿ ಅದರ ಕಾರ್ಯಕ್ಷಮತೆ ಖಾತರಿ ಪಡಿಸುವುದು.

Product/Field trials:
ಕೃಷಿ ನವೋದ್ಯಮಗಳ ಉತ್ಪನ್ನವನ್ನು ಅಭಿವೃದ್ದಿಪಡಿಸಿದ ನಂತರ ಸದರಿ ಉತ್ಪನ್ನವು ವಿವಿಧ ರೀತಿಯ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಕುರಿತು ಖಾತರಿ ಪಡಿಸುವುದು.

ಬಂಡವಾಳ ಸಂಗ್ರಹಣೆ :
ಕೃಷಿ ನವೋದ್ಯಮವನ್ನು ನಿರ್ವಹಿಸಲು ಬಂಡವಾಳದ ಮೂಲಗಳು ಹಾಗೂ ಕ್ರೀಯಾಯೋಜನೆಯನ್ನು ಸಲ್ಲಿಸುವುದು.

Market Launch:
ತಮ್ಮ ಉತ್ಪನ್ನ/ಸೇವೆಯನ್ನು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಚಾಲನೆ ನೀಡಿ, ಉತ್ತಮವಾಗಿ ವ್ಯಾಪಾರ ವಹಿವಾಟು/ಕೆಲಸ ನಿರ್ವಹಣೆ ಕುರಿತು ಖಾತರಿ ಪಡಿಸುವುದು

ಮಾರಾಟ ಗುರಿ ಹಾಗೂ ಆದಾಯ ಗಳಿಕೆ:

ಕೃಷಿ ನವೋದ್ಯಮಗಳು ಯೋಜನಾ ವರದಿಯಲ್ಲಿ ನೀಡಿರುವ ಸಮಯಾಧಾರಿತ ಮಾರಾಟ ಗುರಿಗಳು ಹಾಗೂ ಆದಾಯ ಗಳಿಕೆಯಾಗಿರುವ ಕುರಿತು ಹಾಗೂ ಲಾಭದ ಕುರಿತು Financial statement ಮುಖಾಂತರ ಖಾತರಿಪಡಿಸುವುದು.

ಬ್ರಾಂಡಿಂಗ್ ಹಾಗೂ Market Stability:
ಕೃಷಿ ನವೋದ್ಯಮಗಳು ತಮ್ಮ ಬ್ರಾಂಡ್ ವೃದ್ಧಿಸಲು ಹಾಗೂ ಆದಾಯದಲ್ಲಿ ಸುಸ್ಥಿರತೆ ಸಾಧಿಸಿರುವ ಕುರಿತು ಖಾತರಿಪಡಿಸುವುದು.

(Scale up of business/ Expansion of established Startups) ಅನುಗುಣವಾಗಿ ಈ ಕೆಳಗಿನವುಗಳಲ್ಲಿ ಸೂಕ್ತವಾದ ಮೈಲಿಗಲ್ಲುಗಳನ್ನು ನೀಡಲಾಗುವುದು

  • ನೂತನ ಮಾರಾಟ ತಂತ್ರ/ ವ್ಯವಹಾರ ಮಾದರಿ: ಕೃಷಿ ನವೋದ್ಯಮಗಳು ತಮ್ಮ
  • ನೂತನ ತಾಂತ್ರಿಕತೆಯ ಅಳವಡಿಕೆ: ವ್ಯವಹಾರವನ್ನು ಉನ್ನತೀಕರಿಸಲು ಬಳಸುವ ನೂತನ ತಾಂತ್ರಿಕತೆಗಳು, ಯಂತ್ರೋಪಕರಣಗಳ ಸ್ನಾಪನೆ ಕುರಿತು ಖಾತರಿಪಡಿಸುವುದು.
  • ಹೆಚ್ಚುವರಿ ಉತ್ಪನ್ನಗಳ/ ಸೇವೆಗಳ ಚಾಲನೆ : ಉದ್ಯಮ ವಿಸ್ತರಿಸಲು ನೂತನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು.
  • ಬಂಡವಾಳ ಸಂಗ್ರಹಣೆ ಕೃಷಿ ನವೋದ್ಯಮವನ್ನು ನಿರ್ವಹಿಸಲು ಬಂಡವಾಳದ ಮೂಲಗಳು ಹಾಗೂ ಕ್ರಿಯಾಯೋಜನೆಯನ್ನು ಸಲ್ಲಿಸುವುದು.
  • ಮಾರಾಟ ಗುರಿ ಹಾಗೂ ಆದಾಯ ಗಳಿಕೆ:
    ಕೃಷಿ ನವೋದ್ಯಮಗಳು ಯೋಜನಾ ವರದಿಯಲ್ಲಿ ನೀಡಿರುವ ಸಮಯಾಧಾರಿತ ಮಾರಾಟ ಗುರಿಗಳು ಹಾಗೂ ಆದಾಯ ಖಾತರಿಪಡಿಸುವುದು..
  • ಬ್ರಾಂಡಿಂಗ್ ಹಾಗೂ Market Stability:
    ಕೃಷಿ ನವೋದ್ಯಮಗಳು ತಮ್ಮ ಬ್ರಾಂಡ್ ವೃದ್ದಿಸಲು ಹಾಗೂ ಆದಾಯದಲ್ಲಿ ಸುಸ್ಥಿರತೆ ಸಾಧಿಸಿರುವ ಕುರಿತು ಖಾತರಿಪಡಿಸುವುದು.
  • ಯೋಜನೆ ಸಂಪೂರ್ಣ ಮಾರ್ಗಸೂಚಿ ಇಲ್ಲಿ ಒತ್ತಿ

ಹೆಚ್ಚಿನ ಮಾಹಿತಿಗಾಗಿ: ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ.

ಇದನ್ನೂ ಓದಿ: free fodder seeds kit: ಪಶು ಇಲಾಖೆಯಿಂದ ಉಚಿತ ಮೇವಿನ ಬೀಜ ವಿತರಣೆ:

ಇತ್ತೀಚಿನ ಸುದ್ದಿಗಳು

Related Articles