Thursday, September 19, 2024

free fodder seeds kit: ಪಶು ಇಲಾಖೆಯಿಂದ ಉಚಿತ ಮೇವಿನ ಬೀಜ ವಿತರಣೆ:

ಆತ್ಮೀಯ ರೈತ ಬಾಂದವರೇ ಈ ವರ್ಷ ರಾಜ್ಯದ 235 ತಾಲೂಕುಗಳ ಪೈಕಿ 216 ತಾಲುಕುಗಳನ್ನು ಮಳೆ ಕೊರತೆಯಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ಪಶುಸಂಗೋಪನೆ ಮತ್ತು ಪಶು ವೈದ್ಯ ಇಲಾಖೆಯಿಂದ ರೈತರಿಗೆ ಉಚಿತ ಮೇವಿನ ಕಿಟ್ ವಿತರಣೆ ಮಾಡಲಾಗುತ್ತಿದೆ.

ಪ್ರಸ್ತುತ ಜಿಲ್ಲಾವಾರು ಬೇಡಿಕೆಯನ್ವಯ ಬರಪೀಡಿತ ತಾಲ್ಲೂಕುಗಳ ಪಟ್ಟಿವಾರು ಮೊದಲ ಹಂತದಲ್ಲಿ ಮೇವಿನ ಕಿಟ್ ಗಳನ್ನು ಒದಗಿಸಲಾಗಿದ್ದು ಪಶುಸಂಗೋಪನೆ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಅರ್ಜಿಯನ್ನು ಸಂಗ್ರಹಿಸಿ ಜಾನುವಾರುಗಳನ್ನು ಹೊಂದಿರುವ ರೈತರನ್ನು ಗುರುತಿಸಿ ಅಂತವರಿಗೆ ಉಚಿತ ಮೇವಿನ ಕಿಟ್ ಅನ್ನು ವಿತರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಸಂಬಾರ ಮಂಡಳಿ ಶಿರಸಿ, ಇವರಿಂದ ಸಹಾಯ ಧನಕ್ಕೆ ಅರ್ಜಿ ಆಹ್ವಾನ

fodder seed: ಬಹುವಾರ್ಷಿಕ ಮೇವಿನ ಬೀಜದ ವಿಶೇಷತೆಗಳು:

ಮಳೆ ಆಧಾರಿತ ಪ್ರದೇಶಗಳಲ್ಲಿ, ಮಳೆ ಕುಂಠಿತಗೊಂಡ ಸಂದರ್ಭದಲ್ಲಿ ಮೇವಿನ ಅಭಾವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಬರ ಪರಿಸ್ಥಿತಿಯಲ್ಲಿ ಈ ಕ್ಷೇತ್ರಗಳಲ್ಲಿ ಮೇವಿನ ತೀವ್ರ ಅಭಾವ ದಿಂದ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಗೆ ಹಿನ್ನಡೆ ಉಂಟಾಗುತ್ತದೆ.

ಇಂತಹ ಪ್ರದೇಶಗಳಲ್ಲಿ ಬಹುವಾರ್ಷಿಕ ಮೇವಿನ ಜೋಳದ ಕೃಷಿಯಿಂದ ಈ ಪರಿಸ್ಥಿತಿಯನ್ನು ಬಹಳ ಮಟ್ಟಿಗೆ ವಿಭಾಗಿಸಬಹುದು. ಹೆಸರೆ ಸೂಚಿಸುವಂತೆ ಇದು ಒಂದು ಬಹುವಾರ್ಷಿಕ ಮೇವಿನ ಬೆಳೆಯಾಗಿದ್ದು ಒಮ್ಮೆ ಬಿತ್ತಿದ ಬೆಳೆ ಕನಿಷ್ಠ ಮೂರು ವರ್ಷಗಳ ವರೆಗೆ ಮೇವನ್ನು ಪೂರೈಸಲಾಗುತ್ತದೆ. ಈ ಮೇವನ್ನ ಎಮ್ಮೆ, ಆಡು, ಕುರಿ, ಮೋಲ ಹಸು ಮುಂತಾದ ಪ್ರಾಣಿ ಗಳಿಗೆ ನಿತ್ಯ ಆಹಾರವಾಗಿ ಕೊಡಬಹುದಾಗಿರುತ್ತದೆ.

free fodder seeds kit- ಮೇವಿನ ಕಿಟ್ ನಲ್ಲಿ ಯಾವೆಲ್ಲ ಬೀಜ ಒದಗಿಸಲಾಗುತ್ತಿದೆ?

ರಾಜ್ಯ ಸರಕಾರದಿಂದ ಬರ ಪೀಡಿತ ತಾಲ್ಲೂಕುಗಳಲ್ಲಿ ಮೊದಲ ಹಂತದಲ್ಲಿ ವಿತರಣೆ ಮಾಡುತ್ತಿರುವ ಉಚಿತ ಮೇವಿನ ಬೀಜದ ಕಿಟ್ ನಲ್ಲಿ ಮೇವಿನ ಜೋಳ (ಆಫ್ರಿಕನ್ ಟಾಲ್), ಬಹು ವಾರ್ಷಿಕ ಜೋಳ, ಮೇವಿನ ಅಲಸಂದೆ ಹಾಗೂ ಸಜ್ಜೆ ಬೀಜವನ್ನು ರೈತರು ಪಡೆಯಬವುದು. ಇಲಾಖೆಯಿಂದ ಈಗ ನೀಡುತಿರುವ ಮೇವಿನ ಕಿಟ್ ತೂಕವು ಐದು ಕೆಜಿಯಷ್ಟು ಇದ್ದು ಈ ಮೇವಿನ ಬೀಜವನ್ನು ಬಿತ್ತನೆ ಮಾಡಿ ಬೆಳೆಯಲು ನೀರಿನ ಸೌಲಭ್ಯವಿರುವ ರೈತರಿಗೆ ಮಾತ್ರ ಕಿಟ್ ಅನ್ನು ನೀಡಲಾಗುತ್ತಿದೆ.

ಅರ್ಜಿ ಯಾರು ಸಲ್ಲಿಸಬಹುದು?

ರಾಜ್ಯದ ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಹೆಸರಿರುವ ಎಲ್ಲಾ ತಾಲೂಕುಗಳಲ್ಲಿ ಈಗಾಗಲೇ ಮೊದಲ ಹಂತದಲ್ಲಿ ಉಚಿತ ಮೇವಿನ ಬೀಜದ ಕಿಟ್ ವಿತರಣೆ ಆರಂಭವಾಗಿದ್ದು ಹೆಚ್ಚು ಜಾನುವಾರುಗಳನ್ನು ಹೊಂದಿರುವ ರೈತರು ನಿಮ್ಮ ತಾಲ್ಲೂಕಿನ ಪಶು ಆಸ್ಪತ್ರೆಯನ್ನು ಭೇಟಿ ಮಾಡಿ ಕೂಡಲೇ ಅರ್ಜಿ ಸಲ್ಲಿಸಿದರೆ ಕಿಟ್ ವಿತರಣೆ ಸಮಯದಲ್ಲಿ ನಿಮಗೆ ಮೇವಿನ ಬೀಜಗಳು ದೊರೆಯುತ್ತವೆ.

ಇದನ್ನೂ ಓದಿ: ಮೂವತ್ತು ಪೈಪ್ 5 ಜೆಟ್ ಪಡೆಯಲು ಎಷ್ಟು ಹಣ ? ಅಗತ್ಯ ದಾಖಲೆಗಳು ಯಾವುವು?

ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ?

ಅರ್ಜಿದಾರರ ಆಧಾ‌ರ್ ಕಾರ್ಡ ಪ್ರತಿ.

FID .

ಮೊಬೈಲ್ ಸಂಖ್ಯೆ.

ನೀರಾವರಿ ಸೌಲಭ್ಯ ಇರುವುದು ಕಡ್ಡಾಯ.

ಇದನ್ನೂ ಓದಿ: PMKSY-OI Scheme: PVC Pipe ಶೇ. 50 ರ ಸಹಾಯಧನದಲ್ಲಿ ವಿತರಣೆ:

fodder seeds-ಮೇವಿನ ಬೀಜದ ಕಿಟ್ ವಿತರಣೆಗೆ 20 ಕೋಟಿ ಅನುದಾನ ಬಿಡುಗಡೆ:

ಸರಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ಮೊದಲ ಹಂತದಲ್ಲಿ ಮೇವಿನ ಬೀಜದ ಕಿಟ್ ವಿತರಣೆ ಮಾಡಲ ಸುಮಾರು ಇಪ್ಪತ್ತು ಕೋಟಿ ಅನುದಾನವನ್ನು ಪಶುಸಂಗೋಪನೆ ಇಲಾಖೆಗೆ ಬಿಡುಗಡೆ ಮಾಡಲಾಗಿದ್ದು, ಈ ಅನುದಾನದಲ್ಲಿ ಇಲಾಖೆಯು ಮೇವಿನ ಬೀಜ ಖರೀದಿಸಿ ಜಾನುವಾರು ಸಂಖ್ಯೆಗಳ ಆಧಾರದ ಮೇಲೆ ಕಿಟ್‌ಗಳನ್ನು ಹಂಚಿಕೆ ಮಾಡುಲಾಗುತ್ತೆ. ಹಂತ ಹಂತವಾಗಿ ಕಿಟ್ ಬರಲಿದ್ದು ಮೊದಲ ಹಂತದಲ್ಲಿ ನಮಗೆ 2287 ಕಿಟ್‌ಗಳು ಇಲಾಖೆಗೆ ಬಂದಿವೆ’ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶು ಇಲಾಖೆಯನ್ನು ಸಂಪರ್ಕಿಸಿ

ಇತ್ತೀಚಿನ ಸುದ್ದಿಗಳು

Related Articles