Friday, September 20, 2024

Crop loan Farmers: ಬೆಳೆಸಾಲ ಮಾಡಿರುವ ರೈತರ ಗಮನಕ್ಕೆ:

ಆತ್ಮೀಯ ರೈತ ಬಾಂದವರೇ 2023-24 ನೇ ಸಾಲಿನ( Rabi Season ) ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ (Fasal Bima Yojana) ಬೆಳೆ ವಿಮೆ ಮಾಡಲು ಆಸಕ್ತಇರುವ ರೈತರು ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ.

ಈ ಒಂದು ಲೇಖನದಲ್ಲಿ ಈ ಯೋಜನೆ ಲಾಭ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು? ಕೋನೆಯ ದಿನಾಂಕ ಯಾವಾಗ? ಈ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Drought relief fund: ಬರ ಪರಿಹಾರ ಜಮಾ ಆಗಲು ಈ ಕೆಲಸ ಕಡ್ಡಾಯ: 324 ಕೋಟಿ ಬರ ಪರಿಹಾರ ಬಿಡುಗಡೆ:

ಈ ಲೇಖನದಲ್ಲಿ ಧಾರವಾಡ ಜಿಲ್ಲೆಗೆ ಅಳ್ನಾವರ ತಾಲೂಕಿನ ಮಾಹಿತಿಯನ್ನು ನೀಡಲಾಗಿದೆ.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿ ಮಾಡಲು ಗ್ರಾಮ ಪಂಚಾಯತ ಮಟ್ಟದ ಹಿಂಗಾರು ಹಂಗಾಮು ಕಡಲೆ (ಮಳೆ ಆಶ್ರಿತ) ಮತ್ತು ಜೋಳ (ಮಳೆ ಆಶ್ರಿತ) ಬೆಳೆಗೆ ಮುಂದಿನ ತಿಂಗಳ ಡಿಸೆಂಬರ್ 01 ನೋಂದಣಿಗೆ ಕೊನೆಯ ದಿನವಾಗಿರುತ್ತದೆ.

ಹಿಂಗಾರು ಹಂಗಾಮಿನ ಬೆಳೆಗಳಾದ ಹುರಳಿ (ಮಳೆ ಆಶ್ರಿತ), ಕುಸಬೆ (ಮಳೆ ಆಶ್ರಿತ) ಬೆಳೆಗೆ ಬೆಳೆ ವಿಮೆ ಮಾಡಿಸಲು ಇದೇ ತಿಂಗಳ ನವೆಂಬರ್ 15 ಕೊನೆಯ ದಿನವಾಗಿರುತ್ತದೆ.

ಹೋಬಳಿ ಮಟ್ಟದ ಹಿಂಗಾರು ಹಂಗಾಮಿನ ಬೆಳೆಗಳಾದ ಕಡಲೆ (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಜೋಳ (ನೀರಾವರಿ), ಮುಸುಕಿನ ಜೋಳ (ನೀರಾವರಿ) ಮತ್ತು ಗೋಧಿ (ಮಳೆ ಆಶ್ರಿತ) ಬೆಳಗೆ ಬೆಳೆ ವಿಮೆ ಮಾಡಿಸಲು ಮುಂದಿನ ತಿಂಗಳ ಡಿಸೆಂಬರ್ 01 ಕೊನೆಯ ದಿನವಾಗಿದೆ. ಹಿಂಗಾರು ಹಂಗಾಮಿನ ಗೋದಿ (ನೀರಾವರಿ) ಡಿಸೆಂಬರ್ 15 ಕೊನೆಯ ದಿನವಾಗಿದೆ. ಹಾಗೂ ಹಿಂಗಾರು ಹಂಗಾಮಿನ ಕಡಲೆ (ನೀರಾವರಿ) ಡಿಸೆಂಬರ್ 30 ಕೊನೆಯ ದಿನವಾಗಿರುತ್ತದೆ.

ಇದನ್ನೂ ಓದಿ: ಸಹಾಯಧನದಲ್ಲಿ ತುಂತುರು ನೀರಾವರಿ ಘಟಕಕ್ಕೆ ಅರ್ಜಿ ಆಹ್ವಾನ:

Crop loan Farmers : ಬೆಳೆಸಾಲ ಮಾಡಿಸಿರುವ ರೈತರ ಗಮನಕ್ಕೆ :

ಆತ್ಮೀಯ ರೈತರೇ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು. ಒಂದು ವೇಳೆ ಬೆಳೆ ಸಾಲ ಪಡೆದ ರೈತರು ಬೆಳೆವಿಮೆ ಮಾಡಿಸಲು ಆಸಕ್ತ ಇಲ್ಲದ ರೈತರು ಬೆಳೆ ವಿಮೆ ಮಾಡಿರುವ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕದ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈ ಬಿಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿನ ವಿಮಾ ಪ್ರತಿನಿಧಿಗಳನ್ನು ಎಸ್‌ಬಿಐ ಜನರಲ್ ಇನ್ಸೂರೆನ್ಸ್ ಕಂಪನಿ, ಹುಬ್ಬಳ್ಳಿ ಜಿಲ್ಲಾ ಮ್ಯಾನೇಜರ್ ಉಮೇಶ ಕಾಂತಿ ಮೊ.ಸಂ. 9980987740 ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ, ಇಲ್ಲವೇ ಬ್ಯಾಂಕ್ ಶಾಖೆಯವರನ್ನು ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರ ರಾಜಶೇಖರ ಅಣಗೌಡರ ಅವರು ತಿಳಿಸಿದ್ದಾರೆ.

2023-24 ರ ಹಿಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಗ್ರಾಮ ಪಂಚಾಯತ ಮಟ್ಟಕ್ಕೆ ಒಳಗೊಂಡ ಬೆಳೆಗಳ ಪಟ್ಟಿ ವಿವರ:

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಧಾರವಾಡ ತಾಲೂಕು ಅಮ್ಮಿನಭಾವಿ, ಉಪ್ಪಿನಬೆಟಗೇರಿ, ಕನಕೂರ, ಕರಡಿಗುಡ್ಡ, ಪುಡಕಲಕಟ್ಟಿ, ಮರೇವಾಡ, ಮಾರಡಗಿ, ಶಿವಳ್ಳಿ, ಹಾರೋಬೆಳವಡಿ, ಹೆಬ್ಬಳ್ಳಿ, ಕುರುಬಗಟ್ಟಿ, ಕೋಟಬಾಗಿ, ಕೋಟೂರ, ಗರಗ, ತಡಕೋಡ, ನರೇಂದ್ರ, ಬೇಲೂರ, ಮಾದನಭಾವಿ, ಯಾದವಾಡ, ಲೋಕೂರ, ಹಂಗರಕಿ, ತೇಗೂರ ಗ್ರಾಮ ಪಂಚಾಯತಿಗಳಿಗೆ ಜೋಳ (ಮಳೆ ಆಶ್ರಿತ) ಮತ್ತು ಕಡಲೆ (ಮಳೆ ಆಶ್ರಿತ) ಮತ್ತು ದೇವರಹುಬ್ಬಳ್ಳಿ, ನಿಗದಿ, ಮನಗುಂಡಿ, ಮನಸೂರ, ಯರಿಕೊಪ್ಪ ಹಳ್ಳಿಗೇರಿ ಗ್ರಾಮಗಳಿಗೆ ಜೋಳ (ಮಳೆ ಆಶ್ರಿತ) ಬೆಳೆಯಾಗದೆ.

ಧಾರವಾಡ ತಾಲೂಕು ಅಮ್ಮಿನಭಾವಿ ಹೋಬಳಿ, ಕಡಲೆ (ನೀರಾವರಿ), ಕುಸುಬೆ (ಮಳೆ ಆಶ್ರಿತ), ಗೋಧಿ (ನೀರಾವರಿ), ಗೋಧಿ (ಮಳೆ ಆಶ್ರಿತ), ಜೋಳ (ನೀರಾವರಿ) ಮುಸುಕಿನ ಜೋಳ (ನೀರಾವರಿ), ಗರಗ ಹೋಬಳಿ ಕುಸುಬೆ (ಮಳೆ ಆಶ್ರಿತ), ಗೋಧಿ (ನೀರಾವರಿ), ಗೋಧಿ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ) ಧಾರವಾಡ ಹೋಬಳಿ, ಗೋಧಿ (ಮಳೆ ಆಶ್ರಿತ), ಮುಸುಕಿನ ಜೋಳ, (ನೀರಾವರಿ), ಹುರಳಿ (ಮಳೆ ಆಶ್ರಿತ) ಹೆಸರು (ಮಳೆ ಆಶ್ರಿತ), ಅಳ್ಳಾವರ ಹೋಬಳಿ ಹುರಳಿ (ಮಳೆ ಆಶ್ರಿತ) ಬೆಳೆಗಳಾಗಿವೆ.

ಇದನ್ನೂ ಓದಿ: Gift Deed- ದಾನ ಪತ್ರ ಹೇಗೆ ಬರೆಯಬೇಕು? ಬೇಕಾಗುವ ದಾಖಲೆಗಳೇನು? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ.

Where to apply: ಅರ್ಜಿ ಸಲ್ಲಿಸುವುದು ಎಲ್ಲಿ?
2023-24 ರ ಹಿಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ ಓನ್ ಕೇಂದ್ರ, ಕರ್ನಾಟಕ ಓನ್,ನಾಗರಿಕ ಸೇವಾ ಕೇಂದ್ರ ಭೇಟಿ ನೀಡಿ ಅರ್ಜಿ ಸಲ್ಲಿಸುಬಹುದು.

ಬೇಕಾದ ದಾಖಲೆಗಳು:
ರೈತರ ನೋಂದಣಿ ಸಂಖ್ಯೆ FID Number
ಆಧಾರ್‍ ಕಾರ್ಡ
ಬ್ಯಾಂಕ್ ಪಾಸ್ ಬುಕ್
ರೇಕಾರ್ಡ (RTC)

ಇದನ್ನೂ ಓದಿ: Free treatment: 5 ಲಕ್ಷದವರೆಗೆ ಬಡವರಿಗೆ ಉಚಿತ ಚಿಕಿತ್ಸೆ ಯೋಜನೆ:

ಇತ್ತೀಚಿನ ಸುದ್ದಿಗಳು

Related Articles