ಭಾರತ ಸರ್ಕಾರವು ಮುಖ್ಯವಾಗಿ, ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಆರೋಗ್ಯ ಸೇವೆಯ ಗುಣಮಟ್ಟದ ಸುಧಾರಣೆಯನ್ನು ತಂದು ದೇಶದ ಎಲ್ಲಾ ಜನರಿಗೂ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭ ಮಾಡಿದೆ.
ಪ್ರಮುಖವಾಗಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಆರೋಗ್ಯ ಸೇವೆಯನ್ನು ಹಣಕಾಸಿನ ತೊಂದರೆ ಇಲ್ಲದೆಯೇ ಲಾಭವಾಗಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಕಾರ್ಡ್‌ಗಳ ಮೂಲಕ ದೇಶಾದ್ಯಂತ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ನೀಡಲು ಮುಂದಾಗಿದೆ.
ಆದರೆ ಅದೆಷ್ಟೋ ಜನರಿಗೆ ಈ ಯೋಜನೆ ಸಂಪೂರ್ಣವಾದ ಮಾಹಿತಿ ಇಲ್ಲ. ಆಗಾಗಿ ಈ ಮಾಹಿತಿಯನ್ನು ಆದಷ್ಟು ಶೇರ್ ಮಾಡುವ ಮೂಲಕ ಜನಸಾಮಾನ್ಯರಿಗೆ ತಲುಪಿಸಿ.
ಇದನ್ನೂ ಓದಿ: Free Sewing Machine Scheme: ಉಚಿತ ಹೊಲಿಗೆ ಯಂತ್ರ ವಿತರಣೆ:
Benefits of the Scheme: ಈ ಯೋಜನೆ ಲಾಭಗಳು:
ಆಯುಷ್ಮಾನ್ ಭಾರತ್ ಯೋಜನೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಎರಡರಲ್ಲೂ ಒಂದು ಕುಟುಂಬವು ವಿಮೆ ಮೂಲಕ ಸುಮಾರು 5 ಲಕ್ಷ ರೂಪಾಯಿಯ ಚಿಕಿತ್ಸೆಯನ್ನು ಪಡೆಯಲು ಅವಕಾಶವನ್ನು ನೀಡುತ್ತದೆ.
ಈ ಯೋಜನೆಯನ್ನು ಪ್ರಮುಖವಾಗಿ ಇಂಟರ್‌ನೆಟ್ ಅಥವಾ ಆನ್‌ಲೈನ್ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಿರುವ, ಬಡತನದಲ್ಲಿರುವ ಜನರಿಗಾಗಿ ಜಾರಿ ಮಾಡಲಾಗಿದೆ.
ಈ ಯೋಜನೆಯ ಫಲಾನುಭವಿಗಳು ಯಾವುದೇ ಹಣವನ್ನು ಪಾವತಿ ಮಾಡದೆಯೇ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ.
ಪ್ರತಿ ವರ್ಷ ಸುಮಾರು 6 ಕೋಟಿಯಷ್ಟು ಭಾರತೀಯರು ಅನಿಶ್ಚಿತವಾಗಿ ಉಂಟಾಗುವ ಆರೋಗ್ಯ ಸಮಸ್ಯೆಯಿಂದಾಗಿ ಮಧ್ಯಮ ವರ್ಗದಿಂದ, ಬಡವರ್ಗಕ್ಕೆ ಇಳಿಯುತ್ತಿದ್ದಾರೆ.
ಜನರು ಈ ರೀತಿ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶವನ್ನು ಈ ಯೋಜನೆ ಜಾರಿಗೊಳಿಸಲಾಗಿದೆ.
ಆಸ್ಪತ್ರೆಯಲ್ಲಿ ದಾಖಲಾಗುವ ಮೂರು ದಿನದ ಮುಂಚಿನ ಖರ್ಚು ವೆಚ್ಚಗಳು ಹಾಗೂ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ 15 ದಿನಗಳವರೆಗಿನ ಖರ್ಚು ವೆಚ್ಚವು ಈ ಯೋಜನೆಯಲ್ಲಿ ಒಳಗೊಳ್ಳುತ್ತದೆ.
ಒಂದು ಕುಟುಂಬದ ಗಾತ್ರದ ಮೇಲೆ ಯಾವುದೇ ನಿರ್ಬಂಧವಿಲ್ಲ. ಹಾಗೆಯೇ ವಯಸ್ಸಿನ ಮಿತಿಯೂ ಕೂಡಾ ಈ ಯೋಜನೆ ಇರುವುದಿಲ್ಲ.
ಕರ್ನಾಟಕದಲ್ಲಿ ಜನರು ಈ ಯೋಜನೆಯ ಸೌಲಭ್ಯ ಪಡೆಯಲು ಗ್ರಾಮ ಒನ್/ ಕರ್ನಾಟಕ ಒನ್ ಸೆಂಟರ್‌ಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಈ ಯೋಜನೆಯಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಆನ್ ಲೈನ್ ಮೂಲಕ ರೆಫರಲ್ ನೀಡಲು ಈ ಕಾರ್ಡುಗಳ ಅವಶ್ಯಕತೆ ಇದೆ.
ಇದನ್ನೂ ಓದಿ: Drought relief fund: ಬರ ಪರಿಹಾರ ಜಮಾ ಆಗಲು ಈ ಕೆಲಸ ಕಡ್ಡಾಯ: 324 ಕೋಟಿ ಬರ ಪರಿಹಾರ ಬಿಡುಗಡೆ:
Ayushman Card information:ಆಯುಷ್ಮಾನ್ ಕಾರ್ಡ ಮಾಹಿತಿ ಬಗ್ಗೆ:
ಈ ಕಾರ್ಡ್ ನಲ್ಲಿ ರೋಗಿಯ ಆರೋಗ್ಯ ದತ್ತಾಂಶವನ್ನು ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ.
ಫಲಾನುಭವಿಗಳು ವಾರ್ಷಿಕ 5 ಲಕ್ಷ ರೂ. ವರೆಗೂ ದೇಶದ ಯಾವುದೇ ಭಾಗದ ನೋಂದಾಯಿತ ಸರ್ಕಾರಿ/ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಎಪಿಎಲ್ ಕಾರ್ಡ ಹೊಂದಿರುವವರು ಅಥವಾ ಬಿಪಿಎಲ್ ಕಾರ್ಡ ಹೊಂದಿಲ್ಲದವರಿಗೆ ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ.30 ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು.ವಾರ್ಷಿಕ ಪ್ರತಿ ಕುಂಟುಂಬಕ್ಕೆ 1.50 ಲಕ್ಷ ರೂ. ವರೆಗೆ ಚಿಕಿತ್ಸೆಗೆ ಅವಕಾಶವಿದೆ.
ಕರ್ನಾಟಕದಲ್ಲಿ ಯಶಸ್ವಿನಿ ಹೆಸರಿನಲ್ಲಿ ಈ ಕಾರ್ಡ ವಿತರಿಸಲಾಗುತ್ತದೆ. ಗೊಂದಲ ನಿವಾರಣೆಗೆ ಹಾಗೂ ಹೆಚ್ಚಿನ ಮಾಹಿತಿಗೆ ಸ್ಥಳೀಯ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದು ಅಥವಾ ಸಹಾಯವಾಣಿ 104 ಮತ್ತು 145551 ಕರೆ ಮಾಡಿ ಮಾಹಿ ಪಡೆಯಬಹುದು.
Necessary Documents : ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
ಗುರುತಿನ ಚೀಟಿ (ಆಧಾರ್ / ಪ್ಯಾನ್ ಕಾರ್ಡ್)
ಸಂಪರ್ಕ ವಿವರ
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ (ವರ್ಷಕ್ಕೆ 5 ಲಕ್ಷ ರೂ. ಒಳಗಿರಬೇಕು)
ಈ ಯೋಜನೆಗೆ ನೀವು ಅರ್ಹರೇ ಎಂದು ತಿಳಿಯಲು:
ಮೊದಲು ಅಧಿಕೃತ ವೆಬ್ ಸೈಟ್ PM Jan Arogya mera.pmjay. gov.in ಗೆ ಭೇಟಿ ನೀಡಿ ಲಾಗಿನ್ ಆಯ್ಕೆ ಕ್ಲಿಕ್ ಮಾಡಿ.
ಅಲ್ಲಿ ಕೇಳಲಾಗುವ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಭರ್ತಿ ಮಾಡಿ.
ನಂತರ ಕೆಲವು ದಾಖಲೆಗಳು ಮತ್ತು ಐಡಿ ಸಂಖ್ಯೆಯನ್ನು ಆಯ್ಕೆ ಮಾಡಿ, ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.
ದಾಖಲೆಗಳ ಪರಿಶೀಲನೆ ಬಳಿಕ ನೀವು ಈ ಯೋಜನೆಗೆ ಅರ್ಹರಾಗಿದ್ದರೆ, ಆಯುಷ್ಮಾನ್ ಕಾರ್ಡ್ ಅನ್ನು ಪಿಎಂ ಆರೋಗ್ಯ ಯೋಜನೆ ಅಡಿ ನೀಡಲಾಗುವುದು.
ಇದನ್ನೂ ಓದಿ: ಸಹಾಯಧನದಲ್ಲಿ ತುಂತುರು ನೀರಾವರಿ ಘಟಕಕ್ಕೆ ಅರ್ಜಿ ಆಹ್ವಾನ: