Thursday, September 19, 2024

Drought relief fund: ಬರ ಪರಿಹಾರ ಜಮಾ ಆಗಲು ಈ ಕೆಲಸ ಕಡ್ಡಾಯ:

ಆತ್ಮೀಯ ರೈತ ಬಾಂದವರೇ ಈ ವರ್ಷ ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ರಾಜ್ಯ ಸರ್ಕಾರ 216 ತಾಲೂಕಿನಲ್ಲಿ ಬರ ಘೋಷಣೆ ಮಾಡಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ನಡೆಸಿದ ಅಧ್ಯಯನದ ಅನುಸಾರ ಬೆಳೆ ನಷ್ಟದ ಸಂಪೂರ್ಣ ಮಾಹಿತಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡಿದ್ದು, ಒಟ್ಟು 39,74,741.34 ಹೆಕ್ಟೇರ್‌ನಷ್ಟು ಬೆಳೆ ನಷ್ಟವಾಗಿದೆ ಎಂದು ಕೇಂದ್ರಕ್ಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರೈತರು ಈ ಬರ ಪರಿಹಾರ ಪಡೆಯಲು ಕಡ್ಡಾಯವಾಗಿ ಜಮೀನಿನ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ:

FID ಅಂದರೆ:- (FARMER IDENTIFICATION DOCUMENT ರೈತನ ಗುರುತಿನ ಚೀಟಿ)

ಪ್ರತಿಯೊಬ್ಬ ರೈತರು ಕಡ್ಡಾಯವಾಗಿ FID ಮಾಡಿಸಿಕೊಳ್ಳಬೇಕು, FID ಈಗಾಗಲೇ ಇದ್ದಲ್ಲಿ ಆ FID ನಿಮಗೆ ಸಂಭಂದಿಸಿದ ಎಲ್ಲಾ ಹೊಲದ ಸರ್ವೇ ನಂಬರಗಳು ಜೊಡಣೆಯಾಗಿದೆಯೋ ಅಥವಾ ಇಲ್ಲವೋ ಎಂದು ಕೂಡಲೆ ಪರಿಶೀಲಿಸಿಕೊಳ್ಳಿ, ಜಂಟಿ ಖಾತೆದಾರರು ಇದ್ದಲ್ಲಿ ಪ್ರತಿ ಒಬ್ಬ ಜಂಟಿ ಖಾತೆ ದಾರ ಪ್ರತ್ಯೇಕವಾಗಿ FID ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಈ ಪರಿಹಾರ ದೊರೆಯುವುದು ಅನುಮಾನ.

ಇದನ್ನೂ ಓದಿ: ಸಹಾಯಧನದಲ್ಲಿ ತುಂತುರು ನೀರಾವರಿ ಘಟಕಕ್ಕೆ ಅರ್ಜಿ ಆಹ್ವಾನ:
ಇದನ್ನೂ ಓದಿ: Gift Deed- ದಾನ ಪತ್ರ ಹೇಗೆ ಬರೆಯಬೇಕು? ಬೇಕಾಗುವ ದಾಖಲೆಗಳೇನು? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ.

FID ಮಾಡಲು ಬೇಕಾಗಿರುವ ಧಾಖಲಾತಿಗಳು:-

ಆಧಾರ ಕಾರ್ಡ

ಪಹಣಿ

ಬ್ಯಾಂಕಪಾಸ್ ಬುಕ್

ದೂರವಾಣಿ ಸಂಖ್ಯೆ

ಭಾವ ಚಿತ್ರ(ಫೋಟೋ)

ಗಮನಿಸಿ: FID ಮಾಡಿಸದೆ ಇದ್ದಲ್ಲಿ ರೈತರಿಗೆ ಬರುವ ಯಾವುದೆ ಪರಿಹಾರದ ಹಣ ರೈತರ ಖಾತೆಗೆ ಜಮೆ ಆಗುವುದಿಲ್ಲ. ಇದಕ್ಕೆ ನೀವೆ ಹೊಣೆಯಾಗಿರುತ್ತಿರಿ.

ಇದನ್ನೂ ಓದಿ: Poutry farm:ಕೋಳಿ ಸಾಕಾಣಿಕೆಗೆ ? ಯಾವೆಲ್ಲ ಅನುಮತಿ ಪಡೆಯಬೇಕು?

ಬರ ಪರಿಸ್ಥಿತಿಗೆ ರಾಜ್ಯ ಸರ್ಕಾರದ ಪರಿಹಾರ :
ರಾಜ್ಯ ಸರಕಾರದಿಂದ ಸದ್ಯ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೀಕರ ಬರಗಾಲದ ಸೂಕ್ತ ನಿರ್ವಹಣೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ 324 ಕೋಟಿ ರೂ ಬರ ಪರಿಹಾರವನ್ನು (Karnataka Drought Fund) ಬಿಡುಗಡೆ ಮಾಡಲಾಗಿದೆ.

ರಾಜ್ಯದ ಬರ ಪರಿಹಾರಕ್ಕಾಗಿ ರಾಜ್ಯ ವಿಪತ್ತು ನಿಧಿಯಿಂದ (SDRF) 324.00 ಕೋಟಿ ರೂ ಅನ್ನು ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಿ ಆರ್ಥಿಕ ಇಲಾಖೆಯು ಆದೇಶವನ್ನು ಹೊರಡಿಸಲಾಗಿದ್ದು, ಸಾಮರ್ಥ್ಯ ವೃದ್ಧಿ, ಬರ ಪರಿಹಾರ ಮತ್ತು ರಕ್ಷಣೆ, ಪುನರ್ ನವೀಕರಣ ಅಡಿಗಳ ಟಿಪ್ಪಣಿ ಅಡಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

Drought relief fund-ಯಾವ ಯಾವ ಜಿಲ್ಲೆಗೆ ಪರಿಹಾರ ಹಣ ?

ತುಮಕೂರು 1500 ಲಕ್ಷ
ಚಿತ್ರದುರ್ಗ 900 ಲಕ್ಷ
ದಾವಣಗೆರೆ 900 ಲಕ್ಷ
ಚಾಮರಾಜನಗರ 750 ಲಕ್ಷ
ಮೈಸೂರು 1350 ಲಕ್ಷ
ಹಾವೇರಿ 1200 ಲಕ್ಷ
ಧಾರವಾಡ 1200 ಲಕ್ಷ
ಶಿವಮೊಗ್ಗ 1050 ಲಕ್ಷ

ಇದನ್ನೂ ಓದಿ: ಶೇಕಡಾ 90 ರ ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿ:

ಬೆಂಗಳೂರು ನಗರ 750 ಲಕ್ಷ
ಬೆಂಗಳೂರು ಗ್ರಾಮಾಂತರ 600 ಲಕ್ಷ
ರಾಮನಗರ 750 ಲಕ್ಷ
ಕೋಲಾರ 900 ಲಕ್ಷ
ಚಿಕ್ಕಬಳ್ಳಾಪುರ 1200 ಲಕ್ಷ
ಹಾಸನ 1200 ಲಕ್ಷ
ಚಿಕ್ಕಮಗಳೂರು 1200 ಲಕ್ಷ
ಕೊಡಗು 750 ಲಕ್ಷ
ದಕ್ಷಿಣ ಕನ್ನಡ 300 ಲಕ್ಷ
ಉಡುಪಿ 450 ಲಕ್ಷ

ಇದನ್ನೂ ಓದಿ: ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್‌ ಅನ್ನು ಬದಲಾಯಿಸುವುದು ಹೇಗೆ?

ಉತ್ತರ ಕನ್ನಡ 1650 ಲಕ್ಷ
ಯಾದಗಿರಿ 900 ಲಕ್ಷ
ವಿಜಯನಗರ 900 ಲಕ್ಷ
ವಿಜಯನಗರ 900 ಲಕ್ಷ
ಮಂಡ್ಯ 1050 ಲಕ್ಷ
ಬಳ್ಳಾರಿ 750 ಲಕ್ಷ

ಇದನ್ನೂ ಓದಿ: ಬೆಳೆಸಾಲ ಪಡೆಯಲು ರೈತರ ನೋಂದಣಿ ಸಂಖ್ಯೆ ಪಡೆಯುವ ಸುಲಭ ವಿಧಾನ.

ಕೊಪ್ಪಳ 1050 ಲಕ್ಷ
ರಾಯಚೂರು 900 ಲಕ್ಷ
ಕಲಬುರ್ಗಿ 1650 ಲಕ್ಷ
ಬೀದರ್ 450 ಲಕ್ಷ
ಬೆಳಗಾವಿ 2250 ಲಕ್ಷ
ಬಾಗಲಕೋಟೆ 1350 ಲಕ್ಷ
ವಿಜಯಪುರ 1800 ಲಕ್ಷ
ಗದಗ 1050 ಲಕ್ಷ
ಈ ಬಾರಿಯ ಬರಕ್ಕೆ ರಾಜ್ಯದಲ್ಲಿ 39.74 ಲಕ್ಷ ಹೆಕ್ಟೇರ್ ಬೆಳೆ ನಷ್ಟ!

ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ರಾಜ್ಯ ಸರ್ಕಾರ 216 ತಾಲೂಕಿನಲ್ಲಿ ಬರ ಘೋಷಣೆ ಮಾಡಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ನಡೆಸಿದ ಅಧ್ಯಯನದ ಅನುಸಾರ ಬೆಳೆ ನಷ್ಟದ ಮಾಹಿತಿಯನ ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡಿದ್ದು, ಒಟ್ಟು ರಾಜ್ಯದ ಬರ ಜಿಲ್ಲೆಗಳ ಒಟ್ಟು 39,74,741.34 ಹೆಕ್ಟೇರ್‌ನಷ್ಟು ಬೆಳೆ ನಷ್ಟವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Crop insurance: ಬೆಳೆ ವಿಮೆ ಪರಿಹಾರ ಹೇಗೆ ರೈತರಿಗೆ ದೊರೆಯುವುದು ???

Bele parihara status check-ಬೆಳೆ ನಷ್ಟ – ಆಸ್ತಿ ನಷ್ಟದ ಪರಿಹಾರದ ಹಣ ಜಮಾ ಅಗಿರುವುದನ್ನು ನಿಮ್ಮ ಮೊಬೈಲ್ ನಲ್ಲಿ ಪರಿಶೀಲಿಸುವ ವಿಧಾನ:

ಈ ಹಿಂದಿನ ವರ್ಷದಲ್ಲಿ ಅತೀಯಾದ ಮಳೆಯಿಂದ ಇತರ ಪ್ರಕೃತಿ ವಿಕೋಪನಿಂದ ನಿಮ್ಮ ಜಮೀನಿನ ಬೆಳೆ ಅಥವಾ ಮನೆ-ಆಸ್ತಿ ನಷ್ಟವಾಗಿ ನಿಮಗೆ ಕೃಷಿ ಮತ್ತು ಕಂದಾಯ ಇಲಾಖೆಯಿಂದ ಪರಿಹಾರ ಒದಗಿಸಲು ಅರ್ಜಿ ಸ್ವೀಕರಿಸಿದಲ್ಲಿ ಅಂತಹ ಪ್ರಕರಣಗಳ ಪರಿಹಾರದ ಹಣ ಎಷ್ಟು? ಬಿಡುಗಡೆಯಾಗಿದೆ ಅರ್ಜಿ ಸ್ಥಿತಿಯನ್ನು ಕಂದಾಯ ಇಲಾಖೆಯ Parihara website ಭೇಟಿ ಮಾಡಿ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಬೆಳೆ ಮತ್ತು ಆಸ್ತಿ ಹಾನಿ ಪರಿಹಾರದ ಅರ್ಜಿ ಸ್ಥಿತಿ ಕುರಿತು ತಿಳಿಯಬವುದಾಗಿದೆ.

ಪರಿಹಾರ ತಂತ್ರಾಂಶದ ಮಾಹಿತಿ ಹೀಗಿದೆ:

https://parihara.karnataka.gov.in/Pariharahome/
ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಬೆಟ್ ಭೇಟಿ ಮಾಡಿ ಇಲ್ಲಿ parihara payment ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಆಧಾರ್ ಸಂಖ್ಯೆಯನ್ನು ಹಾಕಿ ಹಿಂದಿನ 5 ವರ್ಷದಲ್ಲಿ ಎಷ್ಟು ಬೆಳೆ ಪರಿಹಾರ ಜಮಾ ಅಗಿದೆ ಎಂದು ಸಂಪೂರ್ಣ ಮಾಹಿತಿಯನ್ನು ನೋಡಬಹುದಾಗಿದೆ.

ಇದನ್ನೂ ಓದಿ: ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳು.

ಗ್ರಾಮ ಮತ್ತು ತಾಲೂಕುವಾರು ಮಾಹಿತಿ ಲಭ್ಯ:

ಪರಿಹಾರ ತಂತ್ರಾಂಶದ ಮುಖಪುಟದಲ್ಲಿ ಕಾಣುವ ಈ Taluk Wise Payment Report, Village Wise Beneficiary Payment Report, Payment Details ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ ಗ್ರಾಮ ಮತ್ತು ತಾಲೂಕುವಾರು ಮತ್ತು ಫಲಾನುಭವಿ ವಿವರ ಸಹಿತ ಬೆಳೆ ಪರಿಹಾರ ಮಾಹಿತಿಯನ್ನು ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿ ತಿಳಿಯಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಆಡಳಿತಾಧಿಕಾರಿಗಳು ಮತ್ತುಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ.

ಇತ್ತೀಚಿನ ಸುದ್ದಿಗಳು

Related Articles