Saturday, October 5, 2024

Sprinkler irrigation Unit :ಕೃಷಿ ಇಲಾಖೆಯಿಂದ 90% ಮತ್ತು 75% ಸಹಾಯಧನದಲ್ಲಿ ನೀರಾವರಿ ಘಟಕ ಅರ್ಜಿ:

Sprinkler irrigation Unit :ಕೃಷಿ ಇಲಾಖೆಯಿಂದ 90% ಮತ್ತು 75% ಸಹಾಯಧನದಲ್ಲಿ ನೀರಾವರಿ ಘಟಕ ಅರ್ಜಿ:ಅರ್ಜಿ ಸಲ್ಲಿಸಲು ದಾಖಲೆಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಸಂಪೂರ್ಣ ವಿವರ ಈ ಅಂಕಣದಲ್ಲಿ.

ಆತ್ಮೀಯ ರೈತ ಬಾಂದವರೇ 2023- 24ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿ೦ಚಾಯಿ ಯೋಜನೆ ಸೂಕ್ಷ್ಮ ನೀರಾವರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದು, ಆಸಕ್ತ ರೈತರು ತಮಗೆ ಸಂಬಂದಿಸಿದ ತಾಲೂಕಿನ ಕೃಷಿ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಇದನ್ನೂ ಓದಿ: Agriculture equipment subsidy: ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳು.

Project Details: ಯೋಜನೆ ವಿವರ:
ಕೃಷಿ ಸಿ೦ಚಾಯಿ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕಕ್ಕೆ ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರ ಜಮೀನಿನ ವಿಸ್ತೀರ್ಣ ಗರಿಷ್ಠ ಎರಡು ಎಕರೆ ಪ್ರದೇಶದವರೆಗೆ ಇದ್ದರೆ ಆ ರೈತರಿಗೆ ಶೇ. 90ರಷ್ಟು ಸಹಾಯಧನ ನೀಡಲಾಗುತ್ತದೆ.


ಹಾಗೂ ಇತರೆ ಸಮುದಾಯದ ರೈತರಿಗೆ ಗರಿಷ್ಠ ಎರಡು ಎಕರೆ ಪ್ರದೇಶದ ವರೆಗೆ ಶೇ. 75 ರಷ್ಟು ಸಹಾಯಧನ ನೀಡಲಾಗುವುದು. ಮತ್ತು ಎಲ್ಲಾ ವರ್ಗದ ರೈತರಿಗೆ ಭಾರತ ಸರ್ಕಾರದ ಮಾರ್ಗ ಸೂಚಿ ಅನ್ವಯ ಎರಡು ಎಕರೆ ಮೇಲ್ಪಟ್ಟು ಗರಿಷ್ಠ ಐದು ಎಕರೆ ಪ್ರದೇಶದವರೆಗೆ ಶೇ. 45 ರಷ್ಟು ಸಹಾಯಧನ ನೀಡಲು ಅವಕಾಶವಿರುತ್ತದೆ.

Information is given in the table below: ಈ ಕೆಳಗಿನ ಕೋಷ್ಟಕದಲ್ಲಿ ಮಾಹಿತಿಯನ್ನು ನೀಡಲಾಗಿದೆ:


ಇದನ್ನೂ ಓದಿ: ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಸಾಲ ಸೌಲಭ್ಯ :

Documents to apply for Sprinkler Irrigation System: ತುಂತುರು ನೀರಾವರಿ ಘಟಕಕ್ಕೆ ಅರ್ಜಿ ಸಲ್ಲಿಸಲು ದಾಖಲೆಗಳು:

ಅರ್ಜಿ ನಮೂನೆ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರಿಗೆ (ಆರ್‌ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ)
ಆಧಾರ್‍ ಕಾರ್ಡ ಪ್ರತಿ
ಉತಾರ,(ಜಮೀನಿನ ರೆಕಾರ್ಡ)RTC
ನೀರಾವರಿ ಪ್ರಮಾಣ ಪತ್ರ
ಒಪ್ಪಿಗೆ ಪತ್ರ (ಜಂಟಿ ಇದ್ದರೆ ಮಾತ್ರ)
ಬಾಂಡ್ -20 rs
ಅರ್ಜಿದಾರರ ಛಾಯಚಿತ್ರ
ತೋಟಗಾರಿಕೆ ಇಲಾಖೆಯ (NOC)

ಇದನ್ನೂ ಓದಿ: Gift Deed- ದಾನ ಪತ್ರ ಹೇಗೆ ಬರೆಯಬೇಕು? ಬೇಕಾಗುವ ದಾಖಲೆಗಳೇನು? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ.

ಹೆಚ್ಚಿನ ಮಾಹಿತಿಗಾಗಿ ಹಾಗೂ ವಿವರಗಳಿಗಾಗಿ ಅರ್ಜಿ ಮತ್ತು ದಾಖಲೆಗಳನ್ನು ನಿಮ್ಮ ತಾಲೂಕಿನ ಹೋಬಳಿ ಮಟ್ಟದ ಕೃಷಿ ಇಲಾಖೆಗೆ ಅಧಿಕಾರಿಗಳನ್ನು ಮತ್ತು ಕಚೇರಿಗಳನ್ನು ಸಂಪರ್ಕಿಸಿ.

ಗಮನಿಸಿ: ನಿಮ್ಮ ನಿಮ್ಮ ಜಿಲ್ಲೆಯ ಹೋಬಳಿ ಮಟ್ಟದ ಕೃಷಿ ಇಲಾಖೆಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ನಂತರ ಜೇಷ್ಠತೆ ಆಧಾರದ ಮೇಲೆ ಅನುದಾನದ ಅನುಗುಣವಾಗಿ ಅರ್ಜಿ ಸಲ್ಲಿಸಿದ ರೈತರಿಗೆ ತುಂತುರು ನೀರಾವರಿ ಘಟಕವನ್ನು ನೀಡಲಾಗುವುದು.

ಇತ್ತೀಚಿನ ಸುದ್ದಿಗಳು

Related Articles