Schoolarship: ವಿದ್ಯಾರ್ಥಿಗಳಿಗೆ 35,0000/-ರೂ. ಸಹಾಯಧನಕ್ಕೆ ಅರ್ಜಿ ಆಹ್ವಾನ:
ಯಾವ ಕೋರ್ಸ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನ್ವಯ? ಅರ್ಜಿ ಸಲ್ಲಿಸುವ ಲಿಂಕ್ ಯಾವುದು?
ಆತ್ಮೀಯ ವಿದ್ಯಾರ್ಥಿ ಮಿತ್ರರೇ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಈ ಒಂದು ವಿದ್ಯಾರ್ಥಿವೇತನವು PUC ಯಿಂದ Post Graduate ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ಅನ್ವಹಿಸುತ್ತದೆ.
ಈ ಒಂದು ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ.
ಯಾವ ವಿದ್ಯಾ ಅರ್ಹತೆಗೆ ಎಷ್ಟು ವಿದ್ಯಾರ್ಥಿವೇತನ ? ಕೊನೆಯ ದಿನಾಂಕ ಯಾವುದು? ದಾಖಲೆಗಳೇನು? ಎಂಬುದರ ಬಗ್ಗೆ ತಿಳಿಯೋಣ ಈ ಮಾಹಿತಿಯನ್ನು ಓದಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೇರ್ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಈ ಒಂದು ಸಹಾಯಧನ ಸಿಗುವುದಕ್ಕೆ ಸಹಾಯವಾಗಲಿ.
ವಿದ್ಯಾರ್ಥಿವೇತನದ ವಿವರ ಈ ರೀತಿ ಇದೆ:
Post Matric Prize Money 2023 SC, ST Students:ವಿದ್ಯಾರ್ಥಿಗಳು ಮೊದಲ ಹಂತದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹಧನ ಸರ್ಕಾರ ನೀಡುತ್ತಿದೆ. ಈ ಒಂದು ಅರ್ಜಿಸಲ್ಲಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ದ್ವಿತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ, ಮತ್ತು ಪದವಿ, ಹಾಗೂ ಯಾವುದೇ ಸ್ನಾತಕೋತ್ತರ ಪದವಿಯನ್ನು 2023 ನೇ ಸಾಲಿನಲ್ಲಿ ಪಾಸಾಗಿರಬೇಕಾಗಿರುತ್ತದೆ.
ಈ ಒಂದು ವಿದ್ಯಾರ್ಥಿವೇತನವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಕರ್ನಾಟಕ ಸರ್ಕಾರ ನೀಡುತ್ತದೆ.
ಯಾವ ಯಾವ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿವೇತನ ಎಂಬ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ರೂ 60,000 ರವರೆಗೆ ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ!
PUC Prize Money 2023 -ದ್ವೀತಿಯ ಪಿಯುಸಿ ಹಾಗೂ ಮೂರು ವರ್ಷದ ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ :
ವಿದ್ಯಾರ್ಥಿವೇತನದ ಮೊತ್ತ: 20,000/-ರೂ
Degree Prize Money 2023-:- ಯಾವುದೇ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ :
ವಿದ್ಯಾರ್ಥಿವೇತನದ ಮೊತ್ತ: 25,000/-ರೂ
PG Prize Money 2023 – ಯಾವುದ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ :(ಉದಾ: M.A,M.com M.Sc ಮುಂತಾದ):-
ವಿದ್ಯಾರ್ಥಿವೇತನದ ಮೊತ್ತ: 30,000 ರೂಪಾಯಿ
Engineering, Veterinary, Medicine:- ತಾಂತ್ರಿಕ ಕೋರ್ಸಗಳನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ :
ವಿದ್ಯಾರ್ಥಿವೇತನದ ಮೊತ್ತ: 35,000 /-ರೂ
ಇದನ್ನೂ ಓದಿ: ಈ ಮೂರು ಯೋಜನೆಯಡಿ ವಿದ್ಯಾರ್ಥಿವೇತನ 2,35,000/- ರೂ ಇಂದೇ ಅರ್ಜಿ ಸಲ್ಲಿಸಿ.
ವಿದ್ಯಾರ್ಥಿವೇತನಕ್ಕೆ ಅರ್ಜಿಗೆ ಅರ್ಹತೆಗಳು:
ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯಾಗಿರಬೇಕು.
ಮೊದಲ ಹಂತದಲ್ಲಿ (First Attempt) ಪಾಸಾಗಿರಬೇಕು.
ವಿದ್ಯಾರ್ಥಿಯು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು
ವಿಶೇಷ ಸೂಚನೆ: ಆನ್‌ಲೈನ್ ಅರ್ಜಿ ಸಲ್ಲಿಸುವಾಗ ನಿಮ್ಮ ಕಾಲೇಜಿನ ಹೆಸರು ಇಲ್ಲದೆ ಇರುವ ಸಂದರ್ಭದಲ್ಲಿ ಕಾಲೇಜಿನ ಹೆಸರನ್ನು ಇಲಾಖಾ ವೆಬ್’ಸೈಟ್’ನಲ್ಲಿ ಸೇರಿಸಲು ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿ ಅಥವಾ ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳ ಕಛೇರಿಗೆ ಭೇಟಿ ನೀಡುವುದು ಉತ್ತಮ.
Documents :ಬೇಕಾದ ಅಗತ್ಯ ದಾಖಲೆಗಳು:
ಆಧಾರ ಕಾರ್ಡ
Passport Size ಭಾವಚಿತ್ರ (Photo)
SSLC Marks Card
Degree Marks Cards
Income Caste Certificate
Bank pass
ಮೊಬೈಲ್ ನಂಬರ್ ( Mobile Number)
Prize Money Scholarship 2023 Last Date: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2023
SC ST Prize Money Scholarship 2023 ಪ್ರಮುಖ ಲಿಂಕ್‌ಗಳು:
sw.kar.nic.in prize money 2023 ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ
ಅಧಿಕೃತ ವೆಬ್‌ಸೈಟ್‌ಗಳು: sw.kar.nic.in, swdservices.karnataka.gov.in
ವಿಶೇಷ ಸೂಚನೆ: ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ವೆಬ್‌ಸೈಟ್ ನಲ್ಲಿ ತಿಳಿಸಲಾಗಿರುವ ಎಲ್ಲ ವಿವರಗಳನ್ನು ಪಡೆದು ನಂತರ ಅರ್ಜಿ ಸಲ್ಲಿಸಿ, ಯಾವುದೇ ಗೊಂದಲಗಳಿದ್ದರೆ ನಿಮ್ಮ ಕಾಲೇಜಿನಲ್ಲಿ ವಿಚಾರಿಸಿ ಅಥವಾ ಸಮಾಜ ಕಲ್ಯಾಣ ಇಲಾಖೆಯ ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.