Wednesday, February 5, 2025

ರೈತರಿಗೆ ಗುಡ್ ನ್ಯೂಸ್: ಸಾಲ ಮರುಪಾವತಿ ಮಾಡುವಂತಿಲ್ಲ-CM ಬ್ಯಾಂಕ್ ಗಳಿಗೆ ಸೂಚನೆ:

ರೈತರಿಗೆ ಗುಡ್ ನ್ಯೂಸ್: ಸಾಲ ಮರುಪಾವತಿ ಮಾಡುವಂತಿಲ್ಲ-CM ಬ್ಯಾಂಕ್ ಗಳಿಗೆ ಸೂಚನೆ:
ಯಾವ ಸಾಲ ಮರುಪಾವತಿ ಮಾಡುವಂತಿಲ್ಲ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ…

ರಾಜ್ಯದ ರೈತರಿಗೆ ರಾಜ್ಯ ಸರ್ಕಾರ ಸಾಲ ಮರುಪಾವತಿಗೆ ಮಾಡುವ ರೈತರಿಗೆ ಖುಷಿ ಸುದ್ದಿ ನೀಡಿದೆ. ಹೌದು ಈ ವರ್ಷ ಮುಂಗಾರು ಮಳೆ ಇಲ್ಲದೆ, ಬಿತ್ತನೆ ಮಾಡಿದ ಬೆಳೆಯ ಪರಿಸ್ಥಿಗೆ ಅಷ್ಡು ಉತ್ತಮವಾದ ಇಳುವರಿ ದೊರೆಯುವುದು ಕಷ್ಟ, ಅಷ್ಟೇ ಅಲ್ಲ. ಬರಗಾಲ ಘೋಷಣೆಯಾದ ಕೆಲವೊಂದು ತಾಲೂಕುಗಳಲ್ಲಿ ಸಂಪೂರ್ಣವಾಗಿ ಬೆಳೆ ನೆಲಸಮವಾಗಿದೆ.

ಈ ಎಲ್ಲಾ ಘಟನೆಯನ್ನು ಮನವರಿಕೆ ಮಾಡಿಕೊಂಡ ಸರ್ಕಾರ ರೈತರ ಬೆನ್ನಿಗೆ ನಿಂತಿದೆ. ಗೃಹಲಕ್ಷ್ಮೀ (Gruha Lakshmi Yojana)ಗೃಹಜ್ಯೋತಿ,( Gruhajhoyti )ಅನ್ನಭಾಗ್ಯ, (AnnaBhagya)ಶಕ್ತಿ ಯೋಜನೆಯ (Shakti yojane) ಮೂಲಕ ರಾಜ್ಯ ಸರಕಾರ ಜನತೆಗೆ ಗುಡ್‌ನ್ಯೂಸ್ ಕೊಟ್ಟಿತ್ತು. ಆದರೆ ಬರಗಾಲ, ಲೋಡ್‌ಶೆಡ್ಡಿಂಗ್‌ನಿಂದಾಗಿ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವಲ್ಲೇ ರಾಜ್ಯ ಸರಕಾರ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಬ್ಯಾಂಕ್‌ಗಳು ಸಾಲ ವಸೂಲಾತಿ ಮಾಡದಂತೆ ಸೂಚಿಸಿದೆ.

ಇದನ್ನೂ ಓದಿ: ಡಿಜಿಟಲ್ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ಉಚಿತ ತರಬೇತಿ,
ಇದನ್ನೂ ಓದಿ: PM kisan: ಫಲಾನುಭವಿಗಳು 15 ನೇ ಕಂತಿಗೆ ಅರ್ಹರಾಗಲು ಈ ಕೆಲಸ ಮಾಡುವುದು ಕಡ್ಡಾಯ

ರಾಜ್ಯದಲ್ಲಿ ಬರಗಾಲದಂತಹ ಪರಿಸ್ಥಿತಿ ಎದುರಾಗಿರುವ ಕಾರಣಕ್ಕೆ ಮತ್ತು ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದು ಜೊತೆಗೆ ಸಾಲ ಮಾಡಿದ ರೈತರ ಆತ್ಮಹತ್ಯೆ ಪ್ರಕರಣವನ್ನು ಹೆಚ್ಚಿಗೆ ಆಗುತ್ತಿರುವುದು ಮನಗಂಡ ಸರ್ಕಾರ ಈ ಎಲ್ಲಾ ಸನ್ನಿವೇಶಗಳನ್ನು ತಕ್ಕಮಟ್ಟಿಗೆ ಕಡಿಮೆ ಮಾಡುವ ಸಲುವಾಗಿ ರಾಜ್ಯ ಸರಕಾರ ಮಹತ್ವದ ಕ್ರಮವನ್ನು ಅನುಸರಿಸಿದೆ.

ಈಗಾಗಲೇ ರಾಜ್ಯದ 200 ಕ್ಕೂ ಅಧಿಕ ತಾಲೂಕುಗಳು ಬರಗಾಲದಿಂದ ತತ್ತರಿಸಿ ಹೋಗಿವೆ. ಇದರಿಂದಾಗಿ ಅನ್ನದಾತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ.

ಕೇಂದ್ರ ಸರಕಾರ ಈಗಾಗಲೇ ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಿ ಬರಪೀಡಿತ ತಾಲೂಕಿಗಳಲ್ಲಿ ಸರ್ವೆ ಕಾರ್ಯವನ್ನು ನಡೆಸಿದೆ. ರಾಜ್ಯ, ಕೇಂದ್ರ ಸರಕಾರಗಳು ಬರ ಪರಿಹಾರ ನೀಡುವ ನಿರೀಕ್ಷೆಯಲ್ಲಿ ಅನ್ನದಾತರು ಕಾಯುತ್ತಿದ್ದಾರೆ. ಬರಗಾಲದಿಂದಾಗಿ ಸಾಲ ಪಾವತಿಸದೇ ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ.

ಯಾವ ಸಾಲ ವಸೂಲಾತಿಗೆ ಮಾಡದಂತೆ ಕ್ರಮ:

ರಾಜ್ಯದಲ್ಲಿ ಬರಗಾಲದಿಂದ ಕಂಗಾಲಾಗಿರುವ ರೈತರ ಸಂಕಷ್ಟಕ್ಕೆ ರಾಜ್ಯ ಸರಕಾರ ಇದೀಗ ಸ್ಪಂದಿಸಿದೆ. ಬರಪೀಡಿತ ಪ್ರದೇಶಗಳಲ್ಲಿ ರೈತರು ಬೆಳೆಸಾಲ, ಮಾಡಿರುವ ರೈತರಿಂದ ಸಾಲ ವಸೂಲಿ (Agriculture Loan) ಮಾಡದಂತೆ ರಾಜ್ಯ ಸರಕಾರ ರಾಷ್ಟ್ರೀಕೃತ ಬ್ಯಾಂಕುಗಳಿಗೆ (Nationalised Banks) ಸೂಚನೆಯನ್ನು ಮಾಡಿರುತ್ತದೆ. ಅಲ್ಲದೇ ರೈತರು ಪಡೆದಿರುವ ಸಾಲವನ್ನು (Agriculture Loan)ಪುನರ್ ರಚಿಸುವಂತೆ ಬ್ಯಾಂಕರ್‌ಗಳ ಸಮಿತಿ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಈ ವರ್ಷ ಮಳೆ ಅಭಾವಕ್ಕೆ ಕಾರಣ ತಿಳಿಸಿದ ಹವಾಮಾನ ಇಲಾಖೆ:

ರಾಜ್ಯದಲ್ಲಿ ಬರ ಪರಿಸ್ಥಿತಿಯ ನಡುವಲ್ಲೇ ಲೋಡ್ ಶೆಡ್ಡಿಂಗ್ (load shedding) ಸಮಸ್ಯೆಯನ್ನು ರೈತರು ಎದುರಿಸುತ್ತಿದ್ದಾರೆ.ರಾಜ್ಯದ ಕಾಂಗ್ರೆಸ್ ಸರಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಕೃಷಿ ಚಟುವಟಿಕೆಗೆ ವಿದ್ಯುತ್ ನೀಡಲು ರಾಜ್ಯ ಸರಕಾರದಿಂದ ಸಾಧ್ಯವಾಗುತ್ತಿಲ್ಲ. ಜೊತೆಗೆ ಬರಗಾಲದಿಂದ ರೈತರು ತತ್ತರಿಸಿದ್ದಾರೆ.
ಸದ್ಯಕ್ಕೆ ಬರಗಾಲದಿಂದ ತತ್ತರಿಸಿರುವ ರೈತರು ತಾವು ಹಿಂದೆ ಕೃಷಿಗಾಗಿ ಮಾಡಿದ್ದ ಸಾಲವನ್ನು ಮರುಪಾವತಿ ಮಾಡಲು ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಸದ್ಯ ಬೆಳೆದಿರುವ ಬೆಳೆ ನೆಲಕಚ್ಚುವ ಭೀತಿಯಲ್ಲಿದ್ದ ಅನ್ನದಾತರು, ಸಾಲವನ್ನು ಮುಂದಿನ ಇಳುವರಿಯಲ್ಲಿ ಪಾವತಿಸಲು ಅವಕಾಶ ದೊರೆತಂತಾಗಿದೆ.

ಇದನ್ನೂ ಓದಿ: ಪಡಿತರ ಚೀಟಿ ಕಳೆದಿದೆಯೇ ಚಿಂತೆ ಬಿಡಿ ಡೌನ್ ಲೋಡ್ ಮಾಡುವ ಡೈರೆಕ್ಟ ಲಿಂಕ್ :
ಇದನ್ನೂ ಓದಿ: ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್‌ ಅನ್ನು ಬದಲಾಯಿಸುವುದು ಹೇಗೆ?

ಇತ್ತೀಚಿನ ಸುದ್ದಿಗಳು

Related Articles