Friday, September 20, 2024

Electric bill: ಈ ತಿಂಗಳ ವಿದ್ಯುತ್ ಬಿಲ್ ಹಾಗೂ ವರ್ಷದ ಬಳಕೆಯ ಬಿಲ್ ಎಷ್ಟು ತಿಳಿಯಿರಿ:ಎಲ್ಲಾ ಎಸ್ಕಾಂಗಳ ವಿದ್ಯುತ್ ಬಿಲ್ ಲಿಂಕ್ ಲಭ್ಯ. ಹಾಗೂ ಇತರೆ ವಿದ್ಯುತ್ ಸಂಬಂಧಿಸಿದ ಮಾಹಿತಿ ಈ ಲೇಖನದಲ್ಲಿ.

Electric bill Details: ವರ್ಷದಲ್ಲಿ ನಿಮ್ಮ ಮನೆಯ ವಿದ್ಯುತ್ ಎಷ್ಟು ಯುನಿಟ್ ಬಳಕೆಯಾಗಿದೆ ಎಂದು ಹೇಗೆ ತಿಳಿಯಬವುದು? ಇಲ್ಲಿದೆ ವೆಬ್ಬೆಟ್ ಲಿಂಕ್
ಆತ್ಮೀಯ ಸ್ನೇಹಿತರೇ ಪ್ರತಿ ತಿಂಗಳು ನಿಮಗೆ ವಿದ್ಯುತ್ ಬಿಲ್ ನಿಮ್ಮ ಮನೆಗೆ (electric bill) ಪವರ್‍ ಮೆನ್ ತಿಂಗಳ ಕೊನೆಯ ದಿನದಂದು ತಲುಪಿಸುತ್ತಾರೆ.

ಒಂದು ವೇಳೆ ನೀವು ಬೇರೆ ಕಡೆ ಇದ್ದು ಅಥವಾ ನೀವು ಮನೆ ಬಾಡಿಗೆ ನೀಡಿದ್ದರೆ, ಅಥವಾ ನೀವು ಇರುವ ಮನೆಯ ಒಂದು ವರ್ಷದ ಸಂಪೂರ್ಣ ಬಿಲ್ ಮಹಿತಿಯನ್ನು ಮನೆಯ ವಿದ್ಯುತ್ ಬಳಕೆಯ(electric bill) ಕುರಿತು ಗ್ರಾಹಕರು ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಮನೆಯಲ್ಲಿ ಕುಳಿತು ಯಾವುದೇ ಕಚೇರಿ ಭೇಟಿ ಮಾಡದೇ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ., ಯಾವೆಲ್ಲ ಮಾಹಿತಿ ಮತ್ತು ಸೌಲಭ್ಯಗಳು ಈ ವೆಬ್ಬೆಟ್ ನಲ್ಲಿ ಲಭ್ಯ? ವೆಬ್ಬೆಟ್ ಲಿಂಕ್ ಯಾವುದು? ಎಂದು ಈ ಲೀಖನದಲ್ಲಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್‌ ಅನ್ನು ಬದಲಾಯಿಸುವುದು ಹೇಗೆ?

ಹೌದು ರಾಜ್ಯದ ವಿವಿಧ ಎಸ್ಕಾಂಗಳ ಜಾಲತಾಣ ಭೇಟಿ ಮಾಡಿ ನಿಮ್ಮ ಮನೆಯಲ್ಲಿ ಸರಾಸರಿ ಒಂದು ವರ್ಷದಲ್ಲಿ ಎಷ್ಟು ಯುನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ ಎಂದು ತಿಳಿಯಬವುದು, ಮತ್ತು ಕಳೆದ ಹಿಂದಿನ 12 ತಿಂಗಳ ವಿದ್ಯುತ್ ಬಿಲ್ ಮೊತ್ತ ಇತರೆ ವಿವರದ ಸಂಪೂರ್ಣ ಮಾಹಿತಿ ಸಿಗುತ್ತದೆ, ಇದರ ಜೊತೆಗೆ ಈ ವೆಬ್ಬೆಟ್ ಮೂಲಕ ನಿಮ್ಮ ಮನೆಯ ವಿದ್ಯುತ್ ಬಿಲ್ ನ ಹೆಸರು ಬದಲಾವಣೆಗೆ ಅರ್ಜಿಯನ್ನು ಸಹ ಹಾಕಬವುದಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದಲ್ಲಿ ನಿಮ್ಮ ಅಪ್ತರಿಗೂ ತಪ್ಪದೇ ಶೇರ್ ಮಾಡಿಕೊಳ್ಳಿ.

ಸರಾಸರಿ ವಿದ್ಯುತ್ ಎಷ್ಟು ಯುನಿಟ್ ಬಳಕೆಯಾಗಿದೆ ಎಂದು ತಿಳಿಯುವ ವಿಧಾನ:

ಹಂತ -1: https://onlineservices.bescom. ಲಿಂಕ್ ಮೇಲೆ ಕ್ಲಿಕ್ ಮಾಡಿ ಬೆಸ್ಕಾಂನ ಅಧಿಕೃತ ವೆಬ್ಬೆಟ್ ಭೇಟಿ ಮಾಡಬೇಕು. ನಂತರ


ಹಂತ -2: ನೀವು ಮೊದಲ ಭಾರಿಗೆ ಈ ವೆಬ್ಬೆಟ್ ಪ್ರವೇಶ ಮಾಡಿದ್ದಲ್ಲಿ ನಿಮ್ಮ (ಗ್ರಾಹಕರ)ವಿವರವನ್ನು “Register” ಬಟಲ್ ಮೇಲೆ ಕ್ಲಿಕ್ ಮಾಡಿ Connection ID, Date pf birth, email id,, mobile number,password ರಚನೆ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಈ ಪುಟದ ಎಲ್ಲಾ ಕಾಲಂ ವಿವರ ಭರ್ತಿ ಮಾಡಿದ ನಂತರ ಕೊನೆಯಲ್ಲಿ ಕಾಣುವ “save” ಬಟನ್ ಮೇಲೆ ಓತ್ತಿ “Registered Successfully” ಗೋಚರಿಸುತ್ತದೆ.

ವೀಶೇಷ ಸೂಚನೆ: ನೀವು ನಮೂದಿಸಿದ user name ಮತ್ತು password ಒಂದು ಕಡೆ ನೋಟ್ ಮಾಡಿಕೊಳ್ಳಿ.

ಹಂತ -3: ನೀವು ರಚನೆ ಮಾಡಿಕೊಂಡ user name ಮತ್ತು password ಅನ್ನು ಈ ಜಾಲತಾಣದ ಮುಖಪುಟದಲ್ಲಿ ಕಾಣುವ User id ಮತ್ತು password ಕಾಲಂ ನಲ್ಲಿ ಹಾಕಿ(ಮೇಲೆ Cuctomer ಎಂದು Select ಮಾಡಕೊಳ್ಳಿ) “LOGIN” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದೆ ಹೋಗಿ ನಂತರ

ಹಂತ -4: LOGIN ಅದ ನಂತರ ನಿಮ್ಮ ವಿದ್ಯುತ್ ಬಿಲ್ ವಿವರದ ಪುಟ ತೆರೆದುಕೊಳ್ಳುತ್ತದೆ ಇಲ್ಲಿ “MY acconut” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Accont summary” ಬಟಲ್ ಮೇಲೆ ಕ್ಲಿಕ್ ಮಾಡಿದರೆ ಕಳೆದ ಹಿಂದಿನ 12 ತಿಂಗಳ ಬಿಲ್ ವಿವರ ಮತ್ತು ಸರಾಸರಿ ಇಲ್ಲಿಯವರೆಗೆ ಬಳಕೆ ಮಾಡಿದ ವಿದ್ಯುತ್ ವಿವರ ಗೋಚರಿಸುತ್ತದೆ.

ಈ ಪುಟದಲ್ಲಿ 8 ಕಾಲಂ ನ “Avg Cons” ಹೆಸರಿನ ಕೆಳಗೆ ತೋರಿಸ ಸಂಖ್ಯೆಯ ಸರಾಸರಿ ವಿದ್ಯುತ್ ಬಳಕೆ ಯುನಿಟ್ ಅಗಿರುತ್ತದೆ.

ಪಡಿತರ ಚೀಟಿ ಕಳೆದಿದೆಯೇ ಚಿಂತೆ ಬಿಡಿ ಡೌನ್ ಲೋಡ್ ಮಾಡುವ ಡೈರೆಕ್ಟ ಲಿಂಕ್ :

ಈ ಜಾಲತಾಣದ ಇತರೆ ಸೌಲಭ್ಯಗಳ ವಿವರ ಕೆಳಗಿನಂತಿದೆ.

ಈ ವೆಬ್ಬೆಟ್ ಮೂಲಕ ನಿಮ್ಮ ವಿದ್ಯುತ್ ಬಿಲ್ ನ ಹೆಸರನ್ನು ಬದಲಾಯಿಸಲು ಅರ್ಜಿ ಸಲ್ಲಿಸಬವುದು.

tariff change, Load Reduction, Load Enhancement. ಈ ಸೇವೆಗಳು ಈ ಜಾಲತಾಣದಲ್ಲಿ ದೊರೆಯುವುದು.

ಈ ಮೇಲೆ ವಿವರಿಸಿದ ವೆಬ್ಬೆಟ್ ನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(Bescom) ವ್ಯಾಪ್ತಿ ಗ್ರಾಹಕರು ಮಾತ್ರ ನಿಮ್ಮ ವಿದ್ಯುತ್ ಬಿಲ್ ಬಳಕೆ ಕುರಿತು ವಿವರವನ್ನು ಪಡೆಯಬವುದು ಉಳಿದ ವಿಭಾಗದ ಗ್ರಾಹಕರು ತಮ್ಮ ತಮ್ಮ ವ್ಯಾಪ್ತಿಯ ಎಸ್ಕಾಂ ನ ಅಧಿಕೃತ ವೆಬ್ಬೆಟ್ ಗಳ ಲಿಂಕ್ ಅನ್ನು ಈ ಕೆಳಗೆ ಹಾಕಲಾಗಿದ್ದು ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸಿ ನಿಮ್ಮ ಮನೆಯ ವಿದ್ಯುತ್ ಬಳಕೆ ವಿವರ ಇತ್ಯಾದಿ ಮಾಹಿತಿಯನ್ನು ನಿಮ್ಮ ಮನೆಯಲ್ಲೇ ಕುಳಿತು ತಿಳಿದಿಕೊಳ್ಳಬವುದಾಗಿದೆ.

Hescom-ಹೆಸ್ಕಾಂ: https://www.hescom.co.in/SCP/Myhome.aspx

mescom- ಮೆಸ್ಕಾಂ: https://mescom.karnataka.gov.in/info-Online+Pavment+System/en

Gescom- ಜೆಸ್ಕಾಂ: https://gescom.karnataka.gov.in/info-3/Online+Payments/kn
ಈ ಒಂದು ಮಾಹಿತಿ ಸಂಪೂರ್ಣ ತಿಳಿದುಕೊಂಡು ನೀವು ಮನೆಯಲ್ಲಿಯೇ ನಿಮ್ಮ ವಿದ್ಯುತ್ ಬಿಲ್ ನೋಡಿಕೊಳ್ಳಬಹುದಾಗಿರುತ್ತದೆ.

ಇತರೆ ಯೋಜನೆಗಳ ಮಾಹಿತಿಗಳು:


2023 ನೇ ಸಾಲಿನ ಅತ್ಯುತ್ತಮ ಜೀವವೈವಿಧ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ.
ಹೊಸ ವೃತ್ತಿ ಪ್ರಾರಂಭಿಸಲು 100000/-ರೂ ಪ್ರೋತ್ಸಾಹಧನ.
ಮುಂಗಾರು ಸೂರ್ಯಕಾಂತಿ ಬೆಳೆದ ರೈತರಿಗೆ ಸರ್ಕಾರದಿಂದ 6750/- ರೂ ಬೆಂಬಲ ಬೆಲೆ ನಿಗಧಿ;
2023-24 ನೇ ಸಾಲಿನ ಉಚಿತ ಹೊಲಿಗೆ ಯಂತ್ರ ಮತ್ತು ಪವರ್‍ ಟೂಲ್ಸ ವಿತರಣೆ :

ಇತ್ತೀಚಿನ ಸುದ್ದಿಗಳು

Related Articles