ಆತ್ಮೀಯ ವಿದ್ಯಾರ್ಥಿ ಮಿತ್ರರೇ ಭಾರತೀಯ ಅಂಚೆ ಇಲಾಖೆಯು 6 ನೇ ತರಗತಿಯಿಂದ 9 ನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ‘ದೀನ್ ದಯಾಳ್ ಸ್ಪರ್ಶ್ ಯೋಜನೆ’ಯ ಅಡಿಯಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಏನಿದು ‘ದೀನ್ ದಯಾಳ್ ಸ್ಪರ್ಶ್ ಯೋಜನೆ?
ದೀನ್ ದಯಾಳ್ ಸ್ಪರ್ಶ್ (ಸ್ಕಾಲರಿಪ್ ಫಾರ್ ಪ್ರಮೋಷನ್ ಆಫ್ ಆಟಿಟ್ಯೂಡ್ ಅಂಡ್ ರಿಸರ್ಚ್ ಇನ್ ಸ್ಟ್ಯಾಂಪ್ ಹಾಬಿ) ಸ್ಟ್ಯಾಂಪ್‌ಗಳಲ್ಲಿ ಅಭಿರುಚಿ ಮತ್ತು ಸಂಶೋಧನೆಯನ್ನು ಹವ್ಯಾಸವಾಗಿ ಉತ್ತೇಜಿಸಲು ವಿದ್ಯಾರ್ಥಿವೇತನ, ಶೈಕ್ಷಣಿಕ ಪಠ್ಯಕ್ರಮವನ್ನು ಬಲಪಡಿಸಲು ಮತ್ತು ಪೂರಕವಾಗಿ ಸಮರ್ಥನೀಯ ರೀತಿಯಲ್ಲಿ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಅಂಚೆ ಚೀಟಿಗಳ ಸಂಗ್ರಹ ಉತ್ತೇಜಿಸುವುದು ಈ ವಿದ್ಯಾರ್ಥಿ ವೇತನದ ಉದ್ದೇಶವಾಗಿದೆ. ಮುಖ್ಯವಾಗಿ ಈ ಹವ್ಯಾಸವು ಅವರಿಗೆ ವಿಶ್ರಾಂತಿ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಆಧಾರ್ ಕಾರ್ಡ ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಎಂದು ತಿಳಿಯಲು ಜಾಲತಾಣದ ಲಿಂಕ್:
ಇದನ್ನೂ ಓದಿ: ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಸಾಲ ಸೌಲಭ್ಯ
ಇದನ್ನೂ ಓದಿ: ಪಡಿತರ ಚೀಟಿ ಕಳೆದಿದೆಯೇ ಚಿಂತೆ ಬಿಡಿ ಡೌನ್ ಲೋಡ್ ಮಾಡುವ ಡೈರೆಕ್ಟ ಲಿಂಕ್ :
ಈ ಯೋಜನೆಗೆ ಯಾರು ಅರ್ಹರು :
ಅಭ್ಯರ್ಥಿಯು ಭಾರತದೊಳಗೆ ಮಾನ್ಯತೆ ಪಡೆದ ಶಾಲೆಯ ವಿದ್ಯಾರ್ಥಿಯಾಗಿರಬೇಕು.
ಸಂಬಂಧಪಟ್ಟ ಶಾಲೆಯು ಅಂಚೆಚೀಟಿ ಸಂಗ್ರಹ ಕ್ಲಬ್ ಅನ್ನು ಹೊಂದಿರಬೇಕು ಮತ್ತು ಅಭ್ಯರ್ಥಿಯು
ಕ್ಲಬ್‌ನ ಸದಸ್ಯ, ಶಾಲಾ ಅಂಚೆಚೀಟಿಗಳ ಸಂಗ್ರಹ ಕ್ಲಬ್ ಅನ್ನು ಸ್ಥಾಪಿಸದಿದ್ದಲ್ಲಿ ತನ್ನದೇ ಆದ ವಿದ್ಯಾರ್ಥಿಯನ್ನು ಹೊಂದಿರುತ್ತಾನೆ.
ಅಂಚೆಚೀಟಿಗಳ ಠೇವಣಿ ಖಾತೆಯನ್ನು ಸಹ ಪರಿಗಣಿಸಬಹುದು.
ಈ ಯೋಜನೆ ಅಡಿ 2022-23 ಶೈಕ್ಷಣಿಕ ವರ್ಷದಲ್ಲಿ ಶೇ.60 ಅಂಕಗಳನ್ನು ಹೊಂದಿರುವ ಮತ್ತು ಅಂಚೆ ಚೀಟಿಗಳ ಸಂಗ್ರಹದ ಠೇವಣಿ ಖಾತೆ ಫಿಲಾಟೆಲಿಕ್ ಕ್ಲಬ್‌ನ ಸದಸ್ಯರು ಮತ್ತು ಅಂಚೆ ಚೀಟಿ ಸಂಗ್ರಹವನ್ನು ಹವ್ಯಾಸವಾಗಿ ಮುಂದುವರಿಸುವ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 6 ಸಾವಿರಗಳ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆ (ಲಿಖಿತ) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಂಚೆ ಇಲಾಖೆಯು ನೀಡುವ ಅಂಚೆ ಚೀಟಿಗಳ ಸಂಗ್ರಹ ಯೋಜನೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಬೇಕಾಗುತ್ತದೆ.
ವಿದ್ಯಾರ್ಥಿವೇತನದ ವಿತರಣೆ ಪ್ರಕ್ರಿಯೆ:
ಪ್ರಶಸ್ತಿ ಪುರಸ್ಕತರನ್ನು ಇಂಡಿಯಾ ಪೋಸ್ಟಪೆಮೆಂಟ್ ಬ್ಯಾಂಕ್ ಅಥವಾ ಪೋಸ್ಟನಲ್ಲಿ ಪೋಷಕರೊಂದಿಗೆ ಜಂಟಿ ಖಾತೆಯನ್ನು ತೆರೆದು.ಕೊರ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುವ ಶಾಖೆಯಲ್ಲಿ ಆಫೀಸ್ ಸೇವಿಂಗ್ಸ ಬ್ಯಾಂಕ್ ಮಾಡುವುದು. ಮತ್ತು ಪ್ರತಿ ಪೋಸ್ಟಲ್ ಸರ್ಕಲ್ ಪ್ರಶಸ್ತಿ ಪುರಸ್ಕ್ರತರನ್ನು ಆಯ್ಕೆ ಮಾಡುತ್ತದೆ.ಮತ್ತು ನಂತರ ಫಲಾನುಭವಿಗಳ ಪಟ್ಟಿಯನ್ನು IPPB/POSB ಗೆ ಹಸ್ತಾಂತರಿಸುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಇದೇ ತಿಂಗಳ ಸೆಪ್ಟೆಂಬರ್, 15 ಕೊನೆಯ ದಿನವಾಗಿದೆ.
ವಿದ್ಯಾರ್ಥಿಗಳಿಗೆ ಲೆವೆಲ್-1 ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆ (ಲಿಖಿತ)ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಲು ಕರ್ನಾಟಕದ ಎಲ್ಲಾ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಸ್ಕಾಲರಿಪ್ ಯೋಜನೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ www.indiapost.gov.in
ನಲ್ಲಿ ಪಡೆಯಬಹುದಾಗಿದೆ.
ಇದನ್ನೂ ಓದಿ: ರೇಷನ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವುದು ಹೇಗೆ?
ಇದನ್ನೂ ಓದಿ: “ಸ್ವಾವಲಂಬಿ ಸಾರಥಿ” ಯೋಜನೆಯಡಿ 3 ಲಕ್ಷದವರೆಗೆ ಸಹಾಯಧನ ಅರ್ಜಿ ಆಹ್ವಾನ
ಇದನ್ನೂ ಓದಿ: ಕೃಷಿಗೆ ಬೇಕಾದ ಸೆಕೆಂಡ್ ಹ್ಯಾಂಡ್ ಕೃಷಿ ಯಂತ್ರಗಳು