ಆತ್ಮೀಯ ಸ್ನೇಹಿತರೇ ಬಹಳ ಜನ ಎರಡರಿಂದ ಮೂರು ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಹಾಗಾಗಿ ಆಧಾರ್ ಕಾರ್ಡ ಯಾವ ಖಾತೆ ಲಿಂಕ್ ಆಗಿದೇಯೋ ಅಂತ ಮಾಹಿತಿ ಇರುವುದಿಲ್ಲ. ಇದು ಬಹಳ ಮುಖ್ಯವಾಗಿ ಬೆಳಕಿಗೆ ಬರುವುದು ನೀವು ಸರ್ಕಾರದ ಯಾವುದೇ ಇಲಾಖೆಯ ನೇರ ಹಣ ವರ್ಗಾವಣೆ ಪಡೆಯುವಲ್ಲಿ ಖಾತೆಗೆ ಲಿಂಕ್ ಆಗಿರುವ ಬಗ್ಗೆ ಗೊಂದಲ ಉಂಟು ಮಾಡುತ್ತದೆ.
ಆಗಿದ್ದಲ್ಲಿ ನೀವು ಬ್ಯಾಂಕ್ ಗೆ ಹೋಗುವ ಬದಲು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಆಧಾರ್ ಯಾವ ಖಾತೆಗೆ ಲಿಂಕ್ ಆಗಿದೆ ಅಂತ ತಿಳಿಯಬಹುದು ಈ ಕೆಳಗೆ ನೀಡಿರುವ ಲೇಖನದಲ್ಲಿ ಇದರ ಸಂಪೂರ್ಣ ಮಾಹಿತಿ ನೀಡಿರುತ್ತೆವೆ.
ಹಂತ -1: ಆಧಾರ್ ಕಾರ್ಡ್ ಪ್ರಾಧಿಕಾರದ(UIDAI website link) ನಲ್ಲಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ
https://resident.uidai.gov.in/bank-mapper ಕ್ಲಿಕ್ ಮಾಡಿ ಕುಟುಂಬದ ಮುಖ್ಯಸ್ಥರ ಆಧಾರ್ ನಂಬರ್(Aadhar number) ಹಾಕಿ ನಂತರ ಅಲ್ಲೇ ಪಕ್ಕದಲ್ಲಿ ಕಾಣುವ “Security code” ನಮೂದಿಸಿ “Send OTP” ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
ಹಂತ -2: ನಂತರ ಆಧಾರ್ ಕಾರ್ಡನಲ್ಲಿ ಇರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು “Enter OTP” ಕಾಲಂ ನಲ್ಲಿ ನಮೂದಿಸಿಕೊಳ್ಳಿ.
ಹಂತ -3: ತದನಂತರ ಈ ಪುಟದಲ್ಲಿ ನಿಮ್ಮ ಆಧಾರ್ ವಿವರ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಆ ಬ್ಯಾಂಕಿನ ಹೆಸರು ಮತ್ತು ಸಕ್ರಿಯವಾಗಿದಲ್ಲಿ “active”Step-2: ಎಂದು ತೋರಿಸುತ್ತದೆ. ಲಿಂಕ್ ಆಗದೆ ಇದ್ದಲ್ಲಿ “inactive” ಎಂದು ತೋರಿಸುತ್ತದೆ.
ಆಧಾರ್ ಲಿಂಕ್ ಬ್ಯಾಂಕ್ ಖಾತೆಗೆ ಅಗದಿದಲ್ಲಿ ಯಾವ ಮಾಹಿತಿಯನ್ನು ತೋರಿಸುವುದಿಲ್ಲ ಅಂತಹ ಸಮಯದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಗೆ ಆಧಾರ್ ಕಾರ್ಡ ಪ್ರತಿಯೊಂದಿಗೆ ಭೇಟಿ ಮಾಡಿ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕಾಗಿರುತ್ತದೆ.
ಇದನ್ನೂ ಓದಿ: ವಾಹನ ಖರೀದಿಸಲು ಧನಸಹಾಯ ಇಂದೇ ಅರ್ಜಿ ಸಲ್ಲಿಸಿ !!
ಇದನ್ನೂ ಓದಿ: Tractor Juction : ಕೃಷಿಗೆ ಬೇಕಾದ ಸೆಕೆಂಡ್ ಹ್ಯಾಂಡ್ ಕೃಷಿ ಯಂತ್ರಗಳು
ಇದನ್ನೂ ಓದಿ: ration card Mobile Number Change ರೇಷನ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವುದು ಹೇಗೆ?
Ration card list- ನಿಮ್ಮ ಊರಿನ ಪಡಿತರ ಚೀಟಿ /ರೇಷನ್ ಕಾರ್ಡ ಪಟ್ಟಿಯನ್ನು ತಿಳಿಯುವ ಪ್ರಕ್ರಿಯೆ:
ಹಂತ -1: ಮಾಹಿತಿ ಕಣಜ ಜಾಲತಾಣದ ಈ
https://mahitikanaja.karnataka.gov.in/ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ ತಾಲ್ಲೂಕು, ಗ್ರಾಮ ಪಂಚಾಯತಿ, ಗ್ರಾಮ ಮತ್ತು ಕಾರ್ಡ ಪ್ರಕಾರ ವನ್ನು ಆಯ್ಕೆ ಮಾಡಿಕೊಂಡು “ಸಲ್ಲಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿಬೇಕು.
ಹಂತ -2: ಇದಾದ ಬಳಿಕ ನಂತರದ ಪುಟದಲ್ಲಿ ಪಡಿತರ ಚೀಟಿ ಸಂಖ್ಯೆ, ಕುಟುಂಬದ ಮುಖ್ಯಸ್ಥರ ಹೆಸರು, ವಿಳಾಸದ ಪಟ್ಟಿ ಗೋಚರಿಸುತ್ತದೆ.
ಪಡಿತರ ಅಂಗಡಿ/ ರೇಷನ್ ವಿತರಣೆ ಪಾಯಿಂಟ್ ತಿಳಿಯುವ ವಿಧಾನ:
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವೆಲ್ಲ ಹಳ್ಳಿಯಲ್ಲಿ ಪಡಿತರ ಅಂಗಡಿ/ ರೇಷನ್ ವಿತರಣೆ ಪಾಯಿಂಟ್ ಇವೆ ಎಂದು ತಿಳಿಯಲು ಈ ಕ್ರಮ ಅನುಸರಿಸಿ.
ಮೊದಲಿಗೆ ಮಾಹಿತಿ ಕಣಜ ವೆಬ್ಬೆಟ್ ಭೇಟಿ ಮಾಡಲು ಈ https://mahitikanaja.karnataka.gov.in/
ಮೇಲೆ ಕ್ಲಿಕ್ ಮಾಡಬೇಕು, ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ ಮತ್ತು ಗ್ರಾಮ ಆಯ್ಕೆ ಮಾಡಿಕೊಂಡು ಪಡಿತರ ಅಂಗಡಿಯ ಹೆಸರು, ವ್ಯಾಪರಿ ಹೆಸರು, ವಿಳಾಸ ಮೊಬೈಲ್ ಸಂಖ್ಯೆ ವಿವರ ನೋಡಬಹುದಾಗಿರುತ್ತದೆ.
ಇದನ್ನೂ ಓದಿ: ಪಿ ಎಮ್ ಕಿಸಾನ್ ಯೋಜನೆ ಫಲಾನುಭವಿಗಳಿಗೆ ಆಧಾರಗೆ ಮೊಬೈಲ್ ಲಿಂಕ್ ಆಗದೇ ಇದ್ದರೂ ಕೆವೈಸಿ ಮಾಡಿಸಬಹುದು ಎಂದು ಸಿಹಿಸುದ್ದಿ ನೀಡಿದ ಇಲಾಖೆ:
ಇದನ್ನೂ ಓದಿ: Ration card download : ಪಡಿತರ ಚೀಟಿ ಕಳೆದಿದೆಯೇ ಚಿಂತೆ ಬಿಡಿ ಡೌನ್ ಲೋಡ್ ಮಾಡುವ ಡೈರೆಕ್ಟ ಲಿಂಕ್
ಇದನ್ನೂ ಓದಿ: ಶೇಕಡಾ 90 ರ ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿ: