Sunday, November 10, 2024

Vehicle subsidy scheme-2023:ವಾಹನ ಖರೀದಿಸಲು ಸಹಾಯಧನಕ್ಕೆ ಇಂದೇ ಅರ್ಜಿ ಸಲ್ಲಿಸಿ!!

ವಾಹನ ಖರೀದಿಸಲು ಸಹಾಯಧನಕ್ಕೆ ಇಂದೇ ಅರ್ಜಿ ಸಲ್ಲಿಸಿ !!
ಕೊನೆಯ ದಿನಾಂಕ ಯಾವಾಗ? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ದಾಖಲೆಗಳೇನು?ಸಂಪೂರ್ಣ ವಿವರ ಈ ಲೇಖನದಲ್ಲಿ…

ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ವಾಹನ ಖರೀದಿಗೆ 3 ಲಕ್ಷ ರೂಪಾಯಿ ಸಬ್ಸಿಡಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿದೆ.

ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ತಮ್ಮಗೆ ಬೇಕಾದ ವಾಹನಗಳಾದ ಆಟೋ ರಿಕ್ಷಾ, ಟ್ಯಾಕ್ಸಿ ಅಥವಾ ಮೂರು-ನಾಲ್ಕು ಚಕ್ರದ ಗೂಡ್ಸ್ ವಾಹನವನ್ನು ಖರೀದಿಸಿದಾಗ ಆ ವಾಹನ ಮೊತ್ತದ ಶೇಕಡಾ 50 ರಷ್ಟು ಸಬ್ಸಿಡಿ ಅಥವಾ 3 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ನೀಡುವುದಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KARNATAKA MINORITIES DEVELOPMENT CORPORATION LIMITED) ಯೋಜನೆಯಡಿ ಟ್ಯಾಕ್ಸಿ ಅಥವಾ ಸರಕು ವಾಹನ, ಆಟೋ ರಿಕ್ಷಾ ಖರೀದಿಸಲು ಸಹಾಯಧನ ಒದಗಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿರುತ್ತದೆ.

ಅರ್ಥಿಕವಾಗಿ ಹಿಂದುಳಿದ ಜನರಿಗೆ ಸ್ವ-ಉದ್ಯೋಗ(self employment) ಕೈಗೊಳ್ಳಲು ಆರಂಭಿಕ ಹಂತದಲ್ಲಿ ಅರ್ಥಿಕವಾಗಿ ಸಹಾಯ ನೀಡುವ ದಿಸೆಯಲ್ಲಿ ರಾಜ್ಯ ಸರಕಾರದಿಂದ ವಿವಿಧ ನಿಗಮಗಳಿಂದ ಟ್ಯಾಕ್ಸಿ ಅಥವಾ ಸರಕು ವಾಹನ, ಆಟೋ ರಿಕ್ಷಾ ಖರೀದಿಸಲು ಸಹಾಯಧನ ನೀಡಲಾಗುತ್ತದೆ. ಇದರಂತೆ ಈ ವರ್ಷ ಮೊದಲ ಹಂತದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

“ಸ್ವಾವಲಂಬಿ ಸಾರಥಿ” ಯೋಜನೆಯಡಿ 3 ಲಕ್ಷದವರೆಗೆ ಸಹಾಯಧನಕ್ಕೆ ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿ ಸಮೇತ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ಜಾಲತಾಣವಾದ (https://kmdconline.karnataka.gov.in/ Portal/login) ಭೇಟಿ ಮಾಡಿ ಅರ್ಜಿ ಸಲ್ಲಿಸಬಬಹುದಾಗಿರುತ್ತದೆ.

ಇದನ್ನೂ ಓದಿ: Tractor Juction : ಕೃಷಿಗೆ ಬೇಕಾದ ಸೆಕೆಂಡ್ ಹ್ಯಾಂಡ್ ಕೃಷಿ ಯಂತ್ರಗಳು :
ಇದನ್ನೂ ಓದಿ: ಶೇಕಡಾ 90 ರ ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿ:

Last Date- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:

“ಸ್ವಾವಲಂಬಿ ಸಾರಥಿ” ಯೋಜನೆಯಡಿ 3 ಲಕ್ಷದವರೆಗೆ ಸಹಾಯಧನಕ್ಕೆ ಅರ್ಹ ನಾಗರಿಕರು ಈ ಯೋಜನೆಯಡಿ ಸಹಾಯಧನ ಪಡೆಯಲು ಇದೇ ತಿಂಗಳ 25 ಸೆಪ್ಟೆಂಬರ್ 2023 ರ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು:

ಅರ್ಜಿದಾರರು ಕರ್ನಾಟಕ ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದವರಾಗಿರಬೇಕು.

ಅರ್ಜಿದಾರರು ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು.

ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.

ಎಲ್ಲಾ ಮೂಲಗಳಿಂದ ಬರುವ ವಾರ್ಷಿಕ ಕುಟುಂಬದ ಆದಾಯವು ರೂ. 4,50,000/- ಕ್ಕಿಂತ ಕಡಿಮೆ ಇರಬೇಕು.

ಅರ್ಜಿದಾರರು ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ನೀಡಲಾದ ಚಾಲನಾ ಪರವಾನಗಿ ಹೊಂದಿರಬೇಕು.

ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ಉದ್ಯೋಗಿಯಾಗಬಾರದು.

ಕಳೆದ 05 ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ/ಅವಳ ಕುಟುಂಬದ ಸದಸ್ಯರು ಸರ್ಕಾರದ / ನಿಗಮದ ಯಾವುದೇ ಇತರ ಯೋಜನೆಯಡಿಯಲ್ಲಿ(ಅರಿವು ಯೋಜನೆ ಹೊರತುಪಡಿಸಿ) ಸಾಲ ಸೌಲಭ್ಯಗಳನ್ನು ಪಡೆದಿರಬಾರದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  1. ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
  2. ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣ ಪತ್ರ
  1. ಆಧಾರ್ ಕಾರ್ಡ್ ಪ್ರತಿ
  2. ವಾಹನ ಚಾಲನಾ ಪರವಾನಗಿ ಪ್ರತಿ
  3. ಬ್ಯಾಂಕ್ ಪಾಸ್ ಬುಕ್ ಪ್ರತಿ
  4. ವಾಹನದ ಅಂದಾಜು ದರಪಟ್ಟಿ
  5. ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
  6. ಸ್ವಯಂ ಘೋಷಣೆ ಪತ್ರ

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲೆಯ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KARNATAKA MINORITIES DEVELOPMENT CORPORATION LIMITED) ಭೇಟಿ ನೀಡಿ ಸಹಾಯವಾಣಿ ಸಂಖ್ಯೆ 8277799990

ಇತ್ತೀಚಿನ ಸುದ್ದಿಗಳು

Related Articles