Friday, September 20, 2024

” ಮುಖ್ಯಮಂತ್ರಿ ಪರಿಹಾರ ನಿಧಿ’ಯಿಂದ ‘ಆರ್ಥಿಕ ನೆರವು’ ಪಡೆಯಬೇಕೆ?ಯಾರು ಈ ಪರಿಹಾರ ಪಡೆಯಬಹುದು? ಯಾವ ಸಂದರ್ಬದಲ್ಲಿ ಪಡೆಯಬಹುದು?ದಾಖಲೆಗಳೇನು?

” ಮುಖ್ಯಮಂತ್ರಿ ಪರಿಹಾರ ನಿಧಿ’ಯಿಂದ ‘ಆರ್ಥಿಕ ನೆರವು’ ಪಡೆಯಬೇಕೆ?
ಯಾರು ಈ ಪರಿಹಾರ ಪಡೆಯಬಹುದು? ಯಾವ ಸಂದರ್ಬದಲ್ಲಿ ಪಡೆಯಬಹುದು?ದಾಖಲೆಗಳೇನು?

ರಾಜ್ಯದ ಜನರು ತುರ್ತು ಸಂದರ್ಭದಲ್ಲಿ, ಆರ್ಥಿಕ ನೆರವಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ( CM Relief Fund Of Karnataka ) ಆರ್ಥಿಕ ನೆರವಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳು ವಿವಿಧ ಸಂದರ್ಭದಲ್ಲಿ ಈ ನಿಧಿಯನ್ನು ಹಣವನ್ನು ಪಡೆದು, ತಮ್ಮ ಕಷ್ಟ ಕಾಲದಲ್ಲಿ ಸಹಾಯವನ್ನು ಪಡೆಯಬಹುದಾಗಿದೆ.

ಹೌದು ಹಾಗಿದ್ದರೆ ಯಾರು ಯಾವ ಸಂದರ್ಭದಲ್ಲಿ ಅರ್ಜಿ ಸಲ್ಲಿಸಬಹುದು? ಷರತ್ತುಗಳೇನು? ಅರ್ಜಿ ಹೇಗೆ ಸಲ್ಲಿಸುವುದು? ದಾಖಲೆಗಳು ಏನು?ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಯಿರಿ.

ಯಾರಿಗೆ ಮುಖ್ಯಮಂತ್ರಿ ಪರಿಹಾರ ಸಿಗುವುದು?


ರಾಜ್ಯದಲ್ಲಿನ ಆರ್ಥಿಕವಾಗಿ ಹಿಂದುಳಿದಂತ ಜನರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತುರ್ತು ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಪಡೆಯಬಹುದಾಗಿದೆ ಅದರಲ್ಲೂ ಕಡುಬಡತನದಲ್ಲಿ ಜೀವನ ಮಾಡುತ್ತಿರುವವರಿಗೆ ,ಬಡ ಜನರ ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗಾಗಿ, ನಿರುದ್ಯೋಗಿಗಳಿಗೆ, ದಿವ್ಯಾಂಗರಿಗೆ, ಅಂಗವಿಕಲರು, ವೀಕಲಚೇತನರು, ಈ ನಿಧಿಯಿಂದ ಲಾಭ ಪಡೆಯಬಹುದು.


ಕುಟುಂಬದ ದುಡಿಯುವ ವ್ಯಕ್ತಿಯು ಅಪಘಾತದಲ್ಲಿ ಆಕಾಲಿಕ ಮರಣ ಹೊಂದಿದಲ್ಲಿ ನಿರ್ಗತಿಕರಾಗುವ ಕುಟುಂಬದವರಿಗೆ. ಆಕಸ್ಮಿಕ ದುರ್ಘಟನೆಗಳಿಗೆ ಸಂಬಂಧಿಸಿದಂತೆ ಇನ್ನಿತರ ಕಾರಣಗಳಲ್ಲಿ ಈ ಮಾನ್ಯ ಮುಖ್ಯಮಂತ್ರಿಗಳು, ಪ್ರದತ್ತವಾಗಿರುವ ವಿವೇಚನಾನುಸಾರ ಘೋಷಿಸುವ ಪರಿಹಾರದ ಮೊತ್ತವನ್ನು ನೊಂದ ಕುಟುಂಬದವರು ಪಡೆಯಬಹುದಾಗಿರುತ್ತದೆ. ಆದರೆ ಕೆಲವು ಷರತ್ತುಗಳನ್ನು ಸರ್ಕಾರ ವಿಧಿಸಿದೆ.

ಇದನ್ನೂ ಓದಿ: ಹದ್ದಬಸ್ತು, ತತ್ಕಾಲ್ ಪೋಡಿ ಈ ಎಲ್ಲಾ ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆ ಇನ್ನೂ ಸುಲಭ:
ಇದನ್ನೂ ಓದಿ: ಗ್ರಾಮೀಣ ಭಾಗದ ಯುವಕ ಮತ್ತು ಯುವತಿಯರಿಗೆ ಊಟ ಮತ್ತು ವಸತಿ ಜೊತೆಗೆ ಉಚಿತ ತರಬೇತಿ
ಇದನ್ನೂ ಓದಿ: ಬರ ಘೋಷಣೆಗೆ ಸರ್ಕಾರ ಚಿಂತನೆ: ಕೃಷಿ ಸಚಿವ Shri .N.ಚೆಲುವರಾಯ ಸ್ವಾಮಿ:

ಪರಿಹಾರಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಷರತ್ತುಗಳು ಈ ರೀತಿ ಇರುತ್ತವೆ.

ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳೆಂದು ಗುರುತಿಸಲು ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ವ್ಯಕ್ತಿಗಳ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತಿದೆ.
ಅರ್ಜಿದಾರರು ಚಿಕಿತ್ಸೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಹಾಗೂ ಇತರೇ ಯೋಜನೆಗಳಲ್ಲಿ ಸೌಲಭ್ಯವನ್ನು ಪಡೆದು ಮತ್ತೊಮ್ಮೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲು ಅತಿಯಾಸೆಯಿಂದ ಸೌಲಭ್ಯ ಪಡೆಯಲು ಯತ್ನಿಸುವ ಪ್ರಕರಣಗಳನ್ನು ತಡೆಗಟ್ಟಲು ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಅಂತಿಮ ಮೂಲ ಬಿಲ್ಲುಗಳನ್ನು ಹಾಗೂ ಬಿಡುಗಡೆ ಸಾರಾಂಶ ಪತ್ರವನ್ನು ಪಡೆಯಲಾಗುತ್ತಿದೆ. ಚಿಕಿತ್ಸೆ ಪಡೆಯಬೇಕಾದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿಯನ್ನು ಪಡೆಯಲಾಗುತ್ತಿದೆ.

ಇನ್ನಿತರೇ ದುರ್ಘಟನೆಗಳಿಗೆ ಸಂಬಂಧಿಸಿದಂತೆ ಅಥವಾ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿಲ್ಲದ ಬಡ ಜನರ ಮಾರಣಾಂತಿಕ ಕಾಯಿಲೆಯ ಚಿಕಿತ್ಸಾ ವೆಚ್ಚಕ್ಕೆ ಪರಿಹಾರ ಒದಗಿಸಲು ನಿಯಮವನ್ನು ರೂಪಿಸಲಾಗಿದ್ದು, ಅರ್ಜಿದಾರರ ಆರ್ಥಿಕ ಸ್ಥಿತಿಯ ಬಗ್ಗೆ ಹಾಗೂ ಅವರು ಅನುಭವಿಸುತ್ತಿರುವ ಯಾತನೆಯ ಬಗ್ಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ನಿಗಧಿತ ದಾಖಲೆಗಳೊಂದಿಗೆ ವರದಿ ಸಲ್ಲಿಸಿದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಸಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಮುಖ್ಯಮಂತ್ರಿ ನಿಧಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಆನ್ ಲೈನ್ ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿಲ್ಲ. ಆದ್ರೇ ಸೇವಾ ಶುಲ್ಕವಾಗಿ ರೂ.30 ಪಾವತಿಸಬೇಕಾಗಿದೆ.

ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿ ಪ್ರಕ್ರಿಯೆ ಹೇಗೆ?

ತುರ್ತು ಸಂದರ್ಭದಲ್ಲಿ ಆರ್ಥಿಕ ನೆರವಿಗಾಗಿ ಹಿಂದುಳಿದ https://sevasindhu.karnataka.gov.in/ ಮೂಲಕ ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆದ್ರೇ ಪೂರಕ ದಾಖಲೆಗಳಾಗಿ ಪರಿಹಾರ ಕೋರಿರುವವರು ಆ ಕಾರಣಕ್ಕೆ ಸಂಬಂಧಿಸಿದಂತೆ ನಿಖರ ದಾಖಲೆಗಳನ್ನು ಸಲ್ಲಿಸಬೇಕಾಗಿರುತ್ತದೆ.

ಅರ್ಜಿ ಪರಿಶೀಲನೆ ಹೇಗೆ?

ಜನರು ಸಲ್ಲಿಸಿದಂತ ಅರ್ಜಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ (DC) ಮೂಲಕ ಪರಿಶೀಲನೆ ನಡೆಸಲಾಗುತದೆ. ಆ ಬಳಿಕ ಸಿಎಂ ಆರ್
ಪರಿಶೀಲನೆ ನಡೆಸಲಾಗುತ್ತದೆ. ಆ ಬಳಿಕ ಸಿಎಂ ಆರ್ ಎಫ್ ಕೇಸ್ ವರ್ಕರ್ ಅವರಿಂದ ಅಪ್ಲಿಕೇಶನ್ ಪರಿಶೀಲನೆ ಮಾಡಲಾಗುತ್ತದೆ.

ಈ ಬಳಿಕ ವಿಭಾಗದ ಅಧಿಕಾರಿಗಳು, ವಿಶೇಷಾಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತದೆ. ತದ ನಂತರ ಅಂಡರ್ ಸೆಕ್ರೆಟರಿ, ವಿಶೇಷ ಅಧಿಕಾರಿ ಪರಿಶೀಲನೆ ನಡೆಸಿದ ನಂತರ, ಜಂಟಿ ಕಾರ್ಯದರ್ಶಿಯಿಂದ ಕೂಡ ಪರಿಶೀಲನೆಗೊಂಡು, ಖಾತೆ ಅಧಿಕಾರಿ ಪರಿಶೀಲನೆಯ ಬಳಿಕ, ಮೊತ್ತ ವಿತರಣೆಗಾಗಿ ಜಂಟಿ ಕಾರ್ಯದಿಗಳಿಂದ ನೇರ ಫಲಾನುಭವಿಗಳ ಖಾತೆಗೆ( DBT ) ಮಾಡಲಾಗುತ್ತದೆ.

ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಲು ದಾಖಲೆಗಳು:

ಅರ್ಜಿದಾರರ ಭಾವ ಚಿತ್ರ (ಪಾಸ್ ಪೋರ್ಟ್ ಆಳತೆ)

  • ಆರ್ಜಿದಾರರ ಬಿ.ಪಿ.ಎಲ್ ಪಡಿತರ ಚೀಟಿ (BPLಕಾರ್ಡ್)
  • ಅರ್ಜಿದಾರರ ಆಧಾರ್ ಗುರುತಿನ ಚೀಟಿ (ಅರ್ಜಿದಾರರ ಬ್ಯಾಂಕ್ ಪಾತಿಯು ಆಧಾರ್ ಗುರುತಿನ ಚೀಟಿ ಸಂಖ್ಯೆಯೊಂದಿಗೆ ಜೋಡಣೆ (Link) ಆಗಿರಬೇಕು) (Aadhar Card)
  • ಅರ್ಜಿದಾರರು ಚಿಕಿತ್ಸೆ ಪಡೆದಿರುವ ಆಸ್ಪತ್ರೆಯ ಸೀಲು ಸಹಿ ಇರುವ ಅಂತಿಮ ಮೂಲ ಬಿಲ್ಲುಗಳು (Hospital Final Bill)

ಆಸ್ಪತ್ರೆಯ ಬಿಡುಗಡೆ ಸಾರಾಂಶ ಪತ್ರದ ಪ್ರತಿ (Discharge summary)

ಅರ್ಜಿದಾರರು ಚಿಕಿತ್ಸೆ ಪಡೆಯಬೇಕಾದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಮೂಲ ಅಂದಾಜು (Hospital Estimate)

  • ಅರ್ಜಿದಾರರು ಬ್ಯಾಂಕ್ ಖಾತೆ ಹೊಂದಿರಬೇಕು, ಸದರಿ ಖಾತೆಯ ಪಾಸ್ ಪುಸ್ತಕದ ಮೊದಲ ಪುಟದ ಪ್ರತಿ (Bank Pass Book / Extract) ಬ್ಯಾಂಕ್ ಖಾತೆ NPCI ಗೆ ಮ್ಯಾಪ್ ಆಗಿರಬೇಕು.
  • ಅರ್ಜಿದಾರರ ಅಥವಾ ಅವರ ಕುಟುಂಬ ವರ್ಗದವರ ಬಳಕೆಯಲ್ಲಿರುವ ಮೊಬೈಲ್.

  • ಸ್ನೇಹಿತರೇ ಈ ಮಾಹಿತಿಯನ್ನು ನಿಮಗೆ ಗೊತ್ತಿರುವವರಿಗೆ ಹಾಗೂ ಯಾವುದಾದರೂ ಗಂಭೀರ ಕಾಯಿಲೆಯಿಂದ ನರಳುತ್ತಿರುವ ಬಡವರಿಗೆ ಸಹಾಯವಾಗಲು ತಿಳಿಸಿ .

ಇತ್ತೀಚಿನ ಸುದ್ದಿಗಳು

Related Articles