ತೋಟಗಾರಿಕೆ ಇಲಾಖೆಯಿಂದ ವಿವಿಧ ಘಟಕಗಳಿಗೆ ಶೇ. 50 ರಷ್ಟು ಸಹಾಯಧನ:
ಇಂದೇ ಅರ್ಜಿ ಸಲ್ಲಿಸಿ? ಅರ್ಜಿ ಎಲ್ಲಿ ಸಲ್ಲಿಸಬೇಕು?ಯಾವ ಯಾವ ಘಟಕಗಳಿಗೆ ಸಹಾಯಧನ? ಸಂಪೂರ್ಣ ಮಾಹಿತಿ .
ಪ್ಯಾಕಹೌಸ್, ನೀರು ಸಂಗ್ರಹಣಾ ಘಟಕ, ಸೋಲಾರ್ ಟನಲ್ ಡ್ರೈಯರಗಳಿಗೆ ಸಹಾಯಧನ.
ಆತ್ಮೀಯ ರೈತ ಬಾಂದವರೇ ತೋಟಗಾರಿಕೆ ಇಲಾಖೆಯು ಶಿವಮೊಗ್ಗ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ತನ್ನದೇ ಆದ ಪಾತ್ರ ವಹಿಸುತ್ತಾ ಬಂದಿದೆ. ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡುವ ಪ್ರಯತ್ನದಲ್ಲಿ ತೊಡಗಿದೆ.
ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 51.53 ಎಕರೆ ಪ್ರದೇಶದ ನಾಲ್ಕು ತೋಟಗಾರಿಕೆ ಕ್ಷೇತ್ರಗಳಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ಅಭಿವೃದ್ಧಿಪಡಿಸಿದೆ. ಉತ್ತಮ ಗುಣಮಟ್ಟದ ಕಸಿ/ಸಸಿ ಗಿಡಗಳ ಸಸ್ಯಾಭಿವೃದ್ಧಿ ಮಾಡಲಾಗುತ್ತಿದೆ. ರಾಜ್ಯವಲಯ ವ್ಯಾಪ್ತಿಯಲ್ಲಿ 326.15 ಎಕರೆ ಪ್ರದೇಶದ ಎಂಟು ತೋಟಗಾರಿಕೆ ಕ್ಷೇತ್ರಗಳಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮಾವು, ಸಪೋಟ, ತೆಂಗು ಮತ್ತು ಅಡಿಕೆ ಬೆಳೆಗಳನ್ನು ಅಧಿಕ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ತಾಳೆ, ಗೋಡಂಬಿ, ಹುಣಸೆ, ಕೋಕೋ, ನೆಲ್ಲಿ, ಚೆರಿ ಮತ್ತು ಕಮರಕ್ ಕಡಿಮೆ ಪ್ರದೇಶದಲ್ಲಿ ಬೆಳೆಯಲಾಗಿದೆ.
ತೋಟಗಾರಿಕೆ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಕಸಿ/ಸಸಿ ಗಿಡಗಳ ಸಸ್ಯಾಭಿವೃದ್ಧಿಪಡಿಸಲಾಗುತ್ತಿದ್ದು, ಕ್ಷೇತ್ರದಿಂದ ನೇರವಾಗಿ ರೈತರಿಗೆ ವಿತರಿಸಲಾಗುತ್ತದೆ. ಮೂಲಭೂತ ಸೌಕರ್ಯಗಳಾದ ಪಾಲಿಮನೆ, ಶೇಡ್ ನೆಟ್ ಮತ್ತು ನೀರಿನ ಸೌಕರ್ಯ ಹೊಂದಿದ ಕ್ಷೇತ್ರಗಳಲ್ಲಿ ಉತ್ಕೃಷ್ಟ ಹಾಗೂ ಉತ್ತಮ ಗುಣಮಟ್ಟದ ಕಸಿ/ ಸಸಿಗಳನ್ನು ಉತ್ಪಾದಿಸಲಾಗುತ್ತಿದೆ. ಎಲೆ ವಿಶ್ಲೇಷಣೇ ಪ್ರಯೋಗಾಲಯದಲ್ಲಿ ಕೆಲವು ತೋಟಗಾರಿಕೆ ಬೆಳೆಗಳ ಎಲೆಳನ್ನು ಹಾಗೂ ವಿವಿಧ ನಮೂನೆಯ ಹಣ್ಣಿನ ಮಾದರಿಗಳನ್ನು ವಿಶ್ಲೇಷಿಸಿ, ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಅಂಗಾಂಶ ಕೃಷಿ ಗಿಡಗಳ ಹಾರ್ಡನಿಂಗ್ ಘಟಕದಲ್ಲಿ ಅಂಗಾಂಶ ಕೃಷಿ ಬಾಳೆ ಗಿಡಗಳನ್ನು ಹದಗೊಳಿಸಿ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಗ್ರಾಮೀಣ ಭಾಗದ ಯುವಕ ಮತ್ತು ಯುವತಿಯರಿಗೆ ಊಟ ಮತ್ತು ವಸತಿ ಜೊತೆಗೆ ಉಚಿತ ತರಬೇತಿ
ಇದನ್ನೂ ಓದಿ: ಪ್ರಧಾನ ಮಂತ್ರಿ ಆವಾಸ್( ವಸತಿ ) ಯೋಜನೆಯ ಹೊಸ ಮಾರ್ಗಸೂಚಿಗಳು ಪ್ರಕಟ:
ಆತ್ಮೀಯ ರೈತ ಬಾಂದವರೇ ಮುಂದುವರೆದು ಈ ಆರ್ಥಿಕ ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯ ತೋಟಗಾರಿಕೆ ಇಲಾಖೆಯು 2023-24 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ವಿವಿಧ ಕಾರ್ಯಕ್ರಮಗಳಡಿ ಅನುದಾನ ಲಭ್ಯತೆ,ಯನ್ನು ಹೋಬಳಿವಾರು ಹಂಚಿಕೆ ಮಾಡಿ ,ಜೇಷ್ಟತೆಯ ಆಧಾರದ ಮೇಲೆ ಸಹಾಯಧನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಆಹ್ವಾನಿಸಿದ ಯೋಜನೆಗಳು:
ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರದೇಶ ವಿಸ್ತರಣೆಯಡಿ ಜಾಯಿಕಾಯಿ, ಗೇರು, ಕಾಳು ಮೆಣಸು, ಬೆಣ್ಣೆಹಣ್ಣು, ಹಲಸು ಮತ್ತು ಕಾಳುಮೆಣಸು ಪುನಃಶ್ಚತನ
ಹಳೆಯ ತೋಟಗಳ ಪುನ: ಶ್ಚೇತನಕ್ಕೆ ಶೇ. 50 ರಂತೆ ಪ್ರತಿ ಹೇ. ರೂ. 20000/- ಗರಿಷ್ಟ ಎರಡು ಹೇಕ್ಟರ ವರೆಗೂ ಸಹಾಯಧನ.
ವೈಯಕ್ತಿಕ ನೀರು ಸಂಗ್ರಹಣಾ ಘಟಕ: ವೈಯಕ್ತಿಕ ನೀರು ಸಂಗ್ರಹಣ ಘಟಕಕ್ಕೆ ಶೇ.50 ರಂತೆ ಗರಿಷ್ಟ ರೂ.0.75 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುವುದು. ಸಂಗ್ರಹಣ ಘಟಕದ ಸಾಮರ್ಥ್ಯ 1200 ಚ.ಮೀ ಮಾಡಲು ಅವಕಾಶ ವಿರುತ್ತದೆ.
ಪ್ಯಾಕ್‌ಹೌಸ್: ಹಣ್ಣಿನ ಮತ್ತು ಪುಷ್ಷ ಉತ್ಪನ್ನಗಳಿಗೆ ಪ್ಯಾಕಿಂಗ್ ಸೌಲಭ್ಯ ಕಲ್ಪಿಸಿಕೊಳ್ಳಲು ಶೇ. 50 ಗರಿಷ್ಟ ರೂ. 2.ಲಕ್ಷ ಸಹಾಯಧನವನ್ನು ನೀಡಲಾಗುವುದು.
ಸೋಲಾರ್ ಟನಲ್ ಡ್ರೈಯರ್ ಹಾಗೂ ವಿವಿಧೋದ್ದೇಶ ಪ್ರಾಥಮಿಕ ಸಂಸ್ಕರಣಾ ಘಟಕಗಳಿಗೆ ಸಹಾಯಧನ ನೀಡಲು ಸಹ ಇಲಾಖೆ ಅರ್ಜಿ ಆಹ್ವಾನಿಸಲಾಗಿರುತ್ತದೆ.
ಕೊನೆಯ ದಿನಾಂಕ :
ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಆಸಕ್ತ ಹಾಗೂ ಅರ್ಹ ರೈತರು ಸೆಪ್ಟೆಂಬರ್ 10 ರೊಳಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಕುಶಾವತಿಯಲ್ಲಿರುವ ತೋಟಗಾರಿಕೆ ಇಲಾಖಾ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಹೋಬಳಿವಾರು ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಕರೆ ಮಾಡಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ರೈತರಿಗೆ ವಿಶೇಷ ಮಾಹಿತಿ: ಇನ್ನಿತರ ಜಿಲ್ಲೆಗಳಲ್ಲಿ ತೋಟಗಾರಿಕೆ ಇಲಾಖೆ ಆ ಜಿಲ್ಲೆಗೆ ಸಂಬಂಧಿಸಿದ ಯೋಜನೆಗಳನ್ನು ಅನುಷ್ಟಾನ ಮಾಡಲು ಅವಕಾಶವಿರುತ್ತದೆ, ಆಸಕ್ತರು ನಿಮ್ಮ ನಿಮ್ಮ ಜಿಲ್ಲೆಯ, ತಾಲೂಕಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.
ಇದನ್ನೂ ಓದಿ: ಇಲಾಖೆಯಿಂದ ಅನರ್ಹ ಮತ್ತು ಅರ್ಹ ಪಡಿತರ ಚೀಟಿ ಪಟ್ಟಿ!!
ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ಈ ಯೋಜನೆಯಡಿ 1,42,5000 ಪ್ರೋತ್ಸಾಹ ಧನ !!