Friday, September 20, 2024

Solar Energy Scheme:ಸೌರ ಶಕ್ತಿ ಆಧಾರಿತ 3 HPಯಿಂದ 7.5 HP ಕೃಷಿ ಪಂಪ್‌ಸೆಟ್ ಗಳಿಗೆ ಸರ್ಕಾರದಿಂದ ಶೇ. 80 Subsidy.

KREDL:

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ. ಇಲಾಖೆಯಡಿ ವಿವಿಧ ಸಾಮರ್ಥ್ಯದ ಕೃಷಿ ಪಂಪ್ ಸೆಟ್ ಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಹಾಯಧನ.

Solar Energy Scheme:

ಸೌರ ಶಕ್ತಿ ಆಧಾರಿತ 3 HPಯಿಂದ 10 HP ಕೃಷಿ ಪಂಪ್‌ಸೆಟ್ ಗಳಿಗೆ ಸರ್ಕಾರದಿಂದ ಶೇ. 80 Subsidy. ನೈಸರ್ಗಿಕವಾಗಿ ಬರುವ ಸೂರ್ಯನ ಬೆಳಕಿನಿಂದ ಸೌರ ಶಕ್ತಿ ಉತ್ಪಾದಿಸುವ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಬಳಕೆಮಾಡುವುದು

ಆತ್ಮೀಯ ರೈತ ಬಾಂದವರೇ ರೈತರಿಗೆ ಉಪಯೋಗವಾಗ ದೃಷ್ಠಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಎಮಂ ಉತ್ತಾನ್ ಯೋಜನೆಯಡಿ ರೈತರ ಕೃಷಿ ಪಂಪ್ ಸೆಟಗಳಿಗೆ ಸರ್ಕಾರದಿಂದ ಧನ ಸಹಾಯ ಒದಗಿಸಲಾಗಿರುತ್ತದೆ.

ಹಾಗಿದ್ದರೆ ಸರ್ಕಾರದಿಂದ ಈ ಯೋಜನೆಗೆ ಯಾವ ಸಾಮರ್ಥ್ಯದ ಪಂಪ್ ಸೆಟ್ ಗಳಿಗೆ ಏಷ್ಟು ಧನ ಸಹಾಯ? ಸೌರ ಪಂಪ್ಸೆಟ್ ಘಟಕಗಳ ಪರಿಕರಗಳ ಯಾವುವೂ?ಸರ್ಕಾರದ ಮಾರ್ಗಸೂಚಿಗಳು ಏನು?ಅರ್ಜಿ ಸಲ್ಲಿಸುವುದು ಏಲ್ಲಿ? ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?ಪ್ರಯೋಜನೆಗಳು ಏನು?ಎಂಬ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ವಿವರಿಸಲಾಗಿದೆ.

ಹೌದು, ಆತ್ಮೀಯ ರೈತ ಬಾಂದವರೇ ಇತ್ತೀಚಿನ ದಿನಮಾನಗಳಲ್ಲಿ ಮಳೆ ಸರಿಯಾಗಿ ಆಗದ ಕಾರಣದಿಂದ ವಿದ್ಯುತ್ ಅಭಾವ ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತಿರುವುದು ನೋಡಿರುತ್ತೆವೆ. ಹಾಗಾಗಿ ಸೌರ ಶಕ್ತಿ ಕಡೆಗೆ ಮುಖ ಮಾಡಿರುವುದು ಅನಿವಾರ್ಯವಾಗಿದೆ. ಹಾಗಾಗಿ ಈ ಯೋಜನೆ ಲಾಭ ಪಡೆಯುವುದು ಬಹಳ ಮುಖ್ಯವಾಗಿದೆ.

ಏನಿದು ಸೌರಶಕ್ತಿಯೋಜನೆ:


ಸೌರ ಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಯೋಜನೆ ನೈಸರ್ಗಿಕವಾಗಿ ಬರುವ ಸೂರ್ಯನ ಬೆಳಕಿನಿಂದ ಸೌರ ಶಕ್ತಿ ಉತ್ಪಾದಿಸುವ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಬಳಕೆಮಾಡುವುದು ಈ ಯೋಜನೆ ಮುಖ್ಯ ಉದ್ದೇಶವಾಗಿರುತ್ತದೆ. ಈ ಸೌರಶಕ್ತಿಗೆ ಸೌರ ಪಂಪ್‌ಸೆಟ್‌ಗಳಿಗೆ ಎಲೆಟ್ರಿಕ್‌ ಗ್ರಿಡ್‌ ಅವಶ್ಯಕತೆ ಇರುವುದಿಲ್ಲ.

ಸೌರ ಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್
ಯೋಜನೆ 2015-16 ರಿಂದ ರಾಜ್ಯದಲ್ಲಿ ಸೌರ ಪಂಪ್‌ಸೆಟ್‌ ಯೋಜನೆಯನ್ನು ಸರ್ಕಾರದಿಂದ ಜಾರಿಗೊಳಿಸಲಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಧನ ಸಹಾಯದೊಂದಿದೆ ಹಾಗೂ ರೈತ ಫಲಾನುಭವಿಗಳ ವಂತಿಗೆಯೊಂದಿಗೆ ಸೌರ ಪಂಪ್‌ಸೆಟ್‌ಗಳನ್ನುಅನುಷ್ಠಾನಗೊಳಿಸಲಾಗಿದೆ.


PM-KUSUM, Component-B ಅಡಿ ಸೌರ ಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಅಳವಡಿಕೆ ಮಾಡಿಕೊಳ್ಳಬಹುದು.

PM-KUSUM, Component-B ಯೋಜನೆ :ಪ್ರಧಾನಮಂತ್ರಿ ಮಂತ್ರಿ ಕಿಸಾನ್‌ ಉರ್ಜಾ ಸುರಕ್ಷಾ ಎವಂ ಉತ್ತಾನ್‌ ಮಹಾಭಿಯಾನ್ ಯೋಜನೆ

ಈ ಯೋಜನೆಯಡಿ ರೈತನ 7.5ಹೆಚ್.‌ ಪಿ ಸಾಮರ್ಥ್ಯದ ಸೌರ ಪಂಪ್‌ಸೆಟ್‌ ವರೆಗೆ ಕೇಂದ್ರ ಸರ್ಕಾರದಿಂದ ಧನ ಸಹಾಯ ಒದಗಿಸಲಾಗುತ್ತಿದೆ.

PM-KUSUM Component B ಯೋಜನೆಯ ಸರ್ಕಾರದ ಮಾರ್ಗಸೂಚಿಗಳು ಈ ಕೆಳಗಿನಂತಿವೆ.

7.5ಹೆಚ್.‌ ಪಿ ಸಾಮರ್ಥ್ಯದ ಸೌರ ಪಂಪ್‌ಸೆಟ್‌ ವರೆಗೆ ಕೇಂದ್ರ ಸರ್ಕಾರದಿಂದ ಧನ ಸಹಾಯ ಒದಗಿಸಲಾಗುತ್ತಿದೆ.

ಹೆಚ್ಚುವರಿ ಸಾಮರ್ಥ್ಯದ ಸೌರ ಪಂಪ್‌ಸೆಟ್‌ಗಳನ್ನು ಅಳವಡಿಸಬಹುದಾಗಿದ್ದು, ಸಹಾಯಧನವನ್ನು 7.5 ಹೆಚ್.ಪಿ ಸಾಮರ್ಥ್ಯಕ್ಕೆ ಮಿತಿಗೊಳಿಸಲಾಗಿದೆ.

ಪ್ರತಿ ಸೌರ ಪಂಪ್‌ಸೆಟ್‌ ದರಕ್ಕೆ ಹಂಚಿಕೆ ಮಾದರಿ:

ಕೇಂದ್ರ ಸರ್ಕಾರ : ಶೇ. 30

ರಾಜ್ಯ ಸರ್ಕಾರ : ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 30 , ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಶೇ. 50

ಫಲಾನುಭವಿ ವಂತಿಗೆ : ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 40 , ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಶೇ. 20

ಕೃಷಿ ಸಂಬಂಧಿಸಿದ ಇತರೆ ಯೋಜನೆಗಳನ್ನು ಓದಿ:

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ಈ ಯೋಜನೆಯಡಿ 1,42,5000 ಪ್ರೋತ್ಸಾಹ ಧನ !!
ಇದನ್ನೂ ಓದಿ: ಕೃಷಿಯಲ್ಲಿ ಹೊಸ ಉದ್ಯಮ ಪ್ರಾರಂಭಿಸಲು 50 ಲಕ್ಷ ಸಾಲ ಸೌಲಭ್ಯ
ಇದನ್ನೂ ಓದಿ: ಕೃಷಿ ಸಂಬಂದಿಸಿದ ಉದ್ಯಮಕ್ಕೆ, ತರಬೇತಿ ಜೊತೆಗೆ ಆರ್ಥಿಕ ಸಹಾಯಧನ

ಇತರೆ ಯೋಜನೆಗಳು:

ಇದನ್ನೂ ಓದಿ: CSCenter : ನೀರುದ್ಯೋಗ ಯುವಕರಿಗೆ ಹಳ್ಳಿಗಳಲ್ಲೆ ಉದ್ಯೋಗ ಮಾಡಲು ಸುವರ್ಣ ಅವಕಾಶ.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆ: ಗ್ರಾಹಕರು ಸೆಪ್ಟಂಬರ್‍ ತಿಂಗಳ ಉಚಿತ ಬಿಲ್ ಪಡೆಯಲು ‌ಆಗಸ್ಟ ಈ ತಾರೀಖುನೊಳಗೆ ಈ ಕೆಲಸ ಮಾಡಿ:

2022-23ನೇ ಸಾಲಿನಲ್ಲಿ ಮತ್ತು ಪ್ರಸಕ್ತ ವರ್ಷದಲ್ಲಿ ಕೂಡಾ ಇರುವ ಸೌರ ಪಂಪ್‌ಸೆಟ್‌ಗಳ ದರಗಳ ವಿವರಗಳು:

ಸೌರ ಪಂಪ್‌ಸೆಟ್‌ ಸಾಮರ್ಥ್ಯಬಾವಿಯ ಮಾದರಿಸೌರ ಪಂಪ್‌ಸೆಟ್‌ ದರ ರೂ. ಗಳಲ್ಲಿ‌ (GST ಸೇರಿದಂತೆ)ನೀರೆತ್ತುವ ಆಳ (ಮೀಟರ್‌ ಗಳಲ್ಲಿ)ಕೇಂದ್ರ ಸರ್ಕಾರದ ಸಹಾಯಧನ (ಶೇ.30) ರೂ. ಗಳಲ್ಲಿಒದಗಿಸಲಾಗುತ್ತಿರುವ ರಾಜ್ಯ ಸರ್ಕಾರದ ಸಹಾಯಧನ ರೂ. ಗಳಲ್ಲಿಫಲಾನುಭವಿಗಳ ವಂತಿಗೆ  ರೂ.ಗಳಲ್ಲಿ
ಸಾಮಾನ್ಯ ವರ್ಗ (ಶೇ.30)ಪ.ಜಾ/ ಪ.ಪಂ (ಶೇ.50)ಸಾಮಾನ್ಯ ವರ್ಗ (ಶೇ.40)ಪ.ಜಾ/ ಪ.ಪಂ (ಶೇ.20)
3 ಹೆಚ್.ಪಿತೆರೆದ178552205356553565892767142135710
5 ಹೆಚ್‌.ಪಿಕೊಳವೆ25263670757907579012631810105550527
7.5 ಹೆಚ್.ಪಿಕೊಳವೆ36427410010928210928218213614571072856
10 ಹೆಚ್‌.ಪಿಕೊಳವೆ468856100109282109282182136250292177438

ಸೌರ ಪಂಪ್‌ಸೆಟ್‌ ಅರ್ಜಿ ಅಹ್ವಾನ, ಅರ್ಜಿ ಸಲ್ಲಿಸುವ ಪ್ರಕ್ರಿಯೆ

ರಾಜ್ಯ ಸರ್ಕಾರದಿಂದ PM-KUSUM-B ಯೋಜನೆಯಡಿ ಸಹಾಯಧನ
ಹಂಚಿಕೆಗೆ ಅನುಗುಣವಾಗಿ ಆನ್‌ ಲೈನ್‌ ಅರ್ಜಿಗಳನ್ನು ಕೆ.ಆರ್.‌ಇ.ಡಿ.ಎಲ್‌
ಜಾಲತಾಣದಲ್ಲಿ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು.

ಕೆ.ಆರ್.ಇ.ಡಿ.ಎಲ್‌ ಜಾಲತಾಣ: www.kredl.karnataka.gov.in

MD, KREDL ಹೆಸರಿಗೆ, DD (Demand Draft) ಮುಖೇನ
ಅರ್ಜಿದಾರರ ವಂತಿಗೆ ಸ್ವೀಕೃತಿಬೇಕಾಗಿರುತ್ತದೆ.

ಜಮೀನಿನ ಸರ್ವೆ ನಂ., ಆಧಾರ್‌ ಕಾರ್ಡ ಸಂಖ್ಯೆ, ಪ.ಜಾ/ಪ.ಪಂ ರೈತರು
ಜಾತಿ ಪ್ರಮಾಣ ಪತ್ರದ ವಿವರಗಳನ್ನು, ರೇಷನ್‌ ಕಾರ್ಡ ವಿವರಗಳನ್ನು
ಆನ್‌ಲೈನ್‌ ನಲ್ಲಿ ಒದಗಿಸಬೇಕಾಗಿರುತ್ತದೆ.

ಸೌರ ಪಂಪ್‌ಸೆಟ್‌ ಅರ್ಜಿ ಅಹ್ವಾನ, ಸಲ್ಲಿಸುವ ಪ್ರಕ್ರಿಯೆ

Acknowledge copy ಯೊಂದಿಗೆ ದಾಖಲೆಗಳನ್ನು ಆಯಾ ವಿದ್ಯುತ್‌ ಸರಬರಾಜು ಕಂಪನಿಗಳ (ವಿ.ಸ.ಕಂ) ಬೆಸ್ಕಾಂ/ಸೆಸ್ಕ್/ಹೆಸ್ಕಾಂ/ಮೆಸ್ಕಾಂ/ಜೆಸ್ಕಾಂ
sub-division offices ಗಳಿಗೆ ಸಲ್ಲಿಸಬೇಕು.

ದಾಖಲೆಗಳನ್ನು ವಿ.ಸ.ಕಂ ಗಳು ಪರಿಶೀಲನೆಯೊಂದಿಗೆ ಕೆ.
ಆರ್.ಇ.ಡಿ.ಎಲ್‌ಗೆ ರವಾನಿಸಿದ ನಂತರ ಏಜನ್ಸಿಗಳಿಗೆ
ಕಾರ್ಯಾದೇಶ ನೀಡಲಾಗುವುದು.

ಸೌರ ಪಂಪ್‌ಸೆಟ್‌ಗಳನ್ನು ಏಜನ್ಸಿಗಳಿಂದ
ಅಳವಡಿಸಲಾಗುತ್ತದೆ.

PM-KUSUM Component –B ಯೋಜನೆಯಡಿ ಸೌರ
ಪಂಪ್‌ಸೆಟ್‌ಗಳ ಬಳಕೆಯ ಪ್ರಯೋಜನಗಳು

ಹಗಲು ವೇಳೆ ಸೌರ ಶಕ್ತಿ ಯಿಂದ ರೈತರ
ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆ.

ಎಲೆಟ್ರಿಕ್‌ ಗ್ರಿಡ್‌ ನಿಂದ ಬರುವ ವಿದ್ಯುತ್‌ಗಾಗಿ
ಕಾಯುವುದು
ಅವಶ್ಯಕತೆಯಿರುವುದಿಲ್ಲ

ಹಗಲು ವೇಳೆಯಲ್ಲಿ ಕೃಷಿ ಚಟುವಟಿಕೆಗಳನ್ನು
ಕೈಗೊಳ್ಳುವುದು ಅನುಕೂಲ

ವಂಚಕರಿಂದ ಎಚ್ಚರವಹಿಸುವುದು

ನಕಲಿ/ವಂಚಕ ಜಾಲತಾಣಗಳು ಹಾಗೂ ವಂಚಕ ಕರೆಗಳಿಂದ
ರೈತರು ಮೋಸಹೋಗದಂತೆ ಎಚ್ಚರಿಕೆ ವಹಿಸಲು ಕೇಂದ್ರ
ಸರ್ಕಾರದಿಂದ ಹಾಗೂ ಕೆ.ಆರ್.ಇ.ಡಿ.ಎಲ್‌ ನಿಂದ
ದಿನಪತ್ರಿಕೆಗಳಲ್ಲಿ
ಪ್ರಕಟಣೆ ನೀಡಲಾಗಿದೆ.

ಅದರೂ ರೈತರು ಮೋಸಹೊಗುತ್ತಿರುವ ಬಗ್ಗೆ ಗಮನಿಸಲಾಗಿದೆ.

ಮೊಸಹೋದ ಪ್ರಕರಣಗಳಲ್ಲಿ/ಅನುಮಾನ ಬಂದಲ್ಲಿ ಸೈಬರ್‌
ಕೈಮ್‌ ಸೆಲ್‌, https://cybercrime.gov.in ರಲ್ಲಿ
ದೂರು ನೀಡಲು ಕೋರಿದೆ.

ಇತ್ತೀಚಿನ ಸುದ್ದಿಗಳು

Related Articles