Friday, September 20, 2024

ಕೃಷಿಯಲ್ಲಿ ಹೊಸ ಉದ್ಯಮ ಪ್ರಾರಂಭಿಸಲು 50 ಲಕ್ಷದವರೆಗೆ ಸಾಲ ಸೌಲಭ್ಯ .ಗ್ರಾಮೀಣ ಪ್ರದೇಶ ಯುವಕರಿಗೆ ಉತ್ತಮ ಅವಕಾಶ.ಈ ಯೋಜನೆ ಪಡೆಯಲು ಅರ್ಹತೆಗಳೇನು? ದಾಖಲೆಗಳೇನು? ಅರ್ಜಿ ಎಲ್ಲಿ ಸಲ್ಲಿಸಬಹುದು?ಈ ಯೋಜನೆಗೆ ಸಹಾಯಧನ ಏಷ್ಟು?ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ.

ಪ್ರೀಯ ಯುವ ರೈತ ಬಾಂದವರೇ ನೀವು ಕೈಷಿಯಲ್ಲಿ ಹೊಸದಾಗಿ ವ್ಯಾಪಾರ (ಉದ್ಯಮ ) ಆರಂಭಿಸಬೇಕು ಅಂತ ಬಯಸಿದ್ದಿರಾ? ಆದ್ರೆ ಕೈಯಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಅನ್ನೋ ಭಯ ಏನ್ ಮಾಡೋದು ಅಂತ ಗೊಂದಲವೇ? ಚಿಂತಿಸಬೇಡಿ? ನಿಮಗಾಗಿ ಸರ್ಕಾರನೇ ಸ್ವಲ್ಪ ಬಂಡವಾಳ ಕೊಟ್ಟು ಉದ್ಯಮ (ಬ್ಯುಸಿನೆಸ್) ಆರಂಭಿಸೋಕೆ ಪ್ರೋತ್ಸಾಹ ನೀಡಲು ಮುಂದಾಗಿದೆ.

ಇತ್ತೀಚೆಗೆ ಎಲ್ಲರೂ ಸ್ವಂತ ( ಉದ್ಯಮ) ವ್ಯಾಪಾರ ಮಾಡೋದಕ್ಕೆ ಆಸಕ್ತರಾಗಿದ್ದಾರೆ. ಈ ಕಂಪನಿಗಳಲ್ಲಿ ಇನ್ನೋಬ್ಬರ ಕೈ ಕೆಳಗೆ ಆಳಾಗಿ ದುಡಿಯುವುದು ಕೆಲಸ ಬಿಟ್ಟು ಸ್ವಂತ ಉದ್ಯಮ ಮಾಡಲು ಯುವಕರು ಆಸಕ್ತಿ ತೋರುತ್ತಿದ್ದಾರೆ. ಅದರಲ್ಲೂ ಅದೆಷ್ಟೋ ಮಂದಿ ಸಿಟಿ ಬಿಟ್ಟು ಹಳ್ಳಿ ಕಡೆ ಹೋಗಿ ಸ್ವಂತ ಉದ್ಯಮ ಆರಂಭಿಸಿ ನೆಮ್ಮದಿಯಾಗಿ ಹಳ್ಳಿಯಲ್ಲೇ ಜೀವನ ನಡೆಸಲು ಮುಂದಾಗಿದ್ದಾರೆ.

ಹಾಗೆ ಯೋಚಿಸುವವರು ಅನೇಕರಿದ್ದಾರೆ. ಇಂಥವರಿಗೆ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಕೋಳಿ ಸಾಕಾಣಿಕೆ ವ್ಯಾಪಾರವು ಅಂತಹ ಒಂದು ವ್ಯವಹಾರವಾಗಿದೆ. ಯಾರಾದರೂ ಕೋಳಿ ಉದ್ಯಮ ಸ್ಥಾಪಿಸಲು ಇಚ್ಛಿಸಿದರೆ ಕೇಂದ್ರ ಸರ್ಕಾರ ಶೇ.50ರ ರಿಯಾಯಿತಿಯಲ್ಲಿ 50 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡುತ್ತಿದೆ.

ಆತ್ಮೀಯ ಪ್ರೀಯ ರೈತ ಬಾಂದವರೇ ಇತ್ತೀಚೀನ ಆಧುನಿಕ ದಿನಮಾನಗಳಲ್ಲಿ ರೈತರು ಮತ್ತು ಯುವ ಸಮೂಹ ಬಹುತೇಕ ಕೃಷಿಯ ಜತೆಗೆ ಕೃಷಿ ಸಂಬಂಧಿತ ಕ್ಷೇತ್ರಗಳತ್ತ ರೈತರು ಹೆಚ್ಚಿನ ಒಂದು ಆಸಕ್ತಿಯನ್ನು ತೋರುತ್ತಿದ್ದಾರೆ. ಅಂದರೆ, ಕೃಷಿಯಲ್ಲಿ ಉದ್ಯಮ ರೀತಿ ಬಳಸಿಕೊಂಡು ಕೃಷಿ ಚಟುವಟಿಕೆಯಲ್ಲಿ ಮುಂದುವರೆಯಲು ಆಸಕ್ತಿ ತೋರುತ್ತಿದ್ದಾರೆ.

ಉದಾಹರಣೆಗೆ ವಿಶೇಷವಾಗಿ ಕೋಳಿ ಉದ್ಯಮವನ್ನು ಆಯ್ಕೆ ಮಾಡಲಾಗುತ್ತದೆ. ಈ ಉದ್ಯಮವು ಯುವಕರು ಮತ್ತು ನಿರುದ್ಯೋಗಿಗಳಿಗೆ ತುಂಬಾ ಉಪಯುಕ್ತವಾಗಿದೆ. ಹಾಗಾಗಿಯೇ ಯುವಕರು ಈ ಉದ್ಯಮದತ್ತ ಆಸಕ್ತಿ ಕಾಣುತ್ತಿದೆ.

ಇತ್ತೀಚೀನ ದಿನಗಳಲ್ಲಿ ಮಾಂಸ ತಿನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕೊರೋನಾ ನಂತರ ಪ್ರೋಟಿನ್‌ಗಳು ಮತ್ತು ಮೊಟ್ಟೆಗಳನ್ನು ಹೆಚ್ಚು ಸೇವಿಸಲಾಗುತ್ತದೆ. ಹೆಚ್ಚಿನ ಜನರು ಚಿಕನ್ ತಿನ್ನಲು ವಿಶೇಷವಾಗಿ ಒಲವು ಇರುವುದನ್ನು ನೋಡಿರುತ್ತೆವೆ. ಕುರಿ( ಮಟನ್) ಬೆಲೆಗೆ ಹೋಲಿಸಿದರೆ ಚಿಕನ್ ಬೆಲೆ ಕಡಿಮೆ ಇರುವುದರಿಂದ ಮಾಂಸ ಪ್ರಿಯರು ಚಿಕನ್ ಗೆ ಆದ್ಯತೆ ನೀಡುತ್ತಾರೆ.

ಹಾಗಾಗಿ ರಾಷ್ಟ್ರೀಯ ಲೈವ್ ಸ್ಟಾಕ್ ಮಿಷನ್ ಅನ್ನು ಕೇಂದ್ರ ಪಶುಸಂಗೋಪನೆ ಮತ್ತು ಡೈರಿ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಯುವಕರಿಗೆ ಗ್ರಾಮೀಣ ಪ್ರದೇಶದಲ್ಲಿ ಇದ್ದು ಕೃಷಿಯತ್ತ ಸೆಳೆಯುವ ದೃಷ್ಠಿಯಿಂದ
ಗ್ರಾಮೀಣ ಪ್ರದೇಶದಲ್ಲಿ ವ್ಯಾಪಾರ ಮಾಡುವವರಿಗೆ ಮಾತ್ರ ಈ ಒಂದು ಸಾಲದ ನೆರವನ್ನು ನೀಡುತ್ತದೆ. 50 ರಷ್ಟು ಸಬ್ಸಿಡಿಯೊಂದಿಗೆ ರೂ.50 ಲಕ್ಷದವರೆಗೆ ಸಾಲವನ್ನು ಒದಗಿಸುತ್ತದೆ.

ರಾಷ್ಟ್ರೀಯ ಲೈವ್ ಸ್ಟಾಕ್ ಮಿಷನ್ ಅನ್ನು ಕೇಂದ್ರ ಪಶುಸಂಗೋಪನೆ ಮತ್ತು ಡೈರಿ ಅಭಿವೃದ್ಧಿ ಇಲಾಖೆ ಆಯೋಜಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಕೋಳಿ ಫಾರಂ ಹೊಂದಿರುವವರಿಗೆ ಕೇಂದ್ರ ಸರ್ಕಾರ ಈ ಅವಕಾಶ ಕಲ್ಪಿಸುತ್ತಿದೆ.

ಈ ಯೋಜನೆಯು ಮಾಂಸ, ಹಾಲು ಮತ್ತು ಮೊಟ್ಟೆಗಳ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕೇಂದ್ರ ಸರ್ಕಾರವು ಎರಡು ಕಂತುಗಳಲ್ಲಿ ಸಬ್ಸಿಡಿಯನ್ನು ಬ್ಯಾಂಕ್‌ಗಳಿಗೆ ಪಾವತಿಸಲಿದೆ.

ಇನ್ನೂ ಹೆಚ್ಚಿನ ಕೃಷಿ ಸಂಬಂಧಿಸಿದ ಯೋಜನೆಗಳ ಬಗ್ಗೆ ತಿಳಿಯಲು ಈ ಕೆಳಗಿನ ಲೇಖನಗಳನ್ನು ಓದಿ:


ಇದನ್ನೂ ಓದಿ: ಕೃಷಿ ಸಂಬಂದಿಸಿದ ಉದ್ಯಮಕ್ಕೆ, ತರಬೇತಿ ಜೊತೆಗೆ ಆರ್ಥಿಕ ಸಹಾಯಧನ

ಇದನ್ನೂ ಓದಿ: Integrated Farming System: ಕೃಷಿ ಇಲಾಖೆ ಈ ಯೋಜನೆಯಡಿ ಪ್ರತಿ ರೈತ ಫಲಾನುಭವಿಗೆ ಒಂದು ಲಕ್ಷದವರೆಗೆ ಸಹಾಯಧನ:

ಇದನ್ನೂ ಓದಿ: ಬೆಳೆಸಾಲ ಪಡೆಯಲು ರೈತರ ನೋಂದಣಿ ಸಂಖ್ಯೆ ಪಡೆಯುವ ಸುಲಭ ವಿಧಾನ.

ಇದನ್ನೂ ಓದಿ: PM Kisan Samman Nidhi Yojane:ಹೊಸದಾಗಿ PM Kisan ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ:

ಈ ಯೋಜನೆಯಡಿ ಯಾರು ಅರ್ಜಿ ಸಲ್ಲಿಸಬಹುದು?

ವ್ಯಕ್ತಿಗಳು ಅಥವಾ ಸ್ವಸಹಾಯ ಸಂಘಗಳು, ಉದ್ಯಮಿಗಳು, ರೈತ ಉತ್ಪಾದಕರ ಸಂಸ್ಥೆ (ಎಫ್‌ಪಿಒ), ರೈತರ ಸಹಕಾರ ಸಂಘಗಳು, ಜಂಟಿ ಹೊಣೆಗಾರಿಕೆ ಗುಂಪುಗಳು, ವಿವಿಧ ಕಂಪನಿಗಳು ಇತ್ಯಾದಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಎಲ್ಲಿ ಸಲ್ಲಿಸಬಹುದು?


ಈ ಯೋಜನೆ ಫಲಾನುಭವಿಗಳು ಆಗಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಕೇಂದ್ರ ಸರ್ಕಾರವು ರಾಷ್ಟ್ರೀಯ ಲೈವ್ ಸ್ಟಾಕ್ ಮಿಷನ್ ಪೋರ್ಟಲ್ ಅನ್ನು ನಿರ್ವಹಿಸುತ್ತದೆ. ಮೊದಲು ರಾಷ್ಟ್ರೀಯ ಜಾನುವಾರು ಮಿಷನ್ ಪೋರ್ಟಲ್‌ಗೆ https://pmmodiyojana.in/national-livestock-mission/ ಹೋಗಿ ಮತ್ತು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ರಚಿಸಿಕೊಂಡು ನೀವು ಅರ್ಜಿ ಸಲ್ಲಿಕೆ ಮಾಡಬಹುದಾಗಿರುತ್ತದೆ.

ರಾಷ್ಟ್ರೀಯ ಲೈವ್ ಸ್ಟಾಕ್ ಮಿಷನ್ ಯೋಜನೆ ಅರ್ಹತೆಗಳು:


ಗ್ರಾಮೀಣ ಪ್ರದೇಶದಲ್ಲಿ ಕೋಳಿ ಫಾರಂ ಸ್ಥಾಪಿಸುವವರಿಗೆ ನಿರ್ದಿಷ್ಟ ವಿದ್ಯಾರ್ಹತೆ ಇರಬೇಕಾಗಿರುತ್ತದೆ.
ಕನಿಷ್ಠ ಒಂದು ಎಕರೆ ಜಮೀನು ಇರಬೇಕು.
ಕೆಲವು ಸಂಬಂಧಿತ ದಾಖಲೆಗಳನ್ನು ಸಲ್ಲಿಸಬೇಕು.
ಗುತ್ತಿಗೆ ಜಮೀನಿನ ಮೇಲೂ ಸಾಲ ಪಡೆಯಬಹುದು.

ರಾಷ್ಟ್ರೀಯ ಲೈವ್ ಸ್ಟಾಕ್ ಮಿಷನ್ ಯೋಜನೆ ದಾಖಲೆಗಳು:

ಆಧಾರ್ ಕಾರ್ಡ್,
ಕೋಳಿ ಫಾರಂ ಸ್ಥಾಪಿಸಲು ಬಯಸುವ ಜಮೀನಿನ ಫೋಟೋ,
ಜಮೀನಿಗೆ ಸಂಬಂಧಿಸಿದ ದಾಖಲೆಗಳು,
ಪಾನ್ ಕಾರ್ಡ್,
ವೋಟರ್ ಕಾರ್ಡ್,
ಸಾಲ ಪಡೆಯಬೇಕಾದ ಬ್ಯಾಂಕ್ ನಲ್ಲಿರುವ ನಿಮ್ಮ ಖಾತೆಯ ಎರಡು ರದ್ದಾದ ಚೆಕ್ ಗಳು,
ಮನೆ ಪರಿಶೀಲನೆ ಪತ್ರ, ಶೈಕ್ಷಣಿಕ ಅರ್ಹತೆಯ ದಾಖಲೆಗಳು ಮತ್ತು ಸ್ಕ್ಯಾನ್ ಮಾಡಿದ ಷರಾ ಇರುವುದು ಕಡ್ಡಾಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳನ್ನು ಅಥವಾ ಇಲಾಖೆಯನ್ನು ಸಂಪರ್ಕಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.

ಇತ್ತೀಚಿನ ಸುದ್ದಿಗಳು

Related Articles