Friday, November 22, 2024

PM Kisan Samman Nidhi Yojane:ಹೊಸದಾಗಿ PM Kisan ಅರ್ಜಿ ಸಲ್ಲಿಸಲು ಆಹ್ವಾನ:ಹೊಸದಾಗಿ ಅರ್ಜಿ ಸಲ್ಲಿಸುವರ ಗಮನಕ್ಕೆ !! ಅರ್ಜಿ ಸಲ್ಲಿಸಿದವರು ಮಾಡಬೇಕಾದ ಮುಖ್ಯವಾದ ಕೆಲಸವೇನು?, ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ:

ಆತ್ಮೀಯ ರೈತ ಬಾಂದವರೇ ಕೇಂದ್ರ ಸರ್ಕಾರವು 2019 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿರುತ್ತದೆ.ಈ ಯೋಜನೆ ಮುಖ್ಯ ಉದ್ದೇಶ ಅದು ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ಭೂಮಿಯನ್ನು ಹೊಂದಿರುವ ರೈತ ಕುಟುಂಬಗಳಿಗೆ ಅವರು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಸಾಮಗ್ರಿಗಳನ್ನು,ಬಿತ್ತನೆ ಬೀಜವನ್ನು ಕೊಳ್ಳಲು ಹಾಗು ಅವರ ಕೌಟಂಬಿಕ ಅಗತ್ಯಗಳಿಗೆ ಆರ್ಥಿಕವಾಗಿ ಸಹಾಯಧನವಾಗಿ ನೀಡುತ್ತದೆ.

ಈ ಯೋಜನೆಯಡಿಯಲ್ಲಿ, ಉದ್ದೇಶಿತ ಫಲಾನುಭವಿಗಳಿಗೆ ಅನುಕೂಲತೆಯನ್ನು ವರ್ಗಾಯಿಸುವ ಸಂಪೂರ್ಣ ಹೊಣೆಗಾರಿಕೆಯಿದ್ದು ಅದನ್ನು ಭಾರತ ಸರ್ಕಾರವು ಭರಿಸಲಿದೆ

.
ಯೋಜನೆಯ ಫಲಾನುಭವಿಗಳು ಆಗಲು ಅರ್ಹತೆಗಳು ಅಥವಾ ಮಾನದಂಡಗಳು:

ದಿನಾಂಕ 01.02.2019 ರವರೆಗೆ ರಾಜ್ಯಗಳ/ UT ಭೂ ದಾಖಲೆಗಳಲ್ಲಿ ತಮ್ಮ ಹೆಸರನ್ನು ಹೊಂದಿರಬೇಕು .ಮತ್ತು 1/02/2019 ನಂತರ (ಭೂಮಿ ಹೆಸರಿಗೆ ಆದವರರ ಕಾಲಂ ನಂಬರ್‍ 10ರಲ್ಲಿ ಕಬ್ಜೆ ಮತ್ತು ಸ್ವಾಧಿನದ ರೀತಿ ಪೌತಿ ಅಂತ ಇರುವ ರೇಕಾರ್ಡ ಈ ಯೋಜನೆಗೆ ಅರ್ಹರಾಗಿರುತ್ತದೆ.

ಒಂದು ವೇಳೆ 1/02/2019 ರ ನಂತರ ನಿಮ್ ರೇಕಾರ್ಡ ಕ್ರಯ, ದಾನ, ವಿಭಾಗ, ಹಕ್ಕು ಬದಲಾವಣೆ ಅಂತ ಇದ್ದರೆ ಈ ಯೋಜನೆಗೆ ಅನರ್ಹ.) ಕನಿಷ್ಟ 5 ಗುಂಟೆಯಿಂದ ಗರಿಷ್ಟ 2 ಹೆಕ್ಟರ್ ಗಳಷ್ಟು ಕೃಷಿ ಭೂಮಿಯನ್ನು ಹೊಂದಿರುವ ಎಲ್ಲಾ ಕುಟುಂಬಗಳು ಈ ಯೋಜನೆಯಡಿಯಲ್ಲಿ ಅನುಕೂಲತೆಗಳನ್ನು ಪಡೆದುಕೊಳ್ಳಲು ಅರ್ಹವಾಗಿರುತ್ತವೆ.

ಇದನ್ನೂ ಓದಿ: 2023-ನೇ ಧಾರವಾಡ ಕೃಷಿ ಮೇಳ ,ಈ ವರ್ಷದ ಕೃಷಿಮೇಳದ ವಿಶೇಷತೆಗಳೇನು? ಮಳಿಗೆಗಾಗಿ ಸಂಪರ್ಕಿಸುವುದು ಯಾರನ್ನು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ .

ಆದರೆ, ಈ ಕೆಳಗಿನವರು ಯೋಜನೆ ಫಲಾನುಭವಿಗಳು ಆಗಲು ಅರ್ಹರಾಗಿರುವುದಿಲ್ಲ:

ಎಲ್ಲಾ ಸಾಂಸ್ಥಿಕ ಭೂ ಮಾಲೀಕರು ; ಮತ್ತು

(b) ಯಾವುದೇ ಕುಟುಂಬದ ಒಬ್ಬರು ಅಥವಾ ಹೆಚ್ಚಿನ ಸದಸ್ಯರು ಈ ಕೆಳಗಿನ ವರ್ಗದಲ್ಲಿದ್ದರೆ :-
i. ಮಾಜಿ(ನಿಕಟ ಪೂರ್ವ) ಮತ್ತು ಹಾಲಿ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು

ii. ಮಾಜಿ(ನಿಕಟ ಪೂರ್ವ) ಮತ್ತು ಹಾಲಿ ಸಚಿವರು/ರಾಜ್ಯ ಸಚಿವರುಗಳು ಮತ್ತು ಮಾಜಿ(ನಿಕಟ ಪೂರ್ವ) /ಹಾಲಿ ಲೋಕ ಸಭಾ/ರಾಜ್ಯ ಸಭಾ ಸದಸ್ಯರು ರಾಜ್ಯದ ವಿಧಾನ ಸಭೆಗಳು/ ರಾಜ್ಯ ವಿಧಾನ ಪರಿಷತ್ತು, ಮಾಜಿ(ನಿಕಟ ಪೂರ್ವ) ಮತ್ತು ಹಾಲಿ ಮುನ್ಸಿಪಲ್ ಕಾರ್ಪೋರೇಷನ್ ಕೌನ್ಸಿಲರುಗಳು 4 ಕ್ಕೆ, ಒಂದು ವರ್ಷದಲ್ಲಿ ಎಷ್ಟು ಬಾರಿ ಅನುಕೂಲತೆಯನ್ನು ಕೊಡಲಾಗುತ್ತದೆ ಜಿಲ್ಲಾ ಪಂಚಾಯತಿಯ ಮಾಜಿ (ನಿಕಟಪೂರ್ವ) ಮತ್ತು ಹಾಲಿ ಅಧ್ಯಕ್ಷರುಗಳು.

iii. ಕೇಂದ್ರ/ರಾಜ್ಯ ಸರ್ಕಾರಗಳ/ ಇಲಾಖೆಗಳ/ ಸಚಿವಾಲಯಗಳ ಸೇವೆಯಲ್ಲಿರುವ ಹಾಗು ನಿವೃತ್ತರಾಗಿರುವ ಎಲ್ಲಾ ಅಧಿಕಾರಿಗಳು ಮತ್ತು ಉದ್ಯೋಗಿಗಳು ಮತ್ತು ಅವುಗಳ ಕೇಂದ್ರ ಅಥವಾ ರಾಜ್ಯ ಪಿಎಸ್ ಇ ಕ್ಷೇತ್ರ ಘಟಕ ಮತ್ತು ಸಂಬಂಧಿಸಿದ ಕಛೇರಿಗಳು/ ಸರ್ಕಾರದ ಅಧೀನ ಸ್ವಾಯತ್ತ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ನಿಯಮಿತ ಉದ್ಯೋಗಿಗಳು (ಮಲ್ಟಿ ಟಾಸ್ಕಿಂಗ್(ವಿವಧ ಕೆಲಸದ) ಸಿಬ್ಬಂದಿ/ IV ದರ್ಜೆ/ ಗ್ರೂಪ್ ಡಿ ಉದ್ಯೋಗಿಗಳನ್ನು ಹೊರತುಪಡಿಸಿ)

iv. ತಿಂಗಳ ಆದಾಯವು ರೂ. 10,000/-ಅಥವಾ ಹೆಚ್ಚಾಗಿದ್ದು ಉದ್ಯೋಗಿಗಳು (ಮಲ್ಟಿ ಟಾಸ್ಕಿಂಗ್ ವಿವಧ ಕೆಲಸದ ಸಿಬ್ಬಂದಿ/ IV ದರ್ಜೆ/ ಗ್ರೂಪ್ ಡಿ ಉದ್ಯೋಗಿಗಳನ್ನು ಹೊರತುಪಡಿಸಿ) ಅಧಿಕೃತವಾದ/ ನಿವೃತ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳು ಕಳೆದ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿರುವ ಎಲ್ಲರೂ.

vi. ವೃತ್ತಿಪರರಾದ ವೈದ್ಯರು, ಇಂಜೀನಿಯರರು, ವಕೀಲರು, ಚಾರ್ಟಡ್್ರ ಅಕೌಂಟೆಂಟ್ ಗಳು ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ನೋಂದಣಿ ಮಾಡಿಸಿ ವೃತ್ತಿಯನ್ನು ನಿರ್ವಹಿಸುತ್ತಿರುವ ವಾಸ್ತುಶಿಲ್ಪಿಗಳು.

ಅನುಕೂಲತೆಗಳು : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಖಚಿತ ಆದಾಯವನ್ನೊದಗಿಸಿಕೊಡುತ್ತದೆ.

2 ಹೆಕ್ಟೇರ್ ನಷ್ಟು ಕೃಷಿ ಭೂಮಿಯನ್ನು ಹೊಂದಿರುವ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ (SMF) ವಾರ್ಷಿಕ ರೂ.6000/- ಗಳ ಆದಾಯ ಬೆಂಬಲವನ್ನು ನೀಡಲಾಗುತ್ತದೆ.

ಈ ಮೊತ್ತವನ್ನು ನೇರವಾಗಿ ಅವರ ಖಾತೆಗೆ 3 ಸಮ ಕಂತುಗಳಲ್ಲಿ ವರ್ಗಾಯಿಸಲಾಗುವುದು.

ಈಗಾಗಲೇ ಅರ್ಜಿ ಸಲ್ಲಿಸಿದವರ ಗಮನಕ್ಕೆ:


1.2019 ರಲ್ಲಿ ಹಣ ಜಮಾ ಆಗಿದೆ. ಆದರೆ ಇವಾಗ ಸಂದಾಯವಾಗುತ್ತಿಲ್ಲ?
2.ಫಲಾನುಭವಿಗಳ ಸ್ಟೇಟಸ್ (beneficiary status )ಪರಿಶೀಲಿಸಿದಾಗ UTR No,ಜಮಾ ಆಗಿರುವುದು ಕಾಣುತ್ತದೆ.ಆದರೆ ಖಾತೆಗೆ ಜಮಾ ಆಗಿರುವುದಿಲ್ಲ?
3.ಸರ್ಕಾರ ಪರಿಶೀಲನೆ ಮಾಡುವಾಗ ಅನುಸರಿಸುವ ಕ್ರಮಗಳೇನು?

1.2019 ರಲ್ಲಿ ಹಣ ಜಮಾ ಆಗಿದೆ ಇವಾಗ ಸಂದಾಯವಾಗುತ್ತಿಲ್ಲ?
ಪಿ ಎಂ ಕಿಸಾನ್ ಯೋಜನೆ ಪ್ರಾರಂಭವಾದ ವರ್ಷ 2019, ಈ ಯೋಜನೆಯ ಫಲಾನುಭವಿಗಳಿಗೆ 2019 ರಲ್ಲಿ ಒಂದು ವರ್ಷ ಹಣ ಜಮಾ ಆಗಿರುತ್ತದೆ ಅಥವಾ 2-3 ಕಂತು ಜಮಾ ಆಗಿ ಸದ್ಯ ನಿಲ್ಲಿಸಿದ್ದಾರೆ. ಕಾರಣ ಏನ್ನಿರಬಹುದು.

2019 ರಲ್ಲಿ ನೋಂದಣಿ ಮಾಡಲು ಫಲಾನುಭವಿಗಳು ನೀಡಿರುವ ದಾಖಲೆಗಳಾದ ಆಧಾರ ಕಾರ್ಡ, ಬ್ಯಾಂಕ್ ಪಾಸ್, ಜಮೀನಿನ ಪಹಣಿ (ರೆಕಾರ್ಡ) ನಲ್ಲಿ ಯಾವುದಾದರೂ ಬದಲಾವಣೆ ಆಗಿರುತ್ತದೆ.
ಉದಾ: ಆಧಾರ ಕಾರ್ಡ ನಲ್ಲಿ ಹೆಸರು ಬದಲಾವಣೆ, ಮೊಬೈಲ್ ನಂಬರ್‍, ಪೋಟೋ,ವಿಳಾಸ ಬದಲಾವಣೆ ಆಗಿದ್ದರೆ, ಅದನ್ನು farmer registation ನಲ್ಲಿ ಬದಲಾವಣೆಗೆ ಅವಕಾಶವಿರುತ್ತದೆ.
*ಬ್ಯಾಂಕ್ ಪಾಸಬುಕ್ ಖಾತೆಯ ಆಧಾರ ಜೋಡಣೆ ,ಪಾನ್ ಕಾರ್ಡ ಜೋಡಣೆ, ಆಧಾರ್‍ seeding,ಮತ್ತು NPCI Active ಇರದ ಕಾರಣ ಹಣ ತಡೆಹಿಡಿಯಲಾಗಿರುತ್ತದೆ. ಬ್ಯಾಂಕ್ ಗೆ ಭೇಟಿ ನೀಡಿ ಬದಲಾವಣೆ ಮಾಡಿಸಬಹುದು.
*ರೆಕಾರ್ಡನಲ್ಲಿ 1/02/2019 ರ ನಂತರ ನಿಮ್ಮ ಜಮೀನಿನ ಪಹಣಿಯಲ್ಲಿ ಬದಲಾವಣೆ ಹೊಂದಿದ್ದರೆ ಉದಾ:2019 ರ ಇಚೆಗೆ ಕ್ರಯ, ವಿಭಾಗ, ದಾನ ಮತ್ತು ಹಕ್ಕು ಬದಲಾವಣೆ ಮಾಡಿಸಿದ್ದರೆ. ಅಂತಹ ರೈತರಿಗೆ ಹಣ ಜಮಾ ಆಗುವುದಿಲ್ಲ.

  • ನೋಂದಣಿಯಾದ ಸರ್ವೆ, ನಂಬರನಲ್ಲಿ ಸ್ವಲ್ಪ ಭಾಗ ಮಾರಾಟ ಮಾಡಿ ಇನ್ನೂ ಸ್ವಲ್ಪ ಭಾಗ ನಿಮ್ಮ ಹೆಸರಿಗೆ ಇದ್ದು ಸರ್ವೆ, ನಂಬರ್‍ ಅಥವಾ ಹಿಸ್ಸಾ ಬದಲಾವಣೆ ಆಗಿದ್ದರೆ,ಹಣ ಜಮಾ ಆಗುವುದಿಲ್ಲ.

2.ಫಲಾನುಭವಿಗಳ ಸ್ಟೇಟಸ್ (beneficiary status )ಪರಿಶೀಲಿಸಿದಾಗ UTR No,ಜಮಾ ಆಗಿರುವುದು ಕಾಣುತ್ತದೆ.ಆದರೆ ಖಾತೆಗೆ ಜಮಾ ಆಗಿರುವುದಿಲ್ಲ?
ಕಾರಣ

  • ನೋಂದಣಿಯಾದ ದಾಖಲೆಗಳು ಬದಲಾವಣೆ ಆಗಿರುವುದಕ್ಕೆ ಈ ರೀತಿ ಕಾಣಿಸುತ್ತದೆ.
    *ಬ್ಯಾಂಕ್ ನಲ್ಲಿ NPCI active ಆಗಿರದ ಕಾರಣ.
    *ಮುಖ್ಯವಾಗಿ ನೋಂದಣಿ ತಂತ್ರಾಂಶಗಳಾದ Fruits PM Kisan ನಲ್ಲಿ ನೋಂದಣಿಯಾಗಿ farmer registation (fruits) ಜಮೀನಿನ ಮಾಹಿತಿ ನೋಂದಣಿಯಾಗಿರದಿದ್ದರೆ ಈ ರೀತಿ ಸಮಸ್ಯೆ ಕಾಣಬಹುದು.
    *XML ರಚನೆಯಾಗದಿದ್ದರೆ ಈ ರೀತಿ ಕಾಣುತ್ತದೆ.
  • ನೀವು PM Kisan ಫಲಾನಿಭವಿಗಳು ಆಗಿದ್ದರೆ E-KYC ಕಡ್ಡಾಯವಾಗಿ ಮಾಡಿಕೊಳ್ಳಿ.

ಇದನ್ನೂ ಓದಿ: ಬೆಳೆಸಾಲ ಪಡೆಯಲು ರೈತರ ನೋಂದಣಿ ಸಂಖ್ಯೆ ಪಡೆಯುವ ಸುಲಭ ವಿಧಾನ.

ಹೊಸದಾಗಿ ಅರ್ಜಿ ಸಲ್ಲಿಸಲು ಇಚ್ಚಿಸುವ ರೈತರು ಬೇಕಾದ ದಾಖಲೆಗಳು:


ಅರ್ಜಿ ನಮೂನೆ
ಆಧಾರ ಕಾರ್ಡ
ಬ್ಯಾಂಕ್ ಪಾಸ್ ಬುಕ್
ಜಮೀನಿನ ಪಹಣಿ RTC
ರೇಷನ್ ಜೆರಾಕ್ಸ ಪ್ರತಿ.
ಪೋಟೋ (ಭಾವಚಿತ್ರ)
ಈ ಯೋಜನೆಗೆ ಸಂಭಂದಿಸಿದಂತೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ

ಇತ್ತೀಚಿನ ಸುದ್ದಿಗಳು

Related Articles