Friday, November 22, 2024

2023-24ನೇ ಸಾಲಿನ ಧಾರವಾಡ ಕೃಷಿ ಮೇಳ ,ಈ ವರ್ಷದ ಕೃಷಿಮೇಳದ ವಿಶೇಷತೆಗಳೇನು? ಮಳಿಗೆಗಾಗಿ ಸಂಪರ್ಕಿಸುವುದು ಯಾರನ್ನು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ .

2023-24ನೇ ಸಾಲಿನ ಧಾರವಾಡ ಕೃಷಿ ಮೇಳ ,ಈ ವರ್ಷದ ಕೃಷಿಮೇಳದ ವಿಶೇಷತೆಗಳೇನು? ಮಳಿಗೆಗಾಗಿ ಸಂಪರ್ಕಿಸುವುದು ಯಾರನ್ನು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ .

ಕೃಷಿ ವಿಶ್ವವಿದ್ಯಾಲಯ, ಧಾರವಾಡವು 2023 ರ ಕೃಷಿ ಮೇಳವನ್ನು 9 ರಿಂದ 12 ಸಪ್ಟೆಂಬರ್. 2023ರವರೆಗೆ “ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು” ಎಂಬ ಶೀರ್ಷಿಕೆಯೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ.

ಈ ಮೇಳದಲ್ಲಿ ಅಂದಾಜು 15 ಲಕ್ಷಕ್ಕಿಂತಲೂ ಹೆಚ್ಚು ರೈತರು, ರೈತ ಮಹಿಳೆಯರು, ವಿಸ್ತರಣಾ ಹಾಗೂ ಸ್ವಯಂ ಸೇವಾ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ,

ಕೃಷಿ ಮೇಳ-2023 ರ ಪ್ರಮುಖ ಆಕರ್ಷಣೆಗಳು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023, ಸಾವಯವ ಕೃಷಿ ಬೆಳೆಗಳು/ ಸಿರಿಧಾನ್ಯ ಉತ್ಪಾದನೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ,ಇದರ ಜೊತೆಗೆ ಸಂಶೋಧನೆ ಮಾಡಿದ ವಿವಿಧ ತಳಿಗಳ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿ, ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಕಿಸಾನ್ ಡೋನ್ ಬಳಕೆ, ಬರ ನಿರ್ವಹಣಾ ತಾಂತ್ರಿಕತೆಗಳು, ಒಣ ಬೇಸಾಯ, ಜಲಾನಯನ ಅಭಿವೃದ್ಧಿ, ಮಣ್ಣು, ಆರೋಗ್ಯ, ಜಲಸಾಕ್ಷರತೆ, ಜಲ ಸಂರಕ್ಷಣೆ ತಾಂತ್ರಿಕತೆಗಳು, ಕೃಷಿ ಹಾಗೂ ತೋಟಗಾರಿಕೆ ಹುಟ್ಟುವಳಿಗಳ ರಫ್ತು ಅವಕಾಶಗಳನ್ನು ಬಿಂಬಿಸುವ ಪ್ರದರ್ಶನಗಳು ಹಾಗೂ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಕೃಷಿ ಮೇಳದ ಅಂಗವಾಗಿ ಫಲ-ಪುಷ್ಪ ಮತ್ತು ತರಕಾರಿ ಬೆಳೆಗಳ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ, ಕೃಷಿ ಅರಣ್ಯ ಪದ್ಧತಿಗಳು, ಪರಿಸರ ಸಂರಕ್ಷಣೆ, ಕೃಷಿ ಯಂತ್ರೋಪಕರಣಗಳು, ಯಶಸ್ವಿ ರೈತರೊಂದಿಗೆ ಸಂವಾದ, ಕೃಷಿ ಸಮಾಲೋಚನೆ, ವಿವಿ

ಜಾನುವಾರುಗಳ ಪದರ್ಶನ, ಹುಟ್ಟುವಳಿಗಳ ಮೌಲ್ಯವರ್ಧನೆಗಾಗಿ ಅನುಷ್ಠಾನಗೊಂಡಿರುವ ವಿವಿಧ ಪ್ರಾತ್ಯಕ್ಷಿಕೆಗಳ ವೀಕ್ಷಣೆ ಮತ್ತುಪ್ರದರ್ಶನ, ವಸ್ತ್ರವಿನ್ಯಾಸ, ವಿವಿಧ ಸಂಘ-ಸಂಸ್ಥೆಗಳಿಂದ ಉತ್ಪನ್ನಗಳ ಮಾರಾಟ ಮಾಹಿತಿ, ಇತ್ಯಾದಿ ವಿಶಿಷ್ಟ ಕಾರ್ಯಕ್ರಮಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಘಟಿಸಲಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ B.Sc ಕೃಷಿಯ ಪ್ರಾಮುಖ್ಯತೆ:

ಆದಾಯ ದ್ವಿಗುಣಗೊಳಿಸುವ ಎಂಬ ಕಾರ್ಯಕ್ರಮದಡಿ ವಿಶೇಷ ಸಾಧನೆಗೈದರೈತರೊಂದಿಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಅಲ್ಲದೇ, ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪ್ರತಿ ಜಿಲ್ಲೆಯ ಶ್ರೇಷ್ಠ

ಕೃಷಿಕ ಹಾಗೂ ಶ್ರೇಷ್ಟ ಕೃಷಿ ಮಹಿಳೆಯರನ್ನು ಆಯ್ಕೆ ಮಾಡಿ ಪಶಸ್ತಿ ನೀಡಿ ಗೌರವಿಸುತ್ತಿರುವುದು ಎಲ್ಲರ ಪ್ರಶಂಸೆಗೆ ಪಾತ್ರವ ವಿಷಯವಾಗಿದೆ.

ಇದರೊಂದಿಗೆ ವಿವಿಧ ಅಭಿವೃದ್ಧಿ ಇಲಾಖೆಗಳು, ಬೀಜ, ಗೊಬ್ಬರ, ಕೀಟನಾಶಕ: ಉತ್ಪಾದಿಸುವ ಘಟಕಗಳು ಅನೇಕ ಸರಕಾರಿ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು 450 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವದರಿಂದ ರೈತರಿಗೆ ಮಾಹಿತಿ ಹಾಗೂ ಕೃಷಿ ಪರಿಕರ ಲಭ್ಯವಾಗಲಿವೆ.

ಕಾರಣ, ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಧಿಕಾರಿಗಳಿಗೆ ಕೃಷಿಮೇಳದಲ್ಲಿ ಭಾಗವಹಿಸಲು ಸೂಕ್ತ ನಿರ್ದ ನೀಡುವುದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ರೈತ ಮಹಿಳೆಯರು, ಗ್ರಾಮೀಣ ಯುವಕರು ಹಾಗೂ ವಿಸ್ತರಣಾ ಕಾರ್ಯಕತಸಕ್ರೀಯವಾಗಿ ಭಾಗವಹಿಸಲು ಸೂಕ್ತ ವ್ಯವಸ್ಥೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಲಾಗಿದೆ.

ದಯವಿಟ್ಟು ತಾವು ಈ ಕೃಷಿಮೇಳದಲ್ಲಿ ಭಾಗವಹಿಸುವುದಲ್ಲದೇ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿಯ ಲಭ್ಯವಿರುವ ಧನ ಸಹಾಯ ಸೌಲಭ್ಯವನ್ನು ವಿಸ್ತರಿಸಿ ರೈತರಿಗಾಗಿಯೇ ಏರ್ಪಡಿಸಿರುವ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ಇದನ್ನೂ ಓದಿ: ಕೃಷಿಲೇಖನ ಪ್ರಶಸ್ತಿಯನ್ನು 2023 ನೇ ಸಾಲಿನ ಕೃಷಿ ಮೇಳದಲ್ಲಿ ನೀಡುವ ಸಂಬಂಧ ಲೇಖನಗಳನ್ನು ಆಹ್ವಾನಿಸುವ ಕುರಿತು..

ಮಳಿಗೆಗಳನ್ನು ಕಾಯ್ದಿರಿಸಲು (0836-2214468, 8277478507), ಅಧ್ಯಕ್ಷರು, ವಸ್ತು ಪ್ರದರ್ಶನ ಸ ಕೃಷಿ ಮೇಳ-2023 ಕೃಷಿವಿ, ಧಾರವಾಡ ಇವರನ್ನು ಸಂಪರ್ಕಿಸಿರಿ.

ವಿಶೇಷ ವಿನಂತಿ: ಈ ಪತ್ರದೊಂದಿಗೆ ಕಳುಹಿಸಿರುವ ಭಿತ್ತಿ ಪತ್ರಗಳನ್ನು ಪ್ರಮುಖ ಸ್ಥಳಗಳಲ್ಲಿ ಅಂಟಿಸುವ ವ್ಯವಸ್ಥೆ ಮಾಡಿ ವ್ಯಾಪ್ತಿಯಲ್ಲಿ ಬರುವ ಕಚೇರಿಗಳ ಮೂಲಕ ವ್ಯಾಪಕ ಪ್ರಚಾರಕ್ಕಾಗಿ ಬಳಸಿಕೊಳ್ಳಬೇಕೆಂದು ಕೋರಿದೆ.

ಹೇಚ್ಚಿನ ಮಾಹಿತಿಗಾಗಿ ಡಾ. ಎಸ್. ಎನ್.ಜಾಧವ್ ಸರ್‍ (ಕೀಟಶಾಸ್ತ್ರ) ವಿಸ್ತರಣಾ ನೀರ್ದೆಶನಾಲಯ ,ಅಧ್ಯಕ್ಷರು, ಪ್ರಚಾರ ಸಮಿತಿ ಕೃಷಿಮೇಳ ಧಾರವಾಡ ಇವರನ್ನು ಸಂಪರ್ಕಿಸಬಹುದು. ಪೋನ್ ನಂಬರ್‍ -9845590817.ಕಚೇರಿ ಸಂಖ್ಯೆ-0836-2214290

ಇತ್ತೀಚಿನ ಸುದ್ದಿಗಳು

Related Articles