ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ( ಸಾಮಾನ್ಯ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ)ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ. ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ 2023-24 ನೇ ಸಾಲಿನ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಪೋಷಕರ ಆದಾಯ ಮಿತಿ ಏನು?
ಆತ್ಮೀಯ ವಿದ್ಯಾರ್ಥಿಗಳೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ. ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದವರಿಗೆ ಈ ಕೆಳಗೆ ಕಾಣಿಸುವ ರೀತಿಯಲ್ಲಿ ಆದಾಯದ ಮಿತಿ ನಿಗಧಿಪಡಿಸಲಾಗಿದೆ.
ಪ್ರವರ್ಗ-1, ಎಸ್,ಸಿ ಮತ್ತು ಎಸ್ ,ಟಿ ಆದಾಯ -ರೂ 2.50 ಲಕ್ಷ.
ಪ್ರವರ್ಗ-2ಎ,2ಬಿ, 3ಎ,3ಬಿ ಇತರೆ ಹಿಂದುಳಿದ ವರ್ಗ ಹಾಗೂ ಇತರೆ-ರೂ.1 ಲಕ್ಷ.
ಅರ್ಜಿ ಸಲ್ಲಿಸುವ ಬಗ್ಗೆ:
ಆತ್ಮೀಯ ವಿದ್ಯಾರ್ಥಿಗಳೇ ಅಜಿ ಸಲ್ಲಿಸಲು ವಿದ್ಯಾರ್ಥಿಗಳು https://shp.karnataka.gov.in.ಅನ್ನು ಸಂಪರ್ಕಿಸಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-08-2023 ಅಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:https://bcwd.karnataka.gov.in/ ಈ ಒಂದು ವೆಬ್ಸೈಟನಲ್ಲಿ ನೀಡಲಾಗಿರುತ್ತದೆ.
ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಯಾದಲ್ಲಿ https:/bcwd.hostels@karnataka.gov.in ಇ ಮೇಲ್ ಮುಖಾಂತರ ಅಥವಾ ಜಿಲ್ಲಾ/ತಾಲ್ಲೂಕ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ದಾಖಲೆಗಳೊಂದಿಗೆ ಸಂಪರ್ಕಿಸಬಹುದಾಗಿರುತ್ತದೆ. ಸಂಪರ್ಕಿಸಬಹುದಾದ ಸಹಾಯವಾಣಿ ಸಂಖ್ಯೆ- 8050770005.
2023-24 ನೇ ಸಾಲಿನ ಮೆಟ್ರಿಕ್-ನಂತರ ವಿದ್ಯಾರ್ಥಿನಿಲಯಗಳಿಗೆ ( ಸಾಮಾನ್ಯ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ) ಪ್ರವೇಶ ಕಲ್ಪಿಸಲು ನಿಗದಿಪಡಿಸಿರುವ ಕಾಲುಕ್ರಮಣಿಕೆ:
ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 26-07-2023.
ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-08-2023
ಆನ್ ಲೈನ್ ಕೌನ್ಸಲಿಂಗ್ ಮೂಲಕ ಆಯ್ಕೆಯಾದ ಹೊಸ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯ ದಿನಾಂಕ : 21-08-2023
ಆಯ್ಕೆಯಾದ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಪಡೆಯಲು ನಿಗಧಿಪಡಿಸಿದ ಅಂತಿಮ ದಿನಾಂಕ: 25-08-2023.
ವಿಶೇಷ ಸೂಚನೆ: ವಿದ್ಯಾರ್ಥಿನಿಲಯಗಳು ಇರುವ ಸ್ಥಳಗಳ ಕಾಲೇಜುಗಳಿಂದ 5 ಕಿ.ಮೀ.ಗಿಂತ ದೂರದ ಸ್ಥಳಗಳಿಂದ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುವುದು. ಸ್ಥಳೀಯ ವಿದ್ಯಾರ್ಥಿಗಳು ಪ್ರವೇಶಕ್ಕೆ ಅನರ್ಹರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಲ್ಲಿ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತದೆ.
1.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.1600/-ರ ವೆಚ್ಚದಲ್ಲಿ 10 ತಿಂಗಳ ಅವಧಿಗೆ ಆಹಾರದ ವೆಚ್ಚ ನೀಡಿಕೆ.
2.ಉಚಿತ ವಸತಿ ಸೌಕರ್ಯ.
3.ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ.1000ರ ವೆಚ್ಚದಲ್ಲಿ 10 ತಿಂಗಳ ಅವಧಿಗೆ ಸಾದಿಲ್ವಾರು ವೆಚ್ಚ ಭರಿಸುವುದು.
4.ಮಂಜೂರಾತಿ ಸಂಖ್ಯೆ 50 ಇರುವ ನಿಲಯಕ್ಕೆ ವರ್ಷಕ್ಕೆ ರೂ. 600 ಹಾಗೂ ಮಂಜೂರಾತಿ ಸಂಖ್ಯೆ 50ಕ್ಕಿಂತ ಹೆಚ್ಚು
ಇರುವ ನಿಲಯಕ್ಕೆ ರೂ. 1000ರಂತೆ ಪಾತ್ರೆಗಳಿಗೆ ಕಲಾಯಿ ವೆಚ್ಚ ಭರಿಸುವುದು.
5.ಶೌಚಾಲಯಗಳ ಸ್ವಚ್ಚತೆಗಾಗಿ ಪ್ರತಿ ನಿಲಯಕ್ಕೆ ವಾರ್ಷಿಕ ರೂ. 1250/- ವೆಚ್ಚ ಮಾಡಲಾಗುವುದು.
6.ಪ್ರತಿ ನಿಲಯಕ್ಕೆ 2 ದಿನ ಪತ್ರಿಕೆಗಳ ಪೂರೈಕೆಗಾಗಿ (ಒಂದು ಆಂಗ್ಲ ಭಾಷೆ ಹಾಗೂ ಒಂದು ಕನ್ನಡ ದಿನಪತ್ರಿಕೆಗಳು
ವಾಸ್ತವಿಕ ವೆಚ್ಚದಲ್ಲಿ.
7.ಕಟ್ಟಡಗಳ ಬಾಡಿಗೆ ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ನಂತರ ಆಡಳಿತಾತ್ಮಕ ಅನುಮೋದನೆ ನೀಡಿದ
ದರದಲ್ಲಿ ಪಾವತಿಸುವುದು.
ಅ) ಸ್ನಾತಕೋತ್ತರ / ವೃತ್ತಿಪರ ವಿದ್ಯಾರ್ಥಿನಿಲಯಗಳ ಗ್ರಂಥಾಲಯಕ್ಕಾಗಿ ಪ್ರಥಮ ಬಾರಿಗೆ ರೂ.1.25 ಲಕ್ಷ,
ನಂತರದ ಪ್ರತಿ ವರ್ಷಕ್ಕೆ ರೂ.30,000/-
ಆ) ಇತರೆ ವಿದ್ಯಾರ್ಥಿನಿಲಯಗಳಿಗೆ ಪ್ರಥಮ ಬಾರಿಗೆ ರೂ.1.00 ಲಕ್ಷ, ನಂತರದ ಪ್ರತಿ ವರ್ಷಕ್ಕೆ ರೂ.20,000/-
9.ಕ್ರೀಡಾ ಸಾಮಗ್ರಿಗಳು ಪ್ರತಿ ವರ್ಷಕ್ಕೊಮ್ಮೆ, ಪ್ರತಿ ನಿಲಯಕ್ಕೆ, ಒಂದು ಸೆಟ್ ವಾಸ್ತವ ದರದಲ್ಲಿ.
- ಜಿಲ್ಲೆವಾರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಮಾಹಿತಿ:ಇಲ್ಲಿ ಓತ್ತಿ http://164.100.133.164:81/premetric/Districtwise_Report_postmetric.aspx