Friday, September 20, 2024

ಗೃಹಲಕ್ಮೀ ಮತ್ತು ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಆಹಾರ ಇಲಾಖೆ ಅತೀ ಅವಶ್ಯಕ ಮಾಹಿತಿ ಪ್ರಕಟಣೆ:ಈ ಕೆಲಸ ಮಾಡದೇ ಇಲ್ಲದವರು ಅಗಸ್ಟ ತಿಂಗಳಲ್ಲಿ ಹಣ ಪಡೆಯಲು ಸಾಧ್ಯವಿಲ್ಲ!!

ಆತ್ಮೀಯರೇ ಮನೆಯ ಯಜಮಾನಿ ಇಲ್ಲದ್ದಿದ್ದಾಗ ಗೃಹ ಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಲಾಭ ಹೇಗೇ ಪಡೆಯುವುದು? ಮತ್ತು ಒಂದು ವೇಳೆ ಹೊಸದಾಗಿ ಮದುವೆಯಾದ ಕುಟುಂಬಗಳ ಈ ಯೋಜನೆ ಲಾಭ ಪಡೆಯಲು ಏನು ಮಾಡಬೇಕು? ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಹೊಂದಿ ಹೆಚ್ಚನ ಸದಸ್ಯರ ಹೊಂದಿದ್ದರೆ ಲಾಭ ಸಿಗುವುದೇ? ಈ ಎಲ್ಲಾ ಸಮಸ್ಯೆಗೆ ಪರಿಹಾರಕ್ಕೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಆತ್ಮೀಯರಿಗೂ ಈ ಬಗ್ಗೆ ಮಾಹಿತಿಯನ್ನು ನೀಡಿ.

ಹೌದು ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ( Gruha Lakshmi Scheme ) ಸೇರಿದಂತೆ, ಅನ್ನಭಾಗ್ಯ ಯೋಜನೆಯಡಿ ( Anna Bhagya Scheme ) ಹೆಚ್ಚುವರಿ 5 ಕೆಜಿ ಅಕ್ಕಿ ಹಣವನ್ನು ಪಡೆಯಲು ಕುಟುಂಬದ ಯಜಮಾನಿ ಮನೆ ಒಡತಿಯ ಎಂಬುದಾಗಿ ರೇಷನ್ ಕಾರ್ಡ್ ನಲ್ಲಿ ( Ration Card ) ಪಡಿತರ ಚೀಟಿಯಲ್ಲಿ ಗುರುತು ಇರಬೇಕಾಗಿರುತ್ತದೆ.


ಆದ್ರೇ ರಾಜ್ಯದ ಅನೇಕ ಪಡಿತರ ಕುಟುಂಬದ ಕಾರ್ಡ್ ಗಳಲ್ಲಿ ಹೀಗೆ ಇರದೇ ಇರಬಹುದು? ಕೆಲವರ ಕಾರ್ಡ್ ದಾರರ ಮನೆ ಯಜಮಾನಿ ಸಾವನ್ನಪ್ಪಿರೋದು ಇದೆ. ಹಾಗಾದ್ರೇ ಇಂತಹ ಸಂದರ್ಭದಲ್ಲಿ ಯಾರಿಗೆ ಗೃಹಲಕ್ಷ್ಮಿ ಯೋಜನೆ ಹಣ ಸಿಗಲಿದೆ ಎನ್ನುವ ಬಗ್ಗೆ ಗೊಂದಲ ನಮ್ಮ ಜನರಲ್ಲಿ ಇದೆ. ಆಗಿದ್ದರೆ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.

ಆತ್ಮೀಯರೇ ರಾಜ್ಯ ಸರ್ಕಾರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಪಡಿತರ ಚೀಟಿಗಳಲ್ಲಿ ಮರಣ ಹೊಂದಿದವರ ಹೆಸರನ್ನು ತೆಗೆದು ಹಾಕಲು, ಕುಟುಂಬದ ಯಜಮಾನರ ಹೆಸರನ್ನು ಬದಲಾವಣೆ ಮಾಡಲು, ನ್ಯಾಯಬೆಲೆ ಅಂಗಡಿಯಲ್ಲಿ ಅವಕಾಶವನ್ನು ನಿನ್ನೆಯಿಂದ ಮಾಡಿಕೊಡಲಾಗಿದೆ.

ರಾಜ್ಯದ ಜನರು ತಮ್ಮ ವ್ಯಾಪ್ತಿಯಲ್ಲಿನ ನ್ಯಾಯಬೆಲೆ ಅಂಗಡಿಗಳಿಗೆ ಅಂದರೆ ನೀವು ಪ್ರತಿ ತಿಂಗಳು ರೇಷನ್ ಪಡೆಯುವ ಕೇಂದ್ರಕ್ಕೆ ಹೋಗಿ ರೇಷನ್ ಕಾರ್ಡ್ ನಲ್ಲಿ ಮೃತ ಕುಟುಂಬದ ಹೆಸರನ್ನು ಕಾರ್ಡ ನಿಂದ ಹೊರ ತೆಗೆದು ಹಾಲಿ (ಸದ್ಯ ಇರುವ) ಕಾರ್ಡ್ ನಲ್ಲಿ ಇರುವಂತ ಸದಸ್ಯರೊಬ್ಬರನ್ನು ಮುಖ್ಯಸ್ಥರನ್ನಾಗಿ ಬದಲಾವಣೆ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: ಗೃಹ ಲಕ್ಷ್ಮೀ ಯೋಜನೆಯ ಗೊಂದಲ ಇದೆಯೇ? ಅರ್ಹರು ಯಾರು? ಯಾವಾಗ ಅರ್ಜಿ ಸಲ್ಲಿಕೆ? ಸರ್ಕಾರದ ನಿಯಮಗಳೇನು ? ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ …

ರೇಷನ್ ಕಾರ್ಡ್ ಗೆ (Ration card) ಹೊಸ ಕುಟುಂಬ ಸದಸ್ಯರ ಸೇರ್ಪಡೆಗೆ ಬೇಕಾಗುವ ದಾಖಲೆಗಳೇನು ?

New Ration card Required Documents?:

  1. ರೇಷನ್ ಕಾರ್ಡ್ಗೆ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಲು ಕುಟುಂಬದ ಯಜಮಾನರ ಬಳಿ ರೇಷನ್ ಕಾರ್ಡ್ ಹಾಗೂ ಅದರ ಜೆರಾಕ್ಸ್ ಪ್ರತಿಬೇಕು.
  2. ಮಗುವಿನ ಅಥವಾ ಕುಟುಂಬದ ಹೊಸ ಸದಸ್ಯರ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್
  3. ಮಗುವಾಗಿದಲ್ಲಿ ಪೋಷಕರ ಆಧಾರ್ ಕಾರ್ಡ್
  4. ಹೊಸ ವಿವಾಹಿತ ಮಹಿಳೆಯಾಗಿದ್ದರೆ ಆಧಾರ್ ಕಾರ್ಡ್, ವಿವಾಹ ಪ್ರಮಾಣಪತ್ರ, ತನ್ನ ಪೋಷಕರ ರೇಷನ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.

ಈ ಎಲ್ಲಾ ದಾಖಲೆಗಳು ಇದ್ದರೆ ನೀವು ಆನ್ ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದು.

How to submit a New application? ಹೊಸ ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ರೇಷನ್ ಕಾರ್ಡ್ ನಲ್ಲಿ ಹೊಸ ಕುಟುಂಬ ಸದಸ್ಯರ ಹೆಸರು ಸೇರ್ಪಡೆ ಮಾಡಲು ಮಾಹಿತಿಯನ್ನು ಹಂತ ಹಂತವಾಗಿ ನೀಡಲಾಗಿದೆ?

ಹಂತ 1: ಮೊದಲು ಇಲ್ಲಿ ಕಾಣಿಸಿರುವ Website ನಲ್ಲಿ

kar.nic.in ಈ ಅಧಿಕೃತ ವೆಬ್ ಸೈಟ್ ತಾಣಕ್ಕೆ ಭೇಟಿ ನೀಡಬೇಕು.

ಹಂತ 2:ಈ ಜಾಲತಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀವು ಮುಖಪುಟದಲ್ಲಿನ ಇ-ಸೇವೆಗಳು ಎಂಬಲ್ಲಿ ಕ್ಲಿಕ್ ಮಾಡಿ.

ಹಂತ 3 :ಹೋಮ್‌ ಪೇಜ್‌ನಲ್ಲಿರುವ ಹೊಸ ಸದಸ್ಯರನ್ನು ಸೇರ್ಪಡೆ ಮಾಡುವ ಆಯ್ಕೆ ಒತ್ತಿ ಕ್ಲಿಕ್ ಮಾಡಿ.

ಹೊಸ ಫಾರ್ಮ್ ತೆರೆಯಲಿದೆ,

ಹಂತ 4: ಹೊಸ ಕುಟುಂಬ ಸದಸ್ಯರ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ
https://ahara.kar.nic.in/Home/EServices ತಾಣಕ್ಕೂ ಡೈರೆಕ್ಟ ಆಗಿ ಕ್ಲಿಕ್ ಮಾಡಬಹುದಾಗಿದೆ.

ಹಂತ 5: ಜಾಲತಾಣದಲ್ಲಿ ಕ್ಲಿಕ್ ಮಾಡಿದ ನಂತ್ರ, ನೀವು ಇ-ಪಡಿತರ ಚೀಟಿ ಆಯ್ಕೆ. ಆ ಬಳಿಕ ಕೆಳಗಡೆ ಸರಿಸಿದರೆ ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸೋ ಲಿಂಕ್ ಸಿಗಲಿದೆ.
ಅಲ್ಲಿ ಕ್ಲಿಕ್ ಮಾಡಿ
ಈ ಬಳಿಕ ಅರ್ಜಿಯ ಜೊತೆಗೆ ಕೇಳುವಂತ ದಾಖಲೆಗಳ ಸಾಫ್ಟ್ ಕಾಫಿಗಳನ್ನು ಅಪ್ ಲೋಡ್ ಮಾಡಿ, ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆಗಾಗಿ ಅರ್ಜಿಯನ್ನು ಸಲ್ಲಿಸಿ.

ವಿಶೇಷ ಮಾಹಿತಿ: ಒಂದು ವೇಳೆ ಕುಟುಂಬದ ಯಜಮಾನಿ ಮೃತಪಟ್ಟರೇ ಯಾರಿಗೆ ಸಿಗಲಿದೆ ಗೃಹಲಕ್ಷ್ಮಿ ಹಣ.?

ಪಡಿತರ ಕಾರ್ಡ್ ನಲ್ಲಿ ಇರುವಂತ ಮನೆಯ ಯಜಮಾನಿ ಒಂದು ವೇಳೆ ಮೃತಪಟ್ಟರೇ ಅಂತಹವರ ಹೆಸರನ್ನು ಕಾರ್ಡ್ ನಿಂದ ತೆಗೆದು ಹಾಕೋದಕ್ಕೆ ತಿದ್ದುಪಡಿಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ನೀವು ಮನೆಯ ಯಜಮಾನಿ ಮಹಿಳೆ ಯಾರು ಎಂಬುದಾಗಿ ಬದಲಾವಣೆ ಮಾಡುತ್ತೀರೋ ಅವರಿಗೆ ಗೃಹ ಲಕ್ಷ್ಮಿ ಯೋಜನೆಯ 2000 ರೂ ಹಣ ಸಿಗಲಿದೆ. ಹೀಗಾಗಿ ಕಾರ್ಡ್ ನಲ್ಲಿ ತಿದ್ದುಪಡಿ ಇದ್ದರೇ, ಬೇಗ ಸರಿ ಮಾಡಿಕೊಂಡು, ಆಗಸ್ಟ್ 17ರಂದು ಚಾಲನಗೊಳ್ಳಲಿರುವಂತ ಗೃಹಲಕ್ಷ್ಮಿ ಯೋಜನೆಯಡಿ 2000 ರೂ ಹಣ ಪಡೆಯಿರಿ.

E-KYC ಮಾಡಿಸುವುದು ಕಡ್ಡಾಯ?

ಇದನ್ನೂ ಓದಿ: ಗೃಹಜ್ಯೋತಿ ಯೋಜನೆಯ ಸಂಬಂಧ ಪಟ್ಟಂತೆ ಇಂಧನ ಇಲಾಖೆಯಿಂದ ನೂತನ ಪ್ರಕಟಣೆ:

ಅಂತ್ಯೋದಯ ಅನ್ನ ಯೋಜನೆ BPL: ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯದ ಬದಲಿಗೆ ಪ್ರತಿ ಕೆ.ಜಿ. ಗೆ ರೂ.34 ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಒಡತಿಗೆ ಅಂದರೆ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ.
ಆದರೆ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಹಾಗೂ ನಗದು ವರ್ಗಾವಣೆ ಸ್ಥಗಿತಗೊಳ್ಳಲಿದೆ.

ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದಲ್ಲಿ 3 ಅಥವಾ 3 ಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬವು ಈಗಾಗಲೇ ಪ್ರತಿ ತಿಂಗಳು 35 ಕೆ.ಜಿ. ಆಹಾರ ಧಾನ್ಯವನ್ನು ಪಡೆಯುತ್ತಿರುವುದರಿಂದ ಅಂತಹ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಕುಟುಂಬಗಳಿಗೆ ನಗದು ವರ್ಗಾವಣೆ ಸೌಲಭ್ಯವನ್ನು ನೀಡಲಾಗುವುದಿಲ್ಲ.

ಆದರೆ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಕುಟುಂಬದಲ್ಲಿ 4 ಸದಸ್ಯರ ಮೇಲ್ಪಟ್ಟವರಿಗೆ ಈ ಸೌಲಭ್ಯ ಅನ್ವಯಿಸುತ್ತದೆ.

ಕಳೆದ 3 ತಿಂಗಳುಗಳಲ್ಲಿ ಪಡಿತರ ಆಹಾರ ಧಾನ್ಯವನ್ನು ಪಡೆದುಕೊಂಡಿರುವ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತವೆ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳಲ್ಲಿನ ಮುಖ್ಯಸ್ಥರು ಬ್ಯಾಂಕ್ ಖಾತೆಗಳನ್ನು ತೆರೆಯದೇ ಇರುವ, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೇ ಇರುವ ಮತ್ತ ಆಧಾರ್ ಸಂಖ್ಯೆ ತಪ್ಪಾಗಿ ಲಿಂಕ್ ಆಗಿರುವ ಫಲಾನುಭವಿ ಕುಟುಂಬಗಳ
ಪಟ್ಟಿಗಳು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಇದರ ಮಾಹಿತಿ ದೊರೆಯುವುದು.

ಪಡಿತರ ಚೀಟಿದಾರರು ತಮ್ಮ ನ್ಯಾಯಬೆಲೆ ಅಂಗಡಿಯಲ್ಲಿರುವ ಪಟ್ಟಿಯನ್ನುಪರಿಶೀಲಿಸಿ ಕಾರ್ಡ ನಲ್ಲಿರುವ ಕುಟುಂಬದ ಮುಖ್ಯಸ್ಥರ ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿಲ್ಲದಿದ್ದರೆ, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡದಿದ್ದರೆ, ಬ್ಯಾಂಕ್ ಖಾತೆಯ ಮಾಹಿತಿಯು ಇದುವರೆಗೆ ಲಭ್ಯವಿಲ್ಲದಿದ್ದಲ್ಲಿ, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿಸಿ, ನಿಷ್ಕ್ರಿಯ ಬ್ಯಾಂಕ್ ಖಾತೆಯನ್ನು ಪುನರ್ಜೀವನಗೊಳಿಸಿದ ನಂತರ ಅಂತಹ ಪಡಿತರ ಚೀಟಿ ಕುಟುಂಬದ ಮುಖ್ಯಸ್ಥರ ಖಾತೆಗೆ ನಗದು ವರ್ಗಾವಣೆ ಮಾಡಲಾಗುವುದು ಎಂದು ಇಲಾಖೆ ಮಾಹಿತಿಯನ್ನು ನೀಡಿರುತ್ತದೆ.

ಜುಲೈ ತಿಂಗಳ 20 ನೇ ತಾರೀಖಿನೊಳಗೆ ತಮ್ಮ ಸಕ್ರಿಯ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡದ ಪಡಿತರ ಕುಟುಂಬಗಳಿಗೆ ಆಗಸ್ಟ್ ತಿಂಗಳಿನಲ್ಲಿ ನಗದು ವರ್ಗಾವಣೆ ಸ್ಥಗಿತಗೊಳ್ಳಲಿದೆ.

ಇ-ಕೆವೈಸಿ ಯನ್ನು ಮಾಡಿಸದೇ ಇರುವ ಪಡಿತರ ಚೀಟಿದಾರರಿಗೆ ಆಗಸ್ಟ್ ತಿಂಗಳಿನಿಂದ ಆಹಾರ ಧಾನ್ಯ ಹಾಗೂ ನಗದು ವರ್ಗಾವಣೆಯನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಲಾಗುವುದು.ಬಯೋಮೆಟ್ರಿಕ್ ಪರಿಶೀಲನೆ ಬದಲಿಗೆ ಮೊಬೈಲ್ ಓಟಿಪಿ ಮುಖಾಂತರ ಆಹಾರ ಧಾನ್ಯವನ್ನು ಪಡೆಯುತ್ತಿರುವ ವ್ಯವಸ್ಥೆಯನ್ನು ಮುಂದಿನ 2 ತಿಂಗಳ ಒಳಗಾಗಿ ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿಗಳು

Related Articles