ಅಡಿಕೆ ಕರ್ನಾಟಕ ರಾಜ್ಯದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈಗಿರುವಾಗ ಅಡಿಕೆಯನ್ನು ರಾಜ್ಯದ ಕರಾವಳಿ, ಘಟ್ಟ ಪ್ರದೇಶ ಮತ್ತು ಮೈದಾನ ಪ್ರದೇಶಗಳಾದ ತುಮಕೂರು,ಚಿತ್ರದುರ್ಗ,ದಾವಣಗೆರೆ, ಇನ್ನೂ ಹಲವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ.
ಜೂನ್‌ನಲ್ಲಿ ಆರಂಭವಾಗಬೇಕಿದ್ದ ಈ ಸಾಲಿನ ಮುಂಗಾರು ಮಳೆಯು ಜುಲೈನಲ್ಲಿ ಚುರುಕಾಗಿದ್ದು . ಕರಾವಳಿ, ಮಲೆನಾಡು ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಕೊಳೆ ರೋಗ ಬಾಧಿಸುವ ಸಾಧ್ಯತೆ ಇದೆ.
Symptoms of disease: ರೋಗದ ಲಕ್ಷಣಗಳು :
ಅಡಿಕೆ ಗೊಂಚಲುಗಳ ಕಾಯಿಗಳ ಮೇಲೆ ಕಂದು ಬಣ್ಣದ ಶೀಲೀಂದ್ರದ ಬೆಳವಣಿಗೆ ಕಂಡು ಬಂದು ಕಾಯಿಗಳು ಕೊಳೆಯಲು ಪ್ರಾರಂಬಿಸಿ ಕಾಯಿಗಳು ಉದುರುತ್ತವೆ. ಗೊಂಚಲು ಬೋಳು ಬೋಳಾಗಿ ಕಪ್ಪಾಗಿ ಕಾಣುತ್ತವೆ.ಗಿಡದ ಬೆಳೆವಣಿಗೆ ಕ್ರಮೇಣವಾಗಿ ಕುಂಠಿತಗೊಂಡು ಇಳುವರಿಯಲ್ಲಿ ಹೆಚ್ಚಿನ ಹಾನಿ ಕಂಡು ಬರುತ್ತದೆ. ಜೂನ್ ನಿಂದ ಸೆಪ್ಟೆಂಬರ್ ತಿಂಗಳುವರೆಗೆ ರೋಗಬಾದೆ ಹೆಚ್ಚಾಗಿರುತ್ತದೆ. ಸುಳಿ ಕೂಡಾ ಕೋಳೆಯುವುದು ಕಂಡುಬರುತ್ತದೆ.
Management measures of blight disease: ನಿರ್ವಹಣಾ ಕ್ರಮಗಳು:
- ಕೆಳಗೆ ಬಿದ್ದಿರುವ ರೋಗ ಪೀಡಿತ ಕಾಯಿ ಹಾಗೂ ಒಣಗಿದ ಹಿಂಗಾರುಗಳನ್ನು ಆರಿಸಿ ತೆಗೆದು ಸುಡುವುದು ಅಥವಾ ಗುಂಡಿಗಳಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು,
- ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಿಸಿಗಾಲುವ ಚೊಕಾ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವುದು,
- ಅಡಿಕೆ ಕೊಯ್ಲಿನ ಸಮಯದಲ್ಲಿ ಒಣಗಿಸಿದ ರೋಗ ಪೀಡಿತ ಹಿಂಗಾರುವನ್ನು ಕಡ್ಡಾಯವಾಗಿ ತೆಗೆಯುವುದು,
ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರಂಬೆಗಳನ್ನು ಕತ್ತರಿಸಿ ತೆಗೆಯುವುದು,
- ತೋಟದಲ್ಲಿ ಕೀಟ ನಿಯಂತ್ರಣಕ್ಕಾಗಿ ಅಲ್ಲಲ್ಲಿ , ಅಡಿಕೆ ಸಿಪ್ಪೆ, ಭತ್ತದ ಹೊಟ್ಟು ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ಬಳಸಿ
ಹೊಗೆ ಹಾಕುವುದು, ( ಎಕರೆಗೆ 3-4 ಕಡೆ ಈ ರೀತಿ ಮಾಡುವುದು)
ರೋಗ ಪೀಡಿತ ಮರಗಳಿಗೆ ಜೂನ್ ಹಾಗೂ ಆಗಸ್ಟ್ -ಸೆಪ್ಟೆಂಬರ್ ಅವಧಿಯಲ್ಲಿ, ಶೇ.1ರ ಬೋರ್ಡೊ ದ್ರಾವಣ ಅಥವಾ ರ್ಶ. 0.2 ರ ಮೆಟಿಕಾಲ್ ಎ ಝಡ್ (2 ಗ್ರಾಂ, ಶ್ರೀ ನೀರಿನಲ್ಲಿ ಕರಗಿಸಿ) ಅಥವಾ ತಾಮ್ರದ ಆಕ್ಸಿ ಕ್ಲೋರೆಡ್ (3 ಗ್ರಾಂ, ನೀರಿನಲ್ಲಿ ಕರಗಿಸಿ) ದಿಂದ ಗೊನೆಗಳಿಗೆ ಹಾಗೂ ಎಲೆ ತೊಟ್ಟು, ಹೊಡೆ ಭಾಗ ಮತ್ತು, ಸುಳಿ ಭಾಗಗಳು ಚೆನ್ನಾಗಿ ನೆನೆಯುವಂತೆ ಸೂಕ್ತ ಆಂಟಿನೊಂದಿಗೆ (ರಾಳ) ಸಿಂಪರಣೆ ಮಾಡಿ,
ಮುಂಜಾಗ್ರತಾ ಕ್ರಮವಾಗಿ ಶಿರಕೋಳ ರೋಗ ಕಂಡು ಬಂದಲಿ., ಶೇ. 0.2 ರ ತಾಮ್ರದ ಆಕ್ಸಿಕೊರಡ್ ಮತ್ತು ಶೇ 0.05 ರ ಸ್ಪ್ರೇಪ್ಟೋಸೈಕ್ಲಿನ್ ದ್ರಾವಣದಿಂದ ಶಿರಭಾಗಗಳನ್ನು (ಚಂಡೆಭಾಗ) ನೆನೆಸುವುದು.
ಮಣು ಪರೀಕ್ಷೆ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಕೃಷಿಸುಣ, ಬಳಸಿ 21 ದಿನಗಳ ನಂತರ ಸಾವಯವ ಗೊಬ್ಬರ (ಪ್ರತಿ
ಮರಕ್ಕೆ 10-12 ಕಿ.ಗ್ರಾಂ) ಮತ್ತು ರಾಸಾಯನಿಕ ಗೊಬ್ಬರಗಳನ್ನು (ಪ್ರತಿ ಮರಕ್ಕೆ 100:40:140 ಗ್ರಾಂ (NPK)ಸಾ. ರಂ .ಪೂ)
ಸೆಪ್ಟೆಂಬರ್ ಅಕ್ಟೋಬರ್ ಅವಧಿಯಲ್ಲಿ, ಮಣ್ಣಿಗೆ ಸೇರಿಸಬೇಕು. ಈಗಾಗಲೇ ಶಿಫಾರಸು ಮಾಡಿದ ಶೇ. 40 ರಷ್ಟು
ಗೊಬ್ಬರಗಳನ್ನು ಮುಂಗಾರಿನ ಮೊದಲು ಕೊಟ್ಟಿದ್ದರೆ, ಈಗ ಉಳಿದ ಶೇ. 60 ಭಾಗವನ್ನು ಕೊಟ್ಟರೆ ಸಾಕಾಗುತ್ತದೆ.
ಕಾಳುಮೆಣಸು ಮತ್ತು ಅಡಿಕೆ ಮಿಶ್ರ, ತೋಟಗಳಲ್ಲಿ ಮುಂಗಾರಿನ ಪೂರ್ವ ಅವಧಿಯಲ್ಲಿ ಬೀರುವಲಯವನ್ನು ಶೇ. 0.3 ರ ಪೊಟಾಸಿಯು ಪಾಸೋನಟ್ /ತಾಮ್ರದ ಆಕ್ಸಿಕ್ಲೋರಡ್ ದ್ರಾವಣದಿಂದ ನೆನಸುವದು, ಪ್ರತಿ ಮರಕ: ಸುಮಾರು 5 ಲೀ ದ್ರಾವಣ ಬೇಕಾಗುತ್ತದೆ
- ತಂತುರು ಮಳೆ ಇರುವಾಗ ಬೋರ್ಡೊ ದ್ರಾವಣವನ್ನು ಹಾಗೂ ಶುಷ್ಕ ವಾತಾರಣ ಇದ್ದಾಗ ಬೋರ್ಡೋ ದ್ರಾವಣಕ್ಕೆ ಬದಲಾಗಿ ಶೀಲಿಂದ್ರ ನಾಶಕಗಳಾದ ತಾಮ್ರದ ಆಕ್ಸಿಕ್ಲೋರೆಡ್ ಅಥವಾ ಮೆಟಕಾಕ್ಸಿಲ್ ಎಂ ಝಡ್ ಔಷಧಗಳನ್ನು ಸೂಕ್ತ ಆಂಟಿನೊಂದಿಗೆ ಸಿಂಪರಣೆಗೆ ಬಳಸಬಹುದಾಗಿದೆ.
ಉತ್ತಮ ಮತ್ತು ಕ್ರಿಯಾತ್ಮಕ ಸಿಂಪಡಣೆಗಾಗಿ ಅತ್ಯಾಧುನಿಕ ಸಲಕರಣೆ (ಕಾರ್ಬನ್ ದೊಟಿ HTP ಸ್ತ್ರೀಯರ್) ಬಳಸುವುದು,
- ISI ಗುಣಮಟ್ಟದ ಪರಿಕರ ಮತ್ತು ವೈಜ್ಞಾನಿಕ ಸಿಂಪಡಣೆ ವಿಧಾನಗಳನ್ನು ಅನುಸರಿಸಿ ಸಾಮೂಹಿಕ ಮಟ್ಟದಲ್ಲಿ ಸಿಂಪಡಣೆ
ಕೈಗೊಳ್ಳಲು ರೈತರು ಕ್ರಮವಹಿಸುವುದು,
- ಅಂತರ್ವಾಹಿ ಶೀಲಿಂದ್ರನಾಶಕ/ಕೀಟನಾಶಕಗಳನ್ನು ಬಳಸುವಾಗ ವ್ಯತಿರಿಕ್ತ, ಪರಿಣಾಮಗಳು ಕುರಿತು ಸೂಕ್ತ ಸಲಹೆ ಪಡೆದೆ ಕ್ರಮವಹಿಸುವುದು,
- ಈ ಮೇಲಿನ ಕ್ರಮಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಅನುಸರಿಸಿದ್ದ, ಮರಗಳನ್ನು ಸುಳಿಕೊಳ್ಳೋ ಅಥವಾ ಶಿರಕೊಳೆಯಿಂದ ಸಾಯುವುದನ್ನು ತಪ್ಪಿಸಬಹುದಾಗಿದೆ.
Fertilizers recommended for the nutrition of each Arecunut tree : ಪ್ರತಿ ಅಡಿಕೆ ಮರಗಳ ಸಮಗ್ರ ಪೋಷಣೆಗಾಗಿ ಶಿಫಾರಸ್ಸು ಮಾಡಲಾದ ಗೊಬ್ಬರ
ಕೊಟ್ಟಿಗೆ ಗೊಬ್ಬರ +25ಕೆ.ಜಿ
,ಬೇವಿನ ಹಿಂಡಿ -1.5 ಕೆ.ಜಿ,
ಶಿಲಾರಂಜಕ -250 ಗ್ರಾಂ,
ಜಿಂಕ್ ಸಲ್ಪಟ್ -30ಗ್ರಾಂ.
ಹಸಿರೆಲೆ ಗೊಬ್ಬರ- 15.ಕೆ.ಜಿ
ಕೃಷಿ ಸುಣ್ಣ – 500 ಗ್ರಾಂ.
ಪೊಟಾಷ್ -220 ಗ್ರಾಂ.
ಬೋರಾನ್ -20 ಗ್ರಾಂ .