Friday, September 20, 2024

P M Kisan Samman Nidhi Scheme: ಫಲಾನುಭವಿಗಳ ಆಧಾರಗೆ ಮೊಬೈಲ್ ಲಿಂಕ್ ಆಗದೇ ಇದ್ದರೂ ಕೆವೈಸಿ ಮಾಡಿಸಬಹುದು ಎಂದು ಸಿಹಿಸುದ್ದಿ ನೀಡಿದ ಇಲಾಖೆ:

ಆತ್ಮೀಯ ರೈತ ಬಾಂದವರೇ ಪಿ ಎಂ ಕಿಸಾನ್ PM Kisan ಯೋಜನೆಯನ್ನು ಕೇಂದ್ರ ಸರ್ಕಾರ 2019 ನೇ ಇಸ್ವಿಯಲ್ಲಿ ಜಾರಿಗೊಳ್ಳಿಸಿರುತ್ತದೆ. ಮುಂದುವರೆದು ಈ ಯೋಜನೆಯಡಿ ಫಲಾನುಭವಿಗಳಾದ ರೈತರು ಅರ್ಜಿ ಸಲ್ಲಿಸುವಾಗ ನೀಡಿದ ದಾಖಲೆಗಳನ್ನುಇತ್ತೀಚಿಗೆ ಬದಲಾವಣೆಯಾದಲ್ಲಿEKYC (ಇ ಕೆವೈಸಿ )ಮಾಡುವುದು ಕಡ್ಡಾಯವಾಗಿರುತ್ತದೆ. ಇಲ್ಲವಾದಲ್ಲಿ ಹಣ ಬರುವುದು ರದ್ದಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಅರ್ಹ ಫಲಾನುಭವಿಗಳು EKYC ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 31,886 ರೈತರು EKYC ಮಾಡುವುದು ಬಾಕಿ ಇರುತ್ತದೆ.

ಇದನ್ನೂ ಓದಿ: ಗೃಹ ಲಕ್ಷ್ಮೀ ಯೋಜನೆಯ ಗೊಂದಲ ಇದೆಯೇ? ಅರ್ಹರು ಯಾರು? ಯಾವಾಗ ಅರ್ಜಿ ಸಲ್ಲಿಕೆ? ಸರ್ಕಾರದ ನಿಯಮಗಳೇನು ? ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ …

EKYC ಮಾಡಿಸದೆ ಬಾಕಿ ಇರುವ ರೈತರ ಯಾದಿಯನ್ನು ಉತ್ತರ ಕನ್ನಡ ಜಿಲ್ಲೆಯ ಬರುವ ಎಲ್ಲಾ ತಾಲೂಕಗಳ ಸಂಬಂದ ಪಡುವ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಪ್ರದರ್ಶಿಸಲಾಗಿದೆ. ಅರ್ಹ ಫಲಾನುಭವಿಗಳು ಆಧಾರ ಕಾರ್ಡ ಹಾಗೂ ಆಧಾರ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಹತ್ತಿರದ ಕೃಷಿ ಇಲಾಖೆಗೆ, ಅಥವಾ ಗ್ರಾಮ್ ಓನ್, CSC (Common Service Centres0 ಕರ್ನಾಟಕ ಓನ್, Karnataka One centres ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದಾಗಿರುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಅರ್ಹ ಫಲಾನುಭವಿ ರೈತರು ಮರಣ ಹೊಂದಿದ್ದಲ್ಲಿ ಅಂತಹ ರೈತರ ಮರಣ ದಾಖಲೆ ಹಾಗೂ ಆಧಾರ ಪ್ರತಿಯನ್ನು ರೈತ ಸಂಪರ್ಕ ಕೇಂದ್ರಗಳಿಗೆ ನೀಡಬೇಕು.

ವಿಶೇಷ ಮಾಹಿತಿ: ಒಂದು ವೇಳೆ ನಿಮ್ಮ ಮೊಬೈಲ್ ನಂಬರ್‍ ಆಧಾರ್‍ ಕಾರ್ಡ ಗೆ ಲಿಂಕ್ ಇಲ್ಲದೇ ಇದ್ದರೆ ಆ ಸಂದರ್ಭದಲ್ಲಿ ಈ ಕೆಳಗೆ ಕಾಣಿಸಿದ ಲಿಂಕ್ ಮೇಲೇ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಲ್ಲಿ install ಮಾಡಿಕೊಂಡು
EKYC ಮಾಡಬಹುದಾಗಿರುತ್ತದೆ.ಇಲ್ಲಿ ಓತ್ತಿ ನಿಮ್ಮಗೆ ಲಿಂಕ್ ಸಿಗುವುದು
https://play.google.com/store/apps/details?id=com.nic.project.pmkisan

KYC ಮಾಡುವ ವಿಧಾನ:

ಹಂತ 1: ಈ ಲಿಂಕ್ ಓಪನ್ ಆದ ಮೇಲೆ ಅಪ್ ಅನ್ನು install ಮಾಡಿಕೊಳ್ಳಿ.
ಹಂತ 2 : PMKISAN GoI (Nationalinformation Centre) ಈ ಹೆಸರಿನ ಆಪ್ ಆಗಿರುತ್ತದೆ.
ಹಂತ 3 : app ಓಪನ್ ಆದ ಮೇಲೆ ಮೊದಲ ಪೇಜ್ ನಲ್ಲಿ New Farmer Registration & Login ಅಂತ ಆಯ್ಕೆಗಳಿರುತ್ತವೆ. ಅದರಲ್ಲಿ Login ಆಯ್ಕೆ ಮಾಡಿಕೊಳ್ಳಿ.
ಹಂತ 4: Login Type ಎಂಬ ಕಾಲಂ ನಲ್ಲಿ Beneficiary ,secect ಮಾಡಿಕೊಳ್ಳಿ. ನಂತರ Aadhar No, ಕಾಲಂ ನಲ್ಲಿ ಆಧಾರ್‍ ನಂಬರ ನಮೂದಿಸಿ.
ಹಂತ 5: ಮೊದಲು ಆಧಾರ್‍ ನಂಬರ್‍ ನಲ್ಲಿ ಇರುವ ಮೊಬೈಲ್ ನಂಬರ್‍ ಗೆ 4 ಸಂಖ್ಯೆಯ OTP ಬರುತ್ತದೆ. ನಂತರ Login ಬಾಕ್ಸ ಮೇಲೆ ಕ್ಲಿಕ್ ಮಾಡಿ.
ಹಂತ 6: ನಂತರ 6 ( Digit)ನಂಬರಿನ MPIN ಉದಾ: 123456 ಹಾಕಿconfirm MPIN ಹಾಕಿ Submit ಮಾಡಿ. ನಂತರ MPIN Genereted Successfully ಅಂತ ಬರುತ್ತದೆ.
ಹಂತ 7 : ನಂತರ Dashboard & Logout ಆಯ್ಕೆಯಲ್ಲಿ Dashboard ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ Click here to complete your e-kyc ಮೇಲೆ ಕ್ಲಿಕ್ ಮಾಡಿ ಹಿಂದೆ ಹಾಕಿರುವ MPIN ಮತ್ತೆ ನಮೂದಿಸಿ submit ಅಂತ ಕೊಡಿ.
ಹಂತ 8: I agree to provide my aadhar for aadhar based KYC Using face authentication ಪಕ್ಕ ಕಾಣುವ box ಮೇಲೆ click ಮಾಡಿ Scan Face ಮೇಲೆ ಓತ್ತಿ Face scan ಮಾಡಿದರೆ e-kyc has been successfully ಅಂತ ಬಂದರೆ ಈ ಪ್ರಕ್ರಿಯೆ ಮುಗಿಯುತ್ತದೆ. ಮುಂದುವರೆದು ಅದೇ ಆಪ್ ನಲ್ಲಿ ಪ್ರಕ್ರಿಯೇ ಮುಗಿದ ಮೇಲೆ e-kyc for other beneficiries Click ಮಾಡಿ ಆಧಾರ್‍ ನಂಬರ ಹಾಕಿ ಮತ್ತೆ MPIN ಉದಾ: 123456 ಹಾಕಿ confirm MPIN ಹಾಕಿ Submit ಕೊಟ್ಟು ಬೇರೆ ರೈತರ e-kyc ಮಾಡಬಹುದಾಗಿರುತ್ತದೆ. ಈ ಪ್ರಕ್ರಿಯೆಗೆ ಯಾವುದೇ ಆಧಾರ ಗೆ ಲಿಂಕ್ ಇರುವ ಮೊಬೈಲ್ ನಂಬರ್‍ ಕಡ್ಡಾಯವಿರುವುದಿಲ್ಲ.

ಇದನ್ನೂ ಓದಿ: ಕೃಷಿ ಉತ್ಪಾದನಾ ಬಹುಮಾನ ಯೋಜನೆಯಿಂದ ರೈತ ಮತ್ತು ರೈತ ಮಹಿಳೆಯರಿಗೆ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ:

ಗಮನಿಸಿ: ರಾಜ್ಯದ ಯಾವುದೇ ಜಿಲ್ಲೆಯ ರೈತರು ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಅರ್ಹ ಫಲಾನುಭವಿಗಳು ಆಗ್ಗಿದ್ದಲಿ ಈ ಪ್ರಕ್ರಿಯೆ ಮಾಡಿಕೊಳ್ಳಬಹುದು.
ಮುಖ್ಯವಾಗಿ ಈ ಆಪ್ install ಮಾಡಿಕೊಂಡಲ್ಲಿ ಫಲಾನುಭವಿಗಳು ವಯಸ್ಸಾದಲ್ಲಿ, ಅಂಗವವೀಕಲತೆ ಆದಲ್ಲಿ ಈ ಆಪ್ ಬಹಳ ಉಪಯೋಗವಾಗಲಿದೆ.

ಇತ್ತೀಚಿನ ಸುದ್ದಿಗಳು

Related Articles