Friday, November 15, 2024

ಮುಂದಿನ ಮೂರು ದಿನ ಮಳೆ ಮಾಹಿತಿ ಹಾಗೂ , ಎಲ್ಲೆಲ್ಲಿ ಯೆಲ್ಲೋ ಅಲರ್ಟ್ ನೀಡಿದ ಹವಮಾನ ಇಲಾಖೆ.

ರಾಜ್ಯದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ನಾಲ್ಕೈದು ದಿನಗಳಿಂದ ಸ್ವಲ್ಪ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಇದೇ ತಿಂಗಳು 18-19 ನೇ ತಾರೀಖು ಮಳೆ ಹೆಚ್ಚು ಬರುವುದಾಗಿ ಹವಮಾನ ಇಲಾಖೆ ಮಾಹಿತಿ ಒದಗಿಸಿರುತ್ತದೆ.

ಜು.18ರಿಂದ ರಾಜ್ಯಾದ್ಯಂತ ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಮಾನ ಇಲಾಖೆಯ ಪ್ರಕಾರ ಬೆಳಗಾವಿಯ ಕಲಬುರ್ಗಿ, ಚಿಕ್ಕಮಗಳೂರಿನ ಮೂಡಿಗೆರೆ, ಹಾವೇರಿಯ ಹನುಮಾನ್ ಮಟ್ಟಿ, ಮೈಸೂರಿನ ಸುತ್ತೂರು, ಹುಣಸೂರಿನಲ್ಲಿ ಶನಿವಾರ ಮಳೆಯಾಗಿದೆ.

ಇದನ್ನೂ ಓದಿ:ಕೃಷಿ ಉತ್ಪಾದನಾ ಬಹುಮಾನ ಯೋಜನೆಯಿಂದ ರೈತ ಮತ್ತು ರೈತ ಮಹಿಳೆಯರಿಗೆ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ:

ಮುಂದುವರೆದು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡದಲ್ಲಿ ಜು.16ರಿಂದ ಜು.19ರವರೆಗೆ, ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿರುತ್ತದೆ.

ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗದಲ್ಲಿ ಜು.18ರಿಂದ ಮುಂದಿನ ಎರಡು ದಿನ ಭಾರಿ ಮಳೆ ಬೀಳುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಮುನ್ಸೂಚನೆ ಕೊಟ್ಟಿರುತ್ತದೆ.

ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ ಮತ್ತು ಬೀದರ್‌ನಲ್ಲಿ ಜು.19ರಂದು ತುಸು ಹೆಚ್ಚು ಮಳೆಯಾಗಲಿರುವುದರಿಂದ ಯೆಲ್ಲೋ ಅಲರ್ಟ್ ಎಂದು ಹವಮಾನ ಇಲಾಖೆ ಮಾಹಿತಿ ನೀಡಿರುತ್ತದೆ.

ಇದನ್ನೂ ಓದಿ: 2023-24ನೇ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ (WBCIS)

ಇನ್ನೂ ದಕ್ಷಿಣ ಒಳನಾಡು ಮತ್ತು ಮದ್ಯ ಕರ್ನಾಟಕದ ಕೆಲವು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆ ಬರುವುದಾಗಿ ಹವಮಾನ ಇಲಾಖೆ ಮಾಹಿತಿ ನೀಡಿರುತ್ತದೆ.

ಇತ್ತೀಚಿನ ಸುದ್ದಿಗಳು

Related Articles