Friday, September 20, 2024

ಉಪ ವಲಯ ಅರಣ್ಯಾಧಿಕಾರಿ ಯೋಗೇಶನಾಯ್ಕ ಅವರನ್ನು ಬಲಿ ಪಡೆದ Paraquat Dichloride ಕಳೆನಾಶಕ ಅದೆಷ್ಟು ಘೋರ ವಿಷ ಗೊತ್ತ?

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಾಡ ಗ್ರಾಮದ ಉಪ ವಲಯ ಅರಣ್ಯಾಧಿಕಾರಿ ಯೋಗೇಶನಾಯ್ಕ ಅವರನ್ನು ಬಲಿ ಪಡೆದ Paraquat Dichloride ಕಳೆನಾಶಕ ಅದೆಷ್ಟು ಘೋರ ವಿಷ ಗೊತ್ತ?ಇದುವರೆಗೂ ಈ ವಿಷಕ್ಕೆ ಔಷಧಿಯನ್ನೆ ಕಂಡು ಹಿಡಿಯಲಾಗಿಲ್ಲ!!!

Paraquat Dichloride ಎಂಬ ರಸಾಯನಿಕ ಸಂಯೋಜನೆಯಿಂದ ಕೂಡಿದ ಈ ಕಳೆನಾಶಕವನ್ನು ಈಗಾಗಲೇ ಅನೇಕ ದೇಶಗಳು ನಿಷೇಧಿಸಿವೆ.
Gramoxone, Firestorm, Helmquat, Parazone Uniquat All clear Milquat Sabaa Kapiq ಇತ್ಯಾದಿ ಬ್ರಾಂಡ್ ಹೆಸರಿನಿಂದ ಹತ್ತಾರು ಕಂಪನಿಗಳು ಈ ಉಗ್ರವಿಷವನ್ನು ನಮ್ಮ ದೇಶದಲ್ಲಿ ಉತ್ಪಾದಿಸುತ್ತಿವೆ.

ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಸಹಾಯಧನದಲ್ಲಿ ತಾಡಪತ್ರೆ ವಿತರಿಸಲು ಅರ್ಜಿ ಅಹ್ವಾನ:

ಇದೊಂದು ಸಂಪರ್ಕ ಕಳೆನಾಶಕ (Contact Herbicide) ಅಂದರೆ, ಕಳೆನಾಶಕ ಸಿಂಪಡಿಸಿದ ಸಸ್ಯದ ಭಾಗಗಳಿಗೆ ಮಾತ್ರ ಪರಿಣಾಮ ಬೀರುತ್ತದೆ, ಬೇರೆ ಭಾಗಗಳಿಗೆ ಪರಿಣಾಮ ಬೀರುವುದಿಲ್ಲ,ಆದರೆ ಮನುಷ್ಯನ ದೇಹ ಹೊಕ್ಕರೆ ಎಲ್ಲಾ ಅಂಗಗಳಿಗೂ ವ್ಯಾಪಿಸಿ ಸಾವು ತರುತ್ತದೆ.

ಬಹಳ ಆತಂಕದ ಸಂಗತಿ ಎಂದರೆ ಈ ಘನಘೋರ ವಿಷಕ್ಕೆ ಇದುವರೆಗೂ ಪ್ರತ್ಯೌಷಧ(Antidote) ಲಭ್ಯವಿಲ್ಲ! ಕೇವಲ ಒಂದೆರಡು ಮಿಲಿ ಕಳೆನಾಶಕ ದೇಹ ಸೇರಿದರೂ ಸಾವು ಖಚಿತ.

ಶುಂಠಿ ಬೆಳೆಯಿಂದ ಹಿಡಿದು ಅನೇಕ ಬೆಳೆಗಳಲ್ಲಿ ಕಳೆಗಳನ್ನು ಕೊಲ್ಲಲು ವ್ಯಾಪಕವಾಗಿ ಇದನ್ನು ಬಳಸುತ್ತಾರೆ,

ಒಂದೆರಡು ಹನಿ ವಿಷ ದೇಹ ಸೇರಿದರೂ ಬಹು ಅಂಗಾಂಗಗಳು ವೈಫಲ್ಯ ಉಂಟಾಗಿ ಸಾವು ಸಂಭವಿಸಬಹುದು, ಪಾರ್ಕಿನ್ಸನ್ ನಂತಹ ಕಾಯಿಲೆಗಳಿಗೂ ಆಹ್ವಾನ ನೀಡಬಹುದು.ರೈತರು ಇದನ್ನು ಉಪಯೋಗಿಸುವಾಗ ಸುರಕ್ಷಿತ ವಿಧಾನ ಅನುಸರಿಸಿ ಬಳಸಬೇಕು.ಸಿಂಪಡಿಸುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಆಹಾರ ನೀರನ್ನು ಸೇವಿಸಬಾರದು. ದೇಹಗಳಲ್ಲಿ ಗಾಯಗಳಿದ್ದರೆ ಕಳೆನಾಶಕದ ಸಂಪರ್ಕಕ್ಕೆ ಬರಲೇಬಾರದು.
ಔಷಧಿಯೇ ಇಲ್ಲದ ಈ ವಿಷ ನಮ್ಮ ಜೀವಜಾಲದಲ್ಲಿ ಕಬಂಧ ಬಾಹುಗಳನ್ನು ಚಾಚುತ್ತಲೇ ಇದೆ.

✍️ನಾಗರಾಜ್ ಬೆಳ್ಳೂರು
Nisarga Conservation Trust

ಇತ್ತೀಚಿನ ಸುದ್ದಿಗಳು

Related Articles