ಆತ್ಮೀಯ ರೈತ ಬಾಂದವರೇ ಕೃಷಿಕರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮುಖ್ಯವಾಗಿ ಹವಮಾನ ಮುನ್ಸೂಚನೆ ಬಹಳ ಮುಖ್ಯವಾಗಿರುತ್ತೆ.ಯಾವಾಗ ಮಳೆ ಬರುತ್ತೆ ಮುಂದೆ ಮಳೆ ಪ್ರಮಾಣ ಯಾವ ರೀತಿ ಇದೆ. ಯಾವ ಜಿಲ್ಲೆಯಲ್ಲಿ ಏಷ್ಟು ಪ್ರಮಾಣ ಇದೆ, ಈ ಎಲ್ಲಾ ಮಾಹಿತಿ ಗೊತ್ತಿದ್ದರೆ, ಕೃಷಿ ಚಟುವಟಿಕೆಯನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಹಾಗಾಗಿ ಹವಮಾನ ಮುನ್ಸೂಚೆ ಮಾಹಿತಿ ನೀಡಿರುತ್ತೆವೆ. ಯಾವ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಮಳೆ ಮೂನ್ಸೂಚೆನೆಯನ್ನು ನೀಡಿರುತ್ತದೆ. ಈ ಲೇಖನದಲ್ಲಿ ನಿಮ್ಮಗೆ ಸಂಪೂರ್ಣ ಮಳೆಯ ಮಾಹಿತಿಯನ್ನು ನೀಡಿದ್ದೆವೆ.
ಇದನ್ನೂ ಓದಿ: ಈ ಮೂರು ಜಿಲ್ಲೆಯ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ:
ಈಗಾಗಲೇ ರಾಜ್ಯದ ಹಲವು ಕಡೆ ಮಳೆಯಾಗುತ್ತಿದ್ದು , ಮುಂದಿನ 5 ದಿನಗಳ ಕಾಲ ಮಳೆಯ ಅಬ್ಬರ ಹೆಚ್ಚಾಗಲಿದೆ. ಎಂದು ಹವಮಾನ ಇಲಾಖೆ ಮಾಹಿತಿ ತಿಳಿಸಿದೆ.
ಇಂದು ಬೀದರ್ ಮತ್ತು ಕಲ್ಬುರ್ಗಿ ಜಿಲ್ಲೆಗಳ ಹಲವು ಕಡೆ ಭಾರಿ ಮಳೆ ಬೀಳುವ ಸಾಧ್ಯತೆ ಇದ್ದು, ಹವಮಾನ ಇಲಾಖೆ ಆರಂಜೆ ಅಲರ್ಟ್ ಘೋಷಿಸಿದೆ.
ಎಪ್ರಿಲ್ 30 ರಂದು ಕಲಬುರ್ಗಿ, ರಾಯಚೂರು, ವಿಜಯಪುರ,ಯಾದಗಿರಿ,ಜಿಲ್ಲೆಗಳಲ್ಲಿ, ಮಳೆ ಆಗಲಿದೆ.
ಅದೇ ರೀತಿ ಚಿಕ್ಕಮಗಳೂರು, ಚಿತ್ರದುರ್ಗ,ಕೊಡುಗು,ಮೈಸೂರು,ದಾವಣಗೆರೆ,ಜಿಲ್ಲೆಯಲ್ಲಿ ಎಪ್ರಿಲ್ 30 ರಿಂದ 3 ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆ ಹಿನ್ನೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಇದನ್ನೂ ಓದಿ: ಆಂಗ್ಲ ಮಾಧ್ಯಮ ಶಾಲೆಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೇ 2 ರಂದು ಹೆಚ್ಚಿನ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮುಂದಿನ 24 ಗಂಟೆ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.