Friday, November 22, 2024

ಈ ಮೂರು ಜಿಲ್ಲೆಯ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ:

ಬಿಳಿ ಅಕ್ಕಿಯನ್ನು ಸಾಕಷ್ಟು ಪಾಲಿಷ್ ಮಾಡುವುದರಿಂದ ಅದರಲ್ಲಿರುವ ಪೋಷಕಾಂಶಗಳು ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿರುತ್ತವೆ. ಆದರೆ, ಕುಚ್ಚಲಕ್ಕಿ ಹೆಚ್ಚು ಪಾಲಿಷ್‍ಗೆ ಮಾಡಿರುವುದಿಲ್ಲ. ಇದರಿಂದಾಗಿ ಅಕ್ಕಿಯಲ್ಲಿ ಆರೋಗ್ಯಕಾರಿಯಾದ ಪೋಷಕಾಂಶಗಳು ಹಾಗೆಯೇ ಉಳಿದುಕೊಂಡಿರುತ್ತವೆ.
ಇದರಿಂದ ಆರೋಗ್ಯಕ್ಕೆ ಬಹಳ ಉತ್ತಮವಾಗಿರುತ್ತದೆ. ಮತ್ತು ದೇಹಕ್ಕೆ ತಂಪು ಎಂದು ಹೇಳುತ್ತಾರೆ.


ಪೋಷಕಾಂಶಗಳ ಕಣಜ: ಕುಚ್ಚಲಕ್ಕಿಯಲ್ಲಿರುವ ಪೌಷ್ಟಿಕಾಂಶಗಳು ಒಂದಾ ಎರಡಾ? ದೇಹಕ್ಕೆ ಅತ್ಯಗತ್ಯವಾದ ಖನಿಜಾಂಶಗಳಾದ ಮ್ಯಾಂಗನೀಸ್, ಐರನ್, ಝಿಂಕ್, ಫಾಸ್ಫರಸ್, ಕ್ಯಾಲ್ಸಿಯಂ, ಸೆಲೆನಿಯಮ್, ಮೆಗ್ನೇಷಿಯಂ ಹಾಗೂ ಪೊಟ್ಯಾಷಿಂ ಇದರಲ್ಲಿವೆ. ವಿಟಮಿನ್ ಬಿ1, ಬಿ2, ಬಿ3, ಬಿ6, ವಿಟಮಿನ್ ಇ, ವಿಟಮಿನ್ ಕೆ ಕೂಡ ಕುಚ್ಚಲಕ್ಕಿಯಲ್ಲಿವೆ. ಇದು ಪ್ರೋಟೀನ್, ಫೈಬರ್ ಹಾಗೂ ಫ್ಯಾಟಿ ಆಸಿಡ್‍ಗಳ ಆಗರವಾಗಿರುತ್ತದೆ. ಇಷ್ಟೆಲ್ಲಾ ಉಪಯೋಗವಿರುವ ಇರುವ ಕುಚಲಕ್ಕಿಯನ್ನು ಪಡಿತರ ಚೀಟಿದಾರರಿಗೆ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪಡಿತರದ ಜತೆಗೆ ಕುಚ್ಚಲಕ್ಕಿ ನೀಡಲು ಸರ್ಕಾರ ಬದ್ಧವಿದೆ. ಶೀಘ್ರವೇ ಪಡಿತರದ ಜೊತೆಗೆ ಕುಚ್ಚಲಕ್ಕಿ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದ್ದಕೆ ಮುಖ್ಯಮಂತ್ರಿಗಳು ಇಪ್ಪಿರುತ್ತಾರೆ. ವಿತರಣೆಗೆ 152 ಕೋಟಿ ರೂಪಾಯಿ ಸರ್ಕಾರಕ್ಕೆ ಖರ್ಚಾಗಲಿದೆ ಎಂದು ತೀಳಿಸಿರುತ್ತಾರೆ.

ಇದನ್ನೂ ಓದಿ: ಆಂಗ್ಲ ಮಾಧ್ಯಮ ಶಾಲೆಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಕುಚ್ಚಲಕ್ಕಿ ವಿತರಿಸುವ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದ್ದು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ತೊಡಕು ನಿವಾರಿಸಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕರಾವಳಿಯಲ್ಲಿ ಕುಚ್ಚಲಕ್ಕಿಗೆ ಪೂರಕವಾದ ಭತ್ತದ ತಳಿಗಳಾದ ಎಂಒ4, ಅಭಿಲಾಷಾ, ಜ್ಯೋತಿ, 1001 ತಳಿಗಳ ಪಟ್ಟಿ ಮಾಡಿ ಕೇಂದ್ರ ಸರಕಾರದಿಂದ ಅನುಮೋದನೆ ಪಡೆದು ಹೆಚ್ಚುವರಿಯಾಗಿ 500 ರೂ. ಸಬ್ಸಿಡಿ ನೀಡಿ ಭತ್ತ ಖರೀದಿಗೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ಇನ್ನೂ ಹೆಚ್ಚಿನ ರೀತಿಯಲ್ಲಿ ಕಚ್ಚಲಕ್ಕಿಯ ಉಪಯೋಗಗಳು ಇದ್ದಾವೆ ತಿಳಿಯಿರಿ:


ಬೊಜ್ಜಿಗೆ ಶತ್ರು: ಆಧುನಿಕ ಆಹಾರ ಪದ್ಧತಿಯ ಅತಿದೊಡ್ಡ ಕೊಡುಗೆ ಬೊಜ್ಜು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರನ್ನೂ ಇದು ಕಾಡುತ್ತಿದೆ. ಬೊಜ್ಜಿನ ಸಮಸ್ಯೆ ಹೊಂದಿರುವವರು ಕುಚ್ಚಲಕ್ಕಿ ಅನ್ನವನ್ನು ಸೇವಿಸುವುದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು. ದೇಹದ ಬಿಎಂಐ ಹಾಗೂ ಬೊಜ್ಜನ್ನು ತಗ್ಗಿಸುವಲ್ಲಿ ಕುಚ್ಚಲಕ್ಕಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ಅಧ್ಯಯನವೊಂದು ದೃಢಪಡಿಸಿದೆ.

ಇದನ್ನೂ ಓದಿ: ಅಂಚೆ ಕಛೇರಿಯಲ್ಲಿ ಅರ್ಹ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಲು ಸೂಚನೆ -ಪೋಸ್ಟ್ ಮಾಸ್ಟರ್‍ ಜನರಲ್

ಮಿದುಳಿನ ರಕ್ಷಕ: ಮಿದುಳು ಹಾಗೂ ನರ ಮಂಡಲದ ಸಮರ್ಪಕ ಕಾರ್ಯನಿರ್ವಹಣೆಗೆ ಕುಚ್ಚಲಕ್ಕಿ ಸಹಕಾರಿಯಾಗಿದೆ. ಇದರಲ್ಲಿರುವ ಬಿ ವಿಟಮಿನ್ಸ್, ಮ್ಯಾಂಗನೀಸ್ ಮತ್ತು ಮೆಗ್ನೇಷಿಯಂ ಮಿನರಲ್ಸ್‍ಗಳು ದೇಹದಲ್ಲಿ ಕ್ಯಾಲ್ಸಿಯಂನ ಚಟುವಟಿಕೆಯನ್ನು ಸಮತೋಲನದಲ್ಲಿಡುವ ಮೂಲಕ ನರ ಹಾಗೂ ಸ್ನಾಯುಗಳನ್ನು ನಿಯಂತ್ರಿಸಲು ನೆರವು ನೀಡುತ್ತವೆ. ಕುಚ್ಚಲಕ್ಕಿಯಲ್ಲಿರುವ ವಿಟಮಿನ್ ಇ ಕೂಡ ಅನೇಕ ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಖಿನ್ನತೆ ಬಾರದಂತೆ ತಡೆ: ಉದ್ವೇಗ, ಖಿನ್ನತೆ ಹಾಗೂ ಒತ್ತಡವನ್ನು ತಗ್ಗಿಸಬಲ್ಲ ಅಮಿನೋ ಆಸಿಡ್ಸ್ ಕುಚ್ಚಲಕ್ಕಿಯಲ್ಲಿವೆ. ಇವು ಉದ್ವೇಗದ ವಿರುದ್ಧ ಹೋರಾಡುವ ಮೂಲಕ ಖಿನ್ನತೆ ಸೇರಿದಂತೆ ಅನೇಕ ಮನೋರೋಗಗಳು ಕಾಡದಂತೆ ರಕ್ಷಣೆ ಒದಗಿಸುತ್ತವೆ.

ಜೀರ್ಣಕ್ರಿಯೆ ಪ್ರಚೋದಕ: ಪ್ರತಿದಿನ ಕುಚ್ಚಲಕ್ಕಿ ಅನ್ನವನ್ನು ಊಟ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಫೈಬರ್ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಅಲ್ಲದೆ, ಫೈಬರ್ ಇರುವ ಕಾರಣದಿಂದ ಕುಚ್ಚಲಕ್ಕಿ ಅನ್ನವನ್ನು ಸೇವಿಸಿದ ಬಳಿಕ ಬಹು ಸಮಯದವರಿಗೆ ಹೊಟ್ಟೆ ತುಂಬಿರುವ ಅನುಭವವಾಗುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಕ: ಕುಚ್ಚಲಕ್ಕಿಯಲ್ಲಿ ನೈಸರ್ಗಿಕವಾದ ಎಣ್ಣೆಯಂಶವಿರುವ ಕಾರಣ ಇದು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಹೀಗಾಗಿ ಕೊಲೆಸ್ಟ್ರಾಲ್ ಹೆಚ್ಚಿರುವವರು ಕೂಡ ಕುಚ್ಚಲಕ್ಕಿ ಅನ್ನವನ್ನು ಸೇವಿಸಬಹುದು. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ.

ಕ್ಯಾನ್ಸರ್ ನಿರೋಧಕ: ಕುಚ್ಚಲಕ್ಕಿ ಸ್ತನಕ್ಯಾನ್ಸರ್, ಬ್ಲಡ್ ಕ್ಯಾನ್ಸರ್ ಸೇರಿದಂತೆ ಕೆಲವು ಕ್ಯಾನ್ಸರ್‍ಗಳಿಂದ ರಕ್ಷಣೆ ಒದಗಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಹಾಗೂ ಹೇರಳವಾದ ಫೈಬರ್ ಕ್ಯಾನ್ಸರ್ ಕಾರಕಗಳ ವಿರುದ್ಧ ಹೋರಾಡುತ್ತವೆ.

ಪ್ರತಿರೋಧಕ ಶಕ್ತಿ ಹೆಚ್ಚಳ: ಈಗಾಗಲೇ ತಿಳಿಸಿರುವಂತೆ ಕುಚ್ಚಲಕ್ಕಿಯಲ್ಲಿ ಹೇರಳವಾಗಿರುವ ವಿಟಮಿನ್ಸ್, ಮಿನರಲ್ಸ್ ಹಾಗೂ ಅಗತ್ಯ ಫೆನೊಲಿಕ್ ಅಂಶಗಳು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ನೆರವು ನೀಡುತ್ತವೆ. ಇದು ದೇಹವನ್ನು ಚೆನ್ನಾಗಿ ಪೋಷಿಸುವ ಜೊತೆಗೆ ಗಾಯ ಬೇಗ ಗುಣವಾಗಲು ಹಾಗೂ ರೋಗಾಣುಗಳ ವಿರುದ್ಧ ಹೋರಾಡುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ.

ಮೂಳೆ ಆರೋಗ್ಯದ ರಕ್ಷಣೆ: ಕುಚ್ಚಲಕ್ಕಿಯಲ್ಲಿ ಮೆಗ್ನೇಷಿಯಂ ಹಾಗೂ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿದ್ದು, ಇವು ಮೂಳೆಗಳ ಸಂರಚನೆ ಹಾಗೂ ಆರೋಗ್ಯ ಸಂರಕ್ಷಣೆಗೆ ನೆರವು ನೀಡುತ್ತವೆ. ಅಷ್ಟೇ ಅಲ್ಲದೆ, ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದಲೂ ರಕ್ಷಣೆ ಒದಗಿಸುತ್ತವೆ.

ಇದನ್ನೂ ಓದಿ: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್‍ ಕಾರ್ಡ ಲಿಂಕ್ ಆಗಿದೆಯೋ? ಇಲವೋ ? ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿ.

ಬಾಣಂತಿಯರಲ್ಲಿ ಒತ್ತಡ ತಗ್ಗಿಸುತ್ತದೆ: ಯುರೋಪಿಯನ್ ಜರ್ನಲ್ ಆಫ್ ನ್ಯುಟ್ರಿಷನ್‍ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕುಚ್ಚಲಕ್ಕಿ ಮಗುವಿಗೆ ಎದೆಹಾಲು ನೀಡುತ್ತಿರುವ ತಾಯಂದಿರಲ್ಲಿ ಕಾಣಿಸಿಕೊಳ್ಳುವ ಖಿನ್ನತೆ ಸೇರಿದಂತೆ ಮಾನಸಿಕ ತೊಂದರೆಗಳನ್ನು ದೂರ ಮಾಡುತ್ತದೆ. ಎದೆಹಾಲು ನೀಡುವ ತಾಯಂದಿರಲ್ಲಿ ಒತ್ತಡ ನಿರ್ವಹಣೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇತ್ತೀಚಿನ ಸುದ್ದಿಗಳು

Related Articles