Friday, November 22, 2024

ಅಂಚೆ ಕಛೇರಿಯಲ್ಲಿ ಅರ್ಹ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಲು ಸೂಚನೆ -ಪೋಸ್ಟ್ ಮಾಸ್ಟರ್‍ ಜನರಲ್

ಸುಕನ್ಯ ಸಮೃದ್ಧಿ ಯೋಜನೆಯು ಭೇಟೆ ಬಚಾವೋ –ಭೇಟೆ ಪಢಾವೋ ಎಂಬ ಉಪಕ್ರಮದ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ಪ್ರಯೋಜನವನ್ನು ನೀಡುವ ಉದ್ದೇಶದಿಂದ ರಚಿಸಲಾದ ಸರ್ಕಾರಿ ಉಳಿತಾಯ ಯೋಜನೆಯಾಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಪೋಷಕರು ಅಥವಾ ಪಾಲಕರು ಈ ಯೋಜನೆಯು ಹೆಣ್ಣು ಮಕ್ಕಳ ಉನ್ನತ ವ್ಯಾಸಾಂಗಕ್ಕೆ ಅನುಕೂಲವಾಗಿರುತ್ತದೆ ಎಂದು ತಿಳಿಸಿರುವ ಶ್ರೀ ಬ್ರೀಗ್ ಸುರೇಶ ಗುಪ್ತಾ ಪೋಸ್ಟ ಮಾಸ್ಟರ್‍ ಜನರಲ್ ಸೌತ್ ಕರ್ನಾಟಕ ರೀಜನ್,

ಈ ಹಿನ್ನೆಲೆಯಲ್ಲಿ ತಮ್ಮ ತಾಲೂಕಿನ ವ್ಯಾಪ್ತಿಗೆ ಒಳಪಡಿಸುವ ಸಿ.ಆರ್.ಪಿ/ಬಿ.ಆರ್.ಪಿ ಗಳ ಶಾಲೆಗಳ ಮುಖ್ಯ ಶಿಕ್ಷಕರಲ್ಲಿ ಈ ಕುರಿತು ಹೆಚ್ಚಿನ ಅರಿವು ಮೂಡಿಸಿ ಶಾಲೆಯ ಸಮೀಪದ ಅಂಚೆ ಕಛೇರಿಯಲ್ಲಿ 10 ವರ್ಷದ ಒಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯ ಸಮೃದ್ಧಿ ಯೋಜನೆಯ ಅಡಿಯಲ್ಲಿ ಖಾತೆ ತೆರೆಯಲು ಸೂಚಿಸುವುದರ ಬಗ್ಗೆ ಅಂಚೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅರ್ಹ ಹೆಣ್ಣು ಮಕ್ಕಳಿಗೆ ಇದರ ಸಂಪೂರ್ಣ ಪ್ರಯೋಜನ ಸಿಗುವಂತೆ ಮಾಡಲು ಅಗತ್ಯ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.

ಹಾಗೂ ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನು ದೃಢಿಕರಣದೊಂದಿಗೆ ಈ ಕಛೇರಿಗೆ ಸಲ್ಲಿಸುವಂತೆ ಸೂಚಿಸಿದೆ. ಈಗಾಗಲೇ ದಕ್ಷಿಣ ಕರ್ನಾಟಕದ 14 ಜಿಲ್ಲೆಗಳಲ್ಲಿ ಇರುವ ಸಂಬಂಧಿಸಿದ ಅಂಚೆ ಕಚೇರಿಯಲ್ಲಿ 10 ವರ್ಷದ ಒಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ
ಸುಕನ್ಯ ಸಮೃದ್ಧಿ ಯೋಜನೆಯ ಅಡಿಯಲ್ಲಿ ಖಾತೆ ತೆರೆಯಲು ಕ್ರಮವಹಿಸಲಾಗಿದ್ದು. ಇದರ ಪ್ರಯೋಜನೆಯನ್ನು ನೂರಕ್ಕೆ ನೂರು ಎಲ್ಲಾ ಅರ್ಹ ಹೆಣ್ಣು ಮಕ್ಕಳಿಗೆ ಒದಗಿಸಲು ಅಂಚೆ ಇಲಾಖೆಯಲ್ಲಿ ಖಾತೆ ತೆರೆಯಲು ಸೂಚಿಸಲಾಗಿದೆ ಎಂದು ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ತಿಳಿಸಿರುತ್ತಾರೆ.

ಇದನ್ನೂ ಓದಿ: ಕರ್ನಾಟಕ ರಾಜ್ಯದ ನಿವಾಸಿ ದೃಡೀಕರಣ ಪಡೆಯುವುದು ಹೇಗೆ?.

ಅರ್ಹತೆಗಳು:
10 ವರ್ಷ ವಯಸ್ಸಿನ ಹುಡುಗಿಯರು ಮಾತ್ರ ಇದಕ್ಕೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯಡಿಯಲ್ಲಿ ಕುಟುಂಬದಲ್ಲಿ ಎರಡು ಹೆಣ್ಣು ಮಕ್ಕಳಿಗೆ ಅವಕಾಶ
ಅವಳಿ ಹೆಣ್ಣು ಮಕ್ಕಳ ಖಾತೆಯನ್ನು ತೆರೆಯಬಹುದು
ಭಾರತದ ನಾಗರಿಕರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಪೋಷಕರು ಮತ್ತು ಪಾಲಕರು ಭಾರತದ ಖಾಯಂ ನಾಗರಿಕರಾಗಿರಬೇಕು.

ಬೇಕಾದ ದಾಖಲೆಗಳು:


ಆಧಾರ್‍ ಕಾರ್ಡ್
ಪಾನ್ ಕಾರ್ಡ
ಜನನ ಪ್ರಮಾಣಪತ್ರ
ವಿಳಾಸ ಪುರಾವೆ
ಪೋಷಕರ ಮತ್ತು ಪಾಲಕರ ಗುರುತಿನ ಚೀಟಿ
ವೈದ್ಯಕೀಯ ಪ್ರಮಾಣಪತ್ರ

ಇದನ್ನೂ ಓದಿ: ದ್ವಿತೀಯ PUC ಫಲಿತಾಂಶ: ಯಾವ ಜಿಲ್ಲೆಗೆ ಶೇಖಡಾವಾರು ಎಷ್ಟು? ಪ್ರಥಮ,ದ್ವಿತೀಯ ಮತ್ತು ಕೊನೆಯ ಜಿಲ್ಲೆ ಯಾವುದು?

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ತಿಳಿದುಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles