Friday, September 20, 2024

ಕರ್ನಾಟಕ ರಾಜ್ಯದ ನಿವಾಸಿ ದೃಡೀಕರಣ ಪತ್ರ ಪಡೆಯುವುದು ಹೇಗೆ?.

ಆತ್ಮೀಯ ಸ್ನೇಹಿತರೇ ಇತ್ತಿಚೀಗೆ ಅಷ್ಟೇ ನೀವು ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಅಥವಾ ಹೆಚ್ಚಿನ ಶಿಕ್ಷಣಕ್ಕಾಗಿ ಮುಂದುವರೆಸಬೇಕೆಂದಿದ್ದರೆ, ಮತ್ತು ಕೋಟಾಗಳಲ್ಲಿ ಭಾಗವಹಿಸಲು ನಿಮಗೆ ಈ ನಿವಾಸಿ ಪುರಾವೆ ದೃಡೀಕರಣ ಪತ್ರ ಬಹಳ ಮುಖ್ಯವಾಗಿರುತ್ತೆ. ಹಾಗಿದ್ದರೆ ಆ ನಿವಾಸಿ ದೃಡೀಕರಣ ಪತ್ರ ಪಡೆಯುವುದು ಹೇಗೇ? ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೇ ?ದಾಖಲೆಗಳೇನು ಬೇಕು? ಪ್ರಕ್ರಿಯೇ ಹೇಗೇ? ಅಂತ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ ಓದಿ ತಿಳಿಯಿರಿ ಮತ್ತು ನಿಮ್ಮ ಸ್ನೇಹಿತರಿಗೂ ಈ ಒಂದು ಮಾಹಿತಿಯನ್ನು ಹಂಚಿಕೊಳ್ಳಿ,

ಇದನ್ನೂ ಓದಿ: ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳಿಂದ ಕೃಷಿ ಉಪಕರಣಕ್ಕೆ NOC(ನೀರಾಕ್ಷೇಪಣಾ ಪತ್ರ) ಪಡೆಯುವುದು ಹೇಗೆ? ಅದರ ಅವಶ್ಯಕತೆ ಏನು?

ಮೊದಲು ನೀವು ಹತ್ತಿರದ ಕಂದಾಯ ಇಲಾಖೆ,ತಹಶಿಲ್ದಾರ್‍ ಕಚೇರಿ,ಅಥವಾ ಉಪವಿಭಾಗೀಯ ಕಚೇರಿ,ನಾಡ ಕಚೇರಿಗಳಲ್ಲಿ ಅರ್ಜಿ ನಮೂನೆಯನ್ನು ಪಡೆಯಬೇಕಾಗುತ್ತದೆ.

ಅರ್ಹತೆಗಳು:

ನಿರ್ದಿಷ್ಟಪಡಿಸಿದ ಕನಿಷ್ಟ ಅವಧಿಗೆ ರಾಜ್ಯದಲ್ಲಿ ನೀವು ವಾಸವಾಗಿರುದಕ್ಕೆ ಭೂಮಿಯನ್ನು ಹೊಂದಿರುವುದು ಅಥವಾ ರಾಜ್ಯದ ಖಾಯಂ ನಿವಾಸಿಯಾಗಿರುವ ಪುರುಷರನ್ನು ವಿವಾಹವಾದ ಮಹಿಳೆಯಾಗಿರಬೇಕು

ಆನ್ಲೈನ್ ಪ್ರಕ್ರಿಯೆ:

ಕಂದಾಯ ಇಲಾಖೆ ಪೋರ್ಟಲ್ ಗೆ ಭೇಟಿ ನೀಡಿ, https://nadakacheri.karnataka.gov.in
ವೆಬ್ಸೈಟ್ ನ ಮುಖಪುಟದಲ್ಲಿ ಆನ್ ಲೈನ್ ಆಪ್ಲಿಕೇಶನ್ ವಿಭಾಗವನ್ನು ಕ್ಲಿಕ್ ಮಾಡಿ.
ಡ್ರಾಪ್ ಡೌನ್ ಮೆನು ಕಾಣುವುದು ನಂತರ Apply Online ಆಯ್ಕೆ ಮೇಲೆ ಕ್ಲಿಕ ಮಾಡಿ
ನಂತರ ಮುಂದೆ ಕಾಣುವ ಹೊಸ ಪುಟದಲ್ಲಿ ನಿಮ್ಮ ಮೊಬೈಲ್ ನಂಬರ ನಮೂದಿಸಿ


Get OTP ಮೇಲೆ ಓತ್ತಿ
proceed ಬಟನ್ ಕ್ಲಿಕ ಮಾಡಿ
ನಂತರ New request ಆಯ್ಕೆ ಮಾಡಿ ಇದರಲ್ಲಿ ನಿವಾಸಿ ದೃಡೀಕರಣ ಪ್ರಮಾಣ ಪತ್ರ ಆಯ್ಕೆ ಮಾಡಿ.
ವಿವರಗಳನ್ನು ನಮೂದಿಸಿ ಅಗತ್ಯವಿರುವ ದಾಖಲೆಗಳನ್ನು ಅಪ್ ಲೋಡ್ ಮಾಡಿ
mode of delivery ಆಯ್ಕೆಯನ್ನು ಮಾಡಿ ಸೇವ್ ಮೇಲೆ ಕ್ಲಿಕ ಮಾಡಿ
ಮೊಬೈಲ್ ಪೋನ್ ಸಹಾಯದಿಂದ ಸ್ವೀಕೃತಿ ಸಂಖ್ಯೆ ನಿಮಗೆ ಕಳುಹಿಸಲಾಗುವುದು.
ಶುಲ್ಕವನ್ನು ಪಾವತಿಸಲು ಆನೈ ಲೈನ್ ಆಯ್ಕೆ ಮೇಲೆ ಕ್ಲಿಕ ಮಾಡಿ make payment ಆಯ್ಕೆಯ ಮೇಲೆ ಕ್ಲಿಕ ಮಾಡಿ
ಯಶಸ್ವಿಯಾದ ನಂತರ ನಾಡ ಕಚೇರಿಯಲ್ಲಿ ಅಂತಿಮ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಇದನ್ನೂ ಓದಿ: POST ಆಫೀಸ್ ನಿಂದ ಹೊಸ ಯೋಜನೆ -ಮಾಸಿಕ ಆದಾಯಕ್ಕೆ ಉತ್ತಮ ಅವಕಾಶ.

ಬೇಕಾದ ದಾಖಲೆಗಳು:
ಆಧಾರ್‍ ಕಾರ್ಡ
ಅರ್ಜಿ ಪತ್ರ
ಮೊಬೈಲ್ ನಂಬರ
ಆದಾಯ ಪುರಾವೆ
ರೇಷನ್ ಕಾರ್ಡ

ನಿಮ್ಮಗೆ ಹೆಚ್ಚಿನ ಮಾಹಿತಿಬೇಕಾದರೆ ಅರ್ಜಿ ಸಲ್ಲಿಸಲು ಹತ್ತಿರದ ನಾಡ ಕಚೇರಿ ಅಥವಾ ಗ್ರಾಮ ಓನ್ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದು.

ಇತ್ತೀಚಿನ ಸುದ್ದಿಗಳು

Related Articles