ಆತ್ಮೀಯ ಸ್ನೇಹಿತರೇ ನೀವು ಸ್ವಯಂ ಉದ್ಯೋಗ ಮಾಡಬೇಕೆಂದು ಬಯಕೆ ಇದ್ದು ಆದರೆ ಯಾವ ಉದ್ಯೋಗ ಮಾಡಬೇಕು ಮತ್ತು ಯಾವ ಉದ್ಯಮ ಮಾಡಬೇಕು ಅದರ ಬಗ್ಗೆ ಎಲ್ಲಿ ತರಬೇತಿ ಪಡೆಯಬೇಕು ಅಂತ ಗೊಂದಲ ಇದ್ದರೆ ಆಸಕ್ತರು ಇವತ್ತೆ ಈ ಸಂಸ್ಥೆಯಲ್ಲಿ ನೂರಿತ ತಬೇತಿದಾರರಿಂದ ತರಬೇತಿ ಪಡೆದು ನಿಮ್ಮ ಆಸೆಯನ್ನು ಪೂರೈಸಿಕೊಳ್ಳಲು ಒಳ್ಳೆಯ ಅವಕಾಶ.
ಸ್ನೇಹಿತರೇ ಈ ಸಂಸ್ಥೆಯಲ್ಲಿ ನಿಮ್ಮಗೆ ಯಾವ ವಿಷಯ ಬಗ್ಗೆ ತರಬೇತಿ ಅವಶ್ಯಕತೆ ಇದೆಯೋ ಆ ಒಂದು ವಿಷಯದ ಬಗ್ಗೆ ಪ್ರಾಯೋಗಿಕವಾಗಿ ಮತ್ತು ಭೋದನಾ ರೂಪದಲ್ಲಿ ನೂರಿತ ತಜ್ಞರಿಂದ ತರಬೇತಿ ಕೊಡುವ ವ್ಯವಸ್ಥೆ ಇದೆ ಈ ಉತ್ತಮ ಅವಕಾಶವನ್ನು ಸದುಪಯೋಗ ಪಡೆಯಬೇಕು ಎಂದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ.
ಇದನ್ನೂ ಓದಿ:ಅತೀ ಕಡಿಮೆ ದರದಲ್ಲಿ ಸ್ವರ್ಣಧಾರ ನಾಟಿ ಕೋಳಿ ಮತ್ತು ಮರಿಗಳು ಲಭ್ಯ
ಈ ಒಂದು ಅವಧಿಯಲ್ಲಿ ಗ್ರಾಮೀಣ ಭಾಗದ ಯುವಕರಿಗೆ ಮತ್ತು ಯುವತಿಯರಿಗೆ ಜೇನು ಸಾಕಾಣಿಕೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ. ಹಾಗಿದ್ದರೆ ತರಬೇತಿಗೆ ಅರ್ಹತೆಗಳೇನು? ಯಾವ ಯಾವ ಉಚಿತ ಅವಕಾಶ ಮಾಡಿಕೊಟ್ಟಿದೆ?ದಾಖಲೆಗಳೇನು ಬೇಕು?ತರಬೇತಿ ನಡೆಯುವ ಸ್ಥಳ ಎಲ್ಲಿ? ವಯಸ್ಸಿನ ಮಿತಿಯೇನು? ಮೊದಲು ಯಾರಿಗೆ ಆದ್ಯತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಅರ್ಹತೆಗಳು?
ಆತ್ಮೀಯ ಸ್ನೇಹಿತರೇ ಗ್ರಾಮೀಣ ಭಾಗದ ಯುವಕರು/ಯುವತಿಯರು ಆಗಿರಬೇಕು.
ತರಬೇತಿಯಲ್ಲಿ ಆಸಕ್ತಿ ಇರಬೇಕು.
ಮಾಹಿತಿ ತಿಳಿದುಕೊಳ್ಳುವ ಆಸಕ್ತಿದಾರರು ಇರಬೇಕು.
ಇದನ್ನೂ ಓದಿ:ಸಹಾಯಧನದಲ್ಲಿ ತಾಡಪತ್ರೆಗೆ ಅರ್ಜಿ ಆಹ್ವಾನ
ಯಾವ ಯಾವ ಅವಕಾಶಗಳು ಲಭ್ಯ?
ತರಬೇತಿಯಲ್ಲಿ ಊಟ ಮತ್ತು ವಸತಿ ಸಹಿತ ಉಚಿತ ಅವಕಾಶವಿರುತ್ತದೆ.
ಗ್ರಾಮೀಣ ಭಾಗದ BPL ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗಿದೆ.
ಬೇಕಾದ ದಾಖಲೆಗಳು?
ಅಭ್ಯರ್ಥಿಗಳ ಆಧಾರ್ ಕಾರ್ಡ ಪ್ರತಿ
ನಾಲ್ಕು ಪಾಸ್ ಪೋರ್ಟ ಸೈಜ್ ಪೋಟೋ
ಬ್ಯಾಂಕ್ ಪಾಸ ಬುಕ್ ಪ್ರತಿ
ಪಾನ್ ಕಾರ್ಡ
ರೇಷನ್ ಕಾರ್ಡ
ಇವುಗಳ ಜೆರಾಕ್ಸ ಪ್ರತಿಗಳು
ಇದನ್ನೂ ಓದಿ: ಈ ಶೈಕ್ಷಣಿಕ ಸಾಲಿನ SSLC ಮತ್ತು ದ್ವೀತಿಯ PUC ವಿದ್ಯಾರ್ಥಿಗಳಿಗೆ ಸಿಹಿಸುದ್ದಿ :
ತರಬೇತಿ ನಡೆಯುವ ಸ್ಥಳ?
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಇಂಡಸ್ಟಿಯಲ್ ಏರಿಯಾ ಹೆಗಡೆ ರಸ್ತೆ,ಕುಮಟಾ, ಉತ್ತರ ಕನ್ನಡ ಜಿಲ್ಲೆ -581343
ತರಬೇತಿಗೆ ವಯಸ್ಸು?
ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ 18-45 ವರ್ಷ ವಯಸ್ಸಿನ ಮಿತಿ ಮಾಡಲಾಗಿರುತ್ತದೆ.
ತರಬೇತಿಯ ಅವಧಿ:
ದಿನಾಂಕ 20/04/2023 ರಿಂದ 29/04/2023 ವರೆಗೆ ತರಬೇತಿ ಕಾರ್ಯಕ್ರಮ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮೊಬೈಲ್ ನಂಬರ್ 9449860007,9538281989,9916783825,8880444612.ಸಂಪರ್ಕಿಸಿ.
(ವಿಶೇಷ ಮಾಹಿತಿ ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ.)