Saturday, October 5, 2024

50,000/- ಸಾವಿರದವರೆಗೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಇಂದೇ ಅರ್ಜಿಸಲ್ಲಿಸಿ

ನಮ್ಮ ಭಾರತ ದೇಶದ ಅತಿ ದೊಡ್ಡ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ,ಬ್ಯಾಂಕ್‌ ಈಗ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ಪ್ರತಿಭಾವಂತ ಗ್ರಾಮೀಣ ಪ್ರದೇಶದ ಬಡವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಎಸ್‌ಬಿಐ ಆಶಾ ಸ್ಕಾಲರ್ಶಿಪ್‌ ಸಹಾಯಧನ ಅಥವಾ ವಿದ್ಯಾರ್ಥಿವೇತನ ನೀಡುತ್ತಿದೆ. ಈಗಿನ ಕಾಲದಲ್ಲಿ ಶಿಕ್ಷಣ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.

ಈ ವಿದ್ಯಾರ್ಥಿವೇತನಕ್ಕೆ ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು, ಎಲ್ಲಿ ಅರ್ಜಿ ಸಲ್ಲಿಸಬೇಕು, ಯಾವೆಲ್ಲಾ ದಾಖಲೆಗಳು ಬೇಕು? ಅರ್ಹತೆಗಳೇನು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಮಾಹಿತಿಯನ್ನು ಓದಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಮಾಹಿತಿಯನ್ನು ಹಂಚಿಕೊಳ್ಳಿ,ಹಾಗೂ ನಿಮ್ಮ ಮಕ್ಕಳಿಗೂ ಅರ್ಜಿ ಸಲ್ಲಿಸಿ ಯೋಜನೆಯನ್ನು ಲಾಭ ಪಡೆಯಿರಿ.

ಇದನ್ನೂ ಓದಿ: ಬೇಸಿಗೆಯ ಬಿಸಿಲಿನಲ್ಲಿ ಜಾನುವಾರಗಳ ಆರೋಗ್ಯ ದೃಷ್ಟಿಯಿಂದ ತಪ್ಪದೇ ಈ ರೀತಿ ಮಾಡಿ.

ಬಡ ಮಕ್ಕಳು ಕೂಡಾ ಇಂದಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂಬ ದೃಷ್ಠಿಯಿಂದ ಹಲವು ಯೋಜನೆಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರ ಕೂಡ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿ ವೇತನವನ್ನು ನೀಡುತ್ತವೆ.ಹಾಗೆಯೇ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಎಸ್‌ಬಿಐ ಬ್ಯಾಂಕ್‌ ಕೂಡ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಾರ್ಷಿಕವಾಗಿ ನೀಡಲು ಮುಂದಾಗಿದೆ. ಪದವಿ, ಡಿಗ್ರಿ, ಪೋಸ್ಟ್‌ ಗ್ರಾಜುಯೇಟ್‌ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ವಿದ್ಯಾರ್ಥಿಗಳು ಹಣಕಾಸಿನ ಆಡಚಣೆ ಕಾರಣದಿಂದ ತಮ್ಮ ಶಿಕ್ಷಣವನ್ನು ನಿಲ್ಲಿಸಬಾರದು. ವಿದ್ಯಾರ್ಥಿಗಳ ಏಳಿಗೆಗೆ ಹಣದ ಕೊರತೆ ಕಾರಣ ಆಗಬಾರದು ಎಂದು ಎಸ್‌ಬಿಐ ಆಶಾ ಸ್ಕಾಲರ್ಶಿಪ್‌ಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಎಸ್‌ಬಿಐ ಬ್ಯಾಂಕ್‌ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾರ್ಥಿವೇತನ ಪಡೆದುಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯವಾಗಲೆಂದು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ವಿಶೇಷ ಮಾಹಿತಿ: ಎಸ್‌ಬಿಐ ಖಾತೆ ಹೊಂದಿರುವ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

ಇದನ್ನೂ ಓದಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ PM-Kisan 14 ಕಂತಿನ ಅರ್ಹ ಮತ್ತು ಅನರ್ಹ ಫಲಾನುಭವಿಗಳ ಯಾರು ತಿಳಿಯಿರಿ

ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆಗಳು:
ಈ ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳು ಪ್ರಥಮ ವರ್ಷದ ಪದವಿಯನ್ನು ಓದುತ್ತಿರಬೇಕು ಹಾಗೂ ಪೋಸ್ಟ್‌ ಗ್ರಾಜುಯೇಷನ್‌ ಕೂಡ ಅನ್ವಯವಾಗುತ್ತದೆ.
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಹೆಚ್ಚಿಗೆ ಇರಬಾರದು.
ಕಡ್ಡಾಯವಾಗಿ ವಿದ್ಯಾರ್ಥಿಗಳು ಭಾರತೀಯ ಪ್ರಜೆಯಾಗಿರಬೇಕು.
ವಿದ್ಯಾರ್ಥಿಗಳು ಪಿಯುಸಿಯಲ್ಲಿ ಶೇ 75 ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು.

ದಾಖಲೆಗಳು ಏನೇನುಬೇಕು:

ಅರ್ಜಿದಾರರ ಪೋಟೋ
ಆಧಾರ್‌ ಕಾರ್ಡ್‌/ರೇಷನ್‌ ಕಾರ್ಡ್/‌ಗುರುತಿನ ಚೀಟಿ
ದ್ವಿತೀಯ ಪಿಯುಸಿ ಶೈಕ್ಷಣಿಕ ಅಂಕ ಪಟ್ಟಿ
ವಿದ್ಯಾರ್ಥಿಯ ಹಾಗೂ ಪೋಷಕರ ಬ್ಯಾಂಕ್‌ ದಾಖಲೆಗಳು
ಪ್ರಸಕ್ತ ಪದವಿಗೆ ಸೇರಿದ ಪ್ರವೇಶ ಪ್ರಮಾಣ ಪತ್ರ
ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ

ಇದನ್ನೂ ಓದಿ: ಈ ಶೈಕ್ಷಣಿಕ ಸಾಲಿನ SSLC ಮತ್ತು ದ್ವೀತಿಯ PUC ವಿದ್ಯಾರ್ಥಿಗಳಿಗೆ ಸಿಹಿಸುದ್ದಿ :

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಇದೇ ತಿಂಗಳ 30 ಏಪ್ರಿಲ್ 2023 ಕೊನೆಯ ದಿನಾಂಕವಾಗಿರುತ್ತದೆ.
ವಿದ್ಯಾರ್ಥಿವೇತನದ ಮೊತ್ತ:
ಎಸ್‌ಬಿಐ ಆಶಾ ಸ್ಕಾಲರ್ಶಿಪ್‌ ಅಡಿಯಲ್ಲಿ ಪ್ರತಿ ವಿದ್ಯಾರ್ಥಿಗೆ ಒಂದು ವರ್ಷಕ್ಕೆ 50,000/-ವಿದ್ಯಾರ್ಥಿವೇತನ ದೊರೆಯುತ್ತದೆ.

ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಎಸ್‌ ಬಿ ಐ ಬ್ಯಾಂಕ್‌ ಗೆ ಭೇಟಿ ಕೊಟ್ಟು ಮಾಹಿತಿ ಪಡೆಯಿರಿ. ವಿದ್ಯಾರ್ಥಿಗಳಿಗೆ ಅಧಿಕೃತ ವೆಬ್ ಸೈಟ್ www.buddy4stydy.com ಗೆ ಭೇಟಿ ನೀಡಿ ಅಥವಾ ಗ್ರಾಮ್ ಓನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಇತ್ತೀಚಿನ ಸುದ್ದಿಗಳು

Related Articles