ಪ.ಜಾ/ಪ.ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ಬೆಂಗಳೂರುನಲ್ಲಿ ಉಚಿತವಾಗಿ ಒಂದು ವರ್ಷದ ಅವಧಿಯ ವಿಷೇಶ ತರಬೇತಿ ಪಡೆಯಲು ಅರ್ಜಿ ಆಹ್ವಾನ ನೀಡಲಾಗಿರುತ್ತದೆ. ಈ ಒಂದು ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಲು ಸಂಸ್ಥೆಯಿಂದ ಪತ್ರಿಕೆ ಪ್ರಕಟಣೆ ಹೊರಡಿಸಲಾಗಿದೆ.
ಇದನ್ನೂ ಓದಿ: ರೈತರ ಆತ್ಮಹತ್ಯೆ ಪತ್ನಿಗೆ ವಿಧವಾ ವೇತನ,ವೃದಾಪ್ಯ ವೇತನ, ವಿವಿಧ ಸಹಾಯಧನ ಪಡೆಯುವ ಹೊಸ ಅರ್ಜಿಗೆ ಅವಕಾಶವಿಲ್ಲ, ಯಾಕೆ, ಕಾರಣವೇನು?
ಭಾರತ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯ, ನವದೆವಲೀಯ ಅಧೀನ ಕಚೇರಿಯಾದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಆವರಣ, ಕೌಶಲ್ಯ ಭವನ ಹಿಂಭಾಗ, ಡೈರಿ ಸರ್ಕಲ್, ಬೆಂಗಳೂರು-560 029 ಕಛೇರಿಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ಬೆಂಗಳೂರುನಲ್ಲಿರುವ ನೋಂದಾಯಿತ ಶೈಕ್ಷಣಿಕ ಸಂಸ್ಥೆಗಳ ಮೂಲಕ
‘’ ಒಂದು ವರ್ಷದ ಅವಧಿಯ ವಿಶೇಷ ತರಬೇತಿ’’ ಯೋಜನೆಯಡಿ ಗುಂಪು ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಜ್ಞಾನ, ಕಂಪ್ಯೂಟರ್ ಜ್ಞಾನ, ನ್ಯೂಮಿರಿಕಲ್ ಆಬಿಲಿಟಿ, ಶಾರ್ಟಹೆಂಡ್/ಸ್ಟೆನೊಗ್ರಾಫೀ(ಶೀಗ್ರಲಿಪಿ) ವಿಷಯಗಳ ತರಬೇತಿಯ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ PM-Kisan 14 ಕಂತಿನ ಅರ್ಹ ಮತ್ತು ಅನರ್ಹ ಫಲಾನುಭವಿಗಳ ಯಾರು ತಿಳಿಯಿರಿ
ತರಬೇತಿ ಅವಧಿಯಲ್ಲಿ ಅಭ್ಯರ್ತಿಗಳಿಗೆ ಹಾಜರಾತಿ ನಿಯಮಗಳಿಗೊಳಪಟ್ಟು ತರಬೇತಿ ಭತ್ಯೆ ನೀಡಲಾಗುತ್ತದೆ. ಅರ್ಜಿಯನ್ನು ಕಛೇರಿಯ ಸಮಯದಲ್ಲಿ ಸಂಪರ್ಕಿಸಿ ಅರ್ಜಿಯನ್ನು ಹಾಗೂ ಸೇವಾ ಷರತ್ತುಗಳನ್ನು
ಪಡೆಯಬಹುದು.
ಅಗತ್ಯ ದಾಖಲೆಗಳ ಜೊತೆಗೆಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ:30/04/2023ರ ಸಂಜೆ 5:00 ಒಳಗಾಗಿ ಕಛೇರಿಗೆ ನೋಂದಾಯಿತ ಪೋಸ್ಟ/ಖುದ್ದಾಗಿ ಒಂದು ಸಲ್ಲಿಸಲು ತಿಳಿಸಿದೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಮಾನ್ಯತೆ ಪಡೆದ ಜಿಲ್ಲೆಯ ಎರಡನೇ ಬೆಳೆ ತಾಲೂಕಿನ ರೈತರಿಗೆ ಹೆಚ್ಚಿದ ಗರಿಮೆ :
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಪಡೆಯಲು ಕಛೇರಿಯ ಮುಖ್ಯಸ್ಥರಾದ ಉಪ ಪ್ರಾದೇಶಿಕ ಉದ್ಯೋಗಾಧಿಕಾರಿಗಳನ್ನು ಸಂರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಉಪ ಪ್ರಾದೇಶಿಕ ಉದ್ಯೋಗಾಧಿಕಾರಿ: 080-29756192, 9916188914