Friday, September 20, 2024

ರೈತರ ಆತ್ಮಹತ್ಯೆ ಪತ್ನಿಗೆ ವಿಧವಾ ವೇತನ,ವೃದಾಪ್ಯ ವೇತನ, ವಿವಿಧ ಸಹಾಯಧನ ಪಡೆಯುವ ಹೊಸ ಅರ್ಜಿಗೆ ಅವಕಾಶವಿಲ್ಲ, ಯಾಕೆ, ಕಾರಣವೇನು?

ಆತ್ಮೀಯ ರೈತ ಬಾಂದವರೇ ನೀವು ಹೊಸದಾಗಿ ವಿವಿಧ ಇಲಾಖೆಯ ಹೊಸ ಅರ್ಜಿ ಸಲ್ಲಿಸಿ ಯೋಜನೆಗಳಲ್ಲಿ ಸಹಾಯಧನ ಪಡೆಯಲು ಇಚ್ಚಿಸಿದ್ದರೆ ಅದು ಈ ಒಂದು ಕಾಲಾವಕಾಶದಲ್ಲಿ ಅದು ಸಾಧ್ಯವಿಲ್ಲ. ಕಾರಣ ಏನಾಗಿರಬಹುದು ಮತ್ತು ಯಾವ ಯಾವ ಇಲಾಖೆಯ ಯೋಜನೆಗಳು ಅರ್ಜಿ ಸಲ್ಲಿಸಲು ಮತ್ತು ಸಹಾಯಧನ ಎಂಬುದಾಗಿ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿರುತ್ತೆವೆ ಓದಿ ತಿಳಿಯಿರಿ.

ಇದನ್ನೂ ಓದಿ: ಕೇಂದ್ರದ 6000/-ರೂ ರಾಜ್ಯದ 4000/-ರೂ ಬರದೆ ಇರಲು ಕಾರಣ,ಯೋಜನೆ ಮಾರ್ಗಸೂಚಿ ಸಂಪೂರ್ಣ ಮಾಹಿತಿ:


ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯಗಳಡಿಯಲ್ಲಿ ಸಾರ್ವತ್ರಿಕ ಚುನಾವಣೆ-2023ರ ನೀತಿ ಸಂಹಿತೆ ಜಾರಿಗೊಂಡ ಅವಧಿಯಲ್ಲಿ ಸಹಾಯಧನ ಯೋಜನೆಗಳ ಸಕಾಲ ಕಾಲಮಿತಿಯಡಿಲ್ಲಿರುವ ಕಾರಣ ಹೊಸದಾಗಿ ಅರ್ಜಿಗಳ ಸ್ವೀಕೃತಿ ಮಾಡುವ ಸೂಕ್ಷ್ಮ ನಿರ್ದೇಶನವನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಸೂಚನೆಯನ್ನು ನೀಡಿರುತ್ತದೆ.

ಹಾಗಿದ್ದರೆ ಆ ಆದೇಶದಲ್ಲಿ ಏನು ಇದೆ ಯಾವ ಯೋಜನೆ ಯಾವ ಇಲಾಖೆ ಯೋಜನೆಗಳು ತಿಳಿಯೋಣ:

ಆತ್ಮೀಯ ಸ್ನೇಹಿತರೇ ಭಾರತ ಚುನಾವಣಾ ಆಯೋಗ ರವರ ಉಲ್ಲೇಖಿತ ಪತ್ರಿಕಾ ಪ್ರಕಟಣೆ ಸಂಖ್ಯೆ ECI PN/24/2023 ದಿನಾಂಕ:29/03/2023 ರಂತೆ ರಾಜ್ಯದಲ್ಲಿ ದಿನಾಂಕ:10/05/2023 ರ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ನೀತಿ ಸಂಹಿತೆ ಜಾರಿಗೆ ಬಂದಿದ್ದು ಕಂದಾಯ ಇಲಾಖೆ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಮಾಸಿಕ ಪಿಂಚಣಿ ಯೋಜನೆಯಡಿ ಸ್ವೀಕೃತವಾಗುವ ಅರ್ಜಿಗಳು ಸಕಾಲ ಕಾಲಮಿತಿಯಡಿಯಲ್ಲಿ ಯೋಜನೆಗಳಾಗಿರುತ್ತವೆ.

ಇದನ್ನೂ ಓದಿ: ತೋಟಗಾರಿಕೆ ವಿವಿಧ ಬೆಳೆಗಳಲ್ಲಿ ರೋಗ ನಿವಾರಕವಾದ ಬೋರ್ಡೋ ದ್ರಾವಣ ತಯಾರಿಸುವ ವಿಧಾನ

ರಾಜ್ಯದಲ್ಲಿ ದಿನಾಂಕ:29/03/2023ರಿಂದ ಚುನುವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ:464/INST/2007-PLN-1 ದಿನಾಂಕ:07/01/2017 ರ Manual on Model code of conduct march-2019 ಪುಟ ಸಂಖ್ಯೆ:172 ಅನುಬಂಧ-5ರ ಕಂಡಿಕೆ ಪ್ಯಾರಾ ಸಂಖ್ಯೆ:4 ರಲ್ಲಿನ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಸಾಮಾಜಿಕ ಭದ್ರತಾ ಮಾಸಿಕ ಪಿಂಚಣಿ ಯೋಜನೆಗಳಾದ ವೃದಾಪ್ಯ ವೇತನ,ಅಂಗವಿಕಲ ವೇತನ,ಎಂಡೋಸಲ್ಮಾನ್,ವಿಧವಾ ವೇತನ,ಸಂಧ್ಯಾ ಸುರಕ್ಷಾ,ಸುರಕ್ಷಾ ವೇತನ, ಮನಸ್ಥಿತಿ, ಮೈತ್ರಿ,ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಸಹಾಯಧನ,ಸಾಲಭಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಪತ್ನಿಗೆ ವಿಧವಾ ವೇತನ ಯೋಜನೆಗಳಡಿ ಮಂಜೂರುಗಳನ್ನೂ ಚುನಾವಣೆ ಪ್ರಕ್ರಿಯೆ ಮುಗಿಯೂವರೆಗೂ ನಾಡಕಛೇರಿಯಲ್ಲಿ ಸ್ವೀಕರಿಸದಿರಲು ಸಂಸ್ಕರಿಸದಿರಲು ಹಾಗೂ ಮಂಜೂರಾತಿ ನೀಡದಿರಲು ಸೂಚನೆ ನೀಡಲಾಗಿದೆ.


ಇದನ್ನೂ ಓದಿ: ಯಾವುದಕ್ಕೆ ನಿರ್ಬಂಧ, ಯಾರಿಗೆ ಅನುಮತಿ, ಯಾರಿಗೆಲ್ಲಾ ಅನ್ವಯ : ಚುನಾವಣಾ ನೀತಿ ಸಂಹಿತೆ!!

ಮಂದೂವರೆದು ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ಅರ್ಜಿ ಸಲ್ಲಿಸಲು ನಿರ್ದಿಷ್ಟ ಕಾಲಮಿತಿ ನಿಗಧಿಪಡಿಸಿರುವ ಹಿನ್ನೆಲೆಯಲ್ಲಿ ಈ ಯೋಜನೆಗಳಡಿ ಅರ್ಜಿಗಳನ್ನು ಸ್ವೀಕರಿಸಬಹುದಾಗಿದ್ದು ಚುನಾವಣೆ ಪ್ರಕ್ರಿಯೆ ಮುಗಿಯುವ ವರೆಗೂ ಸಂಸ್ಕರಿಸದಿರಲು ತಮ್ಮ ವ್ಯಾಪ್ತಿಯ ಅಧೀನ ಅಧಿಕಾರಿಗಳಿಗೆ ಸೂಕ್ಷ್ಮ ನಿರ್ದೇಶನ ನೀಡಲು ಕೋರಿದೆ.

ಇತ್ತೀಚಿನ ಸುದ್ದಿಗಳು

Related Articles