Friday, November 22, 2024

ನಿರುದ್ಯೋಗ ಯುವಕರಿಗೆ ಜನೌಷಧಿ ಕೇಂದ್ರ ತೆರೆಯಲು ಉತ್ತಮ ಅವಕಾಶ

ಆತ್ಮೀಯ ಸ್ನೇಹಿತರೇ ಪದವಿ ಮುಗಿಸಿರುವ ಎಷ್ಟೂ ಯುವಕರಿಗೆ ನಾವು ಒಂದು ಒಳ್ಳೆಯ ಉದ್ಯೋಗ ಪಡೆಯಬೇಕು ಅಥವಾ ಉದ್ಯಮ ಮಾಡಬೇಕು ನಾವು ನಮ್ಮ ಜೀವನ ರೂಪಿಸಿಕೊಳ್ಳಬೇಕು.ನಮ್ಮ ತಂದೆ,ತಾಯಿ, ಮತ್ತು ಕುಟುಂಬದ ಜವಬ್ದಾರಿಯನ್ನು ತೆಗಿದುಕೊಳ್ಳಬೇಕು ಸಮಾಜದಲ್ಲಿ ಉತ್ತಮರಾಗಿ ಬೆಳೆಯಬೇಕು ಅಂತ ಎಲ್ಲಾ ಸ್ನೇಹಿತರ ಆಸೆ ಇರುತ್ತದೆ. ಈಗಿರುವಾಗ ನಿರುದ್ಯೋಗ ಯುವಕರಿಗಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತವೆ .ಆ ಒಂದು ನಿಟ್ಟಿನಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಔಷಧಿ, ಮಾತ್ರೆಗಳನ್ನು ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯನ್ನು ದೇಶದಾದ್ಯಂತ ಆರಂಭಿಸಿತ್ತು.


ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ದೇಶದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 651 ಜನೌಷಧಿ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ಮುಂದಾರಗಿರುತ್ತದೆ. ಇಲ್ಲಿ ನೀಡಿರುವ ಈ ಮಾಹಿತಿಯನ್ನು ತಿಳಿದು ನಿಮಗೆ ಗೊತ್ತಿರುವ ನಿಮ್ಮ ಸ್ನೇಹಿತರಿಗೆ ಮತ್ತು ಆಪ್ತರಿಗೆ ಮಾಹಿತಿ ತಿಳಿಯದೆ ಇರುವ ಎಲ್ಲಾ ಗ್ರಾಮೀಣ ಭಾಗದ ಪದವೀದರರಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.

ಇದನ್ನೂ ಓದಿ: ಈ ಕಾರಣಗಳಿಂದ ನಿಮ್ಮ ರೇಶನ್ ಕಾರ್ಡ ರದ್ದಾಗಬಹುದು ಎಚ್ಚರ ರೇಶನ್ ಕಾರ್ಡ ಹೊಂದಿರುವವರು ಗಮನಿಸಬೇಕಾದ ಮುಖ್ಯ ಮಾಹಿತಿ.

ಜನೌಷದ ಕೇಂದ್ರ ತೆರೆಯಲು ಬೇಕಾದ ಅರ್ಹತೆಗಳೇನು?

  • B.Pharma ಅಥವಾ D.Pharma ಪದವಿಯನ್ನು ಪಡೆದಿರಬೇಕು.
  • *ಹೆಚ್ಚುವರಿಯಾಗಿ, ನೀವು B.Pharma/D.Pharma ಪದವಿ ಹೊಂದಿರುವವರನ್ನು ನೇಮಿಸಿಕೊಂಡರಾದರು ನೀವು ಜನೌಷಧಿ ಕೇಂದ್ರವನ್ನು ಪ್ರಾರಂಭಿಸಬಹುದು.
  • *ಹೆಚ್ಚುವರಿಯಾಗಿ, ಸರ್ಕಾರಿ ಆಸ್ಪತ್ರೆಯ ಮೈದಾನದಲ್ಲಿ PM-JAY ಸ್ಟೋರ್ ಅನ್ನು ಸ್ಥಾಪಿಸಲು ಅವಕಾಶ ಇರುತ್ತದೆ.
  • *ಕೇಂದ್ರ ತೆರೆಯಲು NGO ಅಥವಾ ಚಾರಿಟಿ ಟ್ರಸ್ಟ್‌ಗೆ ಅವಕಾಶಗಳು ನೀಡಲಾಗುತ್ತದೆ.

ಜನೌಷಧ ಕೇಂದ್ರ ತೆರೆಯಲು ಬೇಕಾದ ದಾಖಲೆಗಳು:

  • ವೈಯಕ್ತಿವಾಗಿ ತೆರೆಯಬೇಕಾದರೆ
    *ಆಧಾರ್ ಕಾರ್ಡ್
  • *PAN ಕಾರ್ಡ್
  • *SC/ST ಪ್ರಮಾಣಪತ್ರ (ಯಾವುದಾದರೂ ಇದ್ದರೆ)
  • *ದೈಹಿಕ ಅಸಾಮರ್ಥ್ಯ ಪ್ರಮಾಣಪತ್ರ (ಯಾವುದಾದರೂ ಇದ್ದರೆ)

ಸಂಸ್ಥೆಗಳು ಕೇಂದ್ರ ತೆರೆಯಲಿ ದಾಖಲೆಗಳು:(ಫಾರ್ಮಾಸಿಸ್ಟ್ ನೋಂದಣಿ ಪ್ರಮಾಣೀಕರಣ
ಸಂಸ್ಥೆಗಳು/ ಸಂಸ್ಥೆಗಳು/ NGO/ ಆಸ್ಪತ್ರೆಗಳು)

*ಆಧಾರ್ ಕಾರ್ಡ್ *PAN ಕಾರ್ಡ್ *ಫಾರ್ಮಾಸಿಸ್ಟ್ ಪ್ರಮಾಣೀಕರಣ
ಸಂಸ್ಥೆಯ ನೋಂದಣಿ ಪ್ರಮಾಣಪತ್ರ

ಇದನ್ನೂ ಓದಿ: ಮುಂಗಾರು ಹಂಗಾಮಿನ ಮದ್ಯಂತರ ಬೆಳೆವಿಮೆ ಬಿಡುಗಡೆ 5.59 ಲಕ್ಷ ರೈತರಿಗೆ ರೂ.297.93 ಕೋಟಿ

ಸರ್ಕಾರಿ ನಾಮನಿರ್ದೇಶಿತ ಸಂಸ್ಥೆಗಳು ತೆರೆಯಲು ದಾಖಲೆಗಳು
*ನೋಂದಣಿ ಪ್ರಮಾಣಪತ್ರ *ಆಧಾರ್ ಕಾರ್ಡ್
ಫಾರ್ಮಾಸಿಸ್ಟ್
*ನೋಂದಣಿ ಪ್ರಮಾಣೀಕರಣ *PAN ಕಾರ್ಡ್

ಅರ್ಜಿ ಸಲ್ಲಿಸುವುದು ಹೇಗೆ?


ಪ್ರಧಾನ ಮಂತ್ರಿ ಜನೌಷದಿ ಕೇಂದ್ರದ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಇಲ್ಲಿ ಓತ್ತಿ http://janaushadhi.gov.in/ಮುಖಪುಟದಲ್ಲಿ, ನೀವು ಕೇಂದ್ರಕ್ಕಾಗಿ ಅನ್ವಯಿಸು ಆಯ್ಕೆಯನ್ನು ಆರಿಸಬೇಕು .PM-JAY ಮುಖಪುಟ

ಒಮ್ಮೆ ಭೇಟಿ ನೀಡಿದ ನಂತರ ಲಭ್ಯವಿರುವ ಸ್ಥಳಗಳ ಪಟ್ಟಿಯನ್ನು ಸಹ ನೀವು ಪರಿಶೀಲಿಸಬಹುದಾಗಿರುತ್ತದೆ.
ಅಥವಾ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ್ ಓನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
.

ಇದನ್ನೂ ಓದಿ: ಈ ಯೋಜನೆಯಡಿ 2 ಕೋಟಿ ವರೆಗೆ ಸಾಲ ಸೌಲಭ್ಯ.

ಇತ್ತೀಚಿನ ಸುದ್ದಿಗಳು

Related Articles