Friday, November 22, 2024

ಈ ಕಾರಣಗಳಿಂದ ನಿಮ್ಮ ರೇಶನ್ ಕಾರ್ಡ ರದ್ದಾಗಬಹುದು ಎಚ್ಚರ ರೇಶನ್ ಕಾರ್ಡ ಹೊಂದಿರುವವರು ಗಮನಿಸಬೇಕಾದ ಮುಖ್ಯ ಮಾಹಿತಿ.

ಆತ್ಮೀಯ ಗೆಳೆಯರೇ ಅತೀ ಮುಖ್ಯವಾಗಿ ಪಡಿತರ ಚೀಟಿ ಹೊಂದಿದ ನಾವೆಲ್ಲರೂ ತಿಳಿಯಬೇಕಾದ ಮಾಹಿತಿ ಆಗಿದೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಅನುಸರಿಸಿ, ಕರ್ನಾಟಕ ರಾಜ್ಯ ಸರ್ಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಸಬ್ಸಿಡಿ ಆಹಾರ ಧಾನ್ಯವನ್ನು ಖರೀದಿಸಲು ಅರ್ಹರಾಗಿರುವ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ಒದಗಿಸುವ ವ್ಯವಸ್ಥೆ ಅಗಿರುತ್ತದೆ. ಇದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನೀಡುವ ಒಂದು ರೀತಿಯ ಗುರುತಿನ ಚೀಟಿ ಕರ್ನಾಟಕದಲ್ಲಿ, ದುರ್ಬಲ ಗುಂಪುಗಳನ್ನು ಗೋತ್ತು ಪಡಿಸಲು ಮತ್ತು ಅವರ ಆಹಾರ ಭದ್ರತೆಯನ್ನು ಖಚಿತ ಪಡಿಸಿಕೊಳ್ಳಲು ಪಡಿತರವನ್ನು ಒದಗಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇಲ್ಲಿ, ಕರ್ನಾಟಕ ಸರ್ಕಾರದ ಪಡಿತರ ಚೀಟಿ ಕಾರ್ಯಕ್ರಮದ ಕುರಿತು ನಾವು ನಿಮಗೆ ಸೂಕ್ತವಾದ ಮಾಹಿತಿಯನ್ನು ಈ ಕೆಳಗೆ ನೀಡರುತ್ತೆವೆ.

ಇದನ್ನೂ ಓದಿ: ಯುವಕ ಸಂಘಗಳಿಗೆ 5 ಲಕ್ಷಕ್ಕಿಂತ ಹೆಚ್ಚಿನ ಸಾಲ ಕೊಡಲು ತೀರ್ಮಾನ.

ಕೇಂದ್ರ ಸರ್ಕಾರದಿಂದ ಲಕ್ಷಾಂತರ ಪಡಿತರ ಚೀಟಿದಾರರಿಗೆ ಉಚಿತ ಪಡಿತರ ಸೌಲಭ್ಯ ನೀಡಲಾಗುತ್ತಿದೆ. ಈ ವರ್ಷವೂ ಅಂದರೆ 2023ರಲ್ಲಿಯೂ ಪಡಿತರ ಚೀಟಿದಾರರಿಗೆ ಉಚಿತ ಪಡಿತರ ಸೌಲಭ್ಯ ದೊರೆಯಲಿದೆ.

ಆದರೆ ಅನೇಕ ಅನರ್ಹರು ಉಚಿತ ಪಡಿತರ ಲಾಭ ಪಡೆಯುತ್ತಿರುವುದು ಕಂಡು ಬಂದಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ನೀವೇನಾದರೂ ಅನರ್ಹರಾಗಿ ಉಚಿತ ಪಡಿತರ ಪಡೆದುಕೊಳ್ಳುತ್ತಿದ್ದರೆ, ನೀವಾಗಿಯೇ ಪಡಿತರ ಚೀಟಿಯನ್ನು ರದ್ದುಪಡಿಸಬೇಕು ಎಂದು ಸರ್ಕಾರ ಮನವಿ ಮಾಡಿಕೊಂಡಿದೆ.

ಪಡಿತರ ಚೀಟಿ ರದ್ದುಪಡಿಸದಿದ್ದರೆ ಆಹಾರ ಇಲಾಖೆ ತಂಡ ಪರಿಶೀಲನೆ ಬಳಿಕ ರದ್ದುಪಡಿಸಲಿದೆ. ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಬಹುದು.

ಪಡಿತರ ಚೀಟಿಯ ಉಪಯೋಗಗಳು:


*ಸರ್ಕಾರಿ ಪ್ರಾಯೋಜಿತ ಸ್ಕಾಲರ್‌ಶಿಪ್‌ಗಳು ಮತ್ತು ಕಾರ್ಯಕ್ರಮಗಳು, ಆದಾಯ ಪ್ರಮಾಣಪತ್ರಗಳು, ಪಾಸ್‌ಪೋರ್ಟ್‌ಗಳು ಮತ್ತು ಇತರ ಸರ್ಕಾರ ನೀಡಿದ ದಾಖಲೆಗಳಿಗೆ ಅರ್ಜಿ ಸಲ್ಲಿಸುವಾಗ ಇದನ್ನು ಗುರುತಿನ ರೂಪದಲ್ಲಿ ಉಪಯೋಗಿಸಬಹುದಾಗಿರುತ್ತದೆ.
*ಸಿರಿಧಾನ್ಯಗಳು, ಎಣ್ಣೆ ಮತ್ತು ಇತರ ಪದಾರ್ಥಗಳಂತಹ ಹಲವಾರು ಅಗತ್ಯ ಆಹಾರ ಪದಾರ್ಥಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಖರೀದಿಸಬಹುದಾಗಿರುತ್ತದೆ.
*ವ್ಯಕ್ತಿಗಳ ಮೇಲಿನ ಆರ್ಥಿಕ ಒತ್ತಡವನ್ನು ನಿವಾರಿಸುತ್ತದೆ.

ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಬಡ ವ್ಯಕ್ತಿಗಳು ಮತ್ತು ವ್ಯಕ್ತಿಗಳು ಕರ್ನಾಟಕ ಪಡಿತರ ಚೀಟಿ ಪಟ್ಟಿಯಿಂದ ಪ್ರಯೋಜನ ಪಡೆಯಬಹುದು.

ರದ್ದಾಗಲು ಮುಖ್ಯ ಕಾರಣಗಳು:

*ಕಾರ್ಡ್ ಹೊಂದಿರುವವರು 100 ಚದರ ಮೀಟರ್ ವಿಸ್ತೀರ್ಣದ ಪ್ಲಾಟ್/ಫ್ಲಾಟ್ ಅಥವಾ ಮನೆಯನ್ನು ಹೊಂದಿದ್ದರೆ,
*ನಾಲ್ಕು ಚಕ್ರದ ವಾಹನ/ಟ್ರಾಕ್ಟರ್ ಹೊಂದಿದ್ದರೆ ಅನರ್ಹರು.

*ಶಸ್ತ್ರಾಸ್ತ್ರ( ಗನ್) ಪರವಾನಗಿ, ಹೊಂದಿದ್ದರೆ ಅನರ್ಹರಾಗುತ್ತಿರಿ
*ಕುಟುಂಬದ ಆದಾಯವು ಗ್ರಾಮದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಮತ್ತು ನಗರದಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಇದ್ದರೂ ಅಂಥವರು ಅನರ್ಹರಾಗುತ್ತಾರೆ.

ಇಂಥ ಜನರು ಅವರ ಪಡಿತರ ಚೀಟಿಯನ್ನು ಪಡೆಯಲು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ, ಒಪ್ಪಿಸಬೇಕಾಗುತ್ತದೆ.
ಸರ್ಕಾರದ ನಿಯಮಗಳ ಪ್ರಕಾರ, ಪಡಿತರ ಚೀಟಿದಾರರು ಕಾರ್ಡ್ ಅನ್ನು ಒಪ್ಪಿಸದಿದ್ದರೆ, ತನಿಖೆಯ ನಂತರ ಅಂತಹ ಜನರ ಕಾರ್ಡ್ ಅನ್ನು ರದ್ದುಗೊಳಿಸಲಾಗುತ್ತದೆ. ಇದರೊಂದಿಗೆ ಆ ಕುಟುಂಬದ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಇಲಾಖೆಯ ಅಧಿಕಾರಿಗಳು ಮತ್ತು ಸಚಿವರು ಮಾಹಿತಿಯನ್ನು ನೀಡಿರುತ್ತಾರೆ.

ಇದನ್ನೂ ಓದಿ: ಗುಡ್ ನ್ಯೂಸ್ : 2000-11000/- ರೂ ಈ ವರ್ಗದ ಮಕ್ಕಳಿಗೂ ಮುಖ್ಯ ಮಂತ್ರಿ ರೈತ ವಿದ್ಯಾನಿಧಿ

ರದ್ದುಗೊಳಿಸಿದ ಪಡಿತರ ಚೀಟಿ ಪಟ್ಟಿಯನ್ನು ವೀಕ್ಷಿಸಲು

ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಇಲ್ಲಿ ಓತ್ತಿhttps://ahara.kar.nic.in/
.*ಮುಖ್ಯ ಪುಟದಲ್ಲಿ, ಇ-ಸೇವೆಗಳ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

*ಈಗ, ಇ-ರೇಷನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ.

ರದ್ದುಗೊಳಿಸಿದ / ಅಮಾನತುಗೊಳಿಸಿದ ಆಯ್ಕೆಮಾಡಿ ಪಟ್ಟಿ.

ಈಗ ನೀವು ಜಿಲ್ಲೆ, ತಾಲೂಕು, ತಿಂಗಳು ಮತ್ತು ವರ್ಷವನ್ನು ಆಯ್ಕೆ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ: ಕರ್ನಾಟಕ ಪಡಿತರ ಚೀಟಿ
ವಿಳಾಸ: ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ,
ಎವಲ್ಯೂಷನ್ ಸೌಧ, ಬೆಂಗಳೂರು – 560001. ಸಹಾಯವಾಣಿ ಸಂಖ್ಯೆ: 1967 ಟೋಲ್-ಫ್ರೀ ಸಂಪರ್ಕ ಸಂಖ್ಯೆ: 1800-425-9339. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ahara.kar.nic.in

ಇತ್ತೀಚಿನ ಸುದ್ದಿಗಳು

Related Articles