Thursday, November 21, 2024

ಯುವಕ ಸಂಘಗಳಿಗೆ 5 ಲಕ್ಷಕ್ಕಿಂತ ಹೆಚ್ಚಿನ ಸಾಲ ಕೊಡಲು ತೀರ್ಮಾನ.

ಆತ್ಮೀಯ ಯುವ ರೈತ ಮಿತ್ರರೇ ಕಳೆದ ವರ್ಷ ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವಾಮಿ ವಿವೇಕಾನಂದ ಸ್ವ ಸಹಾಯ ಗುಂಪುಗಳ ರಚನೆಗೆ ಆದೇಶ ಹೊರಡಿಸಲಾಗಿತ್ತು. ಅದರಂತೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 1 ರಂತೆ ಸ್ವಾಮಿ ವಿವೇಕಾನಂದ ಸ್ವ ಸಹಾಯ ಗುಂಪುಗಳ ರಚನೆ ಮಾಡಲು ಕಳೆದ ವರ್ಷ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕೆ ರೂ. 500 ಕೋಟಿ ಅನುದಾನವನ್ನು ಮೀಸಲಿಟ್ಟಿತ್ತು.

ಇದರಂತೆ ಮೊದಲ ಕಂತಿನಲ್ಲಿ 10 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಈಗಾಗಲೆ ರಚನೆ ಮಾಡಿರುವಂತಹ ಸ್ವಾಮಿ ವಿವೇಕಾನಂದ ಸ್ವ ಸಹಾಯ ಗುಂಪುಗಳಿಗೆ 10 ಸಾವಿರ ಹಣವನ್ನು ನೀಡುವುದರ ಜೊತೆಗೆ ಯುವಕರನ್ನು ಬೆಂಬಲಿಸಲು ಮತ್ತು ಯುವಕರಿಗೆ ಮೊದಲ ಬಾರಿಗೆ ಸ್ವ ಉದ್ಯೋಗ ಕೈಗೊಳ್ಳಲು ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗವಕಾಶ ಒದಗಿಸುವುದು,

ಅವರು ವಾಸವಾದ ಗ್ರಾಮಗಳಲ್ಲಿ ಸ್ವಯಂ ಉದ್ಯೋಗ ಅವಕಾಶ ಒದಗಿಸುವುದು ಹಾಗೂ ಆರ್ಥಿಕ ಕಾರ್ಯಗಳನ್ನು ಕೈಗೊಳ್ಳಲು ಯುವಜನರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯುವ ಸ್ವ ಸಹಾಯ ಗುಂಪುಗಳಿಗೆ ರೂ.10,000 ಸುತ್ತುನಿಧಿ 1 ಲಕ್ಷ ಸಹಾಯಧನದೊಂದಿಗೆ 5 ಲಕ್ಷಕಿಂತ ಹೆಚ್ಚಿನ ಸಾಲ ಸೌಲಭ್ಯವನ್ನು ನೀಡಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: ಮುಂಗಾರು ಹಂಗಾಮಿನ ಮದ್ಯಂತರ ಬೆಳೆವಿಮೆ ಬಿಡುಗಡೆ 5.59 ಲಕ್ಷ ರೈತರಿಗೆ ರೂ.297.93 ಕೋಟಿ

ಜೊತೆಗೆ ಸರ್ಕಾರದಿಂದಲೇ ಕೌಶಲ್ಯಭಿವೃದ್ದಿ,ಉದ್ಯಮಶೀಲತೆ ಬಗ್ಗೆ ತರಬೇತಿ ಮತ್ತು ಸಾಲವನ್ನು ಕೂಡಾ ಕೊಟ್ಟು ಯುವಕರಿಗೆ ಪ್ರೋತ್ಸಾಹಿಸಲಾಗುವುದು.

ವಿ.ಸೂ. : (ಉದ್ಯಮ ಮತ್ತು ಅರ್ಹತೆಗೆ ಅನುಗುಣವಾಗಿ ಸಾಲ ನೀಡಲು ಅವಕಾಶವಿದೆ.)

ಗುಂಪು ರಚನೆ ಮಾಡುವುದು ಎಲ್ಲಿ ?

ಸ್ವಾಮಿ ವಿವೇಕಾನಂದ ಸ್ವ ಸಹಾಯ ಗುಂಪು ರಚನೆ ಮಾಡಲು ಆಸಕ್ತ ಯುವಜನರು ಆಯಾ ಗ್ರಾಮದ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಯನ್ನು ಬೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: ಗುಡ್ ನ್ಯೂಸ್ :2000-11000/- ರೂ ಈ ವರ್ಗದ ಮಕ್ಕಳಿಗೂ ಮುಖ್ಯ ಮಂತ್ರಿ ರೈತ ವಿದ್ಯಾನಿಧಿ

ಸ್ವಸಹಾಯ ಸಂಘ ರಚನೆಗೆ ಅರ್ಹತೆ ಮತ್ತು ಮಾನದಂಡ :

ಸ್ವ ಸಹಾಯ ಸಂಘ ರಚಿಸಲು 18ರಿಂದ 29 ವರ್ಷ ವಯಸ್ಸಿನೊಳಗಿನವರಾಗಿರಬೇಕು.

ಒಂದು ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪು ರಚಿಸುವುದಕ್ಕೆ ಕನಿಷ್ಠ 10 ಸದಸ್ಯರು ಇರಬೇಕು. ಗರಿಷ್ಠ 20 ಸದಸ್ಯರ ಸೇರ್ಪಡೆಗೆ ಅವಕಾಶ ಇರುತ್ತದೆ.

ಸರ್ಕಾರದ ಹೊಸ ಆದೇಶ

ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಎರಡು ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪುಗಳಂತೆ 12,000 ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳ ರಚನೆಗೆ ಆದೇಶ ಹೊರಡಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಮಾಹಿತಿಯನ್ನು ನೀಡಿರುತ್ತಾರೆ.

ರಾಜ್ಯದ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯುವ ಸ್ವಸಹಾಯ ಸಂಘ ಸ್ಥಾಪಿಸಿ, ಸ್ವಯಂ ಉದ್ಯೋಗ ಕೈಗೊಳ್ಳುವುದಕ್ಕೆ ನೆರವು ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಮೊದಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಗುಂಪಿನಂತೆ 6000 ಗುಂಪುಗಳನ್ನು ರಚಿಸಲು ಆದೇಶಿಸಲಾಗಿತ್ತು.

ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳ ರಚನೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದರಿಂದ ಪ್ರತಿ ಪಂಚಾಯತ್ ಗೆ ಎರಡರಂತೆ 12 ಸಾವಿರ ಗುಂಪುಗಳನ್ನು ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದರು. ಅದರಂತೆ ಸರ್ಕಾರ ಈ ಆದೇಶ ಹೊರಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳು

Related Articles