Friday, September 20, 2024

ಮುಂಗಾರು ಹಂಗಾಮಿನ ಮದ್ಯಂತರ ಬೆಳೆವಿಮೆ ಬಿಡುಗಡೆ 5.59 ಲಕ್ಷ ರೈತರಿಗೆ ರೂ.297.93 ಕೋಟಿ

ಆತ್ಮೀಯ ರೈತ ಬಾಂದವರೇ ಪ್ರಧಾನಮಂತ್ರಿ ಪಸಲ್ ಭೀಮಾ ಯೋಜನೆಯು ರೈತರ ಅರ್ಜಿಗಳ ಪರಿಹಾರ ವಿಚಾರದಲ್ಲಿ ವಿಶ್ವದ ನಂಬರ್‍ ಒನ್ ಬೆಳೆ ವಿಮಾ ಯೋಜನೆ ಆಗಿರುತ್ತದೆ. ರಾಜ್ಯ ಸರ್ಕಾರ ಸೂಚಿಸಿದ ಬೆಳೆಗಳಿಗೆ ಬಿತ್ತನೆ ಪೂರ್ವದಿಂದ ಹಿಡಿದು ಸುಗ್ಗಿಯ ಅಂದರೆ ಕಟಾವಿನವರೆಗೂ ಎದುರಿಸುವ ಅತೀವೃಷ್ಠಿ, ಬರಗಾಲ, ನೆರೆಹಾವಳಿ,ಇನ್ನೂ ಮುಂತಾದ ಪ್ರಕೃತಿ ವಿಕೋಪದಂತಹ ಅಪಾಯಗಳಿಗೆ ಪರಿಹಾರ ವಿಮೆಯನ್ನು ರೈತ ಸುರಕ್ಷಾ ಪ್ರಧಾನಮಂತ್ರಿ ಪಸಲ್ ಭೀಮಾ ಯೋಜನೆಯಡಿ ಒದಗಿಸಲಾಗುತ್ತದೆ.

ಯೋಜನೆಯ ಉದ್ದೇಶ :

*ನೈಸರ್ಗಿಕ ವಿಕೋಪಗಳು, ಕೀಟಗಳು ಮತ್ತು ರೋಗಗಳು ಬೆಳೆಯ ಮೇಲೆ ಸಾಮೂಹಿಕ ಹಾನಿ ಆದಲ್ಲಿ ಬೆಳೆಯ ಯಾವುದೇ ವೈಪಲ್ಯ ಸಂದರ್ಬದಲ್ಲಿ ರೈತರಿಗೆ ವಿಮಾ ರಕ್ಷಣೆಯನ್ನು ಮತ್ತು ವಿಮಾ ಸಂದಾಯ ಮಾಡುವುದು.
*ಕೃಷಿಕರು ತಮ್ಮ ನಿರಂತರತೆಯನ್ನು ಖಚಿತಪಡಿಸಲು ರೈತರು ಆದಾಯ ಸ್ಥಿರಗೊಳಿಸಲು.
*ಹೊಸ ಮತ್ತು ಆಧುನಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಪ್ರೋತ್ಸಾಹಿಸಲು.

ಇದನ್ನೂ ಓದಿ : ಗುಡ್ ನ್ಯೂಸ್ :2000-11000/- ರೂ ಈ ವರ್ಗದ ಮಕ್ಕಳಿಗೂ ಮುಖ್ಯ ಮಂತ್ರಿ ರೈತ ವಿದ್ಯಾನಿಧಿ

ವಿಮಾ ಕಂತು ಎಲ್ಲಿ ತುಂಬುವುದು ?


ವಿಮಾ ಕಂತಿನ ಹಣವನ್ನು ಬೆಳೆ ಸಾಲ ಪಡೆಯುವ ರೈತರು ತಮ್ಮ ಸಾಲ ಪಡೆಯುವ ಹಣಕಾಸು ಸಂಸ್ಥೆಗಳಲ್ಲಿ ತುಂಬಬೇಕು. ಬೆಳೆಸಾಲ ಪಡೆಯದ ರೈತರು ಹಣಕಾಸು ಸಂಸ್ಥೆ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕಂತು ತುಂಬಿ ಬೆಳೆಯನ್ನು ವಿಮೆಗೊಳಿಸಬಹುದು.

ಬೆಳೆವಿಮೆ ಮಾಡಿಸಿದ ರೈತರಿಗೆ ಆಯಾ ವರ್ಷವೇ ರೈತರಿಗೆ ವಿಮಾ ಪರಿಹಾರ ಹಣ ವಿತರಿಸಲಾಗುತ್ತಿದೆ.

ಈಗಾಗಲೇ ಪ್ರಸಕ್ತ ಸಾಲಿನಲ್ಲಿ ನೈಸರ್ಗಿಕ ವಿಕೋಪ ದಿಂದ ಲಕ್ಷಾಂತರ ರೈತರ ಬೆಳೆಹಾನಿ ವರದಿಯಾಗಿದ್ದು, ಒಟ್ಟಾರೆಯಾಗಿ ಬೆಳೆಹಾನಿಯಾದ ನಷ್ಟ ಪರಿಹಾರವಾಗಿ ಒಟ್ಟು 10.54 ಲಕ್ಷ ರೈತರಿಗೆ 973.91 ಕೋಟಿರೂ. ನಿಗದಿಪಡಿಸಲಾಗಿದ್ದು, ಈಗಾಗಲೇ 5.59 ಲಕ್ಷ ರೈತರಿಗೆ 297.93 ಕೋಟಿ ರೂ. ಮುಂಗಾರು ಬೆಳೆವಿಮೆ ಹಣ ರೈತರಿಗೆ ಪಾವತಿಸಲಾಗಿದೆ.

ಮೊದಲು ಹಿಂದಿನ ವರ್ಷದ ಬೆಳೆವಿಮಾ ಪರಿಹಾರವನ್ನು ಈ ವರ್ಷ ಪಾವತಿಸುತ್ತಿದ್ದರು ಅಂದರೆ ರೈತರು ಬೆಳೆಹಾನಿ ಪರಿಹಾರಕ್ಕಾಗಿ ಒಂದು ವರ್ಷ ಕಾಯಬೇಕಾಗಿರುತ್ತಿತ್ತು. ಆದರೆ ಇನ್ನು ಮುಂದೆ ಆಯಾ ವರ್ಷದ ಬೆಳೆವಿಮಾ ಪರಿಹಾರ ಮೊತ್ತ ಆಯಾ ವರ್ಷವೇ ರೈತರ ಖಾತೆಗೆ ವಿಮೆ ಜಮಾ ಆಗಲಿದೆ ಎಂದು ಕೃಷಿ ಇಲಾಖೆಯ ಕೃಷಿ ನಿರ್ದೆಶಕರು ತಿಳಿಸಿದ್ದಾರೆ.


ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿಯಲ್ಲಿ ಬೆಳೆವಿಮೆ ಮಾಡಿಸಿದ ರೈತರಿಗೆ ವಿಮಾ ಪರಿಹಾರ ಹಣ ಈ ವರ್ಷವೇ ಸಿಗಲಿದೆ.

ರೈತರಿಗೆ ಅವರು ಬೆಳೆದ ಬೆಳೆಗಳಲ್ಲಿ ಮುಖ್ಯವಾಗಿ ನೆಲಗಡಲೆ, ಮೆಕ್ಕೆಜೋಳ ,ಭತ್ತ, ತೊಗರಿ, ಉದ್ದು, ಸೋಯಾಬೀನ್,ಈ ರೀತಿಯ ಬೆಳೆಗಳಲ್ಲಿ ಕೀಟಭಾದೆ ಅಥವಾ ಅತಿಯಾದ ಮಳೆ, ಪ್ರವಾಹ , ಬೆಂಕಿ, ಗಾಳಿ, ಗುಡ್ದಕುಸಿತ, ಅತಿವೃಷ್ಟಿ, ಅನಾವೃಷ್ಟಿ, ಮುಂತಾದ ಪ್ರಾಕೃತಿಕ ವಿಕೋಪಗಳಿಂದ ಬೆಳೆ ಸಂಪೂರ್ಣ ಹಾನಿ ಅಥವಾ 50% ಹಾನಿ ಸಂಭವಿಸಿದಲ್ಲಿ ಸಂಭವಿಸಿದ ನಷ್ಟದ ಪರಿಹಾರವನ್ನು ನೀಡಲಾಗಿರುತ್ತದೆ.

ಇಂತಹ ಸ್ಥಳೀಯ ಗಂಡಾಂತರಗಳ ಕಾರಣದಿಂದ ಬೆಳೆ ನಷ್ಟ ಸಂಭವಿಸಿದರೆ, ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ನೇರವಾಗಿ ಸಮಬಂಧಪಟ್ಟ ಅನುಷ್ಟಾನಗೊಳಿಸುವ ವಿಮಾ ಸಂಸ್ಥೆಗಳ ಅಚೇರಿಗಳಿಗೆ ಅಥವಾ ಹಣಕಾಸು ಸಂಸ್ಥೆ ಅಥವಾ ಕೃಷಿ ಇಲಾಖೆ ಮೂಲಕ ತಕ್ಷಣ ಸೂಚನೆ ನೀಡತಕ್ಕದ್ದು ಇಂತಹ ಸಂದರ್ಭದಲ್ಲಿ ವಿಮೆ ಮಾಡಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗೊಳಗಾಗಿ ತಿಳಿಸತಕ್ಕದ್ದು. ನಷ್ಟದ ಬಗೆಗಿನ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ವಿಮಾ ಸಂಸ್ಥೆಗಳ ಬೆಳೆ ನಷ್ಟವನ್ನು ನಿರ್ಧರಿಸುವುದಕ್ಕೆ ನಷ್ಟ ನಿರ್ಧಾರಕರನ್ನು ಸಂಭಂಧ ಪಟ್ಟ ಪ್ರದೇಶಕ್ಕೆ 48 ಗಂಟೆಯೊಳಗಾಗಿ ನಿಯೋಜನೆ ಮಾಡಲಾಗುದು.

ಸಾಮಾನ್ಯವಾಗಿ ಬೆಳೆ ಅಂದಾಜು ಸಮೀಕ್ಷೇಯಡಿ ರಾಜ್ಯ ಸರ್ಕಾರವು ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಕಂಡು ಹಿಡಿಯಲಾದ ಇಳುವರಿ ಮಾಹಿತಿಯನ್ನು ಮಾತ್ರ ಪರಿಗಣಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಲೆಕ್ಕ ಹಾಕಿ ಇತ್ಯರ್ಥಪಡಿಸಲಗುತ್ತದೆ.

ಇದನ್ನೂ ಓದಿ :250 ಬಗೆಯ ಅಧಿಕ ಉದ್ದಿಮೆಗಳನ್ನು ಪ್ರಾರಂಭಿಸಲು ಗರಿಷ್ಠ 50 ಲಕ್ಷಗಳವರೆಗೆ ಸಾಲಕ್ಕೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಮುಂಗಾರು ಬೆಳೆವಿಮೆ ಪರಿಹಾರ ಬಂದಿದೆಯೇ ಚೆಕ್ ಮಾಡಿ :


ನಿಮ್ಮ ಮುಂಗಾರು ಬೆಳೆವಿಮೆ ಪರಿಹಾರದ ಮಾಹಿತಿಯನ್ನು ಚೆಕ್ ಮಾಡಲು ಈ ಕೆಳಗಿನ ವೆಬ್ಸೈಟ್ ಓಪನ್ ಮಾಡಿ : https://www.samrakshane.karnataka.gov.in

ಇದನ್ನೂ ಓದಿ : ಈ ಜಿಲ್ಲೆಯಲ್ಲಿ ಕರ್ನಾಟಕ ಒನ್ ತೆರೆಯಲು ಅವಕಾಶ ? ಯಾವ ಜಿಲ್ಲೆ?ಅರ್ಹತೆ ಏನು? ಎಷ್ಟು ಕೇಂದ್ರ ತರೆಯಲು ಅವಕಾಶ?

ವಿಮೆ ಋತು ಮತ್ತು ವರ್ಷದ ಆಯ್ಕೆ ಮಾಡಿ, ನಂತರ ವರ್ಷ ಸೆಲೆಕ್ಟ್ ಮಾಡಿ, ಮುಂದೆ/GO ಅಂತ ಇರುವುದರ ಮೇಲೆ ಕ್ಲಿಕ್ ಮಾಡಿ.

ಈಗ ವೆಬ್ಸೈಟ್ ಮುಖಪುಟದಲ್ಲಿ Farmer ಆಯ್ಕೆಯಲ್ಲಿ Check Status ಆಯ್ಕೆ ಇದ್ದು ಅದನ್ನು ಕ್ಲಿಕ್ ಮಾಡಿ

ಇಲ್ಲಿ ನೀವು ಬೆಳೆವಿಮೆ ಮಾಡಿದ ಸಂದರ್ಭದಲ್ಲಿ ನೀಡಲಾದ Proposal ಸಂಖ್ಯೆ, ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ಸಂಖ್ಯೆ ದಾಖಲಿಸಿ,

ಕೊಟ್ಟಿರುವ Captcha ಕೋಡ್ ನಮೂದಿಸಿ Search ಮೇಲೆ ಓತ್ತಿ ,

ಇಲ್ಲಿ ನೀವು ಮಾಡಲಾಗಿರುವ ಬೆಳೆವಿಮೆ ವಿವರ ಹಾಗೂ ಬಂದಿರುವ ಪರಿಹಾರ ಹಣದ ಮಾಹಿತಿ ನೀಡಲಾಗಿರುತ್ತದೆ.

ಇದನ್ನೂ ಓದಿ : ಆಧುನಿಕ ರೈತರಿಗೆ ಮಾದರಿಯಾದ ಮಲ್ಟಿ ಟ್ರೀ ಬೈಕ್ ಆವಿಷ್ಕರಿಸಿದ ಸಾಮಾನ್ಯ ರೈತ

ಹೆಚ್ಚನ ಮಾಹಿತಿಗಾಗಿ ಈ ಒಂದು ಲಿಂಕ್ ಭೇಟಿ ನೀಡಿ https://www.samrakshane.karnataka.gov.in

ಇತ್ತೀಚಿನ ಸುದ್ದಿಗಳು

Related Articles