Friday, September 20, 2024

ನೀವು ಕೋಟ್ಯಾಧೀಶರಾಗಬೇಕೆ? ಹಾಗಾದರೆ ಈ ಮರದ ಕೃಷಿಯನ್ನು ಮಾಡಿ ಕೋಟಿ ಆದಾಯವನ್ನು ಗಳಿಸಿ.

ಮಹಾಗನಿ ಮರದ ಕೃಷಿ ಲಾಭದಾಯಕ ಉದ್ಯಮವಾಗಿದ್ದು, ಅದು ತಡವಾದರೂ ರೈತರಿಗೆ ಕೋಟಿ ಕೋಟಿ ರೂಪಾಯಿಗಳನ್ನು ತಂದುಕೊಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಹೆಚ್ಚಿನದಾಗಿ ಹಡಗು ನಿರ್ಮಾಣಕ್ಕೆ ಪೀಟೋಪಕರಣಗಳಿಗೆ ಸಂಗೀತ ವಾದ್ಯಗಳ ತಯಾರಿಕೆಗೆ ಮತ್ತು ಮಲೇರಿಯಾ, ರಕ್ತಹೀನತೆ, ಅತಿಸಾರ, ಜ್ವರ ,ಭೇದಿ ಮತ್ತು ಇತರ ಕಾಯಿಲೆಗಳನ್ನು ಗುಣಪಡಿಸಲು ಇದನ್ನು ಬಳಸುತ್ತಾರೆ. ಇಷ್ಟೆಲ್ಲಾ ಉಪಯೋಗ ಇರುವ ಈ ಮರವನ್ನು ಬೆಳೆಯುವುದರಿಂದ ರೈತನು ಕೋಟ್ಯಾಧೀಶನಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಇದನ್ನು ಬೆಳೆಸಲು ಅನುಕೂಲಕರವಾದ ವಾತಾವರಣ ಹೇಗಿರಬೇಕು ತಿಳಿಯೋಣ.

ಇದನ್ನೂ ಓದಿ: ಸರ್ಕಾರದ ಯೋಜನೆಗಳ ಸವಲತ್ತಿಗಾಗಿ ಹಳೆಯ ʻಆಧಾರ್ ಕಾರ್ಡ್ʼ ಅಪ್ಡೇಟ್ ಕಡ್ಡಾಯ, ಎಷ್ಟು ವರ್ಷದ ಆಧಾರ್ ಕಾರ್ಡ, ಎಲ್ಲಿ ಮಾಡಿಸುವುದು? ಹೇಗೇ ಮಾಡುವುದು?

ಮಹಾಗನಿ ಮರಕ್ಕೆ ಸೂಕ್ತವಾದ ವಾತಾವರಣ


ಮುಖ್ಯವಾಗಿ ಈ ಮರವನ್ನು ಬೆಳೆಯಲು ನೇರವಾಗಿ ಸೂರ್ಯನ ಕಿರಣಗಳು ಬೀಳುವ ಪ್ರದೇಶ ಅಂದರೆ ಎತ್ತರವಾದ ಪ್ರದೇಶ ಇದ್ದರೆ ಉತ್ತಮವಾಗಿ ಬೆಳೆಯುತ್ತದೆ. ಮತ್ತು ಇದು ಶೀತ ಪ್ರದೇಶಗಳಲ್ಲಿ ಬೆಳಯಬಹುದಾದ ಶಕ್ತಿಯನ್ನು ಹೊಂದಿದೆ. ಮತ್ತು ಸೂಕ್ತವಾದ ಮಣ್ಣು ಯಾವುದೆಂದರೆ ಸ್ವಲ್ಪ ಆಮ್ಲೀಯ ಅಥವಾ ಕ್ಷಾರೀಯ ಮಣ್ಣು ಇದ್ದರೂ ಬೆಳೆಯಬಹುದು.

ಇದನ್ನು ಕರಾವಳಿ ಪ್ರದೇಶದಲ್ಲಿ ಬೆಳೆಯಬಹುದು. ಆದರೆ ಹೆಚ್ಚಾಗಿ ನೀರು ನಿಲ್ಲುವ ಸ್ಥಳಗಳಲ್ಲಿ ಬೆಳೆಯಲು ಯೋಗ್ಯವಲ್ಲ.ಬಲವಾದ ಗಾಳಿಗೆ ಕಡಿಮೆ ಒಡ್ಡಿಕೊಳ್ಳುವ ಪ್ರದೇಶಗಳಲ್ಲಿ ಮಹಾಗನಿ ಬೆಳೆಯಲಾಗುತ್ತದೆ. ಭಾರತದಲ್ಲಿ ಇದನ್ನು ಗುಡ್ಡಗಾಡು ಪ್ರದೇಶಗಳನ್ನು ಹೊರತುಪಡಿಸಿ ಎಲ್ಲಿ ಬೇಕಾದರೂ ಬೆಳೆಯಬಹುದು.

ನೆಡುವ ವಿಧಾನ:


ನಾಟಿ ಮಾಡುವ ಜಮೀನನಲ್ಲಿ ಮೊದಲು 1.51.,51.5 ಅಡಿ ಗಾತ್ರದ ಗುಂಡಿಗಳನ್ನು ತೆಗೆದು ಸಾವಯುವ ಗೊಬ್ಬರ, ಬೇವಿನ ಎಣ್ಣೆ ಕೇಕ, ಮತ್ತು ಮೇಲಿನ ಮಣ್ಣು ಮತ್ತು ತಿಪ್ಪೆ ಗೊಬ್ಬರ ಜೊತೆಗೆ 200 ಗ್ರಾಂ ಬೇವಿನ ಎಣ್ಣೆ ಮಿಶ್ರಣ ಮಾಡಿ ಗುಂಡಿಯಲ್ಲಿ ಮುಚ್ಚಬೇಕು. ಕನಿಷ್ಟ ಎರಡು ವಾರಗಳದಲ್ಲಿ ಮುಂಚೆ ತುಂಬಿಸಬೇಕು. ನೀರನ್ನು 3-4 ದಿನಗಳಿಗೊಮ್ಮೆ ನೀರು ಕೋಡಬೇಕು.

ಇದನ್ನೂ ಓದಿ: ತೋಟಗಾರಿಕೆ ವಿಶ್ವವಿದ್ಯಾಲಯದಿಂದ ರೈತರ ಮಕ್ಕಳಿಗೆ ಮಾಸಿಕ ಶಿಷ್ಯವೇತನದ ಜೊತೆಗೆ ಉಚಿತ ತೋಟಗಾರಿಕೆ ತರಬೇತಿ.

ಗೊಬ್ಬರ ಹಾಕುವ ವಿಧಾನ:

ಮೊದಲ ವರ್ಷ: NPK (17:17::17) ಮತ್ತು ಸಸ್ಯ ಪೋಷಕಾಂಶಗಳನ್ನು 200 ಗ್ರಾಂ ,ಸಸ್ಯ/ ಡಿಸೆಂಬರ್‍- ಜನವರಿ ತಿಂಗಳನ್ನು ಹೊರತು ಪಡಿಸಿ ಪ್ರತಿ ತಿಂಗಳು ಪಾಕೆಟ್‌ಗೆ ಗೊಬ್ಬರದ ಮೂಲಕ ಸಸಿಗಳಿಗೆ ನೀಡಬೇಕು ಸಸ್ಯಗಳಿಂದ 1 ಅಡಿ ದೂರದಲ್ಲಿ ಒಂದು ಅಡಿ ಆಳದ ರಂಧ್ರವನ್ನು ಮಾಡಿ ರಂಧ್ರದಲ್ಲಿ ರಸಗೊಬ್ಬರವನ್ನು ತುಂಬಿಸಬೇಕು.ಹೀಗೆ 1 ನೇತಿಂಗಳು 120 ಗ್ರಾಂ, ಎರಡನೇ ತಿಂಗಳು180 ಗ್ರಾಂ,ಮೂರನೇ ತಿಂಗಳು 200 ಗ್ರಾಂ 3 ವರ್ಷದ ವರೆಗೂ ಹಂತ ಹಂತವಾಗಿ ನೀಡಬೇಕು ಮತ್ತು ಒಂದು ಗ್ರಾಂ /ಲೀ.ನೀರಿಗೆ 15 ದಿನಗಳಿಗೊಮ್ಮೆ ವರ್ಷದವರೆಗೆ ಎಲೆಗಳಿಗೆ ಸಿಂಪಡಿಸಬೇಕು.

ಇಳುವರಿ ಮತ್ತು ಆದಾಯ :

ರೈತರು ತಮ್ಮ ಒಂದು ಎಕರೆ ಭೂಮಿಯಲ್ಲಿ 1500 ಮಹಾಗನಿ ಮರಗಳನ್ನು ನೆಟ್ಟರೆ, ಅದು ಮುಂದಿನ 10 ವರ್ಷಗಳಲ್ಲಿ 1500 ಸಸ್ಯಗಳ ಆದಾಯವು ಆದಾಯವು 15 ಘನ ಅಡಿ ಪ್ರತಿ ಮರಕ್ಕೆ ರೂ. 500/- ಪ್ರತಿ ಘ. ಅಡಿಗೆ ರೂ. 7500*1500 ಮರಗಳು 1,12,50,000/- ಒಂದು ಎಕರೆ ಜಮೀನಿನಲ್ಲಿ 10 ವರ್ಷದ ನಂತರ ರೈತರನ್ನು ಕೋಟ್ಯಧಿಪತಿಯನ್ನಾಗಿ ಮಾಡಲಿದೆ. ಜೊತೆಗೆ, ಮರಗಳು ಮಣ್ಣಿನ ಸವೆತವನ್ನು ರಕ್ಷಿಸುತ್ತವೆ. ಮಣ್ಣಿನ ಫಲವತ್ತತೆಯನ್ನೂ ಹೆಚ್ಚಿಸುತ್ತವೆ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ.

ಇತ್ತೀಚಿನ ಸುದ್ದಿಗಳು

Related Articles