Friday, November 22, 2024

ಬೆಳೆ ಸಮೀಕ್ಷೆ ಮಾಡುವ ಉದ್ದೇಶ ಮತ್ತು ಉಪಯೋಗ? ಬೆಳೆ ತಪ್ಪಾಗಿ ನಮೂದಾಗಿದೆಯೇ? ಮುಂದೆ ಏನು ಮಾಡುವುದು ಸಂಪೂರ್ಣವಾಗಿ ತಿಳಿದುಕೊಳ್ಳಿ…

ರೈತ ಬಾಂದವರೇ ಬೆಳೆ ಸಮೀಕ್ಷೆ ಬಗ್ಗೆ ನಿಮಗೆ ಎಷ್ಟು ಗೊತ್ತು? ಬೆಳೆ ಸಮೀಕ್ಷೆ ಯಾಕೆ ಮಾಡುತ್ತಾರೆ? ಬೆಳೆ ಸಮೀಕ್ಷೆಯಿಂದ ಏನು ಉಪಯೋಗ? ಬೆಳೆ ಸಮೀಕ್ಷೆಯಲ್ಲಿ ಬೆಳೆ ತಪ್ಪು ನಮೂದಾಗಿದ್ದರೆ, ಎಲ್ಲಿ ಆಕ್ಷೇಪಣೆಯನ್ನು ಸಲ್ಲಿಸಲುವುದು? ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತೆ ಮುಂದೆ ರೈತರೇ ಬೆಳೆ ಸಮೀಕ್ಷೆಯನ್ನು ನೀವೇ ನಿಮ್ಮ ಮೊಬೈಲ್ ನಲ್ಲಿ ಸ್ವತಂ ನೀವೇ ನಿಮ್ಮ ಜಮೀನುಗಳಲ್ಲಿ ಕೈಗೊಳ್ಳಬಹುದು.
ಹಾಗೂ ನಿಮ್ಮಗೆ ಈ ಮೊಬೈಲ್ ಆಪ್ ನಲ್ಲಿ ಈ ಪ್ರಕ್ರಿಯೆ ನಡೆಸಲು ಬರದೆ ಇದ್ದರೆ ಇಲಾಖೆಯಿಂದ ನೇಮಿಸಿರುವ ಗ್ರಾಮದ ತಂತ್ರಾಂಶದ ಜ್ಞಾನವುಳ್ಳ ಯುವಕರು PR (ಪ್ರೈವೇಟ್ ರೆಸಿಡೆಂಟ್ಸ್ ) ಮತ್ತು ಕೆಲವು ಸರಕಾರಿ ಸಿಬ್ಬಂದಿಗಳ ಸೇವೆಯನ್ನು ಬಳಸಿಕೊಂಡು ಈ ಒಂದು ಬೆಳೆ ಸಮೀಕ್ಷೆ ಕಾರ್ಯವನ್ನು ಮಾಡಲಾಗುತ್ತದೆ.

ಸಮೀಕ್ಷೆಯ ಉದ್ದೇಶಗಳು:

ಇದನ್ನೂ ಓದಿ: E-Kyc ಆಗದವರ ಲಸ್ಟ್ ಬಿಡುಗಡೆ! ಆಧಾರ ಸಂಖ್ಯೆ ಹಾಕಿ ಸ್ಟೇಟಸ್ ಚೆಕ್ ಮಾಡಿ! ಇಲ್ಲವಾದರೆ ಈ ಕಂತಿನ ಹಣ ನಿಮಗೆ ಸಿಗಲ್ಲ!


1.ಮೊಬೈಲ್ ಆಪ್ಲೀಕೇಶನ್ ಅನ್ನು ಬಳಸಿ ಸಮೀಕ್ಷೆ ಮಾಡುವುದರ ಮೂಲಕ ಬೆಳೆ ಪ್ರದೇಶದ ನಿಖರ ಅಂಕಿ ಅಂಶಗಳ ಸಂಗ್ರಹಣೆ ಮಾಡಬಹುದು.

2.ಆಯಾ ಋತುಮಾನಕ್ಕನುಗುಣವಾಗಿ ಪಹಣಿಗಳಲ್ಲಿ ಸರಿಯಾದ ಬೆಳೆ ಮಾಹಿತಿಯ ದಾಖಲೆ ಮಾಡಬಹುದು.
3.ಬೆಳೆ ಸಮೀಕ್ಷೆ ಚಟುವಟಿಕೆಗಳಿಂದ ಸೆರೆಹಿಡಿಯಲಾದ ದತ್ತಾಂಶವನ್ನು ಸರ್ಕಾರದ ವಿವಿಧ ಯೋಜನೆಗಳಲ್ಲಿ ಕನಿಷ್ಠ ಬೆಲೆ ಬೆಂಬಲ,ಸಬ್ಸಡಿ ಪಾವತಿ, ಬೆಳೆ ಪ್ರದೇಶದ ಅಂದಾಜು, ಕೃಷಿ ಮತ್ತು ತೋಟಗಾರಿಕೆ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆ ಮುಂತಾದವುಗಳಿಗೆ ಬಳಸಬಹುದು.
4.ಖಾಲಿ ಇರುವ ಬೆಳೆ ಬೆಳೆಯದೆ ಇರುವ ಕೃಷಿಗೆ ಉಪಯೋಗವಾಗದ ವಿವಿದ ತರಹದ ಜಮೀನುಗಳ ವಿವರಗಳ ಲಬ್ಯತೆ , ಪಾಳು ಭೂಮಿ ಬಗ್ಗೆ ಮಾಹಿತಿ ಸಿಗುವುದು.

ಇದನ್ನೂ ಓದಿ: ಮಹಿಳೆಯರು ತಂದೆ ಆಸ್ತಿಯಲ್ಲಿ ಪಾಲು ಕೇಳಲು ಯಾವ ಪರಿಸ್ಥಿತಿಯಲ್ಲಿ ಬರುವುದಿಲ್ಲ.

ಈ ಸಮೀಕ್ಷೆಯಿಂದ ಉಪಯೋಗ:


1.ಇನ್ ಪುಟ್ ಸಬ್ಸಿಡಿ ಯೋಜನೆಗೆ ಫಲಾನುಭವಿಗಳ ಆಯ್ಕೆಯಲ್ಲಿ ಉಪಯೋಗವಾಗುದು.
2.ಹಾಗೂ ವಿಪತ್ತು ನಿರ್ವಹಣೆ ಸಂಬಂದಿಸಿದ ಮಾಹಿತಿಗಾಗಿ (NDRF/SDRF) ಫಲಾನುಭವಿಗಳ ಆಯ್ಕೆಯಲ್ಲಿ ಉಪಯೋಗವಾಗುದು.
3.ಸರ್ಕಾರದ ವಿವಿಧ ಯೋಜನೆಗಳಲ್ಲಿ ಕನಿಷ್ಠ ಬೆಲೆ ಬೆಂಬಲ,ಸಬ್ಸಡಿ ಪಾವತಿಗೆ
4.ಬ್ಯಾಂಕ್ ಗಳಲ್ಲಿ ರೈತರಿಗೆ ಬೆಳೆ ಸಾಲ,ಬೆಳೆ ವಿಮೆ, ಬೆಳೆ ಪರಿಹಾರಗಳಿಗೆ ಸಮಿಕ್ಷೇ ಆಧಾರಿತ ದತ್ತಾಂಶವನ್ನು ಪರಿಗಣಿಸಿ ಮಂಜೂರಾತಿಗೆ ಉಪಯೋಗವಾಗುವುದು.
ಇಷ್ಟೇಲ್ಲಾ ಉಪಯೋಗ ಇರುವ ಈ ಒಂದು ಸಮೀಕ್ಷೆ ಸರಿಯಾಗಿ ಮಾಡಿರುವ ಬಗ್ಗೆ ಹಾಗೂ ಬೆಳೆ ಸಮೀಕ್ಷೆಯಲ್ಲಿ ಬೆಳೆ ತಪ್ಪು ನಮೂದಾಗಿದ್ದರೆ, ಆಕ್ಷೇಪಣೆಯನ್ನು ಸಲ್ಲಿಸಲು ಸರ್ಕಾರ ಇನ್ನೊಂದು ಮೊಬೈಲ್ ಅಪ್ಲಿಕೇಶನ್ನನು ಪರಿಚಯಿಸಿದೆ. ಅದುವೇ “ಬೆಳೆ ದರ್ಶಕ್ app “

ಬೆಳೆ ದರ್ಶಕ್ app ಕೂಡ ರೈತರಿಗೆ ವರದಾನವಾಗಿದ್ದು ಈ app ಮೂಲಕ ನೀವು ಏನೆನು ಸಮೀಕ್ಷೆ ಮಾಡಿದಿರಿ ಎಂದು ಎಲ್ಲವನ್ನು ವೀಕ್ಷಿಸಬಹುದು. ಇಲ್ಲಿ ನೀವು ನಿಮ್ಮದಷ್ಟೆ ಅಲ್ಲದೆ ಬೇರೆ ರೈತರು ಹೊಲಗಳ ಸಮೀಕ್ಷೆಯನ್ನು ಕೂಡ ವೀಕ್ಷಿಸಬಹುದು

ಬೆಳೆ ಸಮೀಕ್ಷೆ ತಪ್ಪಾಗಿದ್ದರೆ ಏನು ಮಾಡುವುದು?


ನಾವು ಮಾಡಿದಂತಹ ಬೆಳೆ ಸಮೀಕ್ಷೆ ತಪ್ಪಾಗಿದ್ದರೆ ಉದಾಹರಣೆಗೆ ನಾವು ನಮ್ಮ ಹೊಲದಲ್ಲಿ ಭತ್ತ ಬೆಳೆದಿದ್ದು ಅದು ಸಮೀಕ್ಷೆ ಮಾಡುವಾಗ ರಾಗಿ ಎಂದು ಸಮೀಕ್ಷೆ ಯಾಗಿದ್ದು ಬೆಳೆ ತಪ್ಪಾಗಿದೆ ಅಥವಾ ಅಪೂರ್ಣವಾಗಿದ್ದರೆ.
ಹೀಗೆ ಸಮೀಕ್ಷೆ ಮಾಡುವಾಗ ತಪ್ಪಾಗಿದ್ದರೆ ಅದನ್ನು ನೀವು ಬೆಳೆ ದರ್ಶಕ app ಮೂಲಕ ಸರಿಪಡಿಸಿಕೊಳ್ಳಬಹುದು.

ಆಕ್ಷೇಪಣೆಯನ್ನು ಹೇಗೆ ಸಲ್ಲಿಸುವುದು?


ಆಕ್ಷೇಪಣೆಯನ್ನು ಸಲ್ಲಿಸಲು ಬೆಳೆ ದರ್ಶಕ ಆಪ್ ಮಖಾಂತರ ಆಕ್ಷೇಪಣೆಯನ್ನು ಸಲ್ಲಿಸಿ ಸಂಬಂಧಪಟ್ಟ ಮೇಲ್ವಿಚಾರಕರ ಸಹಿಯೊಂದಿಗೆ ಇತ್ಯರ್ಥಪಡಿಸಿಕೊಳ್ಳಲು ಕೋರಿದೆ.

ಬೆಳೆ ಸಮೀಕ್ಷೆ ಮಾಡಿರುವುದನ್ನು ಹೇಗೆ ಚೆಕ್ ಮಾಡುವುದು?

ಬೆಳೆ ದರ್ಶಕ(Bele darshak 2022-23) ಅಪ್ಲೆಕೇಶನಗಾಗಿ ಇಲ್ಲಿ ಓತ್ತಿ https://play.google.com/store/apps/details?id=com.csk.Khariffarmer22_23.cropsurvey&hl=en_IN&gl=US


ಪ್ರತಿ ವರ್ಷವೂ ಕೂಡಾ ಈ ಆಪ್ ಲಬ್ಯ ವಿರುತ್ತದೆ.
ಬೆಳೆ ಸಮೀಕ್ಷೆ ಪ್ರಕಾರ ನಿಮ್ಮ ಜಮೀನಿನಲ್ಲಿ ದಾಖಲಾದ ಬೆಳೆ ವಿವರದ ಮಾಹಿತಿಯನ್ನು *ಬೆಳೆ ದರ್ಶಕ 2022 ಅಪ್ಲಿಕೇಶನ್ ನಲ್ಲಿ ಪರಿಶೀಲಿಸಿಕೊಳ್ಳಿ.
ಜಿಲ್ಲೆಯಲ್ಲಿ ಜಿ.ಪಿ.ಎಸ್. ಆಧಾರಿತ ಬೆಳೆ ಸಮೀಕ್ಷೆ ಯೋಜನೆ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಜಾರಿಯಲ್ಲಿರುತ್ತದೆ. ಈಗಾಗಲೇ ಹಿಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆಯನ್ನು ರೈತರ ಬೆಳೆ ಸಮೀಕ್ಷೆ ಆಪ್ ಹಾಗೂ ಖಾಸಗಿ ನಿವಾಸಿಗಳ ಆಪ್ ಮೂಲಕ ಕೈಗೊಳ್ಳಲಾಗಿದೆ.
ಸದರಿ ಯೋಜನೆಯಡಿ ಬೆಳೆ ಸಮೀಕ್ಷೆ ಪ್ರಕಾರ ರೈತರು ಮತ್ತು ಖಾಸಗಿ ನೀವಾಸಿಗಳು ನಡೆದಿರುವ ಬೆಳೆ ಸಮೀಕ್ಷೇ ಮಾಹಿತಿಯನ್ನು ನೋಡಲು ಗೂಗಲ್ ಪ್ಲೆ ಸ್ಟೋರ್ನಲ್ಲಿ ಬೆಳೆ ದರ್ಶಕ 2022-23 app ಬಿಡುಗಡೆ ಮಾಡಲಾಗಿದೆ.

ಬೆಳೆ ದರ್ಶಕ ಆಪ್ ವೈಶಿಷ್ಟ್ಯತೆಗಳು:


ನಿಮ್ಮ ಜಮೀನಿನಲ್ಲಿ ಬೆಳೆ ಸಮೀಕ್ಷೆ ಪ್ರಕಾರ ದಾಖಲಾಗಿರುವ ಬೆಳೆ ವಿವರಗಳು ಮತ್ತು ವಿಸ್ತೀರ್ಣದ ಮಾಹಿತಿ ಪಡೆಯಬಹುದು.
ನಿಮ್ಮ ಜಮೀನಿನಲ್ಲಿ ತೆಗೆಯಲಾದ ಜಿ.ಪಿ.ಎಸ್. ಆಧಾರಿತ ಛಾಯಾಚಿತ್ರಗಳನ್ನು ವೀಕ್ಷಿಸಬಹುದು.
ಬೆಳೆ ಸಮೀಕ್ಷೆ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆ ವಿವರ ಪಡೆಯಬಹುದು
ಹೀಗೆ ಮಾಡುವುದರಿಂದ ಸರ್ಕಾರದ ವಿವಿಧ ಇಲಾಖೆಗಳಿಂದ ಅದರಲ್ಲೂ ಕೃಷಿ ಮತ್ತು ಕೃಷಿಯೇತರ ಇಲಾಖೆಯಿಂದ ಯೋಜನೆಯ ಉಪಯೋಗ ಪಡೆಯಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ರೈತರು ನಿಮ್ಮ ಹತ್ತಿರದ ಕೃಷಿ ಮತ್ತು ಕೃಷಿಯೇತರ ಇಲಾಖೆಗಳ ಅಧಿಕಾರಿಗಳನ್ನು, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೋಳ್ಳಿ.

ಇತ್ತೀಚಿನ ಸುದ್ದಿಗಳು

Related Articles