ಆತ್ಮೀಯ ರೈತ ಬಾಂದವರೇ ಉತಾರ್ (ಪಹಣಿ )ತಂದೆ, ಅಜ್ಜ ಮುತ್ತಜ್ಜನ ಹೆಸರಿನಲ್ಲಿ ಇದ್ದರೆ ನಿಮ್ಮ ಹೆಸರಿಗೆ ವರ್ಗಾವಣೆ ಮಾಡುವ ವಿಧಾನವನ್ನು ಇನ್ನೂ ಬಹಳ ಸುಲಭವಾಗಿ ಮಾಡುವ ವಿನೂತನ ಮಾರ್ಗವನ್ನು ಜಾರಿಗೆ ತಂದಿದೆ. ರೈತರ ಜಮೀನಿನ ಪಹಣಿಯು ತಂದೆಯ ಹೆಸರಿನಲ್ಲಿ ಅಥವಾ ತಾತನ , ಅಜ್ಜಿ,ಹೆಸರಿನಲ್ಲಿ ಅಥವಾ ಮುತ್ತಜ್ಜನ ಹೆಸರಿನಲ್ಲಿ ಇದ್ದು, ಅವರು ಮರಣ ಹೊಂದಿದ್ದಾರೆ ಅಂಥವರ ಹೆಸರಿನಲ್ಲಿ ಇರುವ ಜಮೀನಿನ ಪಹಣಿಯಲ್ಲಿ ಪ್ರಸ್ತುತ ಉಳುಮೆ ಮಾಡುತ್ತಿರುವ ಮಕ್ಕಳು ಅಥವಾ ಮೊಮ್ಮಕ್ಕಳು, ಮತ್ತು ಮರಿ ಮಕ್ಕಳು ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಸುವರ್ಣ ಅವಕಾಶವನ್ನು ನೀಡಲಾಗಿದೆ.
ರಾಜ್ಯ ಸರ್ಕಾರದಿಂದ ಪೌತಿ ಖಾತೆ ಆಂದೋಲನವನ್ನು ಜಾರಿಗೆ ತರಲಾಗಿದ್ದು, ಈ ಮೂಲಕ ರೈತರು ಸರಳವಾಗಿ ಪ್ರಸ್ತುತ ಉಳುಮೆ ಮಾಡುತ್ತಿರುವ ಹೊಲದ ಉತಾರ( ಪಹಣಿ) ತಂದೆಯ ಹೆಸರಿನಲ್ಲಿ ಅಥವಾ ತಾತನ ಹೆಸರಿನಲ್ಲಿ ಅಥವಾ ಮುತ್ತಜ್ಜನ ಹೆಸರಿನಲ್ಲಿ ಇದ್ದಲ್ಲಿ ಬ್ಯಾಂಕಿನಿಂದ ಸಾಲ ಪಡೆಯಲು, ವಿಮೆ ಹಣದ ಸೌಲಭ್ಯ ಪಡೆಯಲು ಮತ್ತು ಕೃಷಿ ಮತ್ತು ಕೃಷಿಯೇತರ ವಿವಿಧ ಇಲಾಖೆಗಳಿಂದ ಯಾವುದೇ ಯೋಜನೆಯ ಲಾಭ ಪಡೆಯಲು ,ಸಹಾಯಧನ ಆಧಾರಿತ ಸೌಲಭ್ಯ ಪಡೆಯಲು ಅನರ್ಹರಾಗಿರುತ್ತಾರೆ.
ಈ ಎಲ್ಲಾ ಕಾರಣಗಳಿಂದ ರೈತರು ಖಾತೆ ಬದಲಾವಣೆಗಾಗಿ ಕಛೇರಿಯಿಂದ ಕಛೇರಿಗೆ ಅಲೆಯಬೇಕಾಗಿದ್ದು, ಮತ್ತು ಈ ಮಧ್ಯವರ್ತಿಗಳ ಮೋಸದಿಂದ ಬೇಸತ್ತು, ಸರಿಯಾಗಿ ಮಾಹಿತಿ ಕೊರತೆಯಿಂದ , ಅಷ್ಟೆ ಅಲ್ಲ, ಕೃಷಿ ಕೆಲಸಗಳ ಒತ್ತಡವಿದ್ದರೂ, ಕಚೇರಿಗಳ ತಿಂಗಳುಗಂಟಲೇ ಅಲೆಯುವ ಪರಿ ಇರುತ್ತಿತ್ತು. ಇದು ಕೃಷಿ ಅಭಿವೃದ್ದಿಯಮೇಲೆ ದುಷ್ಪರಿಣಾಮವನ್ನು ಉಂಟು ಮಾಡಿತ್ತು. ಪೌತಿ ಖಾತೆ ಬದಲವಣೆಗೆ ಇದ್ದ ನಿಯಮವನ್ನು ಸಡಿಲಗೊಳಿಸಿ ಆಂದೋಲನ ರೂಪದಲ್ಲಿ ರಾಜ್ಯ ಸರ್ಕಾರ ಈ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ.
ನಿಮ್ಮ ಮೊಬೈಲ್ನಲ್ಲೆ ಪಹಣಿ/ಖಾತೆ/ಉತಾರ್ ವಿವರ ಪಡೆಯಲು ಹೀಗೆ ಮಾಡಿ:
https://landrecords.karnataka.gov.in/Service2/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ-ತಾಲ್ಲೂಕು-ಹೋಬಳಿ-ಗ್ರಾಮ-ಸರ್ವೇ ನಂಬರ್-ಇತರೆ ವಿವರ ಹಾಕಿ ನಿಮ್ಮ ಪಹಣಿ ವಿವರ ಪಡೆಯಬಹುದು.
ಹೊಲದ ಮುಖ್ಯಸ್ಥ ಅಂದರೆ ಆ ಜಮೀನಿನ ವಾರಸುದಾರ ನಿಧನದ ನಂತರ ಜಮೀನಿನ ಖಾತೆ ಬದಲಾವಣೆಗೆ ಸಾಕಷ್ಟು ಸಮಯದಿಂದ ಕಾಯುತ್ತಿರುವ ಅನೇಕ ಕುಟುಂಬಗಳಿವೆ ಇದೊಂದು ಉತ್ತಮ ಯೋಜನೆಯಾಗಿದೆ. ಈ ನೂತನ ಪದ್ದತಿಯನ್ವಯ ಮರಣಹೊಂದಿದವರ ವಿವರಗಳನ್ನು ಪಡೆಯೇಕು. ಮರಣ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಪ್ರಮಾಣ ಪತ್ರ ಪಡೆದು ಭೂಮಿ ತಂತ್ರಾಂಶ, ಪೌತಿ ಖಾತೆಗಾಗಿ ನಮೂನೆ ಒಂದರಲ್ಲಿ ದಾಖಲಿಸುವುದು.
ಒಂದೊಮ್ಮೆ ವಂಶವೃಕ್ಷ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿ ಮಾಡಿ ಅಟಲ್ ಜೀ ಜನಸ್ನೇಹಿ ಕೇಂದ್ರ/ನಾಡಕಚೇರಿ/ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ಇದರ ಜೊತೆಗೆ ವ್ಯಕ್ತಿಯು ಮರಣ ಹೊಂದಿ ಒಂದು ವರ್ಷಕ್ಕಿಂತಲೂ ಕೂಡ ಬಹುಕಾಲ ಆಗಿದ್ದರೆ ಮರಣ ಪ್ರಮಾಣ ಪತ್ರಕ್ಕಾಗಿ ನೋಂದಣಿ ಇರದಿದ್ದರೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಮರಣ ಹೊಂದಿದ ಕುರಿತು ಆದೇಶವನ್ನು ಪಡೆದು ತಹಶೀಲ್ದಾರ ಕಛೇರಿಯಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆಯಬೇಕು.
ಮುಟ್ಯೆಶನ್ ಪ್ರಕರಣ ನೋಡಲು ಇಲ್ಲಿ ಓತ್ತಿ: https://landrecords.karnataka.gov.in/Service12/MutationStatus.aspx
ಅಥವಾ ಆಧಾರ ಕಾರ್ಡ ಮತ್ತು ರೇಷನ್ ಕಾರ್ಡ ಈ ದಾಖಲೆಗಳು ಪರಿಶೀಲಿಸಿಕೊಂಡು ಗ್ರಾಮ ಲೆಕ್ಕಾಧಿಕಾರಿಯವರು ಮತ್ತು ರಾಜಸ್ವನೀರೀಕ್ಷಕರು ಸ್ಥಳ ಪರಿಶೀಲನೆ, ಮಹಜರ್ ಮಾಡಿ ಮರಣ ಹೊಂದಿದ ಬಗ್ಗೆ ಸಂಬಂಧಪಟ್ಟ ವಾರಸುದಾರರಿಂದ ಅಫಿಡೆವಿಟ್ ಪಡೆದು ಅವರ ಆಧಾರ ಕಾರ್ಡ, ರೇಷನ್ ಕಾರ್ಡ ಲಿಂಕ ಮೇಲೆ ಅರ್ಜಿಯನ್ನು ಹಾಕಬಹುದಾಗಿದೆ. ಈ ರೀತಿಯ ಪೌತಿ ಖಾತೆಯನ್ನು ಬದಲಾವಣೆಗೆ ಸಂಬಂಧಪಟ್ಟಂತೆ ಮುಟೆಷನ್ ಶುಲ್ಕದಲ್ಲಿ ರಾಜ್ಯ ಸರಕಾರ ರೀಯಾಯತಿಯನ್ನು ನೀಡಿದೆ.
ಇದನ್ನೂ ಓದಲು ಇಲ್ಲಿ ಕ್ಲಿಕ್ ಮಾಡಿ: ಇಲಾಖೆಯಿಂದ ರೈತರಿಗೆ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಖರೀದಿಗೆ ಸಹಾಯಧನದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾ
ಹಕ್ಕು ಬದಲಾವಣೆ ಪ್ರಕರಣದಲ್ಲಿ ನಮೂನೆ-12 ಮತ್ತು ನಮೂನೆ -21ನ್ನು ಹೊರಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಟೇಷನ್ ವಿಲೇವಾರಿಗೆ 30 ದಿನಗಳಕಾಲ ಕಾಲವಕಾಶ ನೀಡಲಾಗಿದ್ದು, ಆಸಕ್ತರು ತಕರಾರನ್ನು ಸಲ್ಲಿಸಬಹುದಾಗಿದೆ ಒಂದು ವೇಳೆ ತಕರಾರು ಅರ್ಜಿ ಸಲ್ಲಿಸಿದಲ್ಲಿ ಹೋಬಳಿಗಳಿಗೆ ಗ್ರೇಡ್-1 ತಹಶೀಲದಾರ ಮತ್ತು ಗ್ರೇಡ್-2 ತಹಶೀಲದಾರಗೆ ಹೊಣೆಯನ್ನು ನೀಡಲಾಗಿದ್ದು ಆಯಾ ಹೋಬಳಿಯಲ್ಲಿ ಒಂದು ತಿಂಗಳೊಳಗೆ ಕ್ಯಾಳಪ್ ಮಾಡಿ ವಿಲೇವಾರಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು.
ಓದಲು ಇಲ್ಲಿ ಕ್ಲಿಕ್ ಮಾಡಿ: 150,000 ರೂ. ವಸತಿ ಯೋಜನೆಯಡಿ ಪ್ರತಿ ಮನೆಗೆ ಆರ್ಥಿಕ ಸಹಾಯ ಮತ್ತು ಇತರೆ ಪ್ರಮುಖ ಅಂಶಗಳು
ಪೌತಿ ಖಾತೆ ಅಥವಾ ನಿಮ್ಮ ಹೆಸರಿಗೆ ಜಮೀನಿನ ಪಹಣಿ ಮಾಡಿಕೊಳ್ಳು ನಮೂನೆ-1 ಈ ಅರ್ಜಿಯನ್ನು ನಾಡಕಛೇರಿಯಲ್ಲಿ( ಗ್ರಾಮ ಛಾವಡಿ) ಪಡೆದುಕೊಳ್ಳಬೇಕು
ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಆಡಳಿತಧಿಕಾರಿಯನ್ನು ಸಂಪರ್ಕಿಸಬಹುದು.