ಪಿಂಚಣಿ ಸೌಲಭ್ಯ: ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸಿಕ ರೂ.1000/-
ದುರ್ಬಲತೆ ಪಿಂಚಣಿ:ಫಲಾನುಭವಿಗೆ ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ಮಾಸಿಕ ರೂ.1000/-ಪಿಂಚಣಿ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ.2,00000/-ದವರೆಗೆ ಅನುಗ್ರಹ ರಾಶಿ ಸಹಾಯಧನ.
ಟ್ರೈನಿಂಗ್ ಕಮ್ ಟೂಲಕಿಟ್ ಸೌಲಭ್ಯ(ಶ್ರಮ ಸಾಮರ್ಥ್):ರೂ. 20000/-ವರೆಗೆ
ಮನೆ ಖರೀದಿ/ ಕಟ್ಟಲು ಸಹಾಯಧನ (ಕಾರ್ಮಿಕರಿಗೆ ಗೃಹ ಭಾಗ್ಯ):ರೂ.2,00000/-ದವರೆಗೆ
ಹೆರಿಗೆ ಸೌಲಭ್ಯ(ತಾಯಿ ಲಕ್ಷ್ಮೀ ಬಾಂಡ್):ಮಹಿಳಾ ಫಲಾನುಭವಿಗಳ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿಗೆ ಜನನಕ್ಕೆ ರೂ.30000/-ಮತ್ತು ಗಂಡು ಮಗುವಿನ ಜನನಕ್ಕೆ ರೂ.20000/-
ಅಂತ್ಯಕ್ರಿಯೆ ವೆಚ್ಚ:ರೂ. 4000/-ಹಾಗೂ ಎಕ್ಸ್ ಗ್ರೇಷಿಯಾ ರೂ.50000/- ಸಹಾಯಧನ ನೀಡಲಾಗುತ್ತದೆ.
ಶೈಕ್ಷಣಿಕ ಸಹಾಯಧನ (ಕಲಿಕಾ ಭಾಗ್ಯ):
ಫಲಾನುಭಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಕೆಳಗಿನಂತೆ ಸೌಲಭ್ಯಗಳಿವೆ.
*4-5 ಹಾಗೂ 6 ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ.3000/-
*7 ಹಾಗೂ 8 ನೇ ತರಗತಿ ಉತ್ತೀರ್ಣರಾದವರಿಗೆ ರೂ.4000/-
*9-10 ನೇ ತರಗತಿ ಹಾಗೂ ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ ರೂ.6000/-
*ಐಟಿಐ ಮತ್ತು ಡಿಪ್ಲೋಮಾ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ ರೂ. 7000/-
*ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ ರೂ.10000/-
*ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20000/-ಹಾಗೂ ಪ್ರತಿ ವರ್ಷ ರೂ. 10000/-ಗಳಂತೆ ( ಎರಡು ವರ್ಷಗಳಿಗೆ)
*ಇಂಜಿನಿಯರಿಂಗ್ ಕೋರ್ಸ ಸೇರ್ಪಡೆಗೆ ರೂ.25000/-ಹಾಗೂ ಪ್ರತಿ ವರ್ಷ ತೇರ್ಗಡೆಗೆ ರೂ.20000/-
*ವೈದ್ಯಕೀಯ ಕೋರ್ಸ ಸೇರ್ಪಡೆಗೆ ರೂ. 30000/- ಹಾಗೂ ಪ್ರತಿ ವರ್ಷ ತೇರ್ಗಡೆಗೆ ರೂ.25000/-
*ಪಿಎಚ್ ಡಿ ಕೋರ್ಸ ಪ್ರತಿ ವರ್ಷಕ್ಕೆ ರೂ. 20000/-(ಗರಿಷ್ಠ ಎರಡು ವರ್ಷಗಳು)ಮತ್ತು ಪಿಎಚ್ ಡಿ ಪ್ರಬಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.20000/-
ಪ್ರತಿಭಾವಂತ ಮಕ್ಕಳಿಗಾಗಿ:
*sslc ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.7000/-
*ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.5000/-
*ಪದವಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.10000/-
*ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.15000/-
ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ):
ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಬಿತರಿಗೆ ರೂ.300/-ರಿಂದ ರೂ. 10000/-ವರೆಗೆ ಸಹಾಯಧನ ನೀಡಲಾಗುತ್ತೆ.
ಅಪಘಾತ ಪರಿಹಾರ:ಮರಣ ಹೊಂದಿದ್ದಲ್ಲಿ ರೂ.5,00000/-ಪರಿಹಾರ ನೀದಲಾಗುತ್ತದೆ. ಸಂಪೂರ್ಣ ಶಾಶ್ವತ ದುರ್ಲತೆಯಾದಲ್ಲಿ ರೂ.2,00000/-ಮತ್ತು ಭಾಗಶಃ ಶಾಶ್ವತ ದುರ್ಲತೆಯಾದಲ್ಲಿ ರೂ.1,00000/- ನೀಡಲಾಗುತ್ತದೆ.
ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ):
200000/- ವರೆಗೆ ಸಹಾಯಧನ ನೀದಲಾಗುತ್ತದೆ.
ಮದುವೆ ಸಹಾಯಧನ (ಗೃಹ ಲಕ್ಷೀ ಬಾಂಡ್):ಫಲಾನುಭವಿ ಅಥವಾ ಅವರ ಇಬ್ಬರ ಮಕ್ಕಳ ಮದುವೆಗೆ ತಲಾ ರೂ. 50000/- ಸಹಾಯಧನ ನೀಡಲಾಗುತ್ತದೆ.
- ಕಾರ್ಮಿಕ ಅನಿಲ ಭಾಗ್ಯ: ( LPG ) ಸಂಪರ್ಕ ಸೌಲಭ್ಯ :ಅನಿಲ ಸಂಪರ್ಕದೊಂದಿಗೆ ಎರಡು ಬರ್ನ್‌ರ್ ಸ್ಟೌವ್ ಮತ್ತು ಪ್ರತಿ ಮೂರು ತಿಂಗಳಿಗೆ ಒಮ್ಮೆ ಸಿಲಿಂಡರ್ ರೀಲಿಫ್ ಮಾಡಿಕೊಡಲಾಗುವುದು.
ಬಿಎಂಟಿಸಿ ಬಸ್ ಪಾಸ್ ಸೌಲಭ್ಯ: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ/ವಾಸಸ್ಥಳದಿಂದ ಬೆಂಗಳೂರಿಗೆ ಪ್ರಮಾಣಿಸುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪಾಸ್ ಸೌಲಭ್ಯ ನೀಡಲಾಗುವುದು.
ಕೆಎಸ್‌ಆರ್ ಟಿಸಿ ಬಸ್ ಸೌಲಭ್ಯ: ರಾಜ್ಯದಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಸೌಲಭ್ಯ ನೀಡಲಾಗುತ್ತದೆ.
ವಿಶೇಷ ಸೂಚನೆ: ಮೇಲಿನ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅರ್ಜಿ ಶುಲ್ಕ ಭರಿಸಿ ಹಾಗೂ ನಿಗಧಿತ ನಮೂನೆ ಮತ್ತು ಅಗತ್ಯೆ ದಾಖಲೆಗಳೊಂದಿಗೆ ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು.