Sunday, November 10, 2024

ಗಂಗಾ ಕಲ್ಯಾಣ ಯೋಜನೆಯಡಿ ಸಾಲ ಮತ್ತು ಸ್ವ ಉದ್ಯೋಗ ವೈಯಕ್ತಿಕ ಸಾಲಕ್ಕೆ ಅರ್ಜಿ ಆಹ್ವಾನಕ್ಕೆ ದಿನಾಂಕ ವಿಸ್ತರಣೆ

ಬೆಂಗಳೂರು: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ 2022-23 ನೇ ಸಾಲಿನ ದೇವರಾಜ ಅರಸು ಸ್ವಉದ್ಯೋಗ ವೈಯಕ್ತಿಕ ಸಾಲ ಯೋಜನೆ ಮತ್ತು ಗಂಗಾ ಕಲ್ಯಾಣ ನೀರಾವರಿ ಯೋಜನೆಗೆ
ಸಾಲ ಮತ್ತು ನೆರವು ಪಡೆಯಲು ಅರ್ಜಿ ಕರೆಯಲಾಗಿರುತ್ತದೆ.
ಯಾವ ಯಾವ ವರ್ಗದವರು ಅರ್ಜಿ ಸಲ್ಲಿಸಬಹುದು:
ಹಿಓದುಳಿದ ವರ್ಗಗಳಾದ ಪ್ರವರ್ಗ-1, 2ಎ, 3ಎ, ಮತ್ತು 3ಬಿ ಅರ್ಹ ಅರ್ಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಕರೆಯಲಾಗಿರುತ್ತದೆ.


ಸಾಲದ ಮೊತ್ತ ಮತ್ತು ಸಹಾಯಧನ ವಿವರ :


*ವೈಯಕ್ತಿಕ ಕೊಳವೆ ಬಾವಿ ಯೋಜನೆಯಡಿಯಲ್ಲಿ ಘಟಕ ವೆಚ್ಚ ರೂ.2.50 ಲಕ್ಷಗಳು, ಇದರಲ್ಲಿ ರೂ. 2.00 ಲಕ್ಷ ಸಹಾಯಧನ ಹಾಗೂ ರೂ.50,000/-ನಿಗಮದಿಂದ ಶೇ.4ರ ಬಡ್ಡಿಯಲ್ಲಿ ನೀಡುವ ಸಾಲದ ಮೊತ್ತ ಒಳಗೊಂಡಿದೆ.
*ಇನ್ನೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬುಳ್ಳಾಪುರ,ಹಾಗೂ ತುಮಕೂರು,ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚ ರೂ.4.00 ಲಕ್ಷಗಳು ಇದರಲ್ಲಿ ರೂ. 3.50ಲಕ್ಷ ಸಹಾಯಧನ ಹಾಗೂ ರೂ.50,000/-ನಿಗಮದಿಂದ ಶೇ. 4 ರ ಬಡ್ಡಿದರದಲ್ಲಿ ನೀಡಲು ಸಾಲದ ಮೊತ್ತ ಒಳಗೊಂಡಿದೆ.

ಅರ್ಜಿ ಸಲ್ಲಿಸಲು ವಯೋಮಿತಿ, ಅರ್ಹತೆಗಳೇನು??


ಅರ್ಜಿದಾರರ ವಯಸ್ಸು 18-55 ವರ್ಷಗಳ ನಡುವೆ ಇರಬೇಕು ಗಂಗಾ ಕಲ್ಯಾಣ ನೀರಾವರಿ ಯೋಜನೆಯು ನಿಗಮದ ವ್ಯಾಪ್ತಿಯಲ್ಲಿ ಜಾತಿ/ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಸಣ್ಣ ರೈತರಾಗಿದ್ದು,ಪ್ರಸ್ತುತ ಭೂಮಿ ಒಣಗಿದ ಮತ್ತು ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಇರಬಾರದು. ನಿಗಮದ ಯಾವುದೇ ಯೋಜನೆಯಿಂದ ಮೊದಲೇ ಲಾಭ ಪಡೆದಿದ್ದರೆ ಅತಂಹ ಕುಟುಂಬದಿಂದ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
(ಕುಟುಂಬ ಅಂದರೆ ಒಂದು ರೇಶನ್ ಕಾರ್ಡನಲ್ಲಿರುವ ಎಲ್ಲಾ ಸದ್ಯಸರುಗಳು)


ಅರ್ಜಿ ಸಲ್ಲಿಸುವುದು ಎಲ್ಲಿ ದಾಖಲೆಗಳೇನು??


ಅರ್ಜಿ ದಾರರು ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್ ಕೇಂದ್ರ, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ದಾಖಲೆಗಳು: ರೈತರು ಆಧಾರ್‍ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ರೇಶನ್ ಕಾರ್ಡ್, ಆಧಾರ್‍ ಕಾರ್ಡ, ಪಹಣಿ ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು.ಜಾತಿ ಪ್ರಮಾಣ ಪತ್ರ,
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :ಇದೇ ತಿಂಗಳು ಜನವರಿ 17 ವರೆಗೆ ಅಗಿರುತ್ತದೆ.


ಹೆಚ್ಚಿನ ಮಾಹಿತಿಗಾಗಿ :

  • ನಿಮ್ಮ ಜಿಲ್ಲೆಯ ಅಥವಾ ತಾಲ್ಲುಕಿನ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮಕ್ಕೆ ಭೇಟಿ ನೀಡಿ ಇನ್ನು ಹೆಚ್ಚಿನ ಮಾಹಿತಿ ಪಡೆದುಕೋಳ್ಳಿ
    ನಿಗಮದ ದೂರವಾಣಿ ಸಂಖ್ಯೆ :080-22374832 ಮತ್ತು 9606066389,8824300400, ಸಂಪರ್ಕಿಸಬಹುದು. ನಿಗಮದ ವೆಬ್ಸೈಟ್ :https://www.dbdc.karnataka.gov.in

ಇತ್ತೀಚಿನ ಸುದ್ದಿಗಳು

Related Articles