Friday, September 20, 2024

ಅಮುಲ್ ಮತ್ತು ಕೆಎಂಎಫ್ ನಡುವಿನ ವ್ಯತ್ಯಾಸ, ಸಾಮ್ಯತೆ : ಅಂಕಿ -ಸಂಖ್ಯೆಗಳನ್ನು ತಿಳಿಯಬೇಕೆ? ಹಾಗಿದ್ದರೆ ಈ ಮಾಹಿತಿ ಸಂಪೂರ್ಣ ಓದಿ…..

ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್‌ (Amul):

ಅಮುಲ್ ಸಂಸ್ಥೆಯು ಹಾಲಿನ ಪುಡಿ, ಹಾಲು, ಬೆಣ್ಣೆ, ತುಪ್ಪ, ಗಿಣ್ಣು, ಮಸ್ತಿ ದಾಹಿ, ಮೊಸರು, ಮಜ್ಜಿಗೆ, ಚಾಕೋಲೇಟ್, ಐಸ್ ಕ್ರೀಂ, ಶ್ರೀಖಂಡ್, ಪನ್ನೀರ್‍ (ತಾಜಾ ಗಿಣ್ಣು), ಗುಲಾಬ್ ಜಾಮೂನುಗಳು ಮುಂತಾದವುಗಳನ್ನು ಮಾರಾಟ ಮಾಡಲಾಗುತ್ತದೆ.

1946 ರಲ್ಲಿ ಸ್ಥಾಪನೆಯಾದ ಅಮುಲ್ ಭಾರತದ ಅತೀ ದೊಡ್ಡ ಹಾಲು ಉತ್ಪನ್ನಗಳ ಮಾರಾಟ ಸಂಸ್ಥೆಯಾಗಿದೆ.

ಅಮುಲ್ ಸಂಸ್ಥೆಯು 2.8 ದಶಲಕ್ಷ ಹಾಲು ಉತ್ಪಾದಕ ಸದಸ್ಯರನ್ನು ಹೊಂದಿದ್ದು ಪ್ರತಿ ದಿನ ಸರಾಸರಿ 10.16 ದಶಲಕ್ಷ ಲೀಟರ್‍ ಹಾಲನ್ನು ಸಂಗ್ರಹಿಸುತ್ತದೆ.

ಇದು 13,141 ಗ್ರಾಮೀಣ ಡೈರಿ ಸಹಕಾರ ಸಂಘಗಳನ್ನು ಹೊಂದಿದೆ. ಈ ಸಹಕಾರಿ ಸಂಘ ಪ್ರತಿ ದಿನ 7.5 ದಶಲಕ್ಷ ಲೀಟರ್‍ ಹಾಲನ್ನು ಸಂಗ್ರಹಿಸುತ್ತದೆ.

ಹಾಲು ಉತ್ಪಾದಕರಲ್ಲಿ ಶೇ.30 ರಷ್ಟು  ಜನರು ಚಿಕ್ಕ, ಅತೀ ಚಿಕ್ಕ ಮತ್ತು  ಭೂರಹಿತ  ಕಾರ್ಮಿಕರಾಗಿರುತ್ತಾರೆ.

ಇದನ್ನೂ ಓದಿ : ಪಶುಸಂಗೋಪನೆ ಇಲಾಖೆಯಿಂದ ಮಿಶ್ರ ತಳಿ ಹಸು ಮತ್ತು ಎಮ್ಮೆ ನೀಡಲು ರೈತರಿಂದ ಅರ್ಜಿ ಆಹ್ವಾನ

ದೈನಂದಿನವಾಗಿ ಸುಮಾರು 8.5 ದಶಲಕ್ಷ (ಲೀಟರ್‍) ಸರಾಸರಿ ಹಾಲು ಶೇಖರಣೆಯಾಗುತ್ತದೆ. ಅಮುಲ್ ನ ಪ್ರತಿದಿನದ ವಹಿವಾಟು 150 ದಶಲಕ್ಷ ರೂಪಾಯಿ 53 ಶತಕೋಟಿ ರೂಪಾಯಿ ವಾರ್ಷಿಕ ವಹಿವಾಟನ್ನು ಅಮುಲ್ ಹೊಂದಿದೆ. 48 ಮಾರಾಟ ಕಛೇರಿಗಳು, 3000 ಸಗಟು ವಿತರಣೆ ಕೇಂದ್ರಗಳು, 5 ಲಕ್ಷ ಚಿಲ್ಲರೆ ಅಂಗಡಿಗಳನ್ನು ಅಮುಲ್ ಹೊಂದಿದೆ.

ಕರ್ನಾಟಕ ಹಾಲು ಒಕ್ಕೂಟ ( KMF)

ಕೆಎಂಫ್ ಸಂಸ್ಥೆಯ  ಹಾಲು, ಮೊಸರು, ತುಪ್ಪ, ಬೆಣ್ಣೆ, ಐಸ್ ಕ್ರೀಮ್, ಚಾಕೋಲೇಟ್ ಹಾಗೂ ಮತ್ತು ಸಿಹಿತಿಂಡಿ (ಕಾಜು ಕಟ್ಲಿ, ಬೇಸನ್ ಲಡ್ಡೂ, ಮೈಸೂರು ಪಾಕ್, ಪೇಡಾ, ಇತ್ಯಾದಿ) ಮಾರಾಟ ಮಾಡುತ್ತದೆ. ಇದು ನಂದಿನಿ ಬ್ರಾಂಡ್ ಹೆಸರಲ್ಲಿ ಖ್ಯಾತಿ ಪಡೆದಿದೆ.

1974 ರಲ್ಲಿ ಸ್ಥಾಪನೆಯಾದ ದಕ್ಷಿಣ ಭಾರತದ ಸಹಕಾರಿ ಹಾಲು ಮಹಾಮಂಡಳಿಗಳಲ್ಲಿ ಕೆಎಂಫ್ ಅಗ್ರಸ್ಥಾನದಲ್ಲಿದೆ. ರಾಜ್ಯದ 16 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಿವೆ. ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ

15043 ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಎಂಎಫ್ 26.38 ಲಕ್ಷ ಹಾಲು ಉತ್ಪಾದಕರನ್ನು ಹೊಂದಿದೆ.

ಕೆಎಂಎಫ್ ಅಡಿ 17014 ನೋಂದಯಿತ ಸಂಘಗಳಿವೆ. 15043 ಸಂಘಗಳು ಸಕ್ರಿಯವಾಗಿವೆ. 4143 ಮಹಿಳಾ ಸಂಘಗಳು ಕಾರ್ಯಾಚರಣೆಯಲ್ಲಿವೆ. 25.90 ಸದ್ಯಸರು ಕೆಎಂಎಫ್ ಕೆಲಸ  ಮಾಡುತ್ತಾರೆ.

ದೈನಂದಿನವಾಗಿ ಸುಮಾರು 81.66 ಲಕ್ಷದಷ್ಷು (ಲೀಟರ್‍)ಸರಾಸರಿ ಹಾಲು ಶೇಖರಣೆಯಾಗುತ್ತದೆ. ದೈನಂದಿನವಾಗಿ 37.17 (ಲೀಟರ್‍) ಮೊಸರು ಮಾರಾಟವಾಗುತ್ತದೆ. ಹಾಲು ಉತ್ಪಾದಕರಿಗೆ ಪಾವತಿಯಾಗುವ ದೈನಂದಿನ ಹಣ 22.52 ಕೋಟಿ ರೂಪಾಯಿ  ಕೆಎಂಫ್ ನ ವಾರ್ಷಿಕ ವಹಿವಾಟು 19784 ರೂಪಾಯಿಯಾಗಿರುತ್ತದೆ.

ಇತ್ತೀಚಿನ ಸುದ್ದಿಗಳು

Related Articles