Friday, September 20, 2024

ಪಶುಸಂಗೋಪನೆ ಇಲಾಖೆಯಿಂದ ಮಿಶ್ರ ತಳಿ ಹಸು ಮತ್ತು ಎಮ್ಮೆ ನೀಡಲು ರೈತರಿಂದ ಅರ್ಜಿ ಆಹ್ವಾನ

ಕೃಷಿ ವಿಕಾಸ ಯೋಜನೆ:

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 2022-23 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಇಲಾಖೆ ಅರ್ಜಿಯನ್ನು ಹಾಕಲು ಕೊರಿರುತ್ತಾರೆ.

ಕೃಷಿ ವಿಕಾಸ ಯೋಜನೆಯ ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯಡಿ ಪ್ರತಿ ಫಲಾನುಭವಿಗಳಿಗೆ ಒಂದು ಮಿಶ್ರ ತಳಿ ಹಾಲು ಕರೆಯುವ ಹಸು ಮತ್ತು ಎಮ್ಮೆ ನೀಡಲಾಗುವುದು. ಈ ಒಂದು ಯೋಜನೆಯಡಿ ಘಟಕ ವೆಚ್ಚ 62,000 ಇದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC/ST) ಫಲಾನುಭವಿಗಳಿಗೆ ಶೇ.33.33 ಹಾಗೂ ಸಾಮಾನ್ಯ ವರ್ಗದ ಫಲಾನುವಿಗಳಿಗೆ ಶೇ.25 ರಷ್ಟು ಸಹಾಯಧನವನ್ನು ಒದಗಿಸಲಾಗುವುದು ಎಂದು ಇಲಾಖೆ ಈ ಯೋಜನಯಡಿಯಲ್ಲಿ ತಿಳಿಸಿದೆ.

ಆಸಕ್ತ ರೈತರು ಅಯ್ಯಾ ತಾಲೂಕಿನ ಪಶು ವೈದ್ಯ ಆಸ್ಪತ್ರೆಗಳಿಂದ ಅರ್ಜಿ ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಜನವರಿ 5ರೊಳಗೆ ತಾಲೂಕ ಪಶುವೈದ್ಯ ಆಸ್ಪತ್ರೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಪಶುಪಾಲನೆ ಮತ್ತು ಪಶುವೈದ್ಯ ಸೇವೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಸೂಚಿಸಿರುತ್ತಾರೆ.

ಮೇಲೆ ತಿಳಿಸಿರುವ ವಿಷಯವು ಕೇವಲ ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದು ಮತ್ತು ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಪಶುವೈದ್ಯ ಆಸ್ಪತ್ರೆಗೆ ಭೇಟಿ ನೀಡಬೇಕು. ಕರ್ನಾಟಕದಲ್ಲಿ ಈಗಾಗಲೇ ರಾಷ್ಟ್ರೀಯ ಕೃಷಿ ಯೋಜನೆಯಡಿ ವಿವಿಧ ರೀತಿಯ ಸೌಲಭ್ಯಗಳಿಗಾಗಿ ಅರ್ಜಿಯನ್ನು ಕರೆದಿರುತ್ತಾರೆ ಆದ್ದರಿಂದ ತಕ್ಷಣವೇ ರೈತರು ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ.

ಇದನ್ನೂ ಓದಿ : ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕಾರ್ಯಕ್ರಮಗಳು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

ಸಾಮಾನ್ಯವಾಗಿ ಬೇಕಾಗುವ ದಾಖಲೆಗಳಾದ ನಿಮ್ಮ ಇತ್ತೀಚಿನ ಭಾವಚಿತ್ರಗಳು, ಆಧಾರ ಕಾರ್ಡ್ ಮತ್ತು ನೀವು ಹೈನುಗಾರಿಕೆಯಲ್ಲಿ ತೊಡಗಿದ್ದೀರಿ ಎನ್ನುವುದಕ್ಕೆ ಇದರ ಮಾಹಿತಿ ಪತ್ರ ಹಾಗೂ ಪಹಣಿ ಮತ್ತು ಜಾತಿ ಪ್ರಮಾಣ ಪತ್ರವನ್ನು ನಿಮ್ಮ ಹತ್ತಿರದ ತಾಲೂಕಿನ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ನೀಡಬೇಕಾಗಿ ಪ್ರಕಟಣೆಯಲ್ಲಿ ಸೂಚಿಸಿರುತ್ತಾರೆ.

ಅರ್ಜಿ ಪರಿಶೀಲನೆ ಮತ್ತು ಆಯ್ಕೆ ಹೇಗೆ:

ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು ಮತ್ತು ಅವರ ಅಪ್ಲಿಕೇಶನ್ ಫಾರಂ ಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಉಳಿದವರ ಅಪ್ಲಿಕೇಶನ್ ಫಾರಂ ಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಮೊದಲು ಬಂದವರಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಲಾಗುವುದು. ಅದೇ ರೀತಿ ಆಯ್ಕೆಯ ಪ್ರಕ್ರಿಯೆ ಇರುತ್ತದೆ.

ಅರ್ಜಿಯ ಪರಿಶೀಲನೆ ನಂತರ ಆಯ್ಕೆಯಾದ ರೈತರ ಹೆಸರುಗಳನ್ನು ಇಲಾಖೆಯಲ್ಲಿ ಪ್ರಕಟಣೆಯಲ್ಲಿ ಅಂಟಿಸಲಾಗುವುದು ಅಥವಾ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಸಲಾಗುವುದು. ನಂತರ ರೈತರು ಇಲಾಖೆಗೆ ಭೇಟಿ ನೀಡಿ ಸಹಾಯಧನದ ಲಾಭವನ್ನು ಪಡೆದುಕೊಳ್ಳಲು ಅರ್ಹರಾಗುತ್ತಾರೆ.

ಇತ್ತೀಚಿನ ಸುದ್ದಿಗಳು

Related Articles