Saturday, October 5, 2024

ಉಚಿತ ನಾಟಿ ಕೋಳಿಮರಿ ವಿತರಿಸುವ ಯೋಜನೆ – ಬೇಕಾದ ದಾಖಲಾತಿಗಳು ?

ಗ್ರಾಮೀಣ ರೈತ ಮಹಿಳೆಯರಿಗೆ ಐದು ವಾರದ ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸುವ ಯೋಜನಾ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಪಶು ಪಾಲನಾ ಇಲಾಖೆ ವತಿಯಿಂದ ಅನುಷ್ಥಾನಗೊಳಿಸಲಾಗುತ್ತಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ನಮ್ಮ ದೇಶದ ಆರ್ಥಿಕತೆಯಲ್ಲಿ ಪಶುಸಂಗೋಪನೆ ಪ್ರಮುಖ ಸ್ಥಾನ ಹೊಂದಿದೆ. ಪಶುಸಂಗೋಪನೆ ಕೃಷಿಗೆ ಪೂರಕವಾಗಿದ್ದು ಜನರಿಗೆ ಪೌಷ್ಠಿಕ ಆಹಾರ ಪೂರೈಕೆಯ ಜೊತೆಗೆ ನಿರಂತರ ಆದಾಯವನ್ನು ತಂದುಕೊಡಬಲ್ಲ ಉದ್ಯೋಗವಾಗಿದೆ. ಕರ್ನಾಟಕದಲ್ಲಿ  ಲಾಭದಾಯಕ ಪಶುಸಂಗೋಪನೆಗೆ ಪೂರಕ ವಾತಾವರಣವನ್ನು ಹೊಂದಿದ್ದು.

ಇದನ್ನು ಅರಿತ ರಾಜ್ಯ ಸರ್ಕಾರ ಪ್ರತಿ ವರ್ಷ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ ಇದನ್ನು ಎಲ್ಲಾ ರೈತರು ಸದುಪಯೋಗ ಪಡೆದು ಆರ್ಥಿಕವಾಗಿ ಸದೃಢರಾಗಬೇಕಾಗಿರುತ್ತದೆ.

ಇದನ್ನೂ ಓದಿ: ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕಾರ್ಯಕ್ರಮಗಳು

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳ ವಿವರ ಕೆಳಗಿನಂತಿದೆ:

ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ

ಪಡಿತರ ಚೀಟಿ ಜೆರಾಕ್ಸ್ ಪ್ರತಿ

ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ

ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ

ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ 2

ಪಶು ಪಾಲನಾ ಇಲಾಖೆಯ ಇತರೆ ಯೋಜನೆಗಳು

ಜಾನುವಾರ ರೋಗ ಪರೀಕ್ಷೆ , ರೋಗ ಚಿಕಿತ್ಸೆ, ಜಂತುನಾಶಕ ಹಾಗೂ ಉಣ್ಣೆನಾಶಕ ಔಷದಿ, ವಿಸ್ತರಣಾ ಚಟುವಟಿಕೆಗಳು, ಜಾನುವಾರ ಪಾಲನೆ, ಅಭಿವೃದ್ದಿ ಬಗ್ಗೆ ಉಪನ್ಯಾಸ ನೀಡುವಿಕೆ, ತರಬೇತಿ ಹಾಗೂ ಬರಡು ಜಾನುವಾರಗಳ ಚಿಕಿತ್ಸಾ ಶಿಬಿರ ನಡೆಸುವುದು, ಕಾಲುಬಾಯಿ ಜ್ವರ, ಗಂಟಲು ಬೇನೆ, ಚಪ್ಪೆಬೇನೆ,ಕೋಳಿಗಳಲ್ಲಿ ಕೊಕ್ಕರೆ ರೋಗದ ವಿರುದ್ದ ಲಸಿಕೆ ನೀಡಿಕೆ, ರೋಗಗಳ ಬಗ್ಗೆ ನಿಗಾ ವಹಿಸುವಿಕೆ, ವಿವಿಧ ಮೇವಿನ ಬೀಜಗಳ ವಿತರಣೆ , ತಳಿ ಅಭಿವೃದ್ದಿ ಗಾಗಿ, ಕೃತಕ ಗರ್ಭಧಾರಣೆ -ಹೀಗೆ ಜಾನುವಾರಗಳು ಅಭಿವೃದ್ದಿಗಾಗಿ ಅಗತ್ಯವಿರುವ ಸಮಗ್ರ ಮಾಹಿತಿ ನೀಡುವಿಕೆ.

ವಿಶೇಷ ಸೂಚನೆ : ಹೆಚ್ಚಿನ ಮಾಹಿತಿಗಾಗಿ ತಮ್ಮ ಜಿಲ್ಲೆಯ ಅಥವಾ ತಾಲೂಕಿನ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ.

ಇತ್ತೀಚಿನ ಸುದ್ದಿಗಳು

Related Articles